Friday, May 17, 2013

ಪತ್ರಿಕಾ ಪ್ರಕಟಣೆರಾಷ್ಟ್ರೀಯ ಕ್ರೀಡಾಕೂಟದಲ್ಲಿ  ಉಡುಪಿ ಪೊಲೀಸ್‌ ಶಂಕರ ಪೂಜಾರಿಯವರಿಗೆ ನಾಲ್ಕು ಪದಕ

  • 2013 ಮೇ ತಿಂಗಳ ದಿನಾಂಕ 9 ರಿಂದ 12 ರವರೆಗೆ ಕೇರಳದ ತಿರುವನಂತಪುರದ ಯುನಿವರ್ಸಿಟಿ ಸ್ಟೇಡಿಯಂನಲ್ಲಿ ನಡೆದ 33ನೇ ರಾಷ್ಟ್ರೀಯ ಅತ್ಲೆಟಿಕ್‌ ಚಾಂಪಿಯನ್‌ಶಿಪ್‌-2013 ರಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಶ್ರಿ ಶಂಕರ ಪೂಜಾರಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಒಟ್ಟು ನಾಲ್ಕು ಪದಕಗಳನ್ನು ಪಡೆದಿರುತ್ತಾರೆ. 4*100 ಮೀಟರ್‌ ರಿಲೇ ಓಟದಲ್ಲಿ 1 ಚಿನ್ನದ ಪದಕ, 100 ಮೀಟರ್‌ ಓಟದಲ್ಲಿ 1 ಬೆಳ್ಳಿ ಪದಕ, 400 ಮೀಟರ್‌ ಓಟದಲ್ಲಿ 1 ಬೆಳ್ಳಿ ಪದಕ, 200 ಮೀಟರ್‌ ಓಟದಲ್ಲಿ 1 ಕಂಚಿನ ಪದಕ ಪಡೆದ ಸಾಧನೆ ಮಾಡಿರುತ್ತಾರೆ. ಇವರು ಮೂಲತಃ ಕುಂದಾಪುರ ತಾಲೂಕಿನ ಬಿಜೂರು ಗ್ರಾಮದ ಬವಳಾಡಿಯವರಾಗಿದ್ದು ಕಳದ ವರ್ಷ ಬೆಂಗಳೂರಿನಲ್ಲಿ ನಡೆದ 32ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ 4 ಪದಕ ಪಡೆದ ಸಾಧನೆ ಮಾಡಿರುತ್ತಾರೆ.ಸತತ ಎರಡನೇ ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಪಡೆದ ಇವರನ್ನು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ||ಬೋರಲಿಂಗಯ್ಯ ಎಂ.ಬಿ, ಐ.ಪಿ.ಎಸ್‌ ಹಾಗೂ ಉಡುಪಿ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಡಾ|| ಪ್ರಭುದೇವ ಬಿ ಮಾನೆ ರವರು ಅಭಿನಂದಿಸಿರುತ್ತಾರೆ.          

No comments: