Monday, May 06, 2013

Daily Crime Reported on 06/05/2013 at 17:00 Hrs

ಅಪಘಾತ ಪ್ರಕರಣಗಳು 
  • ಉಡುಪಿ:ದಿನಾಂಕ 06/05/2013 ರಂದು ಶ್ರೀನಿವಾಸ ಪೂಜಾರಿ,ತಂದೆ:ಕಾಂತು ಕೋಟ್ಯಾನ್,ವಾಸ:ಕನ್ನಿಮಜಲು ಕೊಡಂಕೂರು,ನಿಟ್ಟೂರು,ಪುತ್ತುರು ಗ್ರಾಮ ,ಉಡುಪಿರವರು  ಅವರ ಮಗಳ  ಮದುವೆಯ ಆಹ್ವಾನ ಪತ್ರಿಕೆಯನ್ನು  ಹಂಚುವ ಸಲುವಾಗಿ  ಸುಮಾರು 11:00 ಗಂಟೆ ಸಮಯಕ್ಕೆ  ಮನೆಯಿಂದ ಹೋರಟು  ನಿಟ್ಟೂರು  ಪೂಜಾ ಮಾರ್ಬಲ್ಲಿನ ಎದುರುನಿಂದ  ಬಸ್ ನಿಲ್ದಾಣಕ್ಕೆ ಹೋಗುವರೇ ರಸ್ತೆ ದಾಟುತ್ತಿರುವಾಗ ಕರಾವಳಿ ಕಡೆಯಿಂದ GA 01 P 2243ನೇ ಜೀಪ್ ಚಾಲಕ ತನ್ನ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತಯಿಂದ  ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ರಾಜಪ್ಪನವರಿಗೆ ಡಿಕ್ಕಿ ಹೊಡೆದರು,ಅದೇ ಸಮಯಕ್ಕೆ ಎದುರಿನಿಂದ  ಅಂದರೆ ಅಂಬಾಗಿಲು ಕಡೆಯಿಂದ  KA 20 P 9213ನೇ ಸ್ವಿಪ್ಟ್ ಡಿಸೈಯರ್ ಕಾರಿನ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತಯಿಂದ  ಚಲಾಯಿಸಿಕೊಂಡು ಬಂದು ರಾಜಪ್ಪ ಹಾಗೂ ಜೀಪ್ ಗೆ ಡಿಕ್ಕಿ ಹೊಡೆದನು,ಪರಿಣಾಮ ರಾಜಪ್ಪರವರ  ಕಾಲಿಗೆ  ಹಾಗು ತಲೆಗೆ ಮತ್ತು ಕೈಗೆ  ಜಖಂ ಉಂಟಾಗಿದ್ದು ಅಲ್ಲೆ  ರಿಕ್ಷಾಕ್ಕಾಗಿ ಕಾಯುತ್ತಿದಾಗ ಶ್ರೀನಿವಾಸ ಪೂಜಾರಿರವರು ನೋಡಿ  ಕೂಡಲೇ ಚಿಕಿತ್ಸೆಗಾಗಿ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಲಾಗಿರುತ್ತದೆ. ಈ ಬಗ್ಗೆ ಶ್ರೀನಿವಾಸ ಪೂಜಾರಿರವರು ಅಪಘಾತದ ಬಗ್ಗೆ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 224/13  ಕಲಂ 279,304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 05/05/2013 ರಂದು ಗುಲ್ವಾಡಿ ಶಾಲೆಯಲ್ಲಿ ಮತ ಚಲಾಯಿಸಿ ಮಂಗಳೂರಿಗೆ ಹೋಗುವರೆ ನಾಗರಾಜ (40), ತಂದೆ: ರಂಗ ಪೂಜಾರಿ, ವಾಸ: ದಾಸರಬೆಟ್ಟು, ಅಬ್ಬಿಗುಡ್ಡೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕುರವರು  ತಮ್ಮನ ಮೋಟಾರು ಸೈಕಲ್ KA 20 EA 2278 ದನ್ನು ಲೋಕೇಶರವರು ಚಲಾಯಿಸಿಕೊಂಡಿದ್ದು ಹಿಂಬದಿಯಲ್ಲಿ ಕುಳಿತಿದ್ದು ಗುಲ್ವಾಡಿ ಟೈಲ್ಸ್ ಪ್ಯಾಕ್ಟರಿ ಹತ್ತಿರ ಬರುವಾಗ ಸಮಯ  ಸುಮಾರು 04:00 ಗಂಟೆಗೆ ಕುಂದಾಪುರ ಕಡೆಯಿಂದ ಬಂದ KA 20 M 994 ಓಮಿನಿ ಚಾಲಕನ್ನು ಅತೀ ವೇಗ ಮತ್ತು  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿ ಕುಳಿತ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ ಸಮೇತ ನೆಲಕ್ಕೆ ರಸ್ತೆಗೆ ಬಿದ್ದಿದ್ದು ಬಲಕಾಲಿನ ಬೆರಳು,ಮಣಿ ಗಂಟಿನ ಬಳಿ,ಎಡ ಕೆನ್ನೆಗೆ ರಕ್ತ ಗಾಯ ಮತ್ತು ಮೊಣ ಗಂಟಿಗೆ ತರುಚಿದ ಗಾಯವಾಗಿರುತ್ತದೆ ಮತ್ತು ಬೈಕ ಸವಾರ ಲೋಕೇಶರ ಬಲ ಗೈಯ ಅಂಗೈಗೆ ಗಿರಿದ ಗಾಯವಾಗಿರುತ್ತದೆ ಈ ಅಪಘಾತಕ್ಕೆ KA 20 M 994 ಓಮಿನಿ ಚಾಲಕನ ಅತೀ ವೇಗ ಮತ್ತು  ಅಜಾಗರೂಕತೆಯೇ ಕಾರಣವಾಗಿರುತ್ತದೆ ಎಂಬುದಾಗಿ ನಾಗರಾಜ ರವರು ನೀಡಿದ ದೂರಿನಂತೆ ಕುಂದಾಪುರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 196/13  ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜೀವ ಬೆದರಿಕೆ ದೂರು ದಾಖಲು
  • ಉಡುಪಿ: ಫಿರ್ಯಾದಿ ಯು ಭವಾನಿ ಭಂಡಾರಿ,ಗಂಡ:ಸದಾಶಿವ ಭಂಡಾರಿ ವಾಸ:ಮನೆ ನಂ 5-3-83,ಭಾಗ್ಯ ಮಂದಿರ,ಚಿಟ್ಪಾಡಿ,ಉಡುಪಿರವರ ನಾಲ್ಕನೇ ಮಗಳನ್ನು ಆರೋಪಿತ ನಾಗರಾಜನು  ಪ್ರೀತಿಸಿ ಮದುವೆಯಾಗಿದ್ದು  ಹಾಗೂ ಪ್ರೃಥ್ವಿ ಎಂಬ ಹೆಣ್ಣು ಮಗುವಿಗೆ ಜನ್ಮಕ್ಕೆ ಕಾರಣನಾಗಿದ್ದು, 2006 ರಲ್ಲಿ ಮಗಳು ಸಾವನ್ನಪ್ಪಿದ್ದು  ತದನಂತರ ಆರೋಪಿತ ತನ್ನ ಮಗಳಾದ ಪ್ರೃಥ್ವಿ ಯನ್ನು ಭವಾನಿ ಭಂಡಾರಿ ಮನೆಯಲ್ಲೆ ಬಿಟ್ಟು ಹೋಗಿದ್ದು ನಂತರ ಮೊಮ್ಮಗಳ ಪಾಲನೆ ಪೋಷಣೆಯನ್ನು  ನೋಡಿಕೊಳ್ಳುತ್ತಿದ್ದು ಆಪಾದಿತ ನಾಗರಾಜರವರು ಬಂದು ನಮಗೆ ದಾರಿಯಲ್ಲಿ ಸಿಕ್ಕಾಗಲೆಲ್ಲ ಅವಾಚ್ಯ ಶಬ್ದಗಳಿಣದ ಬೈದು  ಹೀಯಾಳಿಸಿ ಮಾತನಾಡುತ್ತಿದ್ದು ಅಲ್ಲದೆ ಆರೋಪಿ ನಾಗರಾಜ ಭಟ್ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಮೊಮ್ಮಗಳಿಗೆ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದಿರುತ್ತಾನೆ ಅಲ್ಲದೆ ಮೊಮ್ಮಗಳಿಂದ  ಬಲವಂತವಾಗಿ  ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡು ಈ ವಿಷಯವನ್ನು ಬೇರೆಯವರಲ್ಲಿ ಹೇಳಿದರೆ ಮೊಮ್ಮಗಳನ್ನು ಕೊಂದು ಬಿಡುತ್ತೆನೆಂದು  ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ  ಭವಾನಿ ಭಂಡಾರಿರವರು ಆರೋಪಿಯ ಬಗ್ಗೆ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 223/13 ಕಲಂ 447,323,504,506,384 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: