Thursday, May 09, 2013

Daily Crime Reports As on 09/05/2013 At 07:00 Hrs



ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 6.05.2013 ರಂದು 13:45 ಘಂಟೆಗೆ ಕಾರ್ಕಳ ತಾಲುಕಿನ ನಿಂಜೂರು ಗ್ರಾಮದಲ್ಲಿ ಹಾದು ಹೋಗಿರುವ ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿ ಸಾರ್ವಜನಿಕ ರಸ್ತೆಯ ಎಡ್ಮೇರು ಜಂಕ್ಷನ್‌ ಎಂಬಲ್ಲಿ KA-20-EB-7468 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಶೈಲೇಶ್‌ ಆಚಾರ್ಯ ಎಂಬವರು ತನ್ನ ಮೋಟಾರು ಸೈಕಲ್ಲಿನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೂಡುಬೆಳ್ಳೆ ಕಡೆಯಿಂದ ಪಳ್ಳಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಜ್ಯ ಹೆದ್ದಾರಿ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ತೆರಳುತ್ತಿದ್ದ ಮಾಧವ ನಾಯಕ್ (66) ತಂದೆ: ದಿ. ಶಾಮ ನಾಯಕ್ ವಾಸ: ಬೆಳಂಜಿಲ್ ಮನೆ, ಮದ್ದಾರ್ ಅಂಚೆ, ಶಿರ್ವ ಗ್ರಾಮ, ಉಡುಪಿ ಇವರ  ಪತ್ನಿ ಶ್ರೀಮತಿ ಜಯಶ್ರೀ ನಾಯಕ್‌ ಎಂಬವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಈ ಪರಿಣಾಮ ಶ್ರೀಮತಿ ಜಯಶ್ರೀ ನಾಯಕ್‌ ಇವರ ತಲೆ, ಕೈ ಮತ್ತು ಕಾಲುಗಳಿಗೆ ಹಾಗೂ ಮೋಟಾರು ಸೈಕಲ್‌ ಸವಾರ ಶೈಲೇಶ್‌ ಆಚಾರ್ಯ ಇವರಿಗೆ ಗಂಭೀರ ಗಾಯಗಳಾಗಿದ್ದು, ಅವರಿಬ್ಬರೂ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಾಧವ ನಾಯಕ್  ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 59/2013 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ನವಯುಗ ಇಂಜಿನಿಯರಿಂಗ್‌ ಕಂಪೆನಿಗೆ ಸೇರಿದ ಟಿಪ್ಪರ್‌ ಲಾರಿ ನಂಬ್ರ ಕೆ.ಎ.20.ಸಿ.1995 ನೇದನ್ನು ಅದರ ಚಾಲಕ ಚೋಟುಲಾಲ್‌ ಎಂಬವರು ನೆಲ್ಲಿಗುಡ್ಡೆ ಕಡೆಯಿಂದ ಹಾಳೆಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಕೈರೋಳಿ ಎಂಬಲ್ಲಿ ಟಿಪ್ಪರ್‌ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಪಲ್ಟಿಯಾಗಿ ಬಿದ್ದು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಶ್ರೀರಾಮ ರಾಯ್‌ ಪ್ರಾಯ 42 ವರ್ಷ ತಂದೆ: ಕೇದಾರ್‌ನಾಥ್ ರಾಯ್‌ ವಾಸ: ಮಿಯಾಪುರ್‌ ಗ್ರಾಮ, ಮನಿಹಾರ್‌ ಅಂಚೆ, ಕಟ್ಟಹಾರ್‌ ತಾಲೂಕು & ಜಿಲ್ಲೆ, ಬಿಹಾರ್‌ ರಾಜ್ಯ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 54/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ದಿನಾಂಕ. 08.05.2013 ರಂದು ರಾತ್ರಿ 21:00 ಗಂಟೆಗೆ ಕೆಎ-20-ಸಿ-1379 ನೇ ಈಚರ್ ಟೆಂಪೋ ಚಾಲಕ ಆರೋಪಿ ಇಸ್ಮಾಯಿಲ್ ಎಂಬವರು ಟೆಂಪೋವನ್ನು ರಾ.ಹೆ 66 ರಲ್ಲಿ ಹೆಜಮಾಡಿ ಗ್ರಾಮದ ಗರಡಿ ಬಳಿ, ಅತೀ ವೇಗ ಮತ್ತು ನಿರ್ಲಕ್ಷತನದಿಂದ ಪಡುಬಿದ್ರಿ ಕಡೆಯಿಂದ ಹೆಜಮಾಡಿ ಕಡೆಗೆ ಚಲಾಯಿಸಿಕೊಂಡು ಟೆಂಪೋದ ಎದುರುಗಡೆಯಿಂದ ಹೆಜಮಾಡಿ ಕಡೆಗೆ ಹೋಗುತ್ತಿದ್ದ ಕೆಎ-20-ಪಿ-7764 ನೇ ರೋಹಿತ್ .ಎನ್. ಶೆಟ್ಟಿ (30), ತಂದೆ: ಪ್ರಭಾಕರ.ಎನ್. ಶೆಟ್ಟಿ ವಾಸ: ಹೆಜಮಾಡಿ ವಯಾ ಅವರಾಲು ಬೋಳಿಂಜಿಗುತ್ತು, ಪಲಿಮಾರು ಗ್ರಾಮ, ಉಡುಪಿ ತಾಲೂಕು ಇವರ ಸ್ವಿಪ್ಟ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಪೂರ್ಣ ಜಖಂ ಗೊಂಡಿದ್ದು, ಈಚರಿನ ಮುಂಬಾಗ ಜಖಂ ಗೊಂಡಿರುತ್ತದೆ. ಈ ಬಗ್ಗೆ ರೋಹಿತ್ .ಎನ್. ಶೆಟ್ಟಿ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 78/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


No comments: