Friday, May 03, 2013

Daily Crimes Reported as On 03/05/2013 at 17:00 Hrs

ಅಪಘಾತ ಪ್ರಕರಣಗಳು
  • ಗಂಗೊಳ್ಳಿ : ಪಿರ್ಯಾದಿದಾರ ಸುಶಾಂತ (20), ತಂದೆ ಸದಾಶಿವ ವಾಸ ಅಮ್ಮ ನಿಲಯ ಮಲ್ಪ ಕ್ರಾಸ್‌ರೋಡ್‌, ಆಶೋಕ ನಗರ ಸಂತೆಕಟ್ಟೆ ಪುತ್ತೂರು ಗ್ರಾಮ, ಉಡುಪಿ ಜಿಲ್ಲೆ ಇವರು ದಿನಾಂಕ 02/05/2013ರಂದು ಮಂಗಳೂರು ಕಾವೂರಿನಿಂದ ಮನೆ ಸಾಮಾಗ್ರಿಗಳನ್ನು ಕೆಎ19 ಬಿ 6463ನೇ ಲಾರಿಯಲ್ಲಿ ಲೋಡ್‌ಮಾಡಿ ಹೊನ್ನಾವರಕ್ಕೆ ಹೋಗಿ ಆನ್‌ಲೋಡ್‌ ಮಾಡಿ ವಾಪಸು ಮಂಗಳೂರು ಕಡೆಗೆ ಬರುತ್ತಿರುವಾಗ ಲಾರಿಯ ಚಾಲಕ ಉಸ್ಮಾನ್‌ ದಿನಾಂಕ 03/05/2013ರಂದು ಬೆಳಿಗ್ಗೆ 5:00ಗಂಟೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ರಾ.ಹೆ 66 ಮರವಂತೆ ಪೇಟೆ ತಲುಪಿದಾಗ ಲಾರಿ ಚಾಲಕನಿಗೆ ಲಾರಿ ಚಾಲನೆಯಲ್ಲಿರುವಾಗ ನಿದ್ರೆ ಬಂದು ಲಾರಿಯು ರಸ್ತೆಯ ತೀರ ಬಲಕ್ಕೆ ಚಲಾಯಿಸಿ  ಬಲ ಬದಿಯಲ್ಲಿರುವ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ನಂತರ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿತು. ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಸುಶಾಂತರವರ ತಲೆಗೆ ರಕ್ತಗಾಯವಾಗಿದ್ದು ಎದೆಗೆ ತರಚಿದ ಗಾಯ ಬಲ ಬಾಗಕ್ಕೆ ಬಲ ಕೈಯ ಹೆಬ್ಬರಳಿಗೆ ಗಾಯವಾಗಿರುತ್ತದೆ. ಲಾರಿಯ ಚಾಲಕನಿಗೆ ತಲೆಗೆ, ಬಲಕೈಗೆ ಬಲಮೊಣ ಗಂಟಿಗೆ ಗಾಯವಾಗಿರುತ್ತದೆ ಹಾಗೂ ಲಾರಿಯ ಕ್ಲಿನರ್‌ಶಿವರಾಜ್‌ಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಸುಶಾಂತರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾದ ಕ್ರಮಾಂಕ 64/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ : ದಿನಾಂಕ 03.05.2013 ರಂದು ಬೆಳಿಗ್ಗೆ 07:15 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ-ಅಂಬಾಗಿಲು ಮಾರ್ಗದ ಶೀಂಬ್ರ ಕ್ರಾಸ್‌ ಬಳಿ ಪಿರ್ಯಾದಿ ಪ್ರಮೋದ್‌ಕುಮಾರ್‌(36) ತಂದೆ: ಜಯ ಪೂಜಾರಿ ವಾಸ: ನಡುತೋಟ, ಮೂಡು ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕುರವರು ತನ್ನ ಬಾಬ್ತು ಟೆಂಪೋ ನಂ. ಕೆಎ 20 ಸಿ 3526 ನೇದನ್ನು ಅಂಬಾಗಿಲಿನಿಂದ ಮಣಿಪಾಲ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಎದುರಿನಿಂದ ಬಸ್ಸು ನಂ. ಕೆಎ 20 ಸಿ 5188 ನೇದರ ಚಾಲಕ ಗಣೇಶ್‌ ಎಂಬಾತನು ತನ್ನ ಬಸ್ಸನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಮಣಿಪಾಲ ಕಡೆಯಿಂದ ಅಂಬಾಗಿಲು ಕಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ಪ್ರಮೋದ್‌ಕುಮಾರ್‌ರವರು ಚಲಾಯಿಸುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದ ಎದುರು ಭಾಗ ಸಂಪೂರ್ಣ ಜಖಂಗೊಂಡಿದ್ದು, ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ರುದ್ರ ಎಂಬವರಿಗೆ ಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಪ್ರಮೋದ್‌ ಕುಮಾರ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾದ ಕ್ರಮಾಂಕ 92/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ : ದಿನಾಂಕ: 02-05-2013 ರಂದು 17:00 ಗಂಟೆಗೆ ಆರೋಪಿ ಸುಬ್ರಮಣ್ಯ ಭಟ್‌ ಇವರು ತನ್ನ ಬಾಬ್ತು KA01-ME-9644 ನೇ ಕಾರನ್ನು ಕುಂದಾಪುರ ತಾಲೂಕು ಕುಂದಾಪುರ ಹೋಬಳಿಯ 76 ಹಾಲಾಡಿ ಗ್ರಾಮದ ಹಂದಿಕೊಡ್ಲು ಎಂಬಲ್ಲಿ ವಂಡಾರು ಕಡೆಯಿಂದ ಹಾಲಾಡಿ ಕಡೆಗೆ ಡಾಂಬರು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಾಲಾಡಿ ಕಡೆಯಿಂದ ವಂಡಾರು ಕಡೆಗೆ ಪಿರ್ಯಾದಿದಾರ ಸುದಾಕರ ಶೆಟ್ಟಿ, ತಂದೆ ಚಂದಯ್ಯ ಶೆಟ್ಟಿ, ವಾಸ: ಹಂದಿಕೋಡ್ಲು, 76 ಹಾಲಾಡಿ ಗ್ರಾಮ, ಕುಂದಾಪುರ ಇವರು ಅವರ ಮಗನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ KA20Y-5227ನೇ ಬೈಕ್‌ಗೆ ಬಲಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗ ಪ್ರಕಾಶ್‌ ಶೆಟ್ಟಿ ಬಲ ಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ 2  ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಸುದಾಕರ ಶೆಟ್ಟಿರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾದ ಕ್ರಮಾಂಕ 57/13 ಕಲಂ 279, 337 ಐ¦¹ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಬೈಂದೂರು : ದಿನಾಂಕ:02/05/2013  ರಂದು ಪಿರ್ಯಾದಿದಾರ ಶ್ರಂತಿ ಚಂದು ಪೂಜಾರ್ತಿ (60) ತಂದೆ: ಮಹಾಬಲ ಪೂಜಾರಿ ವಾಸ: ಹೆರೂರು ಮೇಲ್ಮನೆ, ಹೆರೂರು ಗ್ರಾಮ ಕುಂದಾಪುರ ತಾಲೂಕು   ಇವರು ಮಗ ರಾಜು ಪೂಜಾರಿ ಮತ್ತು ಮಗಳು ಶ್ರೀಮತಿ ಎಂಬವರು ಹೆರೂರು ಗ್ರಾಮದ ಮೇಲ್ಮನೆ ಎಂಬಲ್ಲಿ ತಮ್ಮ ಬಾಬ್ತು ಮನೆಯಲ್ಲಿರುವಾಗ್ಗೆ ಸಮಯ ಸುಮಾರು ಮಧ್ಯಾಹ್ನ2:45 ಗಂಟೆಗೆ ಪಿರ್ಯಾದಿದಾರರ ಮೈದುನ ಹೆರಿಯ ಪೂಜಾರಿ, ಅಳಿಯ ಮಂಜುನಾಥ, ಭಾಸ್ಕರ  ಪೂಜಾರಿ, ಲಿಂಗಯ್ಯ ಪೂಜಾರಿ ಮತ್ತು ದುರ್ಗಾ ಪೂಜಾರಿ ಎಂಬವರು ಒಂದು ಓಮಿನಿಯಲ್ಲಿ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಮಗ ರಾಜು ಪೂಜಾರಿಯವರಲ್ಲಿ ಆರೋಪಿ ಮಂಜುನಾಥನು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ, ಅಲ್ಲಿಯೇ ಇದ್ದ ಮರದ ಸೊಂಟೆಯಿಂದ ರಾಜು ಪೂಜಾರಿಯ ಎರಡೂ ಕೈಗೆಗಳಿಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ತುಳಿದು, ತಡೆಯಲು ಬಂದ ಪಿರ್ಯಾದಿದಾರರಿಗೂ ಮಂಜುನಾಥನು ಕಾಲಿನಿಂದ ತುಳಿದು, ಉಳಿದ ಆರೋಪಿಗಳಾದ ಹೆರಿಯ ಪೂಜಾರಿ, ಭಾಸ್ಕರ  ಪೂಜಾರಿ, ಲಿಂಗಯ್ಯ ಪೂಜಾರಿ, ದುರ್ಗಾ ಪೂಜಾರಿ ಎಲ್ಲರೂ ಹೆರೂರು ಗ್ರಾಮ ಇವರುಗಳೆಲ್ಲಾ ಸೇರಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವಬೆದರಿಕೆ ಹಾಕಿರುತ್ತಾರೆ. ಅವರುಗಳೆಲ್ಲಾ ಕೈಗಳಿಂದ ಪಿರ್ಯಾದಿದಾರರಿಗೆ ಹಾಗೂ ಅವರ ಮಗನಿಗೆ ಹೊಡೆದು ಹೋಗಿರುವುದಾಗಿದೆ. ಈ ತಕ್ಷೀರಿಗೆ ಆರೋಪಿಗಳಿಗೂ ಪಿರ್ಯಾದಿದಾರರಿಗೂ ಇರುವ ಜಾಗದ ತಕರಾರೇ ಕಾರಣವಾಗಿರುತ್ತದೆ. ಈ ಬಗ್ಗೆ ಶ್ರಂತಿ ಚಂದು ಪೂಜಾರ್ತಿರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾದ ಕ್ರಮಾಂಕ 142/13 ಕಲಂ. 143,148,447,504,506,324,323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: