Wednesday, May 08, 2013

Daily Crime Reports As on 08/05/2013 At 19:30 Hrs

ಹಲ್ಲೆ ಪ್ರಕರಣ
  • ಕುಂದಾಪುರ: ಮಹಮ್ಮದ್ ಬಶೀರ್ ತಂದೆ: ಶೇಕ್ ಆಲಿ ವಾಸ:ಬ್ಯಾರೀಸ್ ಕಾಲೇಜು ಬಳಿ ಕಸಬಾ ಕುಂದಾಪುರ  ಇವರು  ದಿನಾಂಕ:06/05/2013 ರಂದು ಸಂಜೆ 7:30 ಗಂಟೆಗೆ ಎಂ ಕೋಡಿ ಬಿಲಾಲ್ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಸ್ನೇಹಿತರಾದ ಅಬ್ದುಲ್ ಸಲಾಂ, ಹುಸೈನಾರ್, ಮೋಯ್ದೀನ್ ರವರೊಂದಿಗೆ ಬೀಚ್ ನಲ್ಲಿ ವಿಶ್ರಾಂತಿ ಪಡೆಯುವರೇ ಎಂ ಕೋಡಿ ಜಂಕ್ಷನ್ ಬಳಿ ಹೋಗುತ್ತಿದ್ದಾಗ ಅವರ ಹಿಂದಿನಿಂದ ಆಶೀದ್ ಮತ್ತು ಮೊಯದ್ದಿ ಎನ್ನುವವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಇನ್ನು ಮುಂದಕ್ಕೆ ನಿನ್ನನ್ನು ಬಿಡುವುದಿಲ್ಲ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ, ಈ ಬಗ್ಗೆ ಮಹಮ್ಮದ್ ಬಶೀರ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 203/2013  ಕಲಂ 323.504.506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಆಶೀದ್ ಅಹಮದ್: ಕೆ.ಎ ಹುಸೇನ್ ವಾಸ:ಗದ್ದೆ ಮನೆ ಬೀಚ್ ರೋಡ್ ಕೋಡಿ ಕಸಬಾ ಕುಂದಾಪುರ ಇವರು ದಿನಾಂಕ:06/05/2013 ರಂದು ಸಂಜೆ 7:30 ಗಂಟೆಗೆ ಎಂ ಕೋಡಿ ಬಿಲಾಲ್ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಬರುತ್ತಿರುವಾಗ ಎಂ ಕೋಡಿ ಜಂಕ್ಷನ್ ಬಳಿ ಶೋಯಿಬ್, ಬಸೀರ್ ಹಾಗೂ ತನ್ವೀರ್ ಎಂಬವರು ಕೈಯಿಂದ ಹೊಡೆದು ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಅಲ್ಲದೇ ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಆಶೀದ್ ಅಹಮದ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 204/2013 ಕಲಂ: 323.504.506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಶಿರ್ವಾ: ಸಿಲೆಸ್ಟಿನ್ ಕ್ವಾಡ್ರಸ್   (70) ಗಂಡ ಮ್ಯೆನುವೆಲ್ ಕ್ವಾಡ್ರಸ್   ವಾಸ  ಕುಂಜಿಗುಡ್ಡೆ ಪಿಲಾರು  ಗ್ರಾಮ  ಉಡುಪಿ ತಾಲೂಕು ಇವರ ಮಗ ಜಾನ್ ಕ್ವಾಡ್ರಸ್ (45) ಎಂಬವರಿಗೆ ಕುಡಿತದ ಅಭ್ಯಾಸ ಇದ್ದು ಕುಡಿತಕ್ಕೆ ಹಣ ಸಾಲದೇ ಇರುವ ಕಾರಣ ದಿನಾಂಕ 04/05/2013 ರಂದು ರಾತ್ರಿ 7-30 ಗಂಟೆಗೆ  ಪಿಲಾರು ಗ್ರಾಮದ ಕುಂಜಿಗುಡ್ಡೆ ಎಂಬಲ್ಲಿ ತನ್ನ ಮನೆಯಲ್ಲಿ ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಅವರ ತಾಯಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07-05-2013 ರಂದು ರಾತ್ರಿ 9-15 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಸಿಲೆಸ್ಟಿನ್ ಕ್ವಾಡ್ರಸ್  ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 12/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ರಾಜೇಶ್ ಆಚಾರ್ಯ (19) ತಂದೆ: ಭಾಸ್ಕರ ಆಚಾರ್ಯ ವಾಸ: ಆದರ್ಶ ನಗರ, 5 ಸೆಂಟ್ಸ್, ಪಡುಮಾರ್ನಾಡು ಗ್ರಾಮ, ಮಂಗಳೂರು ತಾಲೂಕು ಇವರ ತಂದೆ ಭಾಸ್ಕರ ಆಚಾರ್ಯರವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಅಭ್ಯಾಸವುಳ್ಳವರಾಗಿದ್ದು, ದಿನಾಂಕ: 07/05/2013 ರ ಬೆಳಿಗ್ಗೆ 05:00 ಗಂಟೆಯಿಂದ ದಿನಾಂಕ: 08/05/2013 ರ ಬೆಳಿಗ್ಗೆ 09:30 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಯಂತಿ ನಗರ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಮಲಗಿದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ರಾಜೇಶ್ ಆಚಾರ್ಯ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 11/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: