Saturday, May 04, 2013

Daily Crimes Reported as On 04/05/2013 at 17:00 Hrs

ಹಲ್ಲೆ ಪ್ರಕರಣಗಳು
  • ಮಲ್ಪೆ : ಪಿರ್ಯಾದಿದಾರರಾದ ಸತೀಶ್ ಪೂಜಾರಿ ಪ್ರಾಯ: 38 ವರ್ಷ ತಂದೆ: ಗೋಪಾಲ ಪೂಜಾರಿ ವಾಸ: ಮೂಡು ಕೆರೆ ಬಾರ್ಕೂರು ಇವರು ದಿನಾಂಕ 03/05/2013 ರಂದು ರಾತ್ರಿ 11:40 ಗಂಟೆ ಸಮಯಕ್ಕೆ ಕಲ್ಮಾಡಿ ಚರ್ಚಿನಿಂದ ಮುಂದೆ ತನ್ನ ಬೊಲೆರೋ ವಾಹನ ನಂಬ್ರ ಕೆ ಎ 25 ಎನ್ 9455ನೇಯದನ್ನು ನಿಲ್ಲಿಸಿ ತನ್ನ ಸ್ನೇಹಿತ ಸಂತೋಷ ಎಂಬವರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿರುವ ಸಮಯ ಪರಿಚಯವಿರದ 4 ಜನ ಉಡುಪಿ ಕಡೆಯಿಂದ 2 ಮೋಟಾರು ಸೈಕಲಿನಲ್ಲಿ ಬಂದವರು ಪಿರ್ಯಾದಿದಾರರನ್ನು ನೋಡಿ ತಮ್ಮ ಮೋಟಾರು ಸೈಕಲನ್ನು ವಾಪಸ್ಸು ತಿರುಗಿಸಿಕೊಂಡು ಬಂದು ಪಿರ್ಯಾದಿದಾರರನ್ನು ವಾಹನದಿಂದ ಕೆಳಗೆ ಎಳೆದು ಹಾಕಿ ಅವಾಚ್ಯ ಶಬ್ದದಿಂದ ಬೈದು ಹೊಟ್ಟೆಗೆ, ಮರ್ಮಾಂಗಕ್ಕೆ ತುಳಿದು ಅಲ್ಲದೆ ಆ ಪೈಕಿ ಒಬ್ಬಾತ ನಿನ್ನನ್ನು ಕೊಂದೇ ಹಾಕುತ್ತೇನೆ ಎಂದು ಯಾವುದೋ ಹರಿತ ಆಯುಧದಿಂದ ತಿವಿಯಲು ಬಂದಾಗ ಪಿರ್ಯಾದಿದಾರರು ಬಲಕೈಯಿಂದ ಆತನ ಕೈಯನ್ನು ಹಿಡಿದಾಗ ಆ ಆಯುಧ ಪಿರ್ಯಾದಿದಾರರ ಕೈ ಬೆರಳಿಗೆ ತಾಗಿ ರಕ್ತ ಗಾಯವಾಗಿರುತ್ತದೆ ಅಲ್ಲದೆ ಹೊಟ್ಟೆಯ ಬಳಿ ಗಾಯವಾಗಿರುತ್ತದೆ. ಈ ಬಗ್ಗೆ ಸತೀಶ್ ಪೂಜಾರಿ ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾದ ಕ್ರಮಾಂಕ 75/2013 ಕಲಂ: 323,504,506,307 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: