Wednesday, May 08, 2013

Daily Crime Reported on 08/05/2013 at 07:00 Hrsಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಮಾದೇವ (31) ತಂದೆ ನಾರಾಯಣ ನಾಯ್ಕ ವಾಸ ಕನ್ನಡ ಶಾಲೆಯ ಹಿಂಭಾಗ ಸರ್ಪನಕಟ್ಟೆ ಭಟ್ಕಳ ತಾಲೂಕು ಎಂಬವರು ಕೆಎ 20 ಸಿ 6037 ನೇ ಬಸ್ಸಿನ ಚಾಲಕರಾಗಿದ್ದು, ದಿನಾಂಕ 07/05/2013 ರಂದು ಉಡುಪಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಮಧ್ಯಾಹ್ನ 3:20 ಗಂಟೆಗೆ ಉಧ್ಯಾವರ ಗ್ರಾಮದ ಹಾಲಿಮಾ ಸಾಬ್ಜು ಹಾಲ್ ಎದುರುಗಡೆ ಒಂದು ವಾಹನವನ್ನು ನಿಲ್ಲಿಸಿದ್ದರಿಂದ ಅದರ ಹಿಂದೆ ಪಿರ್ಯಾದಿದಾರರು ವಾಹನವನ್ನು ನಿಲ್ಲಿಸಿದಾಗ ಆರೋಪಿ ಕೆ.ಎ 20 ಸಿ 2578 ನೇ ಆಟೋ ರಿಕ್ಷಾ ಚಾಲಕ ಪ್ರಶಾಂತ ಎಂಬಾತನು ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕನಿಗೆ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ ಮಾದೇವರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.

No comments: