Wednesday, May 22, 2013

Daily Crime Reported As On 22/05/2013 At 17:00 Hrs

ಅಪಘಾತ ಪ್ರಕರಣಗಳು
  • ಹೆಬ್ರಿ: ದಿನಾಂಕ 21/05/13 ರಂದು ರಾತ್ರಿ 8-30 ಗಂಟೆಗೆ ಚಾರಾ ಗ್ರಾಮದ ಹಸಿಕೂಡ್ಲು ಕ್ರಾಸ್ ಬಳಿ ಪಿರ್ಯಾದಿದಾರರಾದ ನಿತ್ಯಾನಂದ ನಾಯ್ಕ, ತಂದೆ ಕಾಳು ನಾಯ್ಕ ಉಳ್ಳಕಾನ್ ಜೆಡ್ಡು ಚಾರ ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಬಾಬ್ತು ಕೆಎ 20ಬಿ 5719ನೇ ಅಟೋರಿಕ್ಷಾವನ್ನು ಚಾಲಯಿಸಿಕೊಂಡು ಬೇಳಿಂಜೆ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಬೇಳಿಂಜೆ ಕಡೆಗೆ ಕೆಎ 20ಕ್ಯೂ 7400 ನೇ ಮೋಟಾರು ಸೈಕಲ್ ಸವಾರ ಗೋಪಾಲ ನಾಯ್ಕ್‌ ರವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ನಿತ್ಯಾನಂದ ನಾಯ್ಕ ಇವರು ಚಲಾಯಿಸಿಕೊಂಡು ಬರುತ್ತಿದ್ದ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂ ವಾಗಿರುವುದಲ್ಲದೇ ನಿತ್ಯಾನಂದ ನಾಯ್ಕ ಹಾಗೂ ಅಪಾದಿತ ಗೋಪಾಲ ನಾಯ್ಕ್‌ ಅವರಿಗೂ ಗಾಯವಾಗಿರುತ್ತದೆ ಎಂಬುದಾಗಿ ನಿತ್ಯಾನಂದ ನಾಯ್ಕ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 36/2013 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 21/05/2013 ರಂದು 17.00 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದ ಕಿರಣ್ ಗ್ಲಾಸ್ ಅಂಗಡಿಯ ಎದುರು ಪಿರ್ಯಾದಿದಾರರಾದ ಪವಿತ್ರ, ತಂದೆ ಶೇಖರ ಪೂಜಾರಿ, ವಾಸ ಅಂಗಡಿ ಬೆಟ್ಟು, ಚಾಂತಾರು ಗ್ರಾಮ ಉಡುಪಿ ತಾಲೂಕು ಇವರು ನಡೆದುಕೊಂಡು ಹೋಗುತ್ತಿರುವಾಗ ಬ್ರಹ್ಮಾವರ ಹೋಲಿ ಪ್ಯಾಮಿಲಿ ಚರ್ಚ್  ಕಡೆಯಿಂದ ಕುಂಜಾಲು ಜಂಕ್ಷನ್ ಕಡೆಗೆ ಕೆಎ 20ಇಲ್ 4556 ನೇ ಪಲ್ಸರ್ ಮೋಟಾರು ಸೈಕಲನ್ನು ಅದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮವಾಗಿ ಮೋಟಾರು ಸೈಕಲ್ ಸವಾರನಾದ ಪಿರ್ಯಾದಿ ಪವಿತ್ರರವರ ಬಾವನಾದ ಸುದರ್ಶನ ಎಂಬವರಿಗೆ ತಲೆಗೆ ತೀವ್ರ ತರದ ರಕ್ತಗಾಯವಾದವರನ್ನು ಆದರ್ಶ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22/05/2013 ರಂದು ಬೆಳಿಗ್ಗೆ 5.10 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ  ಪವಿತ್ರ  ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 180/2013 ಕಲಂ 279, 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ಪಿರ್ಯಾದಿದಾರರಾದ ಮುಕ್ತಿಯಾರ್ (45) ತಂದೆ ದಿ. ಕಬ್ಬಿಗಲ್ ಭಾಷಾ ಸಾಹೇಬ್,  ವಾಸ ಕೆ ಬಿ ಹೌಸ್ ನಾಗೂರು ಕಿರಿಮಂಜೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 21/05/2013ರಂದು ಮನೆಯಿಂದ ನಾಗೂರಿನ ಜುಮ್ಮಾ ಮಸೀದಿಗೆ ಹೋಗಿ ವಾಪಾಸ್ಸು  ಮನೆ ಕಡೆಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 20ಇಬಿ 5575ನೇದರಲ್ಲಿ ರಾ.ಹೆ  66 ನೇ ಡಾಮರು ರಸ್ತೆಯಲ್ಲಿ ದುರ್ಗಾ ಲಕ್ಷ್ಮೀ ಹಾರ್ಡ್ ವೇರ್ ಸಮೀಪ ತಲುಪುವಾಗ ಸಮಯ 13:00 ಗಂಟೆಗೆ ಮುಕ್ತಿಯಾರ್ ರವರ ಹಿಂಬದಿಯಿಂದ ಕಾರು ನಂಬ್ರ ಕೆಎ 48ಎಮ್‌ 3672ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮೋಟಾರು ಸೈಕಲ್‌ನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದು ಎದುರುಗಡೆಯಿಂದ ಒಂದು ಲಾರಿಯು ಬರುವುದನ್ನು ನೋಡಿ ಕಾರಿನ ಚಾಲಕನು ಕಾರನ್ನು ಓಮ್ಮೇಲೆ ಎಡಕ್ಕೆ ತಿರುಗಿಸಿ ಮುಕ್ತಿಯಾರ್ ರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಡಾಮರು ರಸ್ತೆಗೆ ಅಡ್ಡ ಬಿದ್ದು ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಪಾದಕ್ಕೆ ತರಚಿದ ಗಾಯ ವಾಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಮುಕ್ತಿಯಾರ್ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 157/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಬೈಂದೂರು: ದಿನಾಂಕ 21/05/2013 ರಂದು ಬೆಳಿಗ್ಗೆ 08:00 ಗಂಟೆಯ ಸುಮಾರಿಗೆ ಪಿರ್ಯಾದುದಾರರಾದ ಶ್ರೀಮತಿ ಶಾರದಾ ಗಂಡ ದಿನೇಶ ಗೌಡ, ವಾಸ ಹುಲ್ಕಲ್ ಯಳಜಿತ್ ಗ್ರಾಮ ಇವರು ತಮ್ಮ ಪಟ್ಟಾ ಜಾಗದ ಪೂರ್ವಕ್ಕೆ ಎತ್ತರದಲ್ಲಿ ಅರಣ್ಯ ಪ್ರದೇಶದಲ್ಲಿರುವ ಹೊಳೆಗೆ ಹಾಕಿದ ಪೈಪ್‌ನಿಂದ ನೀರು ಬರದಿದ್ದುದ್ದನ್ನು ಕಂಡು ತನ್ನ ಅಕ್ಕನ ಮಗಳು ಸೀತು ಎಂಬವರ ಜೊತೆ ಗುಡ್ಡದ ಬಳಿ ನೋಡಲು ಹೋದಾಗ ಆರೋಪಿತರುಗಳಾದ 1). ತುಂಗಾ ಗೌಡ್ತಿ, 2) ರಾಮಪ್ಪ ಬಿ ವಿ, 3) ನಾರಾಯಣ ಪೂಜಾರಿ, 4) ಶಿವಯ್ಯ ಗೌಡ, 5) ಪ್ರಭಾವತಿ, 6) ಪದ್ಮಾವತಿ, 7) ಶ್ರೀಮತಿ ಚಣ್ಣಕ್ಕ 8) ಶ್ರೀಮತಿ ಬಾಲಮ್ಮ ವಾಸ:ಎಲ್ಲರೂ ಕೆಳತೋಡು ಯಳಜಿತ್ ಗ್ರಾಮ ಇವರುಗಳು ಶ್ರೀಮತಿ ಶಾರದಾರವರನ್ನು ಹಾಗೂ ಸೀತು ರವರ ಮೇಲೆ ಮುಗಿಬಿದ್ದು ಶ್ರೀಮತಿ ಶಾರದಾ ಇವರನ್ನು  ಉದ್ದೇಶಿಸಿ ನಾವು ಬೇಕಂತಲೇ ನಿಮ್ಮ ಪೈಪನ್ನು ಹುಡಿ ಮಾಡಿ ನಿಮಗೆ ನೀರು ಬರದಿದ್ದ ಹಾಗೆ ಮಾಡಿ  ಈ ಕುರಿತು ನೀವು ಬಂದಾಗ ನಿಮಗೆ ಬುದ್ದಿ ಕಲಿಸಲು ಕಾಯುತ್ತಾ ಕುಳಿತಿದ್ದೆವು ಈಗ ನೀವು ಬಂದಿರಿ ಇಂದು ನಿಮ್ಮಿಬ್ಬರಿಗೂ ಗತಿ ಕಾಣಿಸದೇ ಬಿಡುವುದಿಲ್ಲ ಎಂಬುದಾಗಿ ಹೇಳಿ , ಆರೋಪಿ 2 ನೇಯವರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಸೀತು ರವರ ಕಾಲಿಗೆ ಮತ್ತು ಕೈಗೆ ಕಡಿದಿದ್ದು, ಶ್ರೀಮತಿ ಶಾರದಾರವರು ಕೂಗಿಕೊಂಡಾಗ ಆರೋಪಿ 3ನೇಯವರು ಶ್ರೀಮತಿ ಶಾರದಾರವರ ತಲೆಯನ್ನು ಕಡಿಯಲು ಬಂದಾಗ ಶ್ರೀಮತಿ ಶಾರದಾರವರು ತಮ್ಮ ಎಡಕೈಯನ್ನು ಅಡ್ಡ ಹಿಡಿದಿದ್ದು ಕತ್ತಿಯು ಶ್ರೀಮತಿ ಶಾರದಾರವರ ಎಡಕೈ ಹಾಗೂ ತಲೆಗೆ ತಾಗಿ ರಕ್ತಗಾಯವಾಗಿದ್ದು, ನಂತರ ಆರೋಪಿ 1 ಮತ್ತು 4 ರಿಂದ 8ನೇಯವರು ಶ್ರೀಮತಿ ಶಾರದಾರವರು ಹಾಗೂ ಸೀತು ರವರ ತಲೆಕೂದಲನ್ನು ಹಿಡಿದೆಳೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದು ಎದೆ, ಕೈ ಮೇಲೆ ಮನಬಂದಂತೆ ಹೊಡೆದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ, ನಿಮ್ಮ ಹೆಣವನ್ನು ಇಲ್ಲೇ ಕಾಡಲ್ಲೆ ಎಸೆದರೆ ಯಾರಿಗೂ ತಿಳಿಯುವುದಿಲ್ಲ ಎಂಬುದಾಗಿ ಹೇಳಿದ್ದು ಅಲ್ಲದೇ ಆರೋಪಿ 5 ರಿಂದ 8ನೇ ಆರೋಪಿಗಳು ಹಾಗೂ ಆರೋಪಿ 2 ರಿಂದ 4 ನೇ ರವರು ಆರೋಪಿಗಳಿಗೆ ಶ್ರೀಮತಿ ಶಾರದಾರವರು ಹಾಗೂ ಸೀತು ರವರನ್ನು ಕೊಲ್ಲುವಂತೆ ಹುರಿದುಂಬಿಸುತ್ತಿದ್ದು , ಆರೋಪಿ 2 ರಿಂದ 4ನೇ ರವರು ಶ್ರೀಮತಿ ಶಾರದಾರವರು ಹಾಗೂ ಸೀತು ರವರ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದು ಶ್ರೀಮತಿ ಶಾರದಾರವರು ಹಾಗೂ ಸೀತಾ ರವರ ಬೊಬ್ಬೆ ಕೇಳಿ ಕಾಡಿನಲ್ಲಿದ್ದ ಉದಯ ಹಾಗೂ ಕಸ್ತೂರಿ ಎಂಬವರು  ಬರುವುದನ್ನು ನೋಡಿ ಶ್ರೀಮತಿ ಶಾರದಾರವರು  ಹಾಗೂ ಸೀತಾ ರವರಿಗೆ ಜೀವ ಬೆದರಿಕೆ  ಹಾಕಿ ಅಲ್ಲಿಂದ ಹೊರಟು ಹೋಗಿದ್ದು ಆರೋಪಿಗಳು ಶ್ರೀಮತಿ ಶಾರದಾರವರ ಬಾಬ್ತು ಪೈಪ್‌ಗಳನ್ನು ಪುಡಿ ಮಾಡಿದ್ದಲ್ಲದೇ ಶ್ರೀಮತಿ ಶಾರದಾರವರ ಹಾಗೂ ಸೀತು ರವರನ್ನು ಕೊಲ್ಲುವ ಉದ್ದೇಶದಿಂದ ಈ ಕ್ರತ್ಯ ಎಸಗಿದ್ದಾಗಿದೆ ಎಂಬುದಾಗಿ ಶ್ರೀಮತಿ ಶಾರದಾರವರು ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 156/2013 ಕಲಂ 143, 148, 427, 324, 323, 307, 506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 ಕಳವು ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಜಗನ್ನಾಥ, ತಂದೆ ಕೂಸಪ್ಪ ಸಲ್ಯಾನ್‌, ವಾಸ ರಶ್ಮಿ, ಸುಬ್ರಮಣ್ಯನಗರ, ಪುತ್ತೂರು ಗ್ರಾಮ ಉಡುಪಿ ಇವರು ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಉಡುಪಿಯ ಪುತ್ತೂರು ಗ್ರಾಮದ  ಸುಬ್ರಹ್ಮಣ್ಯ ನಗರ ಕ್ರಾಸ್ ಬಳಿ ಸ್ವಂತ ಮನೆಯನ್ನು ಹೊಂದಿದ್ದು, ಸದ್ರಿ ಮನೆಗೆ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದು, ಉಳಿದ ಸಮಯದಲ್ಲಿ ಮನೆಗೆ ಬೀಗ ಹಾಕಿರುತ್ತಿದ್ದು, ದಿನಾಂಕ 04/05/2013 ರಂದು ವಿಧಾನ ಸಭಾ ಚುನಾವಣೆಗೆ ಮತ ಮಾಡಲು ಊರಿಗೆ ಬಂದು ದಿನಾಂಕ 05/05/2013 ರಂದು ಮತ ಹಾಕಿ ಬೆಳಿಗ್ಗೆ 08:00 ಗಂಟೆಗೆ ಮನೆಯ ಬೀಗವನ್ನು ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು,  ದಿನಾಂಕ 20/05/2013 ರಂದು 08:45  ಗಂಟೆಗೆ ಜಗನ್ನಾಥರವರ ಪಕ್ಕದ ಮನೆಯವರಾದ  ಶ್ರೀಮತಿ  ಮೂಕಾಂಬಿಕಾ ರವರು   ಜಗನ್ನಾಥರವರಿಗೆ ದೂರವಾಣಿ ಕರೆ ಮಾಡಿ ಮನೆಯ ಮುಂದಿನ ಬಾಗಿಲು ತೆರೆದಿದ್ದು ಹೊರಗಡೆ ಕೆಲವು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬರುತ್ತದೆ ಎಂದು ತಿಳಿಸಿದ ಮೇರೆಗೆ ಜಗನ್ನಾಥರವರು  ದಿನಾಂಕ 21/05/2013 ರಂದು  ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ರಾತ್ರಿ 19:30 ಗಂಟೆಗೆ ಮನೆಗೆ ಬಂದು ನೋಡಿದಾಗ ಕಪಾಟುಗಳು ತೆರೆದಿದ್ದು ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮನೆಯ ಒಳಗಡೆ ಪರಿಶೀಲಿಸಿದಾಗ 5 ಬೆಳ್ಳಿಯ ದೀಪಗಳು, 1 ಜೊತೆ ಬೆಳ್ಳಿಯ ಕಾಲ್ಗೆಜ್ಜೆ, ಒಂದು ಬೆಳ್ಳಿಯ ಲೋಟ ಕಳವಾಗಿರುವುದು ಕಂಡು ಬಂದಿದ್ದು, ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಬಲಾತ್ಕಾರದಿಂದ ಒಡೆದು ತೆಗೆದು ಮನೆಯೊಳಗೆ ಹೋಗಿ ಮನೆಯಲ್ಲಿದ್ದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 20,000/- ರೂಪಾಯಿ ಆಗಬಹುದು ಎಂಬುದಾಗಿ  ಜಗನ್ನಾಥ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 249/13 ಕಲಂ 454, 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರತ್ತದೆ.

No comments: