Friday, May 03, 2013

Daily Crimes Reported as On 03/05/2013 at 07:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಅಮಾಸೆಬೈಲು : ಪಿರ್ಯಾದುದಾರರ ಕೃಷ್ಣ ಬೆಳಾರಿ(31) ತಂದೆ:ಶೀನ ಬೆಳಾರಿ, ವಾಸ:ಹೊರ್ಲಿಜೆಡ್ಡು, ರಟ್ಟಾಡಿ ಗ್ರಾಮ ಕುಂದಾಪುರ ಇವರ ತಮ್ಮ ಸುದೀಪ ಎಂಬವರು ಈ ಹಿಂದೆ ಗೋಕಾಕ್ ದಲ್ಲಿ ಕೆಲಸದಲ್ಲಿದ್ದು ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದು, ಹಣದ ಅಡಚಣೆಯಿಂದ ಬಳಲುತ್ತಿದ್ದು ಅದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 02/05/2013 ರಂದು ಮದ್ಯಾಹ್ನ 3:30 ಗಂಟೆಗೆ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಹೊರ್ಲಿಜೆಡ್ಡು ಎಂಬಲ್ಲಿ ಮನೆಯ ಹತ್ತಿರ ಇರುವ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಕೃಷ್ಣ ಬೆಳಾರಿ ರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣಾ ಯುಡಿಆರ್‌ನಂಬ್ರ 04/13 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟಾ : ಪಿರ್ಯಾದಿದಾರ ಮನೋಜ್ ಕುಮಾರ್, ವಾಸ: ಭ್ರಮರಾಂಭ ನಿಲಯ,  ಹೆಗ್ರೆ ಸಾಸ್ತಾನ ಪಾಂಡೇಶ್ವರ ಗ್ರಾಮ ಇವರ ತಂದೆ 55 ವರ್ಷ ಪ್ರಾಯದ ನಾಗರಾಜ್ ಕುಲಾಲ್ ಎಂಬವರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ವಿಪರೀತ ಸಾಲ ಮಾಡಿ ಮಾನಸಿಕವಾಗಿ ಜಿಗುಪ್ಸೆಗೊಂಡು ದಿನಾಂಕ 02/05/2013 ರಂದು ಬೆಳಿಗ್ಗೆ 06:15 ಗಂಟೆಯಿಂದ 11:15 ಗಂಟೆಯ ಮಧ್ಯಾವದಿಯಲ್ಲಿ ಉಡುಪಿ ತಾಲೂಕು ಬಾಳಕುದ್ರು ಗ್ರಾಮದ ಹಂಗಾರಕಟ್ಟೆಯ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮನೋಜ್ ಕುಮಾರ್ ರವರು ನೀಡಿದ ದೂರಿನಂತೆ ಕೋಟಾ ಠಾಣಾ ಯುಡಿಆರ್‌ನಂಬ್ರ 14/13 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಉಡುಪಿ ನಗರ : ದಿನಾಂಕ 02/05/2013ರಂದು ಪಿರ್ಯಾದಿದಾರ ತನೆರಾಜ್‌ಸಿಂಗ್‌ ತಂದೆ: ದಲ್‌‌ಪತ್‌ಸಿಂಗ್‌ವಾಸ: ಮರುಸಾಗರ್‌ ಇಲೆಕ್ಟ್ರಿಕಲ್ಸ್‌, ಎಸ್‌ವಿ ಟಿ ಬಿಲ್ಡಿಂಗ್‌, ಉಡುಪಿ ಇವರು ತನ್ನ ಬಾಬ್ತು ಕೆಎ 20 ಆರ್ 6173 ನೇ ಮೋಟಾರು ಸೈಕಲಿನಲ್ಲಿ ಸಹ ಸವಾರ ನಾಥುರಾಮ್ ಎಂಬವರನ್ನು ಹಿಂದೆಗಡೆ ಕುಳ್ಳಿರಿಸಿ ಕೊಂಡು ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ಹೋಗುತ್ತಿರುವಾಗ ಕಡಿಯಾಳಿ ಪೆಟ್ರೋಲ್ ಪಂಪ್ ಬಳಿ ಸಮಯ ಸುಮಾರು 14:00 ಗಂಟೆಗೆ ಕಡಿಯಾಳಿ ಪೆಟ್ರೋಲ್ ಪಂಪ್‌ನಿಂದ ಕೆಎ 20 ಪಿ 8578ನೇ ಇನ್ನೋವಾ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಡಬದಿ ರಸ್ತೆಯಿಂದ ಬಲಬದಿಗಾಗಿ ಉಡುಪಿಗೆ ಹೋಗುವರೇ ಒಮ್ಮೆಲೇ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದು ಸಹ ಸವಾರ ನಾಥುರಾಮ್ ಪ್ರಾಯ 23 ವರ್ಷ ಎಂಬವರು ರಸ್ತೆಗೆ ಬಿದ್ದು ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ತನೆರಾಜ್‌ಸಿಂಗ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 220/13 ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: