Friday, May 03, 2013

Daily Crimes Reported as On 03/05/2013 at 19:30 Hrs

ಅಪಘಾತ ಪ್ರಕರಣಗಳು
  • ದಿನಾಂಕ 03/05/2013 ರಂದು ಬೆಳಿಗ್ಗೆ 11:00  ಗಂಟೆಗೆ ಪಿರ್ಯಾದಿದಾರ ಜಯರಾಮ ಶೆಟ್ಟಿ (34) ತಂದೆ: ದಿವಂಗತ ವಾಸು ಶೆಟ್ಟಿ ವಾಸ: ಬಂಡಸಾಲೆ ಹೌಸ್, ಜೋಡುಕಟ್ಟೆ, ಕಸಬ ಗ್ರಾಮ, ಕಾರ್ಕಳ ಇವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20 ವೈ- 8200ನೇದರಲ್ಲಿ ಸಹ ಸವಾರ ಹರೀಶ್ ಶೆಟ್ಟಿಯವರನ್ನು ಕುಳ್ಳಿರಿಸಿಕೊಂಡು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಇಂದಿರಾ ನಗರ ಕಡೆಯಿಂದ ಕಾರ್ಕಳ ಕಸಬ ಗ್ರಾಮದ ಕಾಳಿಕಾಂಬ ದೇವಸ್ಥಾನದರಸ್ತೆಯ ಕಡೆಗೆ ರಾಹೆ- 13 ರಸ್ತೆಯ ಎಡ ಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಅಯ್ಯಪ್ಪ ಸ್ವಾಮಿಯ ಗುಡಿಯ ಬಳಿ ತಲುಪುತ್ತಿದ್ದಂತೆ ಆರೋಪಿ ರವಿ ಕೆ.ಎ.-13 ಎ- 6661ನೇ 407 ಟೆಂಪೋ ಚಾಲಕ ತನ್ನ ಟೆಂಪೋವನ್ನು ಬಜಗೋಳಿ ಕಡೆಯಿಂದ ಕಾರ್ಕಳದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ ಡಾಮಾರು ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ಹಾಗೂ ತೀವ್ರ ಸ್ವರೂಪದ ರಕ್ತ ಗಾಯಗೊಂಡಿರುತ್ತಾರೆ. ಈ ಬಗ್ಗೆ ಜಯರಾಮ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾದ ಕ್ರಮಾಂಕ 57/2013 ಕಲಂ 279,337, 338  ಐಪಿಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: