Tuesday, May 07, 2013

Daily Crime Reported on 07/05/2013 at 19:30 Hrsಅಪಘಾತ ಪ್ರಕರಣ

  • ಕಾಪು: ದಿನಾಂಕ 07/05/2013 ರಂದು ಪಿರ್ಯಾದಿದಾರರಾದ ವಿಜಯ ಪೂಜಾರಿ (36) ತಂದೆ ಪೊಂಕ್ರ ಪೂಜಾರಿ ವಾಸ ಪೊಸರು ತೋಟ ಮೂಡಬೆಟ್ಟು ಗ್ರಾಮ ಎಂಬವರು ಕೆಎ 20 ಎ 5256 ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಕ ದಿನೇಶ್ ಇವರನ್ನು ಕುಳ್ಳಿರಿಸಿಕೊಂಡು ಕಟಪಾಡಿಯಿಂದ ಉಚ್ಚಿಲ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಸಾಯಂಕಾಲ 4:15 ಗಂಟೆಗೆ ಮುಳೂರು ಗ್ರಾಮದ ಕಮ್ಯೂನಿಟಿ ಹಾಲ್ ಎದುರು ಆರೋಪಿ ಕೆಎ 20 ಬಿ 6657 ನೇ ಬಸ್ ಚಾಲಕ ನವೀನ್ ಕುಮಾರ್ ಎಂಬವರು ಬಸ್ಸನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ರಿಕ್ಷಾದ ಎದುರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾವು ಅಡ್ಡಬಿದ್ದು, ರಿಕ್ಷಾದಲ್ಲಿದ್ದ ಪ್ರಯಾಣಿಕ ದಿನೇಶ್ ಇವರಿಗೆ ಹಣೆಯ ಬಲಭಾಗಕ್ಕೆ ಮತ್ತು ಎಡ ಕೈಯ ಮಣಿ ಗಂಟಿಗೆ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ  ವಿಜಯ ಪೂಜಾರಿ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.

No comments: