Thursday, May 02, 2013

Daily Crimes Reported as On 02/05/2013 at 19:30 Hrs

ಅಪಘಾತ ಪ್ರಕರಣಗಳು
  • ಕಾಪು : ದಿನಾಂಕ 02-05-2013 ರಂದು ಪಿರ್ಯಾದಿದಾರರಾದ ಎಮ್.ಡಿ. ಹುಸೇನ್ (35) ತಂದೆ: ಮಹಮ್ಮದ್ ಆಸಮ್, ಚಿಂತಲ್ ಮಿಲ್ ಕಾಲೋನಿ, ಮೈಹಿಮಾ ಗುದಿ, ವಾರಂಗಲ ಜಿಲ್ಲೆ, ಆಂದ್ರಪ್ರದೇಶ ಇವರು ಟ್ಯಾಂಕರ್ ನಂಬ್ರ AP-28/TA 4500 ನೇದರಲ್ಲಿ ಇನ್ನೊಬ್ಬ ಚಾಲಕ ಅಹಮ್ಮದ್ ಶರೀಫ್ ಹಾಗೂ ಕ್ಲಿನರ್ ಕೃಷ್ಣಾ ಇವರೊಂದಿಗೆ ಮಂಗಳೂರು ಸುರತ್ಕಲ್‌ನ ಎಮ್.ಆರ್.ಪಿ.ಎಲ್.ನಿಂದ FURANACE ಆಯಿಲ್ ತುಂಬಿಸಿಕೊಂಡು ಆಂದ್ರಪ್ರದೇಶದ ನಲ್ಕೋಂದಾ ಜಿಲ್ಲೆಗೆ ಹೊರಟು ರಾ.ಹೆ. 66 ರಲ್ಲಿ ಬರುತ್ತಾ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಆರೋಪಿ MH-11/AL 4482 ನೇ ಲಾರಿ ಚಾಲಕ ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್‌ನಲ್ಲಿದ್ದ ಕ್ಲಿನರ್ ಕೃಷ್ಣಾನಿಗೆ ಮೂಗು ಬಲಕೆನ್ನೆ ಹಾಗೂ ಎಡಕೈಗೆ ರಕ್ತಗಾಯ ಉಂಟಾಗಿದ್ದು, ಅಲ್ಲದೇ ಪಿರ್ಯಾದಿದಾರರಿಗೂ ತೊಡೆ ಹಾಗೂ ಹೊಟ್ಟೆಗೆ ಗುದ್ದಿದ ಒಳನೋವು ಉಂಟಾಗಿದ್ದಾಗಿದೆ. ಈ ಬಗ್ಗೆ ಎಮ್.ಡಿ. ಹುಸೇನ್ ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 133/2013 ಕಲಂ :  279 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: