Friday, April 12, 2013

PRESS NOTE

ಪ್ರಕಟಣೆ
01/01/2012ರಿಂದ ಭಾರತದಲ್ಲಿ ಅನಧೀಕೃತವಾಗಿ ವಾಸ್ತವ್ಯವಿದ್ದ  ಸುಡಾನ್ ರಾಷ್ಟ್ರೀಯರಾದ Mr.Hassan Sulaiman Hassan Mohammed ಎಂಬವರನ್ನು ದೇಶದಿಂದ ಗಡಿಪಾರು (Deport)ಮಾಡಿದ ಕುರಿತು.

ಸುಡಾನ್ ರಾಷ್ಟ್ರೀಯರಾದ Mr.Hassan Sulaiman Hassan Mohammed ಎಂಬವರು 02/02/2011ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬಂದು ಮಣಿಪಾಲದಲ್ಲಿ ವ್ಯಾಸಂಗ ಮಾಡಿದ್ದು ಸದ್ರಿಯವರ ವೀಸಾ ಅವಧಿಯು ದಿನಾಂಕ 31/12/2011ರಂದು ಮುಕ್ತಾಯವಾಗಿದ್ದು ಅನಂತರ ತನ್ನ ವೀಸಾವನ್ನು ವಿದೇಶಿಯರ ನೊಂದಾಣಾಧಿಕಾರಿಯವರ ಕಛೇರಿಯಲ್ಲಿ ವೀಸಾವನ್ನು ನವೀಕರಿಸದೇ ಭಾರತದಲ್ಲಿ ಅನಧೀಕೃತವಾಗಿ ವಾಸ್ತವ್ಯವಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧೀಕ್ಷಕರು  ಉಡುಪಿರವರು ಸದ್ರಿ ವಿದೇಶಿಯನ ಮೇಲೆ ಕಾನೂನು ಕ್ರಮಕೈಗೊಳ್ಳುವ ಕುರಿತು ಪೊಲೀಸು ನಿರೀಕ್ಷಕರು, ಮಣಿಪಾಲ ಠಾಣೆ ರವರಿಗೆ ಸೂಚನೆ ನೀಡಿದ್ದು, ಸದ್ರಿ ವಿದೇಶಿಯರನ್ನು ದಿ: 16/10/2012 ರಂದು ಪೊಲೀಸು ನಿರೀಕ್ಷಕರು, ಮತ್ತು ಸಿಬ್ಬಂದಿ ಮಣಿಪಾಲ ಠಾಣೆರವರು ಆತನ್ನು  ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ACJ(JD) AND JMFC  ಉಡುಪಿ ನ್ಯಾಯಾಲಯವು ದಿ: 21/11/2012ರಂದು ಪ್ರಕರಣದ ಕುರಿತು ಆರೋಪಿ ವಿದೇಶಿಯರಿಗೆ 1 ತಿಂಗಳು 5 ದಿನಗಳ ಸದಾ ಸಜೆ ಮತ್ತು ರೂ.20,000/-ದಂಡ ವಿಧಿಸಿ ತೀರ್ಪು  ನೀಡಿದ್ದು ಸದ್ರಿ ವಿದೇಶಿಯನು ದಂಡ ಪಾವತಿಸಿರುತ್ತಾನೆ.
ಸದ್ರಿ ಸುಡಾನ್ ರಾಷ್ಟ್ರೀಯನು ಭಾರತದಲ್ಲಿ ಮುಂದಕ್ಕೆ ಯಾವುದೇ ಅಪರಾಧಗಳನ್ನು ಮಾಡುವುದನ್ನು ತಡೆಗಟ್ಟುವರೇ ಸದ್ರಿ ವಿದೇಶಿಯನನ್ನು ದೇಶದಿಂದ ಹೊರಕಳಿಸುವುದರ ಬಗ್ಗೆ  ಮಣಿಪಾಲದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ The AFRRO, International Air Port Bangalore  ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ 08/04/2013ರಂದು ಆತನನ್ನು ಭಾರತ ದೇಶದಿಂದ ಗಡಿಪಾರು ಮಾಡಲಾಯಿತು. ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ. ಬೋರಲಿಂಗಯ್ಯ , ಐ.ಪಿ.ಎಸ್, ಉಡುಪಿ ರವರಿಗೆ ಶ್ರೀ. ಸದಾನಂದ್ ಎ.ಟಿ, ಪೊಲೀಸು ನಿರೀಕ್ಷಕರು, ಮಣಿಪಾಲ ಠಾಣೆ, ಶ್ರೀ. ಅಲಿ ಶೇಖಪೊಲೀಸು ನಿರೀಕ್ಷಕರು, ಜಿಲ್ಲಾ ವಿಶೇಷ ವಿಭಾಗ ಉಡುಪಿ ಮತ್ತು ಮಣಿಪಾಲ ಠಾಣಾ ಸಿಬ್ಬಂದಿಯವರು ಮತ್ತು ಜಿಲ್ಲಾ ವಿಶೇಷ ವಿಭಾಗದ ವಿದೇಶಿ ಶಾಖೆಯ ಸಿಬ್ಬಂದಿಯವರಾದ ಶ್ರೀ. ರಾಮದಾಸ್, ಎ.ಎಸ್.ಐ ಮತ್ತು ಅಮರ್ ಕುಮಾರ್, ಪೊಲೀಸ್ ಕಾನ್ಸ್ಟೇಬಲ್ ರವರು ಸಹಕರಿಸಿದ್ದರು.
 

No comments: