Wednesday, May 22, 2013

Daily Crime Reported As On 22/05/2013 At 19:30 Hrs


ಯುವತಿ ಕಾಣೆ ಪ್ರಕರಣ
  • ಕೋಟ: ಪಿರ್ಯಾದಿದಾರರಾದ ಕೃಷ್ಣ ಸೂರ ಪೂಜಾರಿ (59), ತಂದೆ ದಿ. ಸೂರ ಪೂಜಾರಿ, ವಾಸ ಸಾಲಿಕೇರಿ ಬೀರ್ತಿ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಮಗಳು ಕುಮಾರಿ ಪ್ರಿಯಾ (24), ಹಾಗೂ ಸಂಸಾರದೊಂದಿಗೆ ದಿನಾಂಕ 20/05/2013 ರಂದು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಗ್ರೇಸ್‌ ಆಡಿಟೋರಿಯಮ್‌ ನಲ್ಲಿ ತನ್ನ ತಮ್ಮನ ಮಗನ ಮದುವೆ ಸಮಾರಂಭದ ಬಗ್ಗೆ ಬಂದಿದ್ದು, ಸಮಾರಂಭದ ವೇಳೆ ಕುಮಾರಿ ಪ್ರಿಯಾ ಎಂಬವರು ಮದ್ಯಾಹ್ನ 12:15 ಗಂಟೆಯ ಬಳಿಕ ಹಾಲ್‌ನಿಂದ ಕಾಣೆಯಾಗಿದ್ದು ಈವರೆಗೆ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು  ಕುಮಾರಿ ಪ್ರಿಯಾಳು ಕಟ್ಕೇರಿ ನಿವಾಸಿ ವಿನುತ್‌ ಶೆಟ್ಟಿ ಎಂಬಾತನ ಜೊತೆ ಹೊರಟು ಹೋಗಿರುವ ಸಾಧ್ಯತೆ ಇರುತ್ತದೆ ಎಂಬುದಾಗಿ ಕೃಷ್ಣ ಸೂರ ಪೂಜಾರಿ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 139/2013 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ತುಂಗ (48), ಗಂಡ ಕೃಷ್ಣ ಗೌಡ, ವಾಸ ಹಾರುಕಟ್ಟೆಮನೆ, ಯಳಜಿತ್ ಗ್ರಾಮ ಕುಂದಾಫುರ ತಾಲೂಕು ಇವರು ಯಳಜಿತ್ ಗ್ರಾಮದ ಹಾರುಕಟ್ ಎಂಬಲ್ಲಿ ವಾಸವಾಗಿದ್ದು, ಅಲ್ಲಿಯೇ ಉತ್ತರದಲ್ಲಿ ಎತ್ತರದ ಅರಣ್ಯ ಭೂಮಿ ಇದ್ದು, ಅಲ್ಲಿ ಅನೇಕ ಗುಮ್ಮಿಗಳಿದ್ದು ಸದ್ರಿ ಗುಮ್ಮಿಗಳಿಗೆ ಶ್ರೀಮತಿ ತುಂಗ ಹಾಗೂ ಪರಿಸರದ 7-8 ಮನೆಯವರು ನೀರಿಗಾಗಿ ಪೈಪನ್ನು ಜೋಡಿಸಿ ನೀರನ್ನು ಪಡೆದು ಕೊಳ್ಳುತ್ತಿದ್ದು, ದಿನಾಂಕ 21/05/2013 ರಂದು ಬೆಳಿಗ್ಗೆ 07:45 ಗಂಟೆಗೆ ಶ್ರೀಮತಿ ತುಂಗರವರು ಎಂದಿನಂತೆ ನೀರು ಹಿಡಿಯಲು ಹೋದಾಗ ನೀರು ಬಾರದೇ ಇರುವುದನ್ನು ಕಂಡು ಉತ್ತರದ ಅರಣ್ಯ ಇರುವ ಗುಮ್ಮಿ ಕಡೆಗೆ ಹೋದಾಗ ಅಲ್ಲಿ ಆರೋಪಿತರುಗಳಾದ 1) ಸೀತು (38) ಗೌಡ್ತಿ, ಗಂಡ ಸುರೇಶ ಗುಲ್ನಾಡಿ, 2) ಶ್ರೀಮತಿ ಮಾಲತಿ (27), ಗಂಡ ಚಂದ್ರ, 3) ಶ್ರೀಮತಿ ಶಾರದಾ (27), ಗಂಡ ದಿನೇಶ 4) ಸಾಕು @ ಲಕ್ಷ್ಮೀ (36), ಗಂಡ ಬಾಬು, 5) ಶ್ರೀಮತಿ ಗಿಡ್ಡಿ @ ಕಸ್ತೂರಿ(42), ಗಂಡ ನಾರಾಯಣ,  6) ನಾಗು @ ನಾಗರತ್ನ (38) ಗಂಡ ಹಾಯ್ ಗುಳಿ, 7) ಶಾರದಾ (27) ಗಂಡ ಉದಯ, ಆರೋಪಿ 3 ರಿಂದ 7 ನೇಯವರು ವಾಸ ಹುಲಿಕಲ್ ಯಳಜಿತ್ ಗ್ರಾಮ, ಹಾಗೂ 8) ದಿನೇಶ (38) ತಂದೆ ದಿ.ಶಿವಯ್ಯ ಗೌಡ, 9) ಬಾಬು ಗೌಡ (48) ತಂದೆ ಚಿಕ್ಕಯ್ಯ ಗೌಡ, 10)ನಾರಾಯಣ ಗೌಡ (48) ತಂದೆ ಬಡಿಯಾ ಗೌಡ ಅರೆಶಿರೂರು, 11) ಗಾಯ್ ಗುಳಿ ಗೌಡ (42) ತಂದೆ ಚಿಕ್ಕಯ್ಯ ಗೌಡ, ಹುಲಿಕಲ್, 12) ಉದಯ್ ಗೌಡ (45) ತಂದೆ ಮುತ್ತಯ್ಯ ಗೌಡ, 13) ಬಾಬು ಗೌಡ (45) ತಂದೆ ಮಂಜಯ್ಯ ಗೌಡ, 14)ಶಿಂಗಾರಿ ಗೌಡ್ತಿ (22) ತಂದೆ ನಾರಾಯಣ ಗೌಡ, ಹುಲಿಕಲ್, 15) ಹಾಯ್ ಗುಳಿ, ಹುಲಿಕಲ್ (42) ತಂದೆ ಈರಯ್ಯ ಗೌಡ, 16) ಸುಕೇಶ ಶೆಟ್ಟಿ (40) ತಂದೆ ನಾರಾಯಣ ಶೆಟ್ಟಿ ವಾಸ ತೊಂಡ್ಲೆ ಆರೋಪಿ 8 ರಿಂದ 16 ನೇತನಕದವರು ಯಳಜಿತ್ ಗ್ರಾಮ ಆರೋಪಿತರುಗಳೆಲ್ಲರು ಅಕ್ರಮಕೂಟ ಸೇರಿಕೊಂಡು ಶ್ರೀಮತಿ ತುಂಗ ರವರ ಬಾಬ್ತು ನೀರಿನ ಪೈಪನ್ನು ಒಡೆದು ಹಾಕಿ, ಶ್ರೀಮತಿ ತುಂಗರವರು ಬರುವುದನ್ನು ಕಾದು, ಸದ್ರಿ ಆರೋಪಿತರೆಲ್ಲಾ ಸಮಾನ ಉದ್ದೇಶದಿಂದ ಏಕಾಏಕಿ ಅವರ ಮೇಲೆ ಮುಗಿಬಿದ್ದು, ಅವರಲ್ಲಿ ಆರೋಪಿ 1 ನೇಯವರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಶ್ರೀಮತಿ ತುಂಗ ರವರನ್ನು ಉದ್ದೇಶಿಸಿ, "ನಿನ್ನನ್ನು ಇವತ್ತು ಕೊಲ್ಲದೇ ಬಿಡುವುದಿಲ್ಲ " ಎಂದು ಹೇಳಿ ಕತ್ತಿಯನ್ನು ಶ್ರೀಮತಿ ತುಂಗರವರ ಕಡೆ ಬೀಸಿದಾಗ, ಶ್ರೀಮತಿ ತುಂಗರವರ ಕೈ ಅಡ್ಡ ಹಿಡಿದಾಗ ಕತ್ತಿಯು ಶ್ರೀಮತಿ ತುಂಗರವರ ಎಡಕೈ ತೋಳಿಗೆ ತಾಗಿ ಸೀಳಿದ ರಕ್ತಗಾಯವಾಗಿರುತ್ತದೆ. ಆಗ ಉಳಿದ ಆರೋಪಿತರಾದ 2 ರಿಂದ 7 ಹಾಗೂ 14 ನೇಯವರು ಶ್ರೀಮತಿ ತುಂಗರವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು, ಮೈಮೇಲೆಲ್ಲಾ ಮನ ಬಂದಂತೆ ಹೊಡೆದು ನಿನ್ನನ್ನು ಕೊಂದು ಭೂಮಿಯಲ್ಲಿ ಹೂತು ಹಾಕಿ ಹೆಣ ಸಿಗದಂತೆ ಮಾಡುತ್ತೇವೆ ಎಂದು ಹೇಳಿದ್ದು, ಆರೋಪಿ 2 ಹಾಗೂ 3 ನೇಯವರು ಕುತ್ತಿಗೆ ಹಾಗೂ ಜಡೆಯನ್ನು ಒತ್ತಿ ಹಿಡಿದು ನಿನ್ನನ್ನು ಹೊಡೆದು ಸಾಯಿಸುತ್ತೇವೆ  ಎಂದು ಹೇಳಿ ಹೊಡೆಯುತ್ತಿದ್ದಾಗ ಉಳಿದ ಆರೋಪಿ 7 ರಿಂದ 13, 16 ನೇಯವರು ಸಹಕರಿಸುವಂತೆ ತಕ್ಷೀರಿಗೆ ಪ್ರೋತ್ಸಾಹಿಸುತ್ತಿದ್ದು, ಸದ್ರಿ ಗಲಾಟೆಯ ಬೊಬ್ಬೆ ಕೇಳಿ ಶ್ರೀಮತಿ ತುಂಗರವರ ಮಕ್ಕಳು ಓಡಿ ಬಂದುದನ್ನು ನೋಡಿ ಆರೋಪಿತೆಲ್ಲರೂ ಇನ್ನು ಒಂದು ವಾರದೊಳಗೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ" ಎಂದು ಜೀವಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿರುತ್ತಾರೆ ಎಂಬುದಾಗಿ ಶ್ರೀಮತಿ ತುಂಗ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 158/2013 ಕಲಂ 143, 148, 506, 324, 323, 504, 307, 427 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ: ಪಿರ್ಯಾದಿದಾರರಾದ ಪಾರ್ವತಿ (48), ಗಂಡ ದಿ. ಗೋಪಾಲ, ಜನನಿ ನಿಲಯ, ಹೊನ್ನಾರಿ, ಗಿಳಿಯಾರು ಗ್ರಾಮ ಇವರ ತಮ್ಮ ಚಂದ್ರ ಪೂಜಾರಿ (38) ರವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಮಾನಸಿಕವಾಗಿ ನೊಂದು ದಿನಾಂಕ 22/05/2013ರಂದು ಮದ್ಯಾಹ್ನ 3:00 ಗಂಟೆ ಸಮಯಕ್ಕೆ ತನ್ನ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಪಾರ್ವತಿ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 18/13 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: