Friday, May 24, 2013

Daily Crime Reports As on 24/05/2013 At 07:00 Hrs



ಅಪಘಾತ ಪ್ರಕರಣ
  • ಕುಂದಾಪುರ: ಪಿರ್ಯಾದಿ ಸುದರ್ಶನ್ ಕುಮಾರ್ ಕೆ (44), ತಂದೆ: ಕುಟ್ಟಪ್ಪನ್, ವಾಸ: ದರ್ಶನ, ಕಡೈಕ್ಕೊಡು ಅಂಚೆ, ಕೊಲ್ಲಂ ಜಿಲ್ಲೆ, ಕೇರಳ ರಾಜ್ಯ,  ಇವರು  ದಿನಾಂಕ:23/05/2013 ರಂದು ಜಾಡಿ ಕ್ರಾಸ್ ನಲ್ಲಿ ತನ್ನ ಕೆಲಸಗಾರರು ಬಾವಿಯ ರಿಂಗ್ ಮಾಡುತ್ತಿದ್ದಲ್ಲಿಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎಲ್ 02 ಡಬ್ಲು 2676ನೇದರಲ್ಲಿ ಸಹ ಸವಾರನಾಗಿ ಚಂದ್ರ ಬಾಬು @ ಹರಿ ಇವರೊಂದಿಗೆ ಹೋಗಿ ಊಟವನ್ನು ಕೊಟ್ಟು ವಾಪಾಸ್ಸು ತಲ್ಲೂರಿಗೆ ಬರುವರೇ ಬರುತ್ತಿದ್ದಾಗ ಜಾಡಿ ಜಂಕ್ಷನ್ ಬಳಿ ಸಮಯ ಸುಮಾರು 13:15 ಗಂಟೆಗೆ ಆಟೋ ರಿಕ್ಷಾ ನಂಬ್ರ ಕೆಎ 20 ಸಿ 6299ನೇದನ್ನು ಅದರ ಚಾಲಕ ಅಣ್ಣಯ್ಯ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಫಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಹಾಗೂ ಸಹ ಸವಾರ ಚಂದ್ರ ಬಾಬು @ ಹರಿ ರವರು  ರಸ್ತೆಗೆ ಬಿದ್ದು ಅವರಿಗೆ ರಕ್ತಗಾಯವಾಗಿರುತ್ತದೆ. ಬಗ್ಗೆ ಸುದರ್ಶನ್ ಕುಮಾರ್ ಕೆ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 216/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 22/05/2013 ರಂದು ಸಮಯ ಸುಮಾರು  ರಾತ್ರಿ  8:10 ಗಂಟೆಗೆ ಕುಂದಾಪುರ ತಾಲೂಕಿನ   ಹೆಮ್ಮಾಡಿ    ಗ್ರಾಮದ  ಮುವತ್ತು ಮುಡಿ ಬಳಿ , ರಾ.ಹೆ 66 ರಲ್ಲಿ     ಆಪಾದಿತ ಹೆಚ್‌  ದುರ್ಗಾ  ಎಂಬವರು KA20-A-739 ನೇ ಮಿನಿ ಬಸ್  ನ್ನು ತ್ರಾಸಿ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗದಿಂದ  ಚಲಾಯಿಸಿಕೊಂಡು ಬಂದು,  ಕುಂದಾಪುರ ಕಡೆಯಿಂದ  ತ್ರಾಸಿ  ಕಡೆಗೆ ಸುಕುಮಾರ ಶೆಟ್ಟಿ  ಎಂಬವರು ಸವಾರಿ ಮಾಡಿಕೊಂಡಿದ್ದ KA20-EB-5341ನೇ ಮೋಟಾರ್ ಸೈಕಲ್‌  ಗೆ ನಿರ್ಲಕ್ಷತನದಿಂದ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ ಸವಾರ ಸುಕುಮಾರ ಶೆಟ್ಟಿ   ಹಾಗೂ ಹಿಂದೆ  ಕುಳಿತ  ಜಯಲಕ್ಷ್ಮಿ  ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆಗೆ  ಬಂದವರು,  ಸುಕುಮಾರ ಶೆಟ್ಟಿ   ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿದ್ದು  ಜಯಲಕ್ಷ್ಮಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ . ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 41/2013 ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ನಂತರ ಮಣಿಪಾಲ ಕೆ,ಎಂ,ಸಿ, ಆಸ್ಪತ್ರೆಗೆ  ಚಿಕಿತ್ಸೆ ಬಗ್ಗೆ  ದಾಖಲಾದ ಸುಕುಮಾರ  ಶೆಟ್ಟಿ ಪ್ರಾಯ 25 ವರ್ಷ ತಂದೆ ಕರಿಯಣ್ಣ  ಶೆಟ್ಟಿ ಹೊಸಗದ್ದೆ,  ಕೆರಾಡಿ  ಗ್ರಾಮ, ಕುಂದಾಪುರ ತಾಲೂಕು  ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 23/05/2013  ರಂದು 8:30 ಗಂಟೆಗೆ  ಮೃತಪಟ್ಟಿದ್ದು ಆದರಿಂದ ಈ ಪ್ರಕರಣದ ಕಲಂ  279, 337 ಐ.ಪಿ.ಸಿ ಯನ್ನು ಕಲಂ 279, 337, 304 (ಎ) ಐ.ಪಿ.ಸಿ ಯಂತೆ ಪರಿವರ್ತಿಸಿರುವುದಾಗಿದೆ. 
  • ಬ್ರಹ್ಮಾವರ: ದಿನಾಂಕ: 22/05/13 ರಂದು 20.30 ಗಂಟೆಗೆ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಮಂದರ್ತಿ ಪದವಿ ಪೂರ್ವಕಾಲೇಜಿನ ಎದುರು ಪ್ರಸನ್ನ ಭಂಢಾರಿ (29) ತಂದೆ:ಶ್ಯಾಮ  ಭಂಢಾರಿ ಅಣ್ಣಪೂರ್ಣೇಶ್ವರಿ ನಿಲಯ ಬೆಳ್ವೆ ಗ್ರಾಮ. ಕುಂದಾಪುರ ತಾಲೂಕು ಇವರ ಅಣ್ಣನಾದ ಪ್ರಸಾದ್ ಭಂಢಾರಿ ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20- ಎಕ್ಸ್-3249 ನೇಯದನ್ನು ಮಂದರ್ತಿ  ಕಡೆಯಿಂದ ಮೈರ್ ಕೊಮೆ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿರುವಾಗ  ಆರೋಪಿ ತಿಮ್ಮ ನಾಯ್ಕ ತನ್ನ ಬಾಬ್ತು ಕೆಎ-20-ವೈ- 9198 ನೇ ಯದನ್ನು ಮೈರ್ ಕೊಮೆ ಕಡೆಯಿಂದ ಮಂದರ್ತಿ ಕಡೆಗೆ  ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪ್ರಸಾದ್ ಭಂಡಾರಿಯವರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ಮತ್ತು  ಬಲ ಕಣ್ಣಿನ ಬಳಿ ತೀವ್ರ ಗಾಯವಾಗಿದ್ದು, ಹಾಗೂ ಆರೋಪಿ ತಿಮ್ಮ ನಾಯ್ಕ ರವರಿಗೂ ಕೂಡಾ ತಲೆಗೆ ಗಾಯವಾಗಿರುವುದಾಗಿದೆ. ಬಗ್ಗೆ ಪ್ರಸನ್ನ ಭಂಢಾರಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 181/13 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ದಿನಾಂಕ: 21/05/2013 ರಂದು 16.15 ಗಂಟೆಗೆ  ಉಡುಪಿ ತಾಲೂಕು ಹನೆಹಳ್ಳಿ ಗ್ರಾಮದ ಕೂರಾಡಿ ಕ್ರಾಸ್ ಬಳಿ ಸುಭಾಷ್ ಶೆಟ್ಟಿ (41) ತಂದೆ: ದಿ: ಗೋವಿಂದ ಶೆಟ್ಟಿ ವಾಸ: ಮೂಡುಬಗೆ ಕೋಟೆಬೆಟ್ಟು ಅಂಪಾರು ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-20-ಡಬ್ಲೂ-1422 ನೇಯದನ್ನು ಬಾರ್ಕೂರು ಕಡೆಯಿಂದ ಕೂರಾಡಿ  ಕಡೆಗೆ ಚಾಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿತ ತನ್ನ ಬಾಬ್ತು ಕೆಎ-16-ಜೆ-6866 ನೇ ಯದನ್ನು ಮಂದರ್ತಿ  ಕಡೆಯಿಂದ ಬಾರ್ಕೂರು ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ  ಮುಖಕ್ಕೆ ,ಎಡ ದವಡೆಗೆ ಒಳಗಡೆ ತೀವ್ರ ನೋವಾಗಿರುವುದಾಗಿದೆ, ಹಾಗೂ ಆರೋಪಿ ತನ್ನ ಮೋಟಾರು ಸೈಕಲನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿದೆ. ಬಗ್ಗೆ ಸುಭಾಷ್ ಶೆಟ್ಟಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 182/13 ಕಲಂ: 279,,338 ಐ.ಪಿ.ಸಿ, 134 (ಎ)(ಬಿ) ಐ.ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
ಮಟ್ಕಾ ಜುಗಾರಿ ಪ್ರಕರಣ 
  • ಕುಂದಾಪುರ: ದಿನಾಂಕ: 23/05/2013 ರಂದು  ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಜಯರಾಮ ಡಿ ಗೌಡ ರವರು  ಕೊಟೇಶ್ವರ ಹಾಲಾಡಿ ಜಂಕ್ಷನ್ ಬಳಿ ಇರುವ ಗೂಡಂಗಡಿ ಪಕ್ಕದಲ್ಲಿ ಹಾಲಾಡಿ ಕಡೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರಾಜು (42), ತಂದೆ: ಗೋಪಾಲ ಪೂಜಾರಿ, ವಾಸ: ಬೀಜಾಡಿ ಗ್ರಾಮ, ಕುಂದಾಫುರ ತಾಲೂಕು ಈತನನ್ನು ಸಿಬ್ಬಂದಿಗಳ ಸಹಾಯದಿಂದ ದಾಳಿ ನಡೆಸಿ  ಆರೋಪಿತನಿಂದ ಆಟಕ್ಕೆ ಬಳಸಿದ  1,050/- ರೂ ನಗದು,  ಬಾಲ್ ಪೆನ್ -1 ಮತ್ತು  ಮಟ್ಕಾ ನಂಬರ್ ಬರೆದ ಚೀಟಿ -1 ನ್ನು ಸ್ವಾದೀನ ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 217/2013 ಕಲಂ 78(1)(3)ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ  
  • ಕುಂದಾಪುರ: ದಿನಾಂಕ: 23/05/2013 ರಂದು 10:00 ಗಂಟೆಗೆ ಮಂಜುನಾಥ (30), ತಂದೆ: ನಾರಾಯಣ ಬಟ್ಟದ, ವಾಸ: ಜ್ಯೋತಿಶ್ರಿ ನಿಲಯ, ಕೋಟ ತಟ್ಟು, ಪಡುಕೆರೆ, ಕುಂದಾಪುರ ತಾಲೂಕು ಇವರ ಬಾವ ಸುಶೀಲ್ ಕುಮಾರ್ (30) ಕುಂಭಾಶಿಯ ಆನೆಗುಡ್ಡೆಯ ದೇವಸ್ಥಾನದ ಕೆಳಗಡೆ ಬಾವಿಯ ಕೆಲಸ ಮಾಡುತ್ತಿದ್ದಾಗ, ಬಾವಿಯ ಪಕ್ಕದಲ್ಲಿದ್ದ ಪಂಪಿನಕಟ್ಟೆ ಪಂಪು ಸಮೇತ ಆಕಸ್ಮಿಕವಾಗಿ ಬಾವಿಗೆ ಬಿದ್ದು  ಬಾವಿಯಲ್ಲಿದ್ದ ಸುಶೀಲ್ ಕುಮಾರ್ ರವರ ಕುತ್ತಿಗೆಗೆ ತಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಂಜುನಾಥ ಇವರು ನೀಡಿದ ದೂರಿನಂತೆ ಕುಂದಾಪುರ ಕೋಟ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 30/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಶ್ರೀನಿವಾಸ ಶೆಟ್ಟಿ ಇವರ ಮಗನಾದ ರಾಜೇಶನು (31) ಉಡುಪಿ ಕುತ್ಪಾಡಿಯ  ಮಂಜುನಾಥ ಆಯುರ್ವೇದ ಕಾಲೇಜಿನಲ್ಲಿ  ಒಂದು ವರ್ಷದಿಂದ ಕೆಲಸ ಮಾಡಿತ್ತಿದ್ದು ದಿನಾಂಕ 23/05/2013 ರಂದು  ಎಂದಿನಂತೆ ಬೆಳಗ್ಗೆ ಮಂಜುನಾಥ ಆಯುರ್ವೇದ ಕಾಲೇಜಿಗೆ ಕೆಲಸಕ್ಕೆ  ಹೋಗಿದ್ದು  ಸಂಜೆ  18:30 ಕ್ಕೆ ಮನೆಗೆ ಬಂದಿರುತ್ತಾನೆ, ಬಂದವನೆ ಒಂದು ಕೋಣೆಯಲ್ಲಿ ಮಲಗಿರುತ್ತನೆ ,ನಂತರ 19:00 ಗಂಟೆಗೆ  ಅವರ ಹೆಂಡತಿ ಶಾಂತಲ ಹೋಗಿ ನೋಡಲಾಗಿ  ರಾಜೇಶನು ಮಲಗಿದ್ದು ಮಾತನಾಡುತ್ತಿರಲಿಲ್ಲಿ ಈ ಬಗ್ಗೆ  ಚಿಕಿತ್ಸೆಯ ಬಗ್ಗೆ ಕೆ ಎಂ ಸಿ ಮಣಿಪಾಲ  ಆಸ್ಪತ್ರೆಗೆ    ಕರೆತರಲಾಗಿ  ವೈದ್ಯರು ಪರೀಕ್ಷೀಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶ್ರೀನಿವಾಸ ಶೆಟ್ಟಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 22/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಾಮೋದರ್ ಆಚಾರ್ಯ (29) ತಂದೆ: ಕೃಷ್ಣ ಆಚಾರ್ಯ ವಾಸ: ಮಿತ್ತಬೈಲು, ದರ್ಖಾಸ್ತು, ನಿಂಜೂರು ಗ್ರಾಮ, ಕಾರ್ಕಳ ತಾಲೂಕು ಇವರ ತಂಗಿ ವಿಶಾಲಾಕ್ಷಿ (24) ರವರು ಮನೆಯಲ್ಲಿ ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದು ಆಕೆಗೆ ಮದುವೆ ನಿಶ್ಚಿತಾರ್ಥವಾಗಿದ್ದು ಸೆಪ್ಟೆಂಬರ್ 13 ರಂದು ಮದುವೆಗೆ ದಿನ ನಿಗದಿಯಾಗಿರುತ್ತದೆ. ದಿನಾಂಕ: 23/05/2013 ರಂದು ಸಂಜೆ 4:30 ಗಂಟೆಗೆ ವಿಶಾಲಾಕ್ಷಿಯು ಕಾರ್ಕಳ ತಾಲೂಕು ನಿಂಜೂರು ಗ್ರಾಮದ ಮಿತ್ತಬೈಲು ದರ್ಖಾಸ್ತು ಎಂಬಲ್ಲಿ ತನ್ನ ಮನೆಯಲ್ಲಿ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಕೂಡಲೇ ಆಕೆಯನ್ನು ಬೈಲೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿದಾಗ ವೈದ್ಯಾಧಿಕಾರಿಯವರು ಆಕೆಯನ್ನು ಪರೀಕ್ಷಿಸಿ ಆಕೆಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ದಾಮೋದರ್ ಆಚಾರ್ಯ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 13/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರೇ ಪ್ರಕರಣ  
  • ಪಡುಬಿದ್ರಿ: ದಿನಾಂಕ 23-05-2013 ರಂದು ಕೆ.ಎಂ. ಮಹಾದೇವ ಶೆಟ್ಟಿ, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ  ಇವರು ಠಾಣಾ ಸರಹದ್ದಿನಲ್ಲಿ ಎಲ್ಲೂರು, ನಂದಿಕೂರು ಗ್ರಾಮಗಳಲ್ಲಿ ಹಗಲು ರೌಂಡ್ಸ್‌ ಕರ್ತವ್ಯವನ್ನು ಮುಗಿಸಿ ನಡ್ಸಾಲು ಗ್ರಾಮದ ಕಂಚಿನಡ್ಕ ಬಳಿ ಬರುತ್ತಿರುವಾಗ ದೀನ್ ಸ್ಟ್ರೀಟ್‌ ಎಂಬಲ್ಲಿ ಗಲಾಟೆ ನಡೆಯುವ ಮಾಹಿತಿ ತಿಳಿದು ಸದ್ರಿ ಸ್ಥಳಕ್ಕೆ 16-15 ಗಂಟೆಗೆ ಹೋದಲ್ಲಿ ನಡ್ಸಾಲು ಗ್ರಾಮದ ದೀನ್ ಸ್ಟ್ರೀಟ್‌ನ ರಾಮ ನಗರ ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬವರ ಹಯಾತ್ ಮಂಜಿಲ್ ಮನೆ ಬಳಿ ಅಗಲ ಕಿರಿದಾದ ರಸ್ತೆಯಲ್ಲಿ ಎರಡು ಕಾರುಗಳನ್ನು ಮುಖಾಮುಖಿಯಾಗಿ ನಿಲ್ಲಿಸಿ ಆರೋಪಿಗಳಾದ ಅಬ್ದುಲ್ ಹಮೀದ್ ನು ಕೆಎ 20 ಬಿ  4763 ಮಾರುತಿ ಓಮ್ನಿ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಮತ್ತು  ಮೊಹಮ್ಮದ್ ಪರ್ವೇಜ್ ನು ಕೆಎ 19 ಸಿ 2244 ಮಹೇಂದ್ರಾ ಲೋಗನ್ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕೊಂಡು ವ್ಯಕ್ತಿಗಳು ಪರಸ್ಪರ ಕೈ ಕೈ ಮಿಲಾಯಿಸುತ್ತಾ ಅವಾಚ್ಯ ಶಬ್ದಗಳಿಂದ ಕೂಗಾಡುತ್ತಾ ದಾರಿ ಬಿಡುವ ವಿಚಾರದಲ್ಲಿ ನೀನು ಬದಿಗೆ ಹೋಗು, ನೀನು ಕಾರನ್ನು ತೆಗೆ ಎಂಬುದಾಗಿ ಇಬ್ಬರೂ ಕಾರುಗಳಿಗೆ ಬಡಿದು ಸಾರ್ವಜನಿಕ ಸ್ದಳದಲ್ಲಿ ಪರಸ್ಪರ ಕೈ.ಕೈ ಮಿಲಾಯಿಸಿ ಸಾರ್ವಜನಿಕ ಸ್ದಳದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದು, ಅಬ್ದುಲ್ ಹಮೀದ್ ನ ಬಲಗೈಗೆ ಗಾಯವಾಗಿ ರಕ್ತ ಬರುತ್ತಿದ್ದು ಅದೇ ರೀತಿ ಮೊಹಮ್ಮದ್ ಪರ್ವೇಜ್ ನ ಮುಖ ಮತ್ತು ಎದೆಗೆ ಒಳನೋವು ಆಗಿರುವುದರಿಂದ ಸದ್ರಿ  ಅಬ್ದುಲ್ ಹಮೀದ್ (31), ತಂದೆ: ಮೊಹಮ್ಮದ್, ಕೆಎ 20 ಬಿ  4763 ಮಾರುತಿ ಓಮ್ನಿ ಚಾಲಕ, ವಾಸ: ದಿಲ್‌ಶಾದ್ ಮಂಜಿಲ್, ನಜೀರ್ ಟೈಲರ್ ಮನೆಯಲ್ಲಿ ಬಾಡಿಗೆ, ದೀನ್ ಸ್ಟ್ರೀಟ್, ಪಡುಬಿದ್ರಿ ನಡ್ಸಾಲು ಗ್ರಾಮ ಹಾಗೂ 2)ಮೊಹಮ್ಮದ್ ಪರ್ವೆಜ್ (29), ತಂದೆ: ಬಾವಜಾನ್ ಸಾಹೇಬ್, ಕೆಎ 19 ಸಿ 2244 ಮಹೇಂದ್ರಾ ಲೋಗನ್ ಕಾರ್‌ನ ಚಾಲಕ ವಾಸ: ಸುತ್ತುಪುದೆಲ್ ಹೌಸ್, ಭಟ್ರಕೆರೆ, ಪೆರ್ಮುದೆ,ಬಜ್ಪೆ, ಮಂಗಳೂರು ಇವರುಗಳ ವಿರುದ್ದ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 85/2013  ಕಲಂ.  160 ಐ.ಪಿ.ಸಿ.ಯಂತೆ  ಪ್ರಕರಣ ದಾಖಲಿಸಿರುವುದಾಗಿದೆ.

No comments: