Friday, May 17, 2013

Daily Crime Reported As On 17/05/2013 At 07:00 Hrs



ಅಪಘಾತ ಪ್ರಕರಣ
  • ಶಿರ್ವಾ: ದಿನಾಂಕ 15/05/2013 ರಂದು 18:30 ಗಂಟೆಗೆ ಉಡುಪಿ ತಾಲೂಕು ಶಿರ್ವ ಗ್ರಾಮದ ಬಂಟಕಲ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಮಂಜುನಾಥ ಪಾಟ್ಕರ್‌ (53), ತಂದೆ ಲಕ್ಷ್ಮೀನಾರಾಯಣ ಪಾಟ್ಕರ್‌, ವಾಸ ಶಾರದ ನಿಲಯ ಬಂಟಕಲ್ಲು ಶಿರ್ವ ಗ್ರಾಮ ಇವರ ತಾಯಿ ಲೀಲಾವತಿ ಪಾಟ್ಕರ್ (75) ಎಂಬವರು ವಾಯು ವಿಹಾರ ಮಾಡುತ್ತಿದ್ದಾಗ ಮಂಚಕಲ್ ಕಡೆಯಿಂದ ಕಟಪಾಡಿ ಕಡೆಗೆ ಕೆಎ 20ಇಬಿ 9645 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಲೀಲಾವತಿ ಪಾಟ್ಕರ್ ರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರ ಎರಡೂ ಕಾಲುಗಳ ಮತ್ತು ಎಡಕೈಯ ಮೂಳೆ ಮುರಿತವಾಗಿರುತ್ತದೆ ಎಂಬುದಾಗಿ ಮಂಜುನಾಥ ಪಾಟ್ಕರ್‌ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 49/13, ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ: ಉಡುಪಿ ತಾಲೂಕು, 80 ಬಡಗುಬೆಟ್ಟು ಗ್ರಾಮದ ಶಾರದ ನಗರ, ಅನುಗ್ರಹ ನಿಲಯ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಪಿರ್ಯಾದಿದಾರರಾದ ಪ್ರಭಾಕರ ಪೂಜಾರಿ (24), ತಂದೆ ರಾಮ ಪೂಜಾರಿ, ವಾಸ ಬೈದ ಬೆಟ್ಟು, ಕೆಂಜೂರು ಗ್ರಾಮ, ಉಡುಪಿ ತಾಲೂಕು. ಹಾಲಿ ವಿಳಾಸ: ಅನುಗ್ರಹ ನಿಲಯ, ಶಾರದ ನಗರ, 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರ ಜೊತೆ ವಾಸ ಮಾಡುತ್ತಿದ್ದ ಅಪ್ಪ ಸಾಹೇಬ್‌ ಪೊತಿ ಎಂಬವರು ದಿನಾಂಕ 16/05/2013 ರಂದು ಸಂಜೆ 4:15 ಗಂಟೆಗೆ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಂಜೆ 6:00 ಗಂಟೆಗೆ ವೈದ್ಯಾಧಿಕಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಪ್ರಭಾಕರ ಪೂಜಾರಿ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 26/2013 ಕಲಂ 174 ಸಿ.ಆರ್‌.‌ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೋಟ: ಪಿರ್ಯಾದಿದಾರರಾದ ಕೃಷ್ಣಯ್ಯ ಆಚಾರ್ (57) ತಂದೆ ಮಂಜುನಾಥ ಆಚಾರ್, ವಾಸ ಕೋಡಿ ರಸ್ತೆ ಸಾಲಿಗ್ರಾಮ ಪಾರಂಪಳ್ಳಿ ಗ್ರಾಮ ಇವರ ಹೆಂಡತಿ 47 ವರ್ಷ ಪ್ರಾಯದ ಪ್ರೇಮಲತ ಎಂಬವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/05/2013 ರಂದು ಬೆಳಿಗ್ಗೆ 08:00 ಗಂಟೆಯಿಂದ 16:00 ಗಂಟೆಯ ಮಧ್ಯಾವದಿಯಲ್ಲಿ ಉಡುಪಿ ತಾಲೂಕು ಪಾರಂಪಳ್ಳಿ ಗ್ರಾಮದ ತನ್ನ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಕೃಷ್ಣಯ್ಯ ಆಚಾರ್ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 17/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಸೀತಾ (57), ಗಂಡ ಮಂಜುನಾಥ ದೇವಾಡಿಗ, ವಾಸ ಉಳ್ಳೂರು, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಇವರ ಜಾಗದ ಗಡಿ ಭಾಗದಿಂದ ವಿದ್ಯುತ್ ಲೈನನ್ನು ಹಾದು ಹೋಗಲು ಅನುಮತಿ ನೀಡಿದ್ದು ಈ ಲೈನ್ ಗೆ ತಾಗಿ ಗಿಡ ಮರಗಳ ಗೆಲ್ಲುಗಳು ಬೆಳೆದಿದ್ದುದನ್ನು ದಿನಾಂಕ 16/05/2013 ರಂದು ಬೆಳಿಗ್ಗೆ 11:30 ಗಂಟೆಗೆ ಮೆಸ್ಕಾಂ ಕುಂದಾಫುರ ಇಲಾಖೆಯ ಸಿಬ್ಬಂದಿಗಳು ಬಂದು ಸದ್ರಿ ಜಾಗದಲ್ಲಿ ಗೆಲ್ಲುಗಳನ್ನು ಕಡಿದು ಶ್ರೀಮತಿ ಸೀತಾರವರ ಜಾಗಕ್ಕೆ ಹಾಕಿದ್ದು ಆ ಸಮಯದಲ್ಲಿ ಆರೋಪಿತರುಗಳಾದ 1) ಬಚ್ಚಿ ದೇವಾಡಿಗ, 2) ಗಿರಿಜಾ ದೇವಾಡಿಗ, 3) ಕುಮಾರ್ ದೇವಾಡಿಗ, 4)ಆಶಾ ಇವರುಗಳು ಸಮಾನ ಉದ್ದೇಶದಿಂದ ಸೀತಾರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕಡಿದು ಬಿದ್ದ ಗೆಲ್ಲುಗಳನ್ನು ಬಲತ್ಕಾರವಾಗಿ ಕೊಂಡು ಹೋಗಲು ಯತ್ನಿಸಿದಾಗ ಸೀತಾರವರು ಈ ಬಗ್ಗೆ ಆಕ್ಷೇಪಿಸಿದಾಗ ಆರೋಪಿಗಳು ಸೀತಾರವರಿಗೆ ಅವಾಚ್ಯೆ ಶಬ್ದಗಳಿಂದ ಬೈದು. ನಿನ್ನನ್ನು ಕೊಂದು ಜೈಲಿಗೆ ಹೋಗುವುದಕ್ಕೂ ಹೆದರುವವರಲ್ಲ ಎಂದು ಹೇಳಿ ದೂಡಿ ಹಾಕಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೀತಾರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 210/13 ಕಲಂ 447, 504, 506, 323 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: