Monday, May 06, 2013

Daily Crimes Reported as On 06/05/2013 at 19:30 Hrsಹುಡುಗಿ ಕಾಣೆ ಪ್ರಕರಣ 
  • ಕಾರ್ಕಳ: ಶ್ರೀಮತಿ. ಮಂಜುಳ (40) ಗಂಡ: ದಿ. ಟಿ.ಎನ್. ಗೌಡ ವಾಸ: LIG/II/39, ಕುಕ್ಕುಂದೂರು ಗ್ರಾಮ, ಕಾರ್ಕಳ ಎಂಬವರ ಮಗಳು ರಕ್ಷಿತಾ (18) ದಿನಾಂಕ: 04/05/2013 ರಂದು ಬೆಳಿಗ್ಗೆ 08:00 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದಲ್ಲಿರುವ ತನ್ನ ಮನೆಯಿಂದ ಮಣಿಪಾಲಕ್ಕೆ N.E.T Form ತರಲೆಂದು ಹೇಳಿ ಹೋದವಳು ವಾಪಾಸು ಮನೆಗೂ ಬಾರದೇ ಸಂಬಂಧಿಕರ, ಸ್ನೇಹಿತರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/13  ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕಾಣೆಯಾದವಳ ಚಹರೆ: ಸುಮಾರು 4.8 ಎತ್ತರವಿದ್ದು, ಗೋಧಿ ಮೈಬಣ್ಣ ಹೊಂದಿದ್ದು, ಕಪ್ಪು ಬಣ್ಣದ ಕುರ್ತಾ ಬಿಳಿ ಬಣ್ಣದ ಹೂವಿನ ಚಿತ್ರವಿದೆ, ಕಪ್ಪು ಬಣ್ಣದ ಲೆಗಿಂಗ್ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾಳೆ. ಕುತ್ತಿಗೆಯಲ್ಲಿ ಗಣಪತಿ ಚಿತ್ರದ ಪದಕವಿರುವ ಚಿನ್ನದ ಸರ, ಕಿವಿಯಲ್ಲಿ ಬಂದಾರದ ಸಾದಾ ರಿಂಗ್ ಮತ್ತು ಬೆರಳಿನಲ್ಲಿ ಉಂಗುರವಿರುತ್ತದೆ. ಮೇಲ್ಕಂಡ ಹುಡುಗಿ ಪತ್ತೆಯಾದಲ್ಲಿ ಕಾರ್ಕಳ ನಗರ ಠಾಣಾ ದೂರವಾಣಿ ಸಂಖ್ಯೆ 08258-230213, ಅಥವಾ ಜಿಲ್ಲಾ ಕಛೇರಿ ಸಂಖ್ಯೆ 0820-2534777ನ್ನು ಸಂರ್ಪಕಿಸಲು ಕೋರಲಾಗಿದೆ 
ಅಪಘಾತ ಪ್ರಕರಣಗಳು   
  • ಶಂಕರನಾರಾಯಣ: ದಿನಾಂಕ 06-05-2013 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ KA 19 V 4190 ನೇ ನಂಬ್ರದ ಮೋಟಾರ್‌ಸೈಕಲ್‌ನ್ನು ಆರೋಪಿಯು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಆಂಪಾರು ಗ್ರಾಮದ ಗಿರಿಜ ಟೈಲ್ಸ್ ಎಂಬಲ್ಲಿ ಆಂಪಾರು  ಕಡೆಯಿಂದ ಶಂಕರನಾರಾಯಣ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಕ್ಕೆ  ಬಂದು ಎಡಬದಿಯ ಮಣ್ಣು ರಸ್ತೆಯಲ್ಲಿ ಆಂಪಾರು ಕಡೆಯಿಂದ ಶಂಕರನಾರಾಯಣ ಕಡೆಗೆ ಕರುಣಾಕರ ಶೆಟ್ಟಿ ತಂದೆ: ಬಾಡು ಶೆಟ್ಟಿ ವಾಸ: ಛೌಡಾಡಿ ಮನೆ ಕಂಚಾರು ಆಂಪಾರು  ಗ್ರಾಮ , ಕುಂದಾಪುರ  ತಾಲೂಕುರವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಕೊರಗಯ್ಯ ಶೆಟ್ಟಿ ಎಂಬವರಿಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಕೊರಗಯ್ಯ ಶೆಟ್ಟಿಯವರಿಗೆ ಬಲ ಕಾಲಿಗೆ ತಲೆಗೆ ತೀವೃ ಸ್ವರೂಪದ ಗಾಯವಾಗಿದ್ದು ಬೈಕ್‌ಸವಾರ ಮತ್ತು ಸಹ ಸವಾರ ಕೂಡಾ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕರುಣಾಕರರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/13  ಕಲಂ 279, 337,338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ದಿನಾಂಕ 06/05/2013 ರಂದು ಚಂದ್ರ (48ವರ್ಷ)ತಂದೆ: ದಿ/ ಬಚ್ಚ ಕುಲಾಲ್ ವಾಸ: ಯಡ್ಯಾಡಿ ಮತ್ಯಾಡಿ ಗ್ರಾಮ, ನಾಲ್ತೂರು ಕುಂದಾಪುರ ತಾಲೂಕುರವರು ತನ್ನ ಮನೆಗೆ ಹೋಗುವರೇ ಕುಂದಾಪುರದಿಂದ ಅಮಾಸೆಬೈಲು ಕಡೆಗೆ ಹೋಗುವ  ಕೆ..20 -4585 ನೇ ಮಂಜುನಾಥ ಬಸ್ಸಿನಲ್ಲಿ ಕುಳಿತು ಪ್ರಯಾಣಿಸುತ್ತಾ, ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಬಸ್ಸು ಕುಂದಾಪುರ ತಾಲೂಕು ಹೊಂಬಾಡಿ ಮಂಡಾಡಿ ಗ್ರಾಮದ ಹೊಂಬಾಡಿ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಅತೀ ವೇಗದಿಂದ ಸಾಗುತ್ತಿದ್ದ ಬಸ್ಸು ಎದುರಿನಿಂದ ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕೆ..20 ಬಿ-7835 ನೇ ಬಸ್ಸಿನ ಬಲಕ್ಕೆ ಹಿಂಬದಿ ಡಿಕ್ಕಿ ಹೊಡೆದು ನಂತ್ರ ಒಂದು ಮರಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಂದ್ರ ಹಾಗೂ ಇತರೆ 7-8 ಜನರಿಗೆ ತೀವ್ರ ಹಾಗೂ ಸಾದಾ ಸ್ವರೂಪದ ರಕ್ತಗಾಯವಾಗಿದ್ದಾಗಿದೆ.  ಈ ಬಗ್ಗೆ ಚಂದ್ರರವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/13  ಕಲಂ 279, 337,338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಹಲ್ಲೆ ಪ್ರಕರಣ 
  • ಮಲ್ಪೆ: ದಿನಾಂಕ 05/05/2013 ರಂದು ರಾತ್ರಿ ಸುಮಾರು 7:00 ಗಂಟೆ ಸುಮಾರಿಗೆ ದೊಡ್ಡ ಮಸೀದಿಯ ಹಿಂದುಗಡೆ, ಹೂಡೆ, ಪಡುತೋನ್ಸೆ ಗ್ರಾಮ ಎಂಬಲ್ಲಿ ಆಪಾದಿತರುಗಳಾದ ಜೋರಾಬಿಯ ಅಣ್ಣ ಅಫ್ಜಲ್ ಮತ್ತು ಅಬ್ಬುಕುರೇಲ, ರಫೀಕ್ ಮತ್ತು ಜೊರಾಬಿಯ ಗಂಡ ಸೇರಿ ಶ್ರೀಮತಿ ಜುಬೇದ (30) ಗಂಡ: ಸಲೀಂ ವಾಸ: ದೊಡ್ಡ ಮಸೀದಿ ಬಳಿ, ಹೂಡೆ, ಪಡುತೋನ್ಸೆ ಗ್ರಾಮ ರವರ ಮನೆಯ ಬಳಿ ಬಂದು ಗಂಡನನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ನಾಲ್ಕು ಜನರು ಸೇರಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅಬ್ಬುಕರೇಲ ಎಂಬಾತ ಆತನ ಕೈಯಲ್ಲಿದ್ದ ಕತ್ತಿಯಿಂದ ಗಂಡನಿಗೆ ಕಡಿಯಲು ಬಂದಾಗ ತಡೆಯಲು ಬಂದಾಗ ಮೋಹಿನಿ ಆರ್ ಅಮೀನ್ ರ ಮುಖದ ಬಲಭಾಗಕ್ಕೆ ಬಿದ್ದು ತೀವೃ ಗಾಯವಾಗಿರುತ್ತದೆ. ನಂತರ, ನಾಲ್ವರೂ ಸೇರಿ ಕೈಯಲ್ಲಿದ್ದ ರೀಪಿನಿಂದ ಗಂಡನಿಗೆ ಹೊಡೆದು ಗಾಯಗೊಳಿಸಿದ್ದಾಗಿದೆ ಎಂಬುದಾಗಿ ಮೋಹಿನಿ ಆರ್ ಅಮೀನ್ ರವರು ಆರೋಪಿಗಳ ವಿರುದ್ಧ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/13  ಕಲಂ 448, 504, 324, 326, 354, ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಮೋಸ ಪ್ರಕರಣ- ಖಾಸಗಿ ದೂರು ದಾಖಲು   
  • ಮಲ್ಪೆ: ಫಿರ್ಯಾದಿ ಶ್ರೀಮತಿ ಮೋಹಿನಿ ಆರ್ ಅಮೀನ್ (39 ವರ್ಷ)ಗಂಡ: ರತ್ನಾಕರ ಆರ್. ಅಮೀನ್ ವಾಸ: ಶ್ರೀ ದುರ್ಗಾ ಪಾರಿಜಾತ ಹತ್ತಿರ, ಬಡಾನಿಡಿಯೂರು ಗ್ರಾಮ ಎಂಬವರ ಮಗನಾದ ತುಷಾರ್ 17 ವರ್ಷ ಈತನು ಮಲ್ಪೆ ಪಿಯು ಕಾಲೇಜಿನಲ್ಲಿ 2ನೇ ಹಂತದ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ: 25.03.2013 ರಂದು ಪರೀಕ್ಷೆ ಮುಗಿಸಿಕೊಂಡು ಮನೆಗೆ ಬಂದಾಗ ಸ್ವಲ್ಪ ತಲೆ ನೋವು ಹಾಗೂ ಮೈಕೈ ನೋವು ಇದ್ದ ಕಾರಣ ಆತನನ್ನು ಚಿಕಿತ್ಸೆಯ ಬಗ್ಗೆ ಮಲ್ಪೆ ನರ್ಸಿಂಗ್ ಹೋಂಗೆ ಕರೆದುಕೊಂಡು ಬಂದು ಅಲ್ಲಿಯ ವೈದ್ಯಾಧಿಕಾರಿಯವರು ಯಾವುದೇ ವೈದ್ಯಕೀಯ ಪರೀಕ್ಷೆ ನಡೆಸದೇ ಪಿರ್ಯಾದಿದಾರರನ್ನು ಕೇಳದೇ  2 ಚುಚ್ಚು ಮದ್ದು ನೀಡಿದ್ದು, ಆ ಸಮಯದಲ್ಲಿ ಮಗ  ತೀವೃ ಅಸ್ವಸ್ಥಗೊಂಡಿದ್ದು,   ಹೆಚ್ಚಿನ ಚಿಕಿತ್ಸೆಯ ಬಗ್ಗೆ ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಗೆ ವರ್ಗಾಯಿಸಿದ್ದು, ಅಲ್ಲಿಯ ವೈದ್ಯರು ಪರೀಕ್ಷಿಸಿದಾಗ ತುಷಾರ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆರೋಪಿತ ಡಾಕ್ಟರ್ ಸುರೇಂದ್ರ ಶೆಟ್ಟಿ (37) ಮಲ್ಪೆ ನರ್ಸಿಂಗ್ ಹೋಂ ವಿಬಿ ರೋಡ್ ಮಲ್ಪೆರವರು ಮೃತ ತುಷಾರ್ ನನ್ನು ಸರಿಯಾಗಿ ಪರೀಕ್ಷಿಸದೇ ಆತನಿಗೆ ಏಕಾಎಕಿ 2 ಚುಚ್ಚುಮದ್ದು ನೀಡಿದ್ದರಿಂದಲೇ ಆತನು ಮೃತಪಟ್ಟಿದ್ದು,  ಮರಣದ ಸರಿಯಾದ ಕಾರಣ ತಿಳಿಯದೇ ಮರಣ ದೃಢಪತ್ರವನ್ನು ನೀಡಿದ್ದು, ಈ ಬಗ್ಗೆ ಆರೋಪಿತನಲ್ಲಿ ಪಿರ್ಯಾದಿದಾರರ ಸಂಬಂಧಿಕರು ಭೇಟಿ ಮಾಡಿದಾಗ ಪಿರ್ಯಾದಿದಾರರಿಗೆ ಆತನು ಹಣ ಕೊಡುವುದಾಗಿ ತಿಳಿಸಿ ವಿಷಯವನ್ನು ಯಾರಿಗೂ ತಿಳಿಸಬಾರದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಗನು ಆರೋಪಿತನ ತೀವೃ ನಿರ್ಲಕ್ಷ್ಯತನದಿಂದ ಮೃತಪಟ್ಟಿದ್ದು, ಈ ಬಗ್ಗೆ ಆರೋಪಿತನಿಗೆ ಕಾನೂನು ಕ್ರಮದ ಬಗ್ಗೆ ನೋಟೀಸ್ ಜ್ಯಾರಿ ಮಾಡಿದರೂ ಆರೋಪಿತನು ತನ್ನನ್ನು ರಕ್ಷಿಸಿಕೊಳ್ಳಲು ಸುಳ್ಳು ಉತ್ತರವನ್ನು ನೀಡಿರುತ್ತಾರೆ. ಪಿರ್ಯಾದಿದಾರರ ಮಗನು ಆರೋಪಿತ ಡಾಕ್ಟರ್ ನ ತೀವೃ ನಿರ್ಲಕ್ಷ್ಯತನದಿಂದಲೇ ಮೃತಪಟ್ಟಿದ್ದು, ಪಿರ್ಯಾದಿದಾರರಿಗೆ ತಪ್ಪು ಮಾಹಿತಿಯನ್ನು ನೀಡಿ, ಸಾಕ್ಷಿಗಳನ್ನು ನಾಶಮಾಡಲು ಪ್ರಯತ್ನಿಸಿರುತ್ತಾರೆ ಈ ಬಗ್ಗೆ ಶ್ರೀಮತಿ ಮೋಹಿನಿ ಆರ್ ಅಮೀನ್ ರವರು ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು ಅದರಂತೆ ಮಲ್ಪೆ ಠಾಣೆಯಲ್ಲಿ 76/2013 ಕಲಂ 304, 201, 420 468 471 & 19 Karnataka Private Medical Instruction Act 2007 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 

No comments: