Tuesday, April 16, 2013

Daily Crimes Reported as On 16/04/2013 at 07:00 Hrs


ಅಪಘಾತ ಪ್ರಕರಣಗಳು
  • ಬ್ರಹ್ಮಾವರ: ದಿನಾಂಕ 14/04/2013 ರಂದು ರಾತ್ರಿ 08:45 ಗಂಟೆಗೆ ಉಡುಪಿ ತಾಲೂಕು ಹಲುವಳ್ಳಿ ಗ್ರಾಮದ ಕನ್ನಾರು ಎಂಬಲ್ಲಿ ಆರೋಪಿ ರಾಜು ಯಾನೆ ಜೋನ್ ಮಥಾಯಿಸ್ ರವರು ಬೊಲೆರೋ ಜೀಪು ನಂಬ್ರ ಕೆಎ-20-ಪಿ-9741ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬ್ರಹ್ಮಾವರದಿಂದ ಹಲುವಳ್ಳಿ ಕಡೆಗೆ ಚಲಾಯಿಸಿ ದನ ಅಡ್ಡ ಬಂದ ಪರಿಣಾಮ ಒಮ್ಮೇಲೆ ಬ್ರೇಕ್ ಕಾಕಿದ ಪರಿಣಾಮ ಜೀಪು ಎಡ ಮಗ್ಗುಲಾಗಿ ಮಗುಚಿ ಬಿದ್ದು ಜೀಪಿನಲ್ಲಿದ್ದ ಜೋಜಿ ಮುಂಡೆಕ್ಕಿಲ್ ತಂದೆ: ಚೆರಿಯ ಪಾಲೋಸ್ ವಾಸ: ಪಿಂಡಿ ಮನೆ ಅಂಚೆ ವೆಟ್ಟರ ಪಾರ ಕೋತಮಂಗಳಮ್ ತಾಲೂಕು ಎರ್ನಾಕುಲಂ ಕೇರಳ ರಾಜ್ಯರವರಿಗೆ ತೀವ್ರ ಸ್ವರೂಪದ ಹಾಗೂ ಜೀಪು ಚಾಲಕ ರಾಜು ಯಾನೆ ಜೋನ್ ಮಥಾಯಿಸ್ ರವರಿಗೆ ಸಾದಾ ಸ್ವರೂಪದ ರಕ್ತ ಗಾಯವಾಗಿರುವುದಾಗಿದೆ ಎಂಬುದಾಗಿ ಜೋಜಿ ಮುಂಡೆಕ್ಕಿಲ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/13 ಕಲಂ 279,337,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬ್ರಹ್ಮಾವರ: ದಿನಾಂಕ 15/04/2013 ರಂದು ಬೆಳಗ್ಗೆ 11:00 ಗಂಟೆಗೆ ಗಣೇಶ ಪೂಜಾರಿ ತಂದೆ ದಿವಂಗತ ವಿಠ್ಠಲ ಪೂಜಾರಿ, ವಾಸ ಅನುಗ್ರಹ ನಿಲಯ, ಬಿಸಿ ರೋಡ್  ಬಸ್ ಸ್ಟಾಂಡ್ ಬಳಿ, 52 ನೇ ಹೇರೂರು ಗ್ರಾಮ, ಉಡುಪಿ ತಾಲೂಕುರವರ ಅತ್ತೆ ಶಾರದಾ ಪೂಜಾರ್ತಿ ಎಂಬವರು ರಾಷ್ಟೀಯ ಹೆದ್ದಾರಿ 66 ರ ಬಿ.ಸಿ ರೋಡ್ ಬಸ್ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕೆಎ-20-ವಿ-821 ನೇ ಮೊಟಾರ್ ಸೈಕಲ್ ಸವಾರ ಹರೀಶ್ ಕಾಂಚನ್ ಎಂಬವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಣೇಶ ಪೂಜಾರಿರವರ ಅತ್ತೆ ಶಾರದಾ ಪೂಜಾರ್ತಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ತಲೆಯ ಹಿಂಭಾಗ ಮತ್ತು ಎಡ ಕಾಲಿಗೆ ತೀವ್ರಗಾಯವಾಗಿದ್ದು ಶಾರದಾ ಪೂಜಾರ್ತಿ ರವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ  ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಸಂಜೆ 5:05 ಗಂಟೆಗೆ ಶಾರದಾ ಪೂಜಾರ್ತಿ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಗಣೇಶ ಪೂಜಾರಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 161/13 ಕಲಂ 279,304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 15/04/2013 ರಂದು ಸಂಜೆ 4:00 ಗಂಟೆಗೆ ಪ್ರಸಾದ್‌ ಕುಮಾರ್ ಹೆಗ್ಡೆ, ತಂದೆ ಶೇಖರ ಹೆಗ್ಡೆ ಎ, ವಾಸ: ನಾಲ್ಕೂರು ಗ್ರಾಮ, ಉಡುಪಿ ತಾಲೂಕುರವರು ತನ್ನ ಮಾರುತಿ ಸ್ವಿಪ್ಟ್‌ ಕಾರು ನಂಬ್ರ ಕೆಎ 20 ಪಿ 8268 ನೇದನ್ನು ಚಲಾಯಿಸಿಕೊಂಡು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಹೊಗುತ್ತಿರುವಾಗ ಶಿವಳ್ಳಿ ಗ್ರಾಮದ ಇಂದ್ರಾಳಿ ಪೆಟ್ರೋಲ್ ಬಂಕ್‌ನ ಹತ್ತಿರ ಏಕಮುಖ ರಸ್ತೆಯಲ್ಲಿ ಅವರ ಎದುರುಗಡೆಯಿಂದ ಮೋಟಾರ್‌ ಸೈಕಲ್ ನಂಬ್ರ ಕೆಎ 20 ಡಬ್ಲ್ಯೂ 9651ನೇದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನು ರಸ್ತೆಗೆ ಬಿದ್ದು ಆತನಿಗೆ ರಕ್ತಗಾಯವಾಗಿರುತ್ತದೆ. ಕಾರಿನ ಎದುರುಗಡೆ ಬಂಪರ್, ಗ್ಲಾಸ್‌, ಬೊನೆಟ್ಟು ಜಖಂಗೊಂಡಿರುತ್ತದೆ ಎಂಬುದಾಗಿ ಪ್ರಸಾದ್‌ ಕುಮಾರ್ ಹೆಗ್ಡೆರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2013 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ: ದಿನಾಂಕ 15/04/2013 ರಂದು 18:30 ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಜಂಕ್ಷನ್‌ನಲ್ಲಿ ಕಾರ್ಕಳ-ಉಡುಪಿ ಸಾರ್ವಜನಿಕ ರಸ್ತೆಯಲ್ಲಿ ಬಸ್ಸು ನಂಬ್ರ ಕೆಎ 20 ಎ 9519 ನೇದರ ಚಾಲಕನು ತನ್ನ ಬಸ್ಸನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ನಂಬ್ರ ಕೆಎ 20 ಪಿ 8478 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಆಗಿರುವುದಾಗಿದೆ ಎಂಬುದಾಗಿ ಸುಬ್ರಹ್ಮಣ್ಯ ಕಾಮತ್‌. ಎಸ್‌ ತಂದೆ: ದಿ. ಹರಿಯಪ್ಪ ಕಾಮತ್‌‌, ವಾಸ: ಹರಿದರ್ಶನ್‌, ದೇವಿ ನಗರ 1ನೇ ಮೈನ್‌, 1ನೇ ಕ್ರಾಸ್‌, ಪರ್ಕಳ, ಹೆರ್ಗಾ ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2013 ಕಲಂ: 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ:15/04/13 ರಂದು ಬೆಳಿಗ್ಗೆ ಜಗನ್ನಾಥ ಭಂಡಾರಿರವರು ಮಹಾಬಲೇಶ್ವರ ದೇವಸ್ಥಾನದ ಸಮೀಪ ರಾಷ್ಟೀಯ  ಹೆದ್ದಾರಿ  66 ರಸ್ತೆಯ ಪೂರ್ವಬದಿಯಲ್ಲಿ ಮಣ್ಣಿನ ಕಚ್ಚಾ ರಸ್ತೆಯಲ್ಲಿ ನಿಂತುಕೊಂಡಿರುವಾಗ ಸಮಯ 11:00 ಗಂಟೆಗೆ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಕೆಎ37ಎ.754 ನೇ ನಂಬ್ರದ ಕಾರು ಚಾಲಕ ಅನಿಲ್ ಬದ್ದಿರವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಎಡಬದಿಗೆ ಚಲಾಯಿಸಿ ಕಚ್ಚಾ ರಸ್ತೆಯಲ್ಲಿ ನಿಂತಿದ್ದ ಜಗನ್ನಾಥ ಭಂಡಾರಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ಜಗನ್ನಾಥ ಭಂಡಾರಿರವರು ಕಾರಿನ ಮೇಲೆ ಬಿದ್ದಿದ್ದು, ತಲೆಗೆ ಹಾಗೂ ಬಲಕಾಲಿಗೆ ತೀವ್ರ ಸ್ವರೂಪದ ಗಾಯ ಹಾಗೂ ಎರಡೂ ಕೈಗಳಿಗೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಗಣೇಶ ದೇವಾಡಿಗ ತಂದೆ: ಮಂಜಯ್ಯ ದೇವಾಡಿಗ ವಾಸ:ಪಡುವಾಯನಮನೆ, ಮಹಾಬಲೇಶ್ವರ ದೇವಸ್ಥಾನದ ಸಮೀಪ ನಂದನವನ ಗ್ರಾಮ ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2013 ಕಲಂ: 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: