Friday, April 26, 2013

Daily Crimes Reported as On 26/04/2013 at 19:30 Hrs

ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ:25/04/2013 ರಂದು 12:15 ಗಂಟೆಗೆ ಉಡುಪಿ ತಾಲೂಕು ಹಂದಾಡಿ ಗ್ರಾಮದ ಶ್ರೀ ದುರ್ಗಾಭವನದ ಎದುರು ಆರೋಪಿ ಚಾಲಕ ತನ್ನ ಮಹೇಂದ್ರ ಗೂಡ್ಸ್ ಟೆಂಪೋ ಕೆಎ 47 5322 ನೇದನ್ನು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಚಂದ್ರಶೇಖರ ಶೆಟ್ಟಿ (47) ತಂದೆ:ದಿವಂಗತ ಸಂಕಯ್ಯ ಶೆಟ್ಟಿ ವಾಸ:ಏಳಹಕ್ಲು, ಬನ್ನಾಡಿ ಅಂಚೆ, ವಡ್ಡರ್ಸೆ ಗ್ರಾಮರವರು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊಟಾರು ಸೈಕಲ್ ನಂಬ್ರ ಕೆಎ 20 ಯು 821 ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ ಶೆಟ್ಟಿರವರಿಗೆ ಹಣೆಗೆ ಮತ್ತು ಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಚಂದ್ರಶೇಖರ ಶೆಟ್ಟಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 167/13 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.      
ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ:ಮೃತರಾದ ಚಂದ್ರಶೇಖರ ಆಚಾರ್ಯ (51) ರವರು ಮೊದಲಿನಿಂದಲೂ ಕುಡಿತದ ಚಟವನ್ನು ಹೊಂದಿದ್ದು, ಚಿನ್ನದ ಕೆಲಸವನ್ನು ಮಾಡಿಕೊಂಡಿದ್ದವರು ನಂತರ ಕುಡಿತದ ಚಟದಲ್ಲಿ ಕೆಲಸ ಮಾಡುವುದನ್ನು ಬಿಟ್ಟಿದ್ದರು. ಕಳೆದ 6 ತಿಂಗಳ ಹಿಂದೆ ಹೆಂಡತಿ ಸಾವಿತ್ರಿ ಹಾಗೂ ಮಗನನ್ನು ಮನೆಯಿಂದ ಹೊರಗೆ ಹಾಕಿದ್ದು, ಮನೆಯಲ್ಲಿ ಒಬ್ಬರೇ ವಾಸವಿದ್ದು ಯಾವಾಗಲೂ ಕುಡಿದ ಅಮಲಿನಲ್ಲಿ ನೆರೆಕರೆವರಲ್ಲಿ ಗಲಾಟೆ ಮಾಡುತ್ತಾ ರಸ್ತೆಯಲ್ಲಿ ಬೊಬ್ಬೆ ಹೊಡೆಯುತ್ತಾ ಇರುತ್ತಿದ್ದರು. ಹಾಗೆಯೇ ಕಳೆದ 2 ದಿನಗಳಿಂದ ಮನೆ ಬಾಗಿಲನ್ನು ತೆರೆಯದೇ ಮನೆಯಲ್ಲಿಯೇ ಇದ್ದು, ಈ ದಿನ ದಿನಾಂಕ:26/04/2013 ರಂದು ಬೆಳಿಗ್ಗೆ 11:00 ಗಂಟೆಗೆ ಈ ಹಿಂದೆ  ಚಿನ್ನದ ಕೆಲಸ ಕೊಟ್ಟಿದ್ದ ಶೇಖರ ಶೆಟ್ಟಿ ಎಂವರು ಬಂದು, ಎಷ್ಟು ಬಾಗಿಲನ್ನು ಬಡಿದರೂ ಬಾಗಿಲನ್ನು ತೆಗೆಯದೇ ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದನ್ನು ಕಂಡು ಬಾಗಿಲು ತೆಗೆದು ನೋಡುವಾಗ, ಚಂದ್ರಶೇಖರ ಆಚಾರ್ಯರವರು ಮನೆಯೊಳಗಿನ ಪಡಸಾಲೆಯ ಜಂತಿಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿದ್ದು, ಅವರು ವೈಯಕ್ತಿಕ ಕಾರಣದಿಂದಾಗಿಯೇ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರುವುದಾಗಿದ್ದು, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಶ್ರೀಮತಿ ಸಾವಿತ್ರಿ (36) ಗಂಡ:ಚಂದ್ರಶೇಖರ ಆಚಾರ್ಯ, ವಾಸ:ವಿಶ್ರಾಂತಿ, ಮಧ್ವ ನಗರ, ಕೊಡವೂರು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 26/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: