Tuesday, May 14, 2013

Daily Crime Reports As on 14/05/2013 At 19:30 Hrs



ಅಪಘಾತ ಪ್ರಕರಣ

  • ಕುಂದಾಪುರ: ರಘುರಾಮ ಶೆಟ್ಟಿ (39), ತಂದೆ: ದಿ. ಶೀನಪ್ಪ ಶೆಟ್ಟಿ, ವಾಸ: ಹಳ್ನಾಡು ಬಿಲ್ಲಾರಬೆಟ್ಟು, ಹಳ್ನಾಡು ಗ್ರಾಮ, ಕುಂದಾಪುರ ತಾಲೂಕು ಇವರು  ಈ ದಿನ ದಿನಾಂಕ:14/05/2013 ರಂದು ಅವರ ಅಕ್ಕ ಪ್ರೇಮಲತಾರವರೊಂದಿಗೆ ಪ್ರೇಮಲತಾರವರ ಗಂಡನ ಮನೆ ಅಜ್ರಿಗೆ ಹೋಗುವರೇ ಮನೆಯಿಂದ ಹೊರಟು ಹಳನಾಡು ಮುಳ್ಳುಗುಡ್ಡೆ ಬಸ್ಸು ನಿಲ್ದಾಣಕ್ಕೆ ಬಸ್ರೂರು ಅಂಪಾರು ರಸ್ತೆಯಲ್ಲಿ ರಸ್ತೆಯ ಎಡ ಬದಿಯ ತಾರು ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 2:30 ಗಂಟೆಗೆ ಬಸ್ರೂರು ಕಡೆಯಿಂದ ಅಂಪಾರು ಕಡೆಗೆ ಕೆಎ 20 ಬಿ 7583ನೇ ದುರ್ಗಾಂಬಾ ಬಸ್ಸನ್ನು  ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರೇಮಾಲತಾರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ಅವರು ರಸ್ತೆಯ ಅಂಚಿನಲ್ಲಿ ಬಿದ್ದು ಆಕೆಯ ಎಡಕೈ ಮೇಲೆ ಬಸ್ಸಿನ ಮುಂದಿನ ಚಕ್ರ ಹರಿದು ಕೈ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ರಘುರಾಮ ಶೆಟ್ಟಿ ಇವರು ನೀಡಿದ ದೂರಿನಂತೆ ಕುಂದಾಪುರ  ಠಾಣಾ ಅಪರಾಧ ಕ್ರಮಾಂಕ 209/2013 ಕಲಂ 279, 338 ಐಪಿಸಿ 134(ಎ)(ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ರೀಡ್ ಯಾಹ ಅಬ್ದುಲ್ಲ  ವಾಸ:ಕೀರ್ತಿ ಸಾಮ್ರಾಟ್ ಎಂಡ್ ಪಾಯಿಂಟ್  ರೋಡ್ ಮಣಿಪಾಲ  ಇವರು ಈ  ದಿನ ದಿನಾಂಕ: 14/05/2013 ರಂದು ತನ್ನ ಬಾಬ್ತು ಬೈಕ್ ನಂಬ್ರ ಕೆಎ 20 ಇಎ 9743 ಬೈಕ್ ನಲ್ಲಿ  ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿರುವಾಗ  ಸಮಯ ಸುಮಾರು 16:30 ಗಂಟೆಗೆ  ಉಡುಪಿಯ ಕಲ್ಸಂಕ ಜಂಕ್ಷನ್ ನಲ್ಲಿ  ಕೆಎ 20 ಆರ್ 9032 ಸ್ಕೂಟರ್ ಸವಾರನು ತನ್ನ ಬಾಬ್ತು ಸ್ಕೂಟರ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ  ಬಲಕಾಲಿನ ಪಾದದ  ಬಳಿ ರಕ್ತಗಾಯವಾಗಿದ್ದು  ಬೈಕ್ ಜಖಂಗೊಂಡಿರುತ್ತದೆ. ಈ ಬಗ್ಗೆ ರೀಡ್ ಯಾಹ ಅಬ್ದುಲ್ಲ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 237/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ದಿನಾಂಕ 14.05.2013 ರಂದು ಪಿರ್ಯಾದಿ ಶೇಖರ  (28) ತಂದೆ: ಪೂವಪ್ಪ ಮೂಲ್ಯ,  ವಾಸ: ಸಚೇರಿಪೇಟೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಬಾಬ್ತು ಟಿಪ್ಪರ್ ನಂಬ್ರ ಕೆಎ 20 ಸಿ 5769 ನೇದರಲ್ಲಿ ರೆಂಜಾಳದಿಂದ ಜೆಲ್ಲಿ ಲೋಡನ್ನು ಮಣಿಪಾಲ ತಂದು ವಾಪಾಸು ಹೋಗುತ್ತಿದ್ದಾಗ ಹೆರ್ಗಾ ಗ್ರಾಮದ ಮಣಿಪಾಲದ ಬಿಗ್ ಬಾಸ್‌ ರಿಕ್ಷಾ ಸ್ಟ್ಯಾಂಡ್‌‌‌‌‌ನ ಬಳಿ ಬಂದಾಗ ಎದುರಿನಲ್ಲಿ ಸಿಟಿಬಸ್‌‌ ನಿಂತಿದ್ದು, ಅದರಿಂದ ಪ್ರಯಾಣಿಕರು ಇಳಿಯುತ್ತಿದ್ದ ಕಾರಣ ಪಿರ್ಯಾದಿದಾರರು ಟಿಪ್ಪರನ್ನು ಬಸ್ಸಿನ ಹಿಂದೆ ನಿಲ್ಲಿಸಿದ್ದು, ಅದರ ಹಿಂದೆ ಕೆಎ 20 ಸಿ 8134 ನೇ ಟಾಟಾ ಏಸ್‌ ಟೆಂಪೋ ನಿಂತಿದ್ದು, ಅಷ್ಟರಲ್ಲಿ ಪಿರ್ಯಾದಿದಾರರ ಟಿಪ್ಪರಿನ ಹಿಂದುಗಡೆ ನಿಂತಿದ್ದ ಟೆಂಪೋಗೆ ಮಾರುತಿ ಸುಜುಕಿ ಕಾರು ನಂಬ್ರ ಕೆಎ 20 ಪಿ 1779 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಟೆಂಪೋದ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಮುಂದಕ್ಕೆ ಚಲಿಸಿ ಪಿರ್ಯಾದಿದಾರರ ಟಿಪ್ಪರಿನ ಹಿಂದೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಟೆಂಪೋ ಮತ್ತು ಮಾರುತಿ ಸುಜುಕಿ ಕಾರು ಜಖಂಗೊಂಡು ಟೆಂಪೋ ಚಾಲಕನ ಮುಖಕ್ಕೆ ಸಣ್ಣಪುಟ್ಟ ರಕ್ತಗಾಯವಾಗಿರುತ್ತದೆ. ಸದ್ರಿ ಅಪಘಾತ ನಡೆಯುವಾಗ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆ ಆಗಬಹುದು. ಬಗ್ಗೆ ಶೇಖರ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 100/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ 
  • ಕಾಪು: ಗ್ರೆಗೋರಿ ಫೆರ್ನಾಂಡಿಸ್ (77) ತಂದೆ: ದಿ.ತೋಮಸ್ ಫೆರ್ನಾಂಡಿಸ್ ವಾಸ: ಎಸ್.ಬಿ.ಕೆ. ಹೌಸ್, ಉದ್ಯಾವರ ಗ್ರಾಮ ಉಡುಪಿ ಇವರು ಉದ್ಯಾವರದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಇವರ ಬಳಿ 1 ಗ್ರಾಮ್ ತೂಕದ 42 ಚಿನ್ನದ ತುಂಡುಗಳು ಇದ್ದು, ಇದನ್ನು ಭದ್ರತೆಗಾಗಿ ಅವರು  ತನ್ನ ಹಾಸಿಗೆ ಅಡಿಯಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ಇಟ್ಟಿದ್ದು, ಈ ವಿಷಯವನ್ನು ತಿಳಿದ ಆರೋಪಿ ಪೋಲಾ ಫೇರ್ನಾಂಡಿಸ್ (65) ಕೋ ದಿ. ಪಾಸ್ಕಲ್ ಫೆರ್ನಾಂಡಿಸ್ ವಾಸ: ಉದ್ಯಾವರ ಗ್ರಾಮ ಇವರು ಹೊಂಚು ಹಾಕಿ ದಿನಾಂಕ 15-12-2012 ರಂದು 10:00 ಗಂಟೆಗೆ ಗ್ರೆಗೋರಿ ಫೆರ್ನಾಂಡಿಸ್ ತನ್ನ ಮನೆಯಿಂದ ಹೊರಗೆ ಇರುವ ಶೌಚಾಲಯಕ್ಕೆ ಹೋಗಿದ್ದ ಸಮಯ ಆರೋಪಿಯು ಮನೆಯ ಹತ್ತಿರ ಹುಲ್ಲು ಕೊಯ್ಯುತ್ತಿದ್ದವಳು ಗ್ರೆಗೋರಿ ಫೆರ್ನಾಂಡಿಸ್ ಇವರು  ಹೊರಗೆ ಹೋದ ವಿಷಯ ಗಮನಿಸಿ ಮನೆಯ ಒಳಗೆ ಹೋಗಿ ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ 42 ಬಂಗಾರದ ತುಂಡುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಬಗ್ಗೆ ಗ್ರೆಗೋರಿ ಫೆರ್ನಾಂಡಿಸ್ ಇವರು ನೀಡಿದ ಖಾಸಗಿ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 144/2013 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ  
  • ಕಾಪು: ಪೀಟರ್ ಮಾರ್ಟಿಸ್ ತಂದೆ: ದಿ. ಸೈಮನ್ ಮಾರ್ಟಿಸ್ ವಾಸ: ಬಾಜಿ ಹಿತ್ಲು ಮನೆ, ಗುಡ್ಡೆಯಂಗಡಿ ಉಧ್ಯಾವರ ಗ್ರಾಮ ಉಡುಪಿರವರ ಅಣ್ಣ (55) ಫ್ರಾನ್ಸಿಸ್ ಮಾರ್ಟಿಸ್ ಇವರು ಕಳೆದ 25 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ ಕಸ್ತೂರ್ಭಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ 14/05/2013 ರಂದು ಬೆಳಿಗ್ಗೆ 07:00 ಗಂಟೆಯಿಂದ 8:00 ಗಂಟೆಯ ಮಧ್ಯಾವದಿಯಲ್ಲಿ ಯಾವುದೋ ಹೃದಯಕ್ಕೆ ಸಂಭಂದ ಪಟ್ಟ ಖಾಯಿಲೆಯಿಂದ ಅವರ ಮನೆಯಲ್ಲಿ ಮೃತಪಟ್ಟಿದ್ದಾಗಿದೆ ಎಂಬುದಾಗಿ ಪೀಟರ್ ಮಾರ್ಟಿಸ್ ರವರು  ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 13/2013 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: