Saturday, May 25, 2013

Daily Crime Reported on 25/05/2013 at 17:00 Hrs

ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಕಾರ್ಕಳ: ದಿನಾಂಕ 25/05/2013 ರಂದು ಬೆಳಗ್ಗೆ 11:00 ಗಂಟೆಗೆ ಕಾರ್ಕಳ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಹಗಲು ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಾರ್ಕಳ ತಾಲೂಕಿನ ಕಸಬ ಗ್ರಾಮದ ದಾನಶಾಲೆ ಬಳಿಯಿರುವ ಗೊಮ್ಮಟಬೆಟ್ಟದ ಹಿಂಭಾಗ ಗೇಟಿನ ಕಲ್ಲಿನ ಕಂಬದ ಹಿಂಬದಿಯಲ್ಲಿ ಒಬ್ಬಾತ ಸಂಶಯಾಸ್ಪದ ರೀತಿಯಲ್ಲಿ ನಿಂತಿರುವುದನ್ನು ಕಂಡು ವಿಚಾರಿಸಲು ಆತನ ಬಳಿಗೆ ತೆರಳಿದಾಗ ಆತ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿ ಗೇಟಿನ ಕಲ್ಲಿನ ಕಂಬದ ಹಿಂಬದಿಗೆ ಸರಿದು ಓಡಿ ಪರಾರಿಯಾಗಲು ಪ್ರಯತ್ನಿಸಿದವನನ್ನು ಆತನ ಚಲನವಲವನಗಳ ಮೇಲೆ ಸಂಶಯಗೊಂಡು ಆತನನ್ನು ಹಿಡಿದು ಕೂಲಂಕುಷವಾಗಿ ವಿಚಾರಿಸಿದಾಗ ಆತನು ತನ್ನ ಹೆಸರು ಪ್ರವೀಣ ಪೂಜಾರಿ ಪ್ರಾಯ 26 ವರ್ಷ ತಂದೆ ಶಿವರಾಮ ಪೂಜಾರಿ ವಾಸ ಅನುಗ್ರಹ ನಿವಾಸ, ಚಿಕ್ಕಲ್‌ಬೆಟ್ಟು, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿ ವ್ತಕ್ತಿಯು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಹೊಂಚು ಹಾಕುತ್ತಿರುವುದಾಗಿ ಅನುಮಾನ ಬಂದುದರಿಂದ ಆತನನ್ನು ವಶಕ್ಕೆ ತೆಗೆದುಕೊಂಡು ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 67/2013 ಕಲಂ 41(ಡಿ), 109 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.  
ಹಲ್ಲೆ ಪ್ರಕರಣ
  • ಕಾರ್ಕಳ: ದಿನಾಂಕ 24/05/2013 ರಂದು ರಾತ್ರಿ 9:30 ಗಂಟೆಗೆ ಆರೋಪಿ ಸಂತೋಷ ಪೂಜಾರಿ ಎಂಬವರು ಪಿರ್ಯಾದಿದಾರರಾದ ಶ್ರೀಮತಿ ಜಾನಕಿ (35) ಗಂಡ ಕಾಂತು ವಾಸ: ಮಂಟಾಯಿ ನೂರಾಲ್ ಬೆಟ್ಟು ಗ್ರಾಮ ಕಾರ್ಕಳ ತಾಲೂಕು ಎಂಬವರ ಮನೆಗೆ ಅಕ್ರಮ ಪ್ರವೇಶ  ಮಾಡಿ, ಪಿರ್ಯಾದಿದಾರರನ್ನು ತಡೆದು ಕೈಯಿಂದ ಹೊಡೆದು ಬಾಗಿಲಿನ ಕಡೆಗೆ ದೂಡಿದ ಪರಿಣಾಮ ಪಿರ್ಯಾದಿದಾರರ ಹಣೆಗೆ ಮತ್ತು ಕೈಗೆ ತರಚಿದ ಗಾಯವಾಗಿರುತ್ತದೆ. ಆಪಾದಿತನ ಆಕ್ಕ ಲಲಿತಾ ಎಂಬವರು ಶರಾಬು ಕುಡಿದು ದಾರಿಯಲ್ಲಿ ಬಿದ್ದದಾರೆಂದು ಪಿರ್ಯಾದಿದಾರರು ಊರಿನಲ್ಲಿ ಹೇಳಿರುತ್ತಾಳೆಂದು ಆರೋಪಿಯು ತಿಳಿದುಕೊಂಡು ಕೋಪದಲ್ಲಿ ಈ ಕೃತ್ಯ ಮಾಡಿದ್ದಾಗಿದೆ ಎಂಬುದಾಗಿ ಆರೋಪಿಸಿ ಶ್ರೀಮತಿ ಜಾನಕಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2013 ಕಲಂ 448, 341, 323 .ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬೈಂದೂರು: ಪಂಜು ಪೂಜಾರಿ (48) ವಾಸ ಚಟ್ನಿಹಿತ್ಲು ನಾವುಂದ ಗ್ರಾಮ ಕುಂದಾಫುರ ತಾಲೂಕು ಎಂಬವರು ವಿಪರೀತ ಶರಾಬು ಕುಡಿಯುವ ಚಟದವರಾಗಿದ್ದು ಹಗಲು ಕೂಲಿ ಕೆಲಸ ಮಾಡಿ ರಾತ್ರಿ ಶರಾಬು ಕುಡಿದು ಬಂದು ಗಲಾಟೆ ಮಾಡುತ್ತಿದ್ದು ಯಾವಾಗಲು ತಾನು ಸಾಯುತ್ತೇನೆ ಎಂದು ಹೇಳುತ್ತಿದ್ದು ದಿನಾಂಕ 24/05/2013 ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ದಿನಾಂಕ 24/05/13 ರಂದು ರಾತ್ರಿ 9:00 ಗಂಟೆಯಿಂದ  ದಿನಾಂಕ 25/05/2013 ರ ಬೆಳಿಗ್ಗೆ 4:00 ಗಂಟೆಯ ಮಧ್ಯಾವಧಿಯಲ್ಲಿ  ನಾವುಂದ ಗ್ರಾಮದ ಪಿರ್ಯಾದಿದಾರರ ಮನೆಯ ಪೂರ್ವ ಬದಿಯಲ್ಲಿ ಹೊಸದಾಗಿ ನಿರ್ಮಿಸಿದ ಅಡುಗೆ ಕೋಣೆಯಲ್ಲಿ ಪಕ್ಕಾಸಿಗೆ ತಾನು ಉಟ್ಟುಕೊಂಡ ಲುಂಗಿಯನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮೃತರ ಪತ್ನಿ ಲಕ್ಷ್ಮೀ ಪೂಜಾರ್ತಿ (40) ಗಂಡ ಪಂಜು ಪೂಜಾರಿ ವಾಸ: ಚಟ್ನಿಹಿತ್ಲು ನಾವುಂದ ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 14/2013 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.  
  • ಕೋಟ: ಪಿರ್ಯಾದಿದಾರರಾದ ಬಸವ ಪೂಜಾರಿ 50 ವರ್ಷ ತಂದೆ: ಗೋವಿಂದ ಪೂಜಾರಿ ವಾಸ: ಬೆಳ್ಳಿಬೆಟ್ಟು ಗುಂಡ್ಮಿ ಗ್ರಾಮ ಉಡುಪಿ ತಾಲೂಕು ಎಂಬವರ ತಮ್ಮ 25 ವರ್ಷ ಪ್ರಾಯದ ಗುರುರಾಜ್ ಎಂಬವರು ದಿನಾಂಕ 24/05/2013 ರಂದು ಸಂಜೆಯಿಂದ 25/05/2013 ರ ಬೆಳಿಗ್ಗೆ 08:00 ಗಂಟೆಯ ಮಧ್ಯಾವದಿಯಲ್ಲಿ ಉಡುಪಿ ತಾಲೂಕು ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ದೇವಸ್ತಾನದ ಕೆರೆಯಲ್ಲಿ ಸ್ನಾನ ಮಾಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಬಸವ ಪೂಜಾರಿರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ  ಅಸ್ವಾಭಾವಿಕ ಮರಣ ಸಂಖ್ಯೆ 20/2013 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.

No comments: