Wednesday, May 08, 2013

Daily Crime Reports As on 08/05/2013 At 17:00 Hrs


ಅಪಘಾತ ಪ್ರಕರಣ
  • ಕೋಟ: ದಿನಾಂಕ 07/05/2013 ರಂದು ಎಮ್‌ ಶಿವರಾಮ ಉಡುಪ (64), ತಂದೆ: ದಿ. ಶ್ರೀನಿವಾಸ್‌ ಉಡುಪ, ಕಾರ್ಕಡ ಅಂಚೆ ಮತ್ತು ಗ್ರಮ ಉಡುಪಿ ತಾಲೂಕು ಇವರು  ಮದ್ಯಾಹ್ನ 11:45 ಗಂಟೆ ಸಮಯಕ್ಕೆ ವಡ್ಡರ್ಸೆಯಿಂದ ಕೋಟ ಮೂರುಕೈ ಕಡೆಗೆ ಕೋಟ-ಗೋಳಿಯಂಗಡಿ ರಸ್ತೆಯಲ್ಲಿ ತನ್ನ ಬಾಬ್ತು ಮೋಟಾರ್‌ಸೈಕಲ್‌ನಲ್ಲಿ ಬರುತ್ತಿರುವಾಗ ಚಿತ್ರಪಾಡಿ ಗ್ರಾಮದ ಬೆಟ್ಲಕ್ಕಿ ಕ್ರಾಸ್‌ ಎಂಬಲ್ಲಿ ಕೆಎ 20 ಸಿ 845 ನೇ ಟಿಪ್ಪರ್‌ನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್‌ನ್ನು ಕೋಟ ಮೂರುಕೈಯಿಂದ ಸಾಯಿಬ್ರಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದು ಮುಂದಿನ ವಾಹನವನ್ನು ಓವರ್‌ಟೇಕ್‌ ಮಾಡುವ ರಭಸಕ್ಕೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಕೆಎ 20 ವಿ 9538 ನೇ ಮೋಟಾರ್‌ ಸೈಕಲ್‌ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಸವಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತೀವೃ ರಕ್ತ ಗಾಯಗೊಂಡಿರುವುದಾಗಿದೆ. ಸದ್ರಿ ಗಾಯಾಳು ಅವರ  ಪರಿಚಯದ ಚಿತ್ರಪಾಡಿ ಗ್ರಾಮದ ಸುಬ್ರಹ್ಮಣ್ಯ ಕಾರಂತ್‌ರವರಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಎಮ್‌ ಶಿವರಾಮ ಉಡುಪ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 13೦/2013 ಕಲಂ 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ : ಕಲ್ಲಾ ಸಿಂಗ್ (22), ತಂದೆ: ಜೀವನ್ ಸಿಂಗ್, ವಾಸ: ಖಜನಿ ಪುರ ಗ್ರಾಮ, ಹಿಂಡೋನಾ ತಾಲೂಕು, ಕರೌಲಿ ಜಿಲ್ಲೆ, ರಾಜಸ್ಥಾನ್ ಇವರು  ಈ ದಿನ ದಿನಾಂಕ: 07/05/2013 ರಂದು ಬೆಳಿಗ್ಗೆ ಸಾಲಿಗ್ರಾಮ ಎಂಬಲ್ಲಿ ಗ್ರಾನೈಟ್ ಪಿಟ್ಟಿಂಗ್ ಕೆಲಸಕ್ಕಾಗಿ ದಿಸ್ ರಾಜ್ ಎಂಬವನೊಂದಿಗೆ ಮೋಟಾರು ಸೈಕಲ್ ನಂಬ್ರ ಕೆಎ 20 ವಿ 907 ರಲ್ಲಿ ಹೋದವರು ಕೆಲಸ ಮುಗಿಸಿ ವಾಪಾಸ್ಸು ಬಸ್ರೂರು ಮಾರ್ಗೊಳಿಗೆ ಅವರ ಬಾಡಿಗೆ ಮನೆಗೆ ಬಸ್ರೂರು ಮೂರ್ ಕೈಯಿಂದ ಮೋಟಾರು ಸೈಕಲಿನಲ್ಲಿ ದಿಸ್ ರಾಜ್ ರವರನ್ನು ಬೈಕ್ ಹಿಂದುಗಡೆ ಕುಳ್ಳಿರಿಸಿ ಬರುತ್ತಿದ್ದಾಗ ಮೂಡ್ಲಕಟ್ಟೆ ಬಸ್ಸು ನಿಲ್ದಾಣದ ಬಳಿ ತಲುಪುವಾಗ ಸಮಯ ಸುಮಾರು 19:45 ಗಂಟೆಗೆ ಬಸ್ರೂರು ಕಡೆಯಿಂದ ಕುಂದಾಪುರ ಕಡೆಗೆ ಲಾರಿ ನಂಬ್ರ ಕೆಎ 20 6383ನೇದನ್ನು  ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರಾ ಎಡ ಬದಿಯಿಂದ ಬಸ್ರೂರು ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಕಲ್ಲಾ ಸಿಂಗ್ ಹಾಗೂ ಹಿಂದುಗಡೆ ಕುಳಿತಿದ್ದ ದಿಸ್ ರಾಜ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಕಲ್ಲಾ ಸಿಂಗ್ ಬಲಕಾಲಿಗೆ ಗಾಯ ಹಾಗೂ ಜೊತೆ ಸವಾರ ದಿಸ್ ರಾಜ್ ರವರಿಗೆ ತಲೆಗೆ ಹಾಗೂ ಕಾಲಿಗೆ ರಕ್ತಗಾಯವಾಗಿರುತ್ತದೆ. ಬಗ್ಗೆ ಕಲ್ಲಾ ಸಿಂಗ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 202/2013 ಕಲಂ 279, 337  ಐಪಿಸಿ 134 (ಎ)(ಬಿ) ಮೋ.ವಾ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಕಾಪು:  ಉಡುಪಿ ತಾಲೂಕು ಪಾಂಗಾಳ ಗ್ರಾಮದ  ಪಾಂಗಾಳ ಹೆಗ್ಡೆ  ಬಾರ್ ಎದುರುಗಡೆ ನಾರಾಯಣ ಸೇರಿಗಾರವರ ಅಂಗಡಿಯ ಜಗುಲಿಯಲ್ಲಿ ಮೂಲತ ಗದಗ ಜಿಲ್ಲೆಯವನಾದ ಶಂಕರ ಹಿರೇಮಠ್ ಎಂಬವನು ಮಲಗಿಕೊಂಡಿದ್ದು, ಈ ದಿನ ದಿನಾಂಕ 08/05/2013 ರಂದು 08:30 ಗಂಟೆಗೆ ಶ್ರೀಮತಿ ಸುಜಯ ಪಿ ಶೆಟ್ಟಿ, ಗಂಡ: ಪ್ರಶಾಂತ್ ಕುಮಾರ್ ಶೆಟ್ಟಿ, ಪಾಂಗಾಳ ಕೆಳಮನೆ, ಉಡುಪಿ ಜಿಲ್ಲೆ  ಇವರು ನೋಡಿದಾಗ ಸದ್ರಿ ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ. ಮೃತವ್ಯಕ್ತಿಯು ವಿಪರೀತ ಅಮಲು ಪದಾರ್ಥ ಸೇವಿಸುವವನಾಗಿದ್ದು, ದಿನಾಂಕ 06/05/2013 ರಂದು ವಿಪರೀತ ಅಮಲು ಪದಾರ್ಥ ಸೇವಿಸಿ ಮಲಗಿದ್ದವನು ಆಹಾರ ಸೇವಿಸದೇ ದಿನಾಂಕ 06/05/2013 ರಿಂದ 08/05/2013ರ ನಡುವೆ ಮಲಗಿದ್ದಲ್ಲೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಸುಜಯ ಪಿ ಶೆಟ್ಟಿ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 11/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ರಾಜೇಶ್  ತಂದೆ: ದುರ್ಗಾ ಶೆಟ್ಟಿಗಾರ ವಾಸ: ಈಶ್ವರ ನಗರ ಗರಡಿಮಜಲು, ತೆಂಕನಿಡಿಯೂರು ಗ್ರಾಮ ಉಡುಪಿ ಇವರ ಅಕ್ಕನ ಮಗನಾದ ಆದರ್ಶ (22) ಎಂಬಾತನು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ 07/05/13 ರಂದು ಬೆಳಿಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 4:30 ಗಂಟೆ ಮಧ್ಯಾವಧಿಯಲ್ಲಿ ಲಕ್ಷ್ಮೀ ನಗರ ಗರಡೆಯ ತನ್ನ ಮನೆಯ ದೇವರ ಕೋಣೆಯಲ್ಲಿರುವ ಪ್ಯಾನಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಾಜೇಶ್ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 29/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: