Tuesday, May 07, 2013

Daily Crime Reported on 07/05/2013 at 17:00 Hrs

ಅಪಘಾತ ಪ್ರಕರಣಗಳು
  • ಶಂಕರನಾರಾಯಣ: ದಿನಾಂಕ 06/05/2013 ರಂದು ಮದ್ಯಾಹ್ನ 02:00 ಗಂಟೆಗೆ ಉಡುಪಿ ತಾಲೂಕು ಕೋಟಾ ಹೋಬಳಿಯ ವಂಡಾರು ಗ್ರಾಮದ ಚಕ್ಕರ ಬೆಟ್ಟು ಎಂಬಲ್ಲಿನ ರಸ್ತೆಯ ತಿರುವಿನಲ್ಲಿ ಆರೋಪಿ JH 06 C 6691 ನೇ ಟಿಪ್ಪರ್‌ಲಾರಿಯ ಚಾಲಕ ನಾಗರಾಜ ಎಂಬಾತನು ಶಿರೂರು ಮೂರ್ಕೈ ಯಿಂದ ವಂಡಾರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಧರ್‌ನಾಯ್ಕ ಎಂಬುವವರು ಪಿರ್ಯಾಧಿದಾರಾದ ಪ್ರಕಾಶ್‌ ನಾಯ್ಕ ತಂದೆ ಪುರುಷ ನಾಯ್ಕ ವಾಸ ಚೆಗರಿಬೆಟ್ಟು ಬೈದಿಬೆಟ್ಟು ಅಂಚೆ ಕುದಿ ಗ್ರಾಮ, ಉಡುಪಿ  ತಾಲೂಕು ಎಂಬವರನ್ನು ಕೆ.20 ED 4156 ನೇ ಹಿರೋಹೊಂಡ ಪ್ಯಾಶನ್‌ಪ್ರೋ ಮೋಟಾರು ಸೈಕಲಿನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ವಂಡಾರು ಕಡೆಯಿಂದ ಶಿರೂರು ಮೂರ್ಕೈ ಕಡೆಗೆ ಸಾಗುತ್ತಿರುವ ಸಮಯದಲ್ಲಿ ಅವರ ಮೋಟಾರು ಸೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತ ಶ್ರೀಧರ್‌ನಾಯ್ಕ ಹಾಗೂ ಪಿರ್ಯಾಧಿದಾರರು ರಸ್ತೆಗೆ ಬಿದ್ದು ಇಬ್ಬರಿಗೂ ರಕ್ತಗಾಯವಾಗಿರುತ್ತದೆ ಎಂಬುದಾಗಿ ಪ್ರಕಾಶ್‌ ನಾಯ್ಕ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2013 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 06/05/2013 ರಂದು 18:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ-ಅಂಬಾಗಿಲು ಮಾರ್ಗದ ಪೆರಂಪಳ್ಳಿ ಜಂಕ್ಷನ್‌ ಬಳಿ ಪಿರ್ಯಾದಿದಾರರಾದ ಪ್ರಶಾಂತ್‌ (24) ತಂದೆ ಉಪೇಂದ್ರ ವಾಸ ಅಮ್ಮುಂಜೆ ರಸ್ತೆ, ನರ್ನಾಡು ಮದಗ, ಉಪ್ಪೂರು ಗ್ರಾಮ, ಉಡುಪಿ ತಾಲೂಕು ಎಂಬವರು ಪೆರಂಪಳ್ಳಿಯಿಂದ ಅಂಬಾಗಿಲು ಕಡೆಗೆ ಹೋಗುತ್ತಿರುವಾಗ ಅವರ ಪರಿಚಯಸ್ಥರಾದ ಪ್ರಸಾದರವರು ಪಿರ್ಯಾದಿದಾರರಿಂದ ಮುಂದೆ ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಇಎ 7685 ನೇದನ್ನು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಬಸ್ಸು ನಂಬ್ರ ಕೆಎ 20 ಬಿ 0075 ನೇದರ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಸಾದ್‌ ರವರ ಬೈಕ್‌ನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬಸ್ಸಿನ ಹಿಂಬದಿ ತಾಗಿಸಿಕೊಂಡ ಹೋದ ಪರಿಣಾಮ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಪ್ರಸಾದ ಹಾಗೂ ಐವನ್‌ ರವರು ರಸ್ತೆಗೆ ಬಿದ್ದು,  ಇಬ್ಬರಿಗೂ ಗಾಯವಾಗಿರುತ್ತದೆ ಎಂಬುದಾಗಿ ಪ್ರಶಾಂತ್‌ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 06/05/2013 ರಂದು ಪಿರ್ಯಾದಿದಾರರಾದ ಶೃಂಗಾರ ವೇಲು ತಂದೆ ಶ್ರೀನಿವಾಸ ವಾಸ ಕೊಡಂಕೂರು ನ್ಯೂ ಕಾಲೋನಿ, ಪುತ್ತೂರು ಗ್ರಾಮ & ಅಂಚೆ, ಉಡುಪಿ         ತಾಲೂಕು ಎಂಬವರು ಅಟೋ ರಿಕ್ಷಾ ನಂಬ್ರ ಕೆಎ20 ಸಿ 3400 ನೇದರಲ್ಲಿ ಪ್ರಯಾಣಿಕರನ್ನು ಇಂದ್ರಾಳಿ ರೈಲ್ವೇ ಸ್ಟೇಷನ್‌ಗೆ ಬಿಟ್ಟು, ವಾಪಸ್ಸು ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾರಾತ್ರಿ 20:40 ಗಂಟೆಗೆ ಎಮ್‌ಜಿಎಮ್‌ ಕಾಲೇಜಿನ ಎದುರು ಅವರ ಹಿಂದಿನಿಂದ ಮಣಿಪಾಲ ಕಡೆಯಿಂದ ಕೆಎ 20 ಈಡಿ 1520ನೇ ಮೋಟಾರ್‌ ಸೈಕಲ್‌ ಸವಾರನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೆ ಬೈಕನ್ನು ಮುಂದಿನಿಂದ ಎಡಕ್ಕೆ ತಿರುಗಿಸಿದಾಗ ಬೈಕಿನ ಸೈಡ್ ಮಿರರ್ ರಿಕ್ಷಾದ ಎದುರಿಗೆ ಢಿಕ್ಕಿ ಆದಾಗ ಪಿರ್ಯಾದಿದಾರರು ಅಪಘಾತವನ್ನು ತಪ್ಪಿಸುವ ಸಲುವಾಗಿ ಒಮ್ಮೆಲೆ ಬ್ರೇಕ್‌ ಹಾಕಿದಾಗ ರಿಕ್ಷಾ ಬಲಭಾಗಕ್ಕೆ ಮಗುಚಿ ಬಿದ್ದು ಪಿರ್ಯಾದಿದಾರರಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಶೃಂಗಾರ ವೇಲುರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 226/2013 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಉಡುಪಿ: ದಿನಾಂಕ 06/05/2013 ರಂದು ಪಿರ್ಯಾದಿದಾರರಾದ ರಂಜಿತ್‌ ಪಿಂಟೋ ತಂದೆ ದಿವಂಗತ ಜಯ ಕುಮಾರ್‌ ವಾಸ ಚಕ್ಕುಲಿಕಟ್ಟೆ, ಕೊಳಲಗಿರಿ, ಉಪ್ಪೂರು ಗ್ರಾಮ, ಉಡುಪಿ ತಾಲೂಕು ಎಂಬವರು ಉಡುಪಿಯಿಂದ ಕೊಳಲಗಿರಿ ಕಡೆಗೆ ಹೋಗಲು ಮೈತ್ರಿ ಕಾಂಪ್ಲೆಸ್ ಎದುರಿನಿಂದಾಗಿ ಗೋಲ್ಡನ್‌‌ ವೈನ್ ಶಾಪ್‌‌ ಬಳಿ ನಡೆದುಕೊಂಡು ಹೋಗುತ್ತಿರುವಾರಾತ್ರಿ 9:30 ಗಂಟೆಗೆ ಬೈಕ್‌‌ನಲ್ಲಿ ಬಂದ ಪಿರ್ಯಾದಿದಾರರ ಪರಿಚಯದ ಮಣಿಕಂಠ, ರಮೇಶ @ ಅಟ್ಟೆ ರಮೇಶ ಹಾಗೂ ರಾಘು ಡಯಾನ ಎಂಬವರು ಪಿರ್ಯಾದಿದಾರರನ್ನು ತಡೆದು ಆಪಾದಿತ ಅಟ್ಟೆ ರಮೇಶನು ಪಿರ್ಯಾದಿದಾರರ ಕುತ್ತಿಗೆಗೆಯ ಹಿಂಭಾಗದಲ್ಲಿ ಹಿಡಿದು, ಆಪಾದಿತ ಮಣಿಕಂಠನು ಬ್ಲೇಡ್‌ನಿಂದ ಎದೆಯ ಬಲಭಾಗಕ್ಕೆ, ಬಲ ತೋಳಿಗೆ ಚುಚ್ಚಿದನು. ನಂತರ ಪಿರ್ಯಾದಿದಾರರು ಬೊಬ್ಬೆ ಹೊಡೆಯುವುದನ್ನು ನೋಡಿದ 3 ಜನ ಆಪಾದಿತರು ಬಂದ ಬೈಕಿನಲ್ಲಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಪಿರ್ಯಾದಿದಾರರಿಗೂ ಹಾಗೂ ಅಪಾದಿತ ಅಟ್ಟೆ ರಮೇಶನಿಗೂ ಹಳೆಯ ದ್ವೇಷ ಇದ್ದು, ಅದೇ ಉದ್ದೇಶದಿಂದ ಅಟ್ಟೆ ರಮೇಶನು ತನ್ನ ಇತರ ಇಬ್ಬರು ಸ್ನೇಹಿತರೊಂದಿಗೆ ಬಂದು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದಾಗಿರುತ್ತದೆ ಎಂಬುದಾಗಿ ರಂಜಿತ್‌ ಪಿಂಟೋ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 225/2013 ಕಲಂ 341, 324 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಮಣಿಪಾಲ: ದಿನಾಂಕ 06/05/2013 ರಂದು 17:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರದ 7 ನೇ ಕ್ರಾಸ್‌ನಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಅಂಬಿಕಾ ಜಿ. ನಾಯಕ್‌ (36) ಗಂಡ ಗಣೇಶ್‌ ಎಸ್‌. ನಾಯಕ್‌ ಎಂಬವರ ಮನೆಬಳಿ ಪಿರ್ಯಾದಿಯ ಜಾಗದಲ್ಲಿ ಆಪಾದಿತರಾದ 1. ಕೃಷ್ಣ ಹೆಬ್ಬಾರ್‌ 2. ಸದಾನಂದ ನಾಯಕ್‌ 3. ವಿಶ್ವನಾಥ 4. ಈಶ್ವರ 5. ಹರೀಶ್‌ ಭಾರದ್ವಾಜ್‌ 6. ಶ್ರೀಪತಿ 7. ಗೀತಾ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಆಪಾದಿತರಲ್ಲಿ ಕೃಷ್ಣ ಹೆಬ್ಬಾರ್‌ ರವರು ಪಿರ್ಯಾದಿಗೆ ಕೈಯಿಂದ ಹೊಡೆದು, ಮನೆಯ ಬಳಿ ಇದ್ದ ಕಂಪೌಂಡ್‌ ಗೋಡೆಯನ್ನು ಜಖಂಗೊಳಿಸಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಆರೋಪಿಸಿ ಶ್ರೀಮತಿ ಅಂಬಿಕಾ ಜಿ. ನಾಯಕ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  95/2013 ಕಲಂ 143, 147, 447, 354(ಬಿ), 323, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
  • ಕಾಪು: ದಿನಾಂಕ 06/05/2013 ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ 07/05/2013 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವದಿಯಲ್ಲಿ ಪಿರ್ಯಾದಿದಾರರಾದ ಜಗದೀಶ್ ಪಿ. ಮೆಂಡನ್ (41) ತಂದೆ: ಯು. ಪೂವಮ್ಮ ಶ್ರೀಯಾನ್ ವಾಸ ಸಿಂಧು ಕಾಂಪ್ಲೆಕ್ಸ್ ಎ.ಜಿ. ರೋಡ್, ಎಂಬವರ ರೂಮಿನ ಕೆಳಗಡೆ ನಿಲ್ಲಿಸಿದ್ದ ಕೆ.ಎ.-20 ಎ 5007 ನೇ ಓಮಿನಿ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಓಮಿನಿ ಕಾರಿನ ಅಂದಾಜು ಮೌಲ್ಯ ರೂಪಾಯಿ 40,000/- ಆಗಿರುತ್ತದೆ ಎಂಬುದಾಗಿ ಜಗದೀಶ್ ಪಿ. ಮೆಂಡನ್ ರವರು  ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2013 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಶೇಖರ  ಪೂಜಾರಿ (46) ತಂದೆ ದಿವಂಗತ ಗೊವೀಂದ ಪೂಜಾರಿ ವಾಸ ಚಿಕ್ಕು ಮನೆ, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು ಎಂಬವರ  ಅಣ್ಣನ ಮಗಳಾದ ವೀಣಾ ದ್ವೀತಿಯ ಪಿಯುಸಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದವಳು  ದಿನಾಂಕ 06/05/2013 ರಂದು ಇಂಟರನೆಂಟನಲ್ಲಿ  ದ್ವೀತಿಯ ಪಿಯುಸಿ ಫಲಿತಾಂಶ ನೋಡಿ ಇಂಗ್ಲೀಷ್ ವಿಷಯದಲ್ಲಿ ಪೇಲ್ ಆಗಿದ್ದು, ಇದೆ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/05/2013 ರಂದು ರಾತ್ರಿ 9:30 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದವಳು ಬೆಳಿಗ್ಗೆ 5:00 ಗಂಟೆಗೆ ಮಲಗಿದ್ದಲ್ಲಿ ಇಲ್ಲದೆ ಹುಡುಕಲಾಗಿ ಮನೆ ಸಮೀಪದ ಬಾಬು ನಾಯ್ಕ ಎಂಬವರ  ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಶೇಖರ ಪೂಜಾರಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 26/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.

No comments: