Monday, May 06, 2013

Daily Crime Reported on 06/05/2013 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ: 05.05.2013 ರಂದು 18:45 ಗಂಟೆಗೆ  ಆರೋಪಿ ಚವರ್‌ಲೆಟ್‌ ಕಾರು ನಂಬ್ರ  KA 19 B 6272 ನೇದನ್ನು ಗುರುವಾಯನಕೆರೆ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ತಾಲೂಕು ಮುಡಾರು ಗ್ರಾಮದ ಗುರ್ಗಾಲ್‌ಗುಡ್ಡ ಎಂಬಲ್ಲಿ ಎದುರಿನಿಂದ  ಪ್ರಸನ್ನ ಕುಮಾರ್‌ (34) ತಂದೆ: ದಿ. ಲಿಂಗಪ್ಪ ಶೇರಿಗಾರ್‌, ವಾಸ: ಸೃಷ್ಟಿ ನಿಲಯ, ದಿಡಿಂಬಿರಿಗುಡ್ಡೆ ಮುಡಾರು  ಗ್ರಾಮ, ಕಾರ್ಕಳರವರು ಚಲಾಯಿಸಿಕೊಂಡು ಬರುತ್ತಿದ್ದ ಸುಜುಕಿ ಸಮುರಾಯಿ ಮೋಟಾರ್ ಸೈಕಲ್‌ ನಂಬ್ರ ಕೆ..20.ಕೆ.9683 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತಗಾಯ ಹಾಗೂ ಮೈಕಥೈಗೆ ತರಚಿದ ಗಾಯವಾಗಿರುವುದಾಗಿದೆ.ಈ ಬಗ್ಗೆ ಪ್ರಸನ್ನ ಕುಮಾರ್‌ (34) ತಂದೆ: ದಿ. ಲಿಂಗಪ್ಪ ಶೇರಿಗಾರ್‌, ವಾಸ: ಸೃಷ್ಟಿ ನಿಲಯ, ದಿಡಿಂಬಿರಿಗುಡ್ಡೆ ಮುಡಾರು  ಗ್ರಾಮ, ಕಾರ್ಕಳರವರು ಅಪಘಾತದ ಬಗ್ಗೆ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 53/13  ಕಲಂ 279,337 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಹುಡ್ಕೋ ಕಾಲೋನಿಯ ಇಮ್ಯಾನುವೆಲ್ ಮನೆಯ ಮಹಡಿಯಲ್ಲಿ ರಿತುರಾಜ್ ರಾಜಶೀ ರಾಮಸ್ವಾಮಿ(23 ವರ್ಷ) ಎಂಬ ವಿದ್ಯಾರ್ಥಿಯು ದಿನಾಂಕ 05.05.2013 ರಂದು ಬೆಳಗಿನಿಂದ ಬಾಗಿಲು ತೆಗೆಯದೆ ಇದ್ದು, ಸಂಜೆ 4:00 ಗಂಟೆಗೆ ದೇಬರಾಜ್ ಆದಿತ್ಯ ರಾಯ್ (23)ತಂದೆ: ದೇಬಶೀಸ್ ರಾಯ್ ವಾಸ: ಇಮ್ಯುನುವೆಲ್  ಮನೆ, ಹುಡ್ಕೋ ಕಾಲನಿ, ಮಣಿಪಾಲರವರು ಬಲತ್ಕಾರದಿಂದ ಬಾಗಿಲು ಗುದ್ದಿದಾಗ ಬಾಗಿಲು ತೆರೆಯಲ್ಪಟ್ಟು ಒಳಗೆ ಹೋಗಿ ನೋಡಲಾಗಿ ರಿತುರಾಜ್ ರಾಜಶೀ ರಾಮಸ್ವಾಮಿಯು ಸ್ಲ್ಯಾಬ್‌ನ ಹುಕ್ಸ್‌‌‌‌ಗೆ ನೈಲಾನ್‌ ಹಗ್ಗ ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ದೇಬರಾಜ್ ಆದಿತ್ಯ ರಾಯ್ ರವರು ಮಣಿಪಾಲರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 23/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ: ಮೃತ ಮಹಾಬಲ ಮೂಲ್ಯನು ವಿಪರೀತ ಶರಾಬು ಕುಡಿತದ ಚಟ ಹೊಂದಿದ್ದು, ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದು, ಬಜಗೋಳಿ ಪೇಟೆಯಲ್ಲಿ ಶರಾಬು ಕುಡಿದು ಅಂಗಡಿ ಬಾಗಿಲಲ್ಲಿ ಮಲಗುತ್ತಿದ್ದು, ಚುನಾವಣಾ ಸಂಬಂದ 2 ದಿನ ಶರಾಬು ಕುಡಿಯಲು ಸಿಗದೇ ಇದ್ದುದರಿಂದ ಅಥವಾ ಇನ್ನಾವುದೋ ಕಾರಣದಿಂದ ಕಾರ್ಕಳ ತಾಲೂಕು ಮಡಾರು ಗ್ರಾಮದ ಬಜಗೋಳಿ ಲಕ್ಷ್ಮೀ ವೈನ್ಸ್‌ ಹಿಂಬದಿ ತೆರೆದ ಕಟ್ಟಡ ಒಳಗೆ ಆಕಸ್ಮಿಕವಾಗಿ ಮೃತಪಟ್ಟು ಪತ್ತೆಯಾಗಿರುವುದಾಗಿ ಎಂಬುದಾಗಿ ಗಣೇಶ್‌ (26 ವರ್ಷ) ತಂದೆ: ದಿ. ಕೃಷ್ಣ ವಾಸ: ದಿಡಿಂಬಿರಿ ಗುಲಾಭಿ ನಿವಾಸ, ಬಜಗೋಳಿ, ಮುಡಾರು ಗ್ರಾಮ, ಕಾರ್ಕಳ ತಾಲೂಕುರವರು  ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ: ಮೃತ ಶ್ರೀಕಾಂತ್‌‌ ರಾವ್‌ರವರು ದಿನಾಂಕ 5.05.2013 ರಂದು ಕುಂದಾಪುರದಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ರಾತ್ರಿ 12:30 ಘಂಟೆಗೆ ಬಜಗೋಳಿ ಪೇಟೆಯಲ್ಲಿ ಬಸ್ಸಿನಿಂದ ಇಳಿದು ಮನೆಯ ಕಡೆಗೆ ಬಜಗೋಳಿ - ಕುದುರೆಮುಖ ಜಂಕ್ಷನ್‌ನಲ್ಲಿ ನಡೆದು ಕೊಂಡು ಬರುತ್ತಿರುವಾಗ ತನಗಿರುವ ಬಿ.ಪಿ. ಖಾಯಿಲೆಯಿಂದ ಆಥವಾ ಇನ್ಯಾವುದೋ ಕಾರಣದಿಂದ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಶ್ರೀನಿಧಿ (26ವರ್ಷ)ತಂದೆ: ಶ್ರೀಕಾಂತ್‌ ರಾವ್‌ ವಾಸ: ಅನುಗ್ರಹ, ಸಿಂಡಿಕೇಟ್‌ ಬ್ಯಾಂಕ್‌ನ ಹಿಂದುಗಡೆ, ಬಜಗೋಳಿ, ನಲ್ಲೂರು ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 18/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: