Monday, April 08, 2013

Daily Crimes Reports as On 08/04/2013 at 19:30 Hrsಜೀವ ಬೆದರಿಕೆ ಪ್ರಕರಣ
  • ಕಾಪು: ಪಿರ್ಯಾದಿದಾರರಾದ ಪ್ರೀತಿ ಹರೀಶ್ ನಾಯಕ್ (30) ಗಂಡ ಹರೀಶ್ ನಾಯಕ್ ವಾಸ ಶಾರದಾಂಬ ಬಿಲ್ಡಿಂಗ್, ಮುಖ್ಯ ರಸ್ತೆ ಕಾಪು ಪಡು ಗ್ರಾಮ ಇವರು ದಿನಾಂಕ 01/07/2009 ರಿಂದ 11 ತಿಂಗಳ ಅವಧಿಗೆ ಬಾಡಿಗೆ ಚೀಟಿಯನ್ನು ಶ್ರೀ ಹಳೆ ಮಾರಿಯಮ್ಮ ದೇವರ ಭಂಡಾರದ ದೇವರ ಹಕ್ಕಿನ ಬಾಬ್ತು ಮಂಗಳೂರು-ಉಡುಪಿ ಹಳೆ ರಸ್ತೆಗೆ ತಾಗಿಕೊಂಡಿರುವ ಪಡು ಗ್ರಾಮದ ಸರ್ವೆ ನಂಬ್ರ 37-9 ರಲ್ಲಿರುವ ಶ್ರೀ ಹಳೆ ಮಾರಿಯಮ್ಮ ವಾಣಿಜ್ಯ ಸಂಕೀರ್ಣದ ಕಾಂಕ್ರಿಟು ಕಟ್ಟಡದ ಹಿಂದಿನ 3 ಶೆಡ್ಡುಗಳನ್ನು ತಿಂಗಳಿಗೆ 150 ರೂಪಾಯಿಯಂತೆ ಬಾಡಿಗೆಗೆ ಪಡೆದುಕೊಂಡು ರೂಪಾಯಿ 45,000/- ಡೆಪೋಸಿಟ್ ನೀಡಿ, ಪ್ರತಿ ತಿಂಗಳ 5 ನೇ ತಾರೀಕಿನ ಒಳಗೆ ಬಾಡಿಗೆಯನ್ನು ಸಮಯಕ್ಕೆ ಸರಿಯಾಗಿ ನೀಡುತ್ತಿದ್ದು, ಅಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಉಪಯೋಗಿಸುತ್ತಿದ್ದು, ಸದ್ರಿ ಶೆಡ್ಡುಗಳು ಪಿರ್ಯಾದಿ ಪ್ರೀತಿ ಹರೀಶ್ ನಾಯಕ್‌ರವರ  ಸ್ವಾಧೀನದಲ್ಲಿಯೇ ಇರುತ್ತದೆ. ದಿನಾಂಕ 26/02/2013 ರಂದು ಬೆಳಿಗ್ಗೆ 10:00 ಗಂಟೆಗೆ ಆರೋಪಿಗಳಾದ 1) ಶ್ರೀಧರ್ ಶಣೈ (59) ತಂದೆ ದಿ. ಪಟೇಲ್ ಆನಂದ್ರಾಯ ಶಣೈ  ವ್ಯಾಪಾರಸ್ಥರು ಕಾಪು 2) ಶ್ರೀಪತಿ ಪ್ರಭು (43) ತಂದೆ ರಾಧಾಕೃಷ್ಣ ಪ್ರಭು ವಾಸ ಶ್ರೀ ನಿವಾಸ ತೆಂಕಪೇಟೆ ಕಾಪು 3) ರಾಮ ನಾಯಕ್ (46) ತಂದೆ ದಿ. ಶಶಿಧರ ನಾಯಕ್ ವಾಸ ಮಾರ್ಕೆಟ್ ಕಾಪು 4) ಸಂಜಯ ಭಟ್ (38) ತಂದೆ ಹರಿಭಟ್ ವಾಸ ಮುಖ್ಯ ರಸ್ತೆ, ಕಾಪು 5) ರಘುವೀರ್ ಭಟ್ (33) ತಂದೆ ಗೋವಿಂದ ಭಟ್ ವ್ಯಾಪಾರಸ್ಥರು ಕಾಪು ಇವರುಗಳು ಸದ್ರಿ ಶೆಡ್ಡಿಗೆ ಅಕ್ರಮ ಪ್ರವೇಶ ಮಾಡಿ ವಾಹನಗಳನ್ನು ಅಲ್ಲಿಂದ ತೆಗೆಯಬೇಕು ಇಲ್ಲದಿದ್ದಲ್ಲಿ ವಾಹನಕ್ಕೆ ಬೆಂಕಿ ಹಾಕಿ ಶೆಡ್ಡನ್ನು ಸುಟ್ಟು ಹಾಕುತ್ತೇವೆ ಎಂಬುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಅಲ್ಲದೇ ಅದೇ ದಿನ ಮಧ್ಯಾಹ್ನ 2:00 ಗಂಟೆಗೆ ಆರೋಪಿಗಳು ಸಮಾನ ಉದ್ದೇಶದಿಂದ ಮಾರಕಾಯುಧಗಳಾದ ಕಬ್ಬಿಣದ ರಾಡ್‌ ಮತ್ತು ಪಿಕ್ಕಾಸುಗಳಿಂದ ಪಿರ್ಯಾದಿ ಪ್ರೀತಿ ಹರೀಶ್ ನಾಯಕ್ ರವರ  ಸ್ವಾಧೀನದಲ್ಲಿರುವ ಶೆಡ್ಡುಗಳ ಸ್ವಾಧೀನ ತಪ್ಪಿಸುವ ದುರುದ್ದೇಶದಿಂದ ಸದ್ರಿ ಶೆಡ್ಡಿಗೆ ಅಕ್ರಮ ಪ್ರವೇಶ ಮಾಡಿ ಶೆಡ್ಡುಗಳನ್ನು ಕಿತ್ತು ಹಾಕಿ ವಾಹನಗಳಿಗೆ ಜಖಂ ಮಾಡಿ, ತಡೆಯಲು ಬಂದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾಗಿದೆ ಎಂಬುದಾಗಿ ಪ್ರೀತಿ ಹರೀಶ್ ನಾಯಕ್ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಂಕ 111/2013 ಕಲಂ 143, 144, 147, 148, 506 (2) ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: