Saturday, May 04, 2013

Daily Crimes Reported as On 04/05/2013 at 07:00 Hrs

ಹುಡುಗಿ ಕಾಣೆ ಪ್ರಕರಣ
  •  ಬ್ರಹ್ಮಾವರ : ದಿನಾಂಕ: 28/04/2013 ರಂದು ಬೆಳಗ್ಗೆ 10:00 ಗಂಟೆಯ ಸಮಯಕ್ಕೆ ಸಂಜೀವ,  ಆರ್ಡಿ, ಕೊಂಜಾಡಿ, ಅಲ್ಬಾಡಿ ಗ್ರಾಮ ಇವರ ಮಗಳು ಜ್ಯೋತಿಯು ಕೊಕ್ಕರ್ಣೆಯ ದೊಡ್ಡಪ್ಪ ಸೂರನ ಮನೆಯಿಂದ ಆರ್ಡಿಯ ತನ್ನ ಮನೆಗೆ ಬಸ್ಸಿನಲ್ಲಿ ಹೋದವಳು ಮನೆಗೆ ಹೋಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಸಂಜೀವ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾದ ಕ್ರಮಾಂಕ 172/13 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಕೊಲ್ಲೂರು : ದಿನಾಂಕ 3.05.2013 ರಂದು  ಬೆ 09.45 ಗಂಟೆಗೆ ಪಿರ್ಯಾದಿದಾರರಾದ ಸತೀಶ ಶೆಟ್ಟಿ  (25) ತಂದೆ: ಶಂಕ ಶೆಟ್ಟಿ ವಾಸ; ಕೋಟಾಣಿ ಮನೆ ಇಡೂರು ಗ್ರಾಮ ಕುಂದಾಪುರ ಇವರು ರೀಕ್ಷಾ ಚಾಲಕ ಸತೀಶ ಶೆಟ್ಟಿರವರ ರೀಕ್ಷಾವನ್ನು ಬಾಡಿಗೆ ಮಾಡುವರೇ ಇಡೂರು ಕುಂಜ್ಞಾಡಿ ಗ್ರಾಮದ ಕಾಡಿನ ಕಲ್ಲು ನಿವಾಸಿ ಮಾಲತಿ ಶೆಡ್ತಿ, ಕುಸುಮಾ ಶೆಡ್ತಿ, ಸುಮತಿ ಶೆಡ್ತಿ ಹಾಗೂ ಅವರ ಮಕ್ಕಳಾದ ಹಾರ್ದಿಕ ಶೆಟ್ಟಿ. ನೇತ್ರಾವತಿ ಶೆಟ್ಟಿರವರನ್ನು ಅವರ ಮನೆಯಿಂದ ಕೊಲ್ಲೂರು ದೇವಸ್ಥಾನಕ್ಕೆ ತೆರಳುವರೇ ಹೊರಟಿದ್ದು 10.00 ಗಂಟೆಯ ಸಮಯಕ್ಕೆ ಒಳ ರಸ್ತೆಯಿಂದ ಕುಂದಾಪುರ ಕೊಲ್ಲುರು ರಾಜ್ಯ ಹೆದ್ದಾರಿಯ ತಲುಪಿ ಸ್ವಲ್ಪ ಮುಂದುಗಡೆ ಬಂದಾಗ ಹಿಂದಿನಿಂದ ಹನುಮಾನ ಟ್ರಾನ್ಸಪೊರ್ಟ ಕಂಪೆನಿಯ ಬಸ್ಸು ನಂ ಕೆಎ20ಸಿ 6622 ನೇ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ಸುನ್ನು ಚಾಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ರೀಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರಿಗೂ ಹಾಗೂ ಪಿರ್ಯಾದಿದಾರರಿಗೂ ರಕ್ತಗಾಯ ಮತ್ತು ನೇತ್ರಾವತಿಗೆ ಮೊಳೆಮುರಿತ ಉಂಟಾಗಿರುತ್ತದೆ.  ಈ ಬಗ್ಗೆ ಸತೀಶ ಶೆಟ್ಟಿ  ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾದ ಕ್ರಮಾಂಕ 43/13 ಕಲಂ: 279,337,338 ಐಪಿಸಿ  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕುಂದಾಫುರ : ಪಿರ್ಯಾದಿದಾರ ಆನಂದ ಪೂಜಾರಿ (49), ತಂದೆ: ದಿ. ದೊಟ್ಟಯ್ಯ ಪೂಜಾರಿ, ವಾಸ: ಕೆಳಮನೆ ಹಿತ್ಲು, ಹಟ್ಟಿಕುದ್ರು, ಬಸ್ರೂರು ಗ್ರಾಮ ಇವರು  ದಿನಾಂಕ 03/05/2013 ರಂದು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 20 ಎಲ್ 9692ನೇದರಲ್ಲಿ ತನ್ನ ತಮ್ಮನಾದ ರಘುರಾಮ ಪೂಜಾರಿಯವನ್ನು ಕುಳ್ಳಿರಿಸಿಕೊಂಡು ಕುಂದಾಪುರಕ್ಕೆ ಹೋಗುತ್ತಿದ್ದಾಗ ಸಮಯ ಸುಮಾರು 11:15 ಗಂಟೆ ಸಮಯಕ್ಕೆ ಹಟ್ಟಿಯಂಗಡಿ ಸಿದ್ದಿವಿನಾಯಕ ರಸ್ತೆಯ ತಿರುವಿನಲ್ಲಿ ಹೋಗುತ್ತಿರುವಾಗ ಹಟ್ಟಿಯಂಗಡಿ ಸ್ವಾಗತ ಗೋಪುರದ ಕಡೆಯಿಂದ ದೇವಸ್ಥಾನದ ಕಡೆಗೆ ಕಾರು ನಂಬ್ರ ಕೆಎ 20 ಜಡ್ 2815ನೇದನ್ನು ಅದರ  ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾಬಲಭಾಗಕ್ಕೆ ಚಲಾಯಿಸಿ ಫಿರ್ಯಾದಿದಾರರು ಚಲಾಯಿಸಿಕೊಂಡಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿ ಹಾಗೂ ಅವರ ತಮ್ಮ ಬೈಕ್ ಸಮೇತ ರಸ್ತೆಗೆ  ಬಿದ್ದು ಅವರಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಅವರನ್ನು ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಆನಂದ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾದ ಕ್ರಮಾಂಕ 191/13 ಕಲಂ: 279,337 ಐಪಿಸಿ  ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
  • ಕುಂದಾಪುರ : ದಿನಾಂಕ:03/05/2013 ರಂದು ಪಿರ್ಯಾದಿದಾರ ಗಿರೀಶ್ ಉಪಾಧ್ಯಯ (34), ತಂದೆ: ವೆಂಕಟೇಶ ಉಪಾಧ್ಯಯ, ವಾಸ: ಕಾಂತೇಶ್ವರ ರಸ್ತೆ, ಗೋಪಾಡಿ ಗ್ರಾಮ, ಕುಂದಾಫುರ ಇವರು ಸಂಜೆ 7:30 ಗಂಟೆ ಸಮಯಕ್ಕೆ ಗೋಪಾಡಿ ಕ್ರಾಸ್ ಹತ್ತಿರ ಬೈಕ್ ನಿಲ್ಲಿಸಿಕೊಂಡು ಕುಳಿತುಕೊಂಡಿದ್ದ ಸಮಯ ಆಪಾದಿತ ವೇಂಕಟೇಶ ಎಂಬವನು ಬೈಕಿನಲ್ಲಿ ಬಂದು ಫಿರ್ಯಾದಿದಾರರನ್ನು ಅಡ್ಡ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿದಾರರು ಯಾಕೆ ಬೈಯ್ಯುತ್ತಿ ಎಂದು ಕೇಳಿದಾಗ ಪಿರ್ಯಾದಿದಾರರನ್ನು ಆತನು ದೂಡಿದ್ದು, ಆಗ  ಫಿರ್ಯಾದಿದಾರರು ಬಿದ್ದ ಪರಿಣಾಮ ಅವರಿಗೆ ಬಲಕಾಲಿಗೆ ನೋವಾಗಿರುತ್ತದೆ. ಈ ಬಗ್ಗೆ ಆನಂದ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾದ ಕ್ರಮಾಂಕ 192/13 ಕಲಂ 341, 323, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ಪಿರ್ಯಾದಿದಾರ ವೆಂಕಟೇಶ (33), ತಂದೆ: ಶೀನ ಆಚಾರ್, ವಾಸ: ಗೋಪಾಡಿ ಗ್ರಾಮ, ಕುಂದಾಪುರ ಇವರು ದಿನಾಂಕ:03/05/2013 ರಂದು ಸಂಜೆ 6:30 ಗಂಟೆಗೆ ಗೋಪಾಡಿ ಬಸ್ಸು ನಿಲ್ದಾಣದಿಂದ ಅಂಗಡಿಗೆ ಹೋಗುತ್ತಿದ್ದಾಗ ಗೋಪಾಡಿ ಕ್ರಾಸ್ ಬಳಿ ಗಿರೀಶ್ ಉಪಾಧ್ಯಾಯ ಎಂಬವರು ಬಂದು ಫಿರ್ಯಾದಿದಾರರನ್ನು ಅಡ್ಡಗಟ್ಟಿ, ತಡೆದು ನಿಲ್ಲಿಸಿ, ಫಿರ್ಯಾದಿದಾರರಿಗೆ ಕೈಗಳಿಂಧ ತಳ್ಳಿದ ಪರಿಣಾಮ ಫಿರ್ಯಾದಿದಾರರು ಕೆಳಗೆ ಬಿದ್ದಿದ್ದು, ನಂತರ ಎದ್ದು ವೆಂಕಟೇಶನನ್ನು ಹಿಡಿದುಕೊಂಡಾಗ ಆತನು ಪಿರ್ಯಾದಿದಾರರನ್ನು ಪುನಃ ಕೆಳಗಡೆ ಬಿಳಿಸಿ ಕಾಲಿನಿಂದ ಬೆನ್ನಿಗೆ ತುಳಿದನು. ಆಗ ಅವರ ಜೊತೆಗಿದ್ದ ಮಾಧವ, ದಿನೇಶ ಇವರುಗಳು ಕೂಡ ಕೈಗಳಿಂದ ತಲೆಗೆ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಈ ಬಗ್ಗೆ ಆನಂದ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾದ ಕ್ರಮಾಂಕ 193/13 ಕಲಂ 341, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು : ದಿನಾಂಕ 28/04/2013 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಪಿರ್ಯಾದುದಾರ ವೆಂಕಟೇಶ ಶೆಟ್ಟಿಗಾರ್ ತಂದೆ:ದಿ:ನಾಗರಾಜ ಶೆಟ್ಟಿಗಾರ್, ತೊಂಡೆಮಕ್ಕಿ ಬೈಂದೂರು ಗ್ರಾಮ ಇವರ ತಮ್ಮ ಸುರೇಶ ಎಂಬವರಿಗೆ ಆರೋಪಿ ಮಂಜುನಾಥರವರೊಂದಿಗೆ ಮೋಟಾರು ಸೈಕಲ್‌ ಚಲಾಯಿಸುವ ವಿಚಾರದಲ್ಲಿ ಬಾಯಿ ಮಾತಿನ ವಿಚಾರದಲ್ಲಿ ಜಗಳವಾಗಿದ್ದು ನಂತರ ಮನೆಗೆ ಬಂದು ನಂತರ ಅಂಗಡಿಗೆ ಹೋಗಿ ಬರುವರೇ ಮನೆಯಿಂದ ಹೋಗಿರುವ ಸಮಯ ಸುಮಾರು 3-45 ಗಂಟೆಗೆ ಪಿರ್ಯಾದುದಾರರ ಮನೆಯ ಸಮೀಪ ಬೋರ್‌ವೆಲ್‌ ಬಳಿ ಜೋರಾಗಿ ಮಾತನಾಡುವ ಶಬ್ದ ಕೇಳಿ ಪಿರ್ಯಾದುದಾರರು ತನ್ನ ಇನ್ನೊಬ್ಬ ತಮ್ಮ ಮಂಜುನಾಥ ರವರೊಂದಿಗೆ ಬೋರ್‌ವೆಲ್‌ ಬಳಿ ಹೋಗಿರುವಾಗ ಆರೋಪಿ ಮಂಜುನಾಥನು ಇತರ ಆರೋಪಿಗಳಾದ ರಾಘವೇಂದ್ರ ಶೆಟ್ಟಿ, ಸುಬ್ರಮ್ಮಣ್ಯ, ರಾಘವೇಂದ್ರ, ಸುರೇಶ, ನಾಗರಾಜು ಹಾಗೂ ಇನ್ನೋರ್ವ ಮಂಜುನಾಥರೊಡನೆ ಸೇರಿಕೊಂಡು ಪಿರ್ಯಾದುದಾರರ ತಮ್ಮನಾದ ಸುರೇಶ ಎಂಬಾತನಿಗೆ  ಅವಾಚ್ಯ ಶಬ್ದಗಳಿಂದ ಬೈದು ನಂತರ ಆರೋಪಿತರೆಲ್ಲರೂ ಸೇರಿ ಸುರೇಶ ರವರಿಗೆ ಕೈಯಿಂದ ಬೆನ್ನಗೆ, ಕೆನ್ನಗೆ, ತಲೆಗೆ ಹೊಡೆದು ಹಲ್ಲೆ ಮಾಡಿದ್ದು ಜಗಳ ಬಿಡಿಸಲು ಬಂದ ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಇನ್ನೊಬ್ಬ ತಮ್ಮ ಮಂಜುನಾಥರವರಿಗೆ ಅಣ್ಣ ತಮ್ಮಂದಿರೆಲ್ಲಾ ಸೇರಿ ರೌಡಿಸಂ ಮಾಡುತ್ತೀರಾ ನಿಮ್ಮನ್ನು ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದು ಆರೋಪಿತರ ಪೈಕಿ ರಾಘವೇಂದ್ರ ಶೆಟ್ಟಿ ಎಂಬಾತನು ಒಂದು ಕತ್ತಯಿಂದ ಫಿರ್ಯಾದುದಾರರ ಕಾಲಿನ ಬಳಿ ಬೀಸಿದ್ದು ಪಿರ್ಯಾದುದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕತ್ತಿ ಫಿರ್ಯಾದುದಾರರ ಎಡಕಾಲಿಗೆ ತಾಗಿ ರಕ್ತ ಗಾಯ ಆಗಿರುತ್ತದೆ. ಈ ಬಗ್ಗೆ ವೆಂಕಟೇಶ ಶೆಟ್ಟಿಗಾರ್ ರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾದ ಕ್ರಮಾಂಕ 143/13 ಕಲಂ: 504,323,506,324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರೇ ಪ್ರಕರಣ
  • ಕುಂದಾಪುರ :  ದಿನಾಂಕ 03/05/2013 ರಂದು ಬೆಳಿಗ್ಗೆ ಜಾವ 3:00 ಗಂಟೆಗೆ  ಕುಂದಾಪುರ ತಾಲೂಕಿನ  ಆನೆಗಳ್ಳಿ ಗ್ರಾಮದ ಹೇರಿ ಕುದ್ರು  ಹಾಲಾಡಿ  ಸೇತುವೆ ರಾ.ಹೆ 66 ರಲ್ಲಿ, ಆಪಾದಿತ ರಾಜಸಾಬ್ ಎಂಬವರು KA29-A-6777 ನೇ ಲಾರಿಯನ್ನು ಮಂಗಳೂರು ಕಡೆಯಿಂದ ಆಲಮಟ್ಟಿ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು ನಿರ್ಲಕ್ಷತನದಿಂದ ಹಾಲಾಡಿ  ಸೇತುವೆಯ ಕಾಲು ದಾರಿ/ ಫುಟ್ ಪಾತ್‌ ಮೇಲೆ ಚಲಾಯಿಸಿ ಸುಮಾರು 20 ಮೀಟರ್  ಉದ್ದದ ಕಾಲು ದಾರಿ/ ಫುಟ್ ಪಾತ್‌ಹಾನಿಗೊಳಿಸಿ ರೂ ಸುಮಾರು 50000/- ದಷ್ಟು ನಷ್ಟ ಉಂಟುಮಾಡಿದ್ದಾಗಿದೆ. ಈ ಬಗ್ಗೆ ವೈ ಕೃಷ್ಣರಾವ್ ಸಹಾಯಕ ಕಾರ್ಯ ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಕುಂದಾಪುರ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾದ ಕ್ರಮಾಂಕ 34/13 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: