Friday, April 19, 2013

Daily Crimes Reported as On 19/04/2013 at 17:00 Hrsಅಪಘಾತ ಪ್ರಕರಣ
  • ಉಡುಪಿ ನಗರ: ದಿನಾಂಕ 19/04/2013 ರಂದು ಪಿರ್ಯಾದಿದಾರರಾದ ಪ್ರಸನ್ನ (23), ತಂದೆ ಮುತ್ತಯ್ಯ ಕೆ ವಾಸ: ಸಪ್ನ ನಿವಾಸ, ಕೊರಂಗ್ರಪಾಡಿ, ಉಡುಪಿರವರು ತನ್ನ ಮನೆಯಿಂದ ಉದ್ಯಾವರದ ಗುಡ್ಡೆಯಂಗಡಿಯ ಟೈಲರ್ ಅಂಗಡಿಗೆ ಹೋಗಿ ವಾಪಾಸು ಮನೆ ಕಡೆಗೆ ನಡೆದುಕೊಂಡು ಕೊರಂಗ್ರಪಾಡಿ ಗ್ರಾಮದ ಬೊಮ್ಮನಪಾದೆಯ ಬೊಬ್ಬುಸ್ವಾಮಿ ದೇವಸ್ಥಾನದ ಹತ್ತಿರ ಸೈಂಟ್ ಮಾರಿಯಾ ಗ್ಯಾರೇಜಿನ ಎದುರು ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ಬರುತ್ತಿರುವಾಗ ಸುಮಾರು 11:00 ಗಂಟೆಗೆ ಗುಡ್ಡೆಯಂಗಡಿ ಕಡೆಯಿಂದ ಸಿಟಿಎ 7882ನೇ ಟಿಪ್ಪರ್ ಚಾಲಕ ಬಸಪ್ಪ ಎಂಬುವನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪ್ರಸನ್ನ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಸೊಂಟಕ್ಕೆ ಒಳಗುದ್ದಿದ ಜಖಂ ಮತ್ತು ಎರಡು ಕಾಲಿನ ಪಾದದ ಬಳಿ ತರಚಿದ ಗಾಯ ಹಾಗೂ ಎಡ ಕೈಯ ಮೊಣ ಗಂಟಿನ ಕೆಳಗೆ ತರಚಿದ ಗಾಯವಾಗಿದ್ದು ಹಾಗೂ ಟಿಪ್ಪರ್ ಎಡ ಬಾಗಕ್ಕೆ ಹೋಗಿ, ಆವರಣದ ಗೋಡೆಗೆ ತಾಗಿ ಗೋಡೆಯು ಬಿದ್ದಿದ್ದು. ಅಲ್ಲಿ ಸೇರಿದವರು ಪ್ರಸನ್ನರವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪ್ರಸನ್ನರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 205/13 ಕಲಂ ಕಲಂ 279, 337, ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ
  • ಕಾಪು: ದಿನಾಂಕ 18/04/2013 ರಂದು 17:25 ಗಂಟೆಗೆ ಉಡುಪಿ ತಾಲೂಕು ಏಣಗುಡ್ಡೆ ಗ್ರಾಮದ ಕಟಪಾಡಿ ಸಂತೆಕಟ್ಟೆ ಓಣಿಯಲ್ಲಿ ಆರೋಪಿಗಳಾದ 1) ಹಸನ್ (55) ತಂದೆ ಉಮ್ಮರ್ ಬ್ಯಾರಿ ವಾಸ: ಮಸೀದಿ ಕಂಪೌಂಡ್ ಬಳಿ ಉಡುಪಿ 2) ರವಿ ಸಲ್ಯಾನ್ ಪಳ್ಳಿಗುಡ್ಡೆ ಇವರುಗಳು ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಾರೆಂದು ಪಿರ್ಯಾದಿದಾರರಾದ ನಾರಾಯಣ, ಎ.ಎಸ್.ಐ ಡಿಸಿಐಬಿ ಉಡುಪಿರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವ ಜೊತೆ ಸದ್ರಿ ಸ್ಥಳಕ್ಕೆ ಬಂದು ದಾಳಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಆತನು ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿ ನಗದು ರೂಪಾಯಿ 770/- ಮಟ್ಕಾ ನಂಬ್ರ ಬರೆದ ಚೀಟಿ-2 ಮತ್ತು ಬಾಲ್ ಪೆನ್ನು -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಯಿತು. ಆರೋಪಿಯು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ರವಿ ಸಾಲ್ಯಾನ್ ಪಳ್ಳಿ ಗುಟ್ಟೆ ಎಂಬವರಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 125/13 ಕಲಂ 78(1), (111) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣಗಳು
  • ಮಣಿಪಾಲ: ದಿನಾಂಕ 18/04/2013 ರಂದು ರಾತ್ರಿ 9:30 ಗಂಟೆಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ನೇತಾಜಿ ನಗರ ಎಂಬಲ್ಲಿ ಪಿರ್ಯಾದಿದಾರರಾದ ಕೃಷ್ಣಪ್ಪ (30) ತಂದೆ: ಸಂಜೀವ, ವಾಸ: ನೇತಾಜಿ ನಗರ, 80 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕುರವರ ತಂದೆ ಸಂಜೀವ, ಬಾವ ಸುಮಂತ, ಅಕ್ಕ ಸರಸ್ವತಿ, ಅಕ್ಕನ ಮಗಳ ಗಂಡ ಪ್ರದೀಪ, ತಂಗಿ ಗೀತಾ, ಅಕ್ಕನ ಮಗಳು ಸುಚಿತ್ರ, ಅಕ್ಕನ ಮಗ ಸುದರ್ಶನ ಮತ್ತು ನಿತೀನ್ ಎಂಬವರಿಗೆ ಆರೋಪಿತರಾದ ರಾಜ, ಎಲ್ಲಮ್ಮ,ಗುಂಡಿ, ಜಯಲಕ್ಷ್ಮೀ, ಶೃತಿ ಎಂಬವರು ಅಕ್ರಮ ಕೂಟ ಸೇರಿ ಕೈಯಿಂದ ಹೊಡೆದು, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದುದಾಗಿದೆ. ಸದ್ರಿ ಘಟನೆಗೆ ಆರೋಪಿತರ ಮನೆಗೆ ಅವರೇ ಬೆಂಕಿ ಕೊಟ್ಟು ನಮ್ಮ ಮೇಲೆ ವಿನಹ ಕಾರಣ ದೂರು ನೀಡಿರುವುದಾಗಿದೆ. ಈ ಬಗ್ಗೆ ಕೃಷ್ಣಪ್ಪರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 82/2013 ಕಲಂ 143, 147, 148, 323, 324, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಬೈಂದೂರು:ದಿನಾಂಕ 17/04/2013 ರಂದು ಸಂಜೆ ಸುಮಾರು 06:00 ಗಂಟೆಗೆ ಪಿರ್ಯಾದಿದಾರರಾದ ಪ್ರವೀಣ್ ಕೆ ಟಿ (39) ತಂದೆ ಕೆ ಟಿ ದಿವಾಕರ ಶೇರುಗಾರ ವಾಸ ಗುರು ನಿಲಯ ಬಿಜೂರು ಗ್ರಾಮ ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ಬಿಜೂರು ಗ್ರಾಮದ ನಂಬಿಯಾರ್ ಶಾಪ್‌ನ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ ಆರೋಪಿಗಳಾದ 1) ಶ್ರೀಧರ ಬಿಜೂರು, 2) ರಾಜೇಂದ್ರ ಎಸ್, 3) ನಾಗರಾಜ ಪೂಜಾರಿ ಎಂಬವರು ಸದ್ರಿ ಸ್ಥಳಕ್ಕೆ ಬಂದು ಅವರುಗಳ ಪೈಕಿ ಶ್ರೀಧರ ಬಿಜೂರುರವರು ಪ್ರವೀಣ್ ಕೆ ಟಿ ರವರನ್ನುದ್ದೇಶಿಸಿ ಬಾರಿ ರಾಜಕೀಯ ಮಾಡುತ್ತೀಯಾ,ನೀನು ಇಲ್ಲಿ ಹೇಗೆ ಕೆಲಸ ಮಾಡುತ್ತೀಯಾ ನೋಡುತ್ತೇವೆ ಎಂದು ಹೇಳಿ ಅವರುಗಳ ಪೈಕಿ ನಾಗರಾಜ ಪೂಜಾರಿಯು ಪ್ರವೀಣ್ ಕೆ ಟಿ ರವರಿಗೆ ಹಿಂದಿನಿಂದ ಹಿಡಿದುಕೊಂಡು ರಾಜೇಂದ್ರ ಮತ್ತು ಶ್ರೀಧರರವರು ಕೈಗಳಿಂದ ಕೆನ್ನೆಗೆ ಎದೆಗೆ, ಹೊಟ್ಟೆಗೆ ಹೊಡೆದು, ಎರಡೂ ಕೈಯನ್ನು ತಿರುವಿ ಹಾಕಿ ಕಾಲಿನಿಂದ ತುಳಿದು ಎಡಕಾಲಿನ ಪಾದದ ಗಂಟಿಗೆ ಗುದ್ದಿದ ಒಳನೋವು ಆಗಿರುತ್ತದೆ. ಅಲ್ಲದೇ ಪ್ರವೀಣ್ ಕೆ ಟಿ ರವರನ್ನುದ್ದೇಶಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲಾ,ಮುಂದಕ್ಕೆ ಸಹ ನಿನ್ನನ್ನು ಒಂದು ಗತಿ ಮಾಡುತ್ತೇವೆ, ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಕೃತ್ಯಕ್ಕೆ ರಾಜಕೀಯ ವೈಷಮ್ಯವೇ ಕಾರಣವಾಗಿರುತ್ತದೆ. ಈ ಬಗ್ಗೆ ಪ್ರವೀಣ್ ಕೆ ಟಿ ರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 129/13 ಕಲಂ 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ ಗ್ರಾಮಾಂತರ: ದಿನಾಂಕ 19/04/2013 ರಂದು ರಾತ್ರಿ ಸುಮಾರು 1:00 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಪಿರ್ಯಾದಿದಾರರಾದ ಪ್ರಶಾಂತ ಡಿ ಸೋಜಾ (32) ತಂದೆ ಅಂತೋನಿ ಡಿ ಸೋಜಾ ವಾಸ: ಮಂಜಲ್ತಾರ್, ಮಾಳ ಗ್ರಾಮ, ಕಾರ್ಕಳ ತಾಲೂಕುರವರ ತಂದೆ ಶ್ರಿ ಅಂತೋನಿ ಡಿ ಸೋಜಾ (60) ಎಂಬುವವರು ತನಗಿರುವ ಅಸ್ತಮಾ ಖಾಯಿಲೆ ಮತ್ತು ವಿಪರೀತ ಶರಾಬು ಸೇವಿಸುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ನೇರಳೆ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 19/2013 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: