Monday, April 15, 2013

Daily Crimes Reported as On 15/04/2013 at 17:00 Hrs


ಅಪಘಾತ ಪ್ರಕರಣಗಳು
  • ಕಾರ್ಕಳ: ದಿನಾಂಕ  14/04/2013ರಂದು ಸಂಜೆ 4:00 ಗಂಟೆಗೆ ಕಾರ್ಕಳ ತಾಲೂಕು ನೀರೆ ಗ್ರಾಮದ ನೀರೆಜಡ್ಡು ಎಂಬಲ್ಲಿ ಬಸ್ ಚಾಲಕ ಆರೋಪಿ ಸಚಿನ್ ಎಂಬವರು ತನ್ನ ಬಸ್ ನಂಬ್ರ ಕೆಎ-15-6416ನೇಯದನ್ನು ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಹೋಗಿ ಉಡುಪಿ ಕಡೆಯಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ತೂಫಾನ್ ಟ್ರಾಕ್ಸ್ ನಂ. ಕೆಎ-31-7826 ನೇಯದಕ್ಕೆ ಢಿಕ್ಕಿ ಹೊಡೆದಿರುತ್ತಾರೆ. ಈ ಪರಿಣಾಮ ತೂಫಾನ್ ಟ್ರಾಕ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ಪವನ್, ಸಂತೋಷ್, ಶಂಬೋಜಿ, ವಿಜಯ, ಮಲ್ಲವ್ವ, ಬಸವಣ್ಣ ಎಂಬವರಿಗೆ ಸಾಮಾನ್ಯ ಸ್ವರೂಪದ ರಕ್ತಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ   ಶ್ರೀ.ಮೊಹಮ್ಮದ್ ಉಮರ್ ಅಬ್ದುಲ್ ಗನಿ ತಂದೆ: ಅಬ್ದುಲ್ ಗನಿ ಬಳಗಾರ ವಾಸ: ಮಹಮದಾಲಿ ರೋಡ್, ಹಳಿಯಾಳ, ಉತ್ತರಕನ್ನಡ ಜಿಲ್ಲೆರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/13 ಕಳಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 14/04/2013ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು, ಬೈಕಾಡಿ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯ ಗೋದಾಮಿನ ಬಳಿ ಮಂಜುನಾಥ ತಂದೆ ದಿವಂಗತ ನಾಗರಾಜಪ್ಪ, ವಾಸ: ಶಾಂತಿ ನಗರ, ಮತ್ಯಾಲಮ್ಮ ದೇವಸ್ತಾನದ ಹಿಂಬದಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆರವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮನು ರವರು ಲಾರಿ ನಂಬ್ರ ಕೆಎ-14-ಎ-6566ನೇಯದನ್ನು ಅಜಾಗರುಕತೆಯಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಲ ಕಾಲಿಗೆ ತೀವ್ರ ತರಹದ ಒಳಜಖಂ ಆಗಿರುತ್ತದೆ ಎಂಬುದಾಗಿ ಮಂಜುನಾಥರವರು 160/2013 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
  • ಬೈಂದೂರು: ದಿನಾಂಕ 14/04/2013 ರಂದು ಸಂಜೆ 03:30ಗಂಟೆಗೆ ಮೊಹಮ್ಮದ್ ಖಾಸಿಂ (34) ತಂದೆ: ಮೊಯಿದೀನ್ ಸಾಹೇಬ್ ವಾಸ: ಜನತಾ ಕಾಲನಿ, ಅಂಬಾಗಿಲು ಉಪ್ಪುಂದ  ಗ್ರಾಮ ಕುಂದಾಪುರ ತಾಲೂಕುರವರು ತಮ್ಮ ಬೊಲೆರೋ ಪಿಕ್ ಅಪ್ ವಾಹನದಲ್ಲಿ ಉಪ್ಪುಂದ ಗ್ರಾಮದ ಮೆಡಿಕಲ್ ಶಾಲೆಯ ಬಳಿ ಮೀನು ಲೋಡ್ ಮಾಡಲು ಹೋದಾಗ ಅಲ್ಲಿ ಆರೋಪಿಗಳಾದ 1] ಫಯಾಜ್ (34) ತಂದೆ:ಮಹಮ್ಮದ್ ವಾಸ: ಶಾಲೆಬಾಗಿಲು ಉಪ್ಪುಂದ ಗ್ರಾಮ 2] ಖಾದ್ರಿ (34) ತಂದೆ: ಹುಸೇನ್ ಸಾಹೇಬ್ ವಾಸ:ಶಾಲೆಬಾಗಿಲು ಉಪ್ಪುಂದ ಗ್ರಾಮ 3] ಖಾದ್ರಿ ತಂದೆ: ಹಮೀದ್ ಬ್ಯಾರಿ ವಾಸ:ಜನತಾ ಕಾಲನಿ ಉಪ್ಪುಂದ 4] ಇಬ್ರಾಹಿಂ ತಂದೆ:ಹಮೀದ್ ಬ್ಯಾರಿ ವಾಸ:ಜನತಾ ಕಾಲನಿ ಉಪ್ಪುಂದ ಗ್ರಾಮರವರುಗಳು ಹಾಜರಿದ್ದು, ಮೊಹಮ್ಮದ್ ಖಾಸಿಂರವರು ಅವರಲ್ಲಿ ಯಾಕೆ ನನ್ನ ಬಗ್ಗೆ ಅಪಪ್ರಚಾರ ಮಾಡಿ ನನ್ನ ಬಾಡಿಗೆ ತಪ್ಪಿಸುತ್ತೀರಿಎಂದು ಕೇಳಿದಾಗ ಅವರುಗಳು ಅವಾಚ್ಯ ಶಬ್ದಗಳಿಂದ ಬೈದು ಅವರನ್ನು ನೆಲಕ್ಕೆ ಬೀಳಿಸಿ ಅವರ ಕೈಯಲಿದ್ದ ಕಬ್ಬಿಣದ ರಾಡಿನಿಂದ ಅವರ ಸೊಂಟಕ್ಕೆ ಬೆನ್ನಿಗೆ ಹೊಡೆದು, ಬೆನ್ನಿಗೆ, ಎದೆಗೆ, ತೊಡೆಗೆ ಕಾಲಿನಿಂದ ತುಳಿದಿದ್ದು, ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಮೊಹಮ್ಮದ್ ಖಾಸಿಂರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ 122/2013 ಕಲಂ: 324,504,506,427  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ದಿನಾಂಕ 14/04/2013 ರಂದು ಸಂಜೆ 07:30 ಗಂಟೆಗೆ ಮೊಮಿನ ಇಸ್ಮಾಯಿಲ್  (34) ತಂದೆ: ಶಾವಿಲ್ ಹಮೀದ್  ವಾಸ: ಮೊಮಿನ್ ಮೊಹಲ್ಲಾ ಶಿರೂರು ಗ್ರಾಮ   ಕುಂದಾಪುರ ತಾಲೂಕುರವರು ತನ್ನ ತಮ್ಮ ಮೊಮಿನ್ ಶಮೀರ್ ಎಂಬವರ ಆಟೋರಿಕ್ಷಾದಲ್ಲಿ ಕುಳಿತು ಶೀರೂರು ಪೇಟೆಯಿಂದ ಮನೆಗೆ ಹೋಗುವರೇ ಮುಸ್ಲಿಂ ಕೇರಿಯ ರಾಜಾ ಫಾರೂಕ್ ಎಂಬವರ ಅಂಗಡಿಯ ಬಳಿ ತಲುಪಿದಾಗ ಆರೋಪಿಗಳಾದ 1ಮುಲ್ಲಾ ಮುಖ್ತಾರ್ 2] ಮುಲ್ಲಾ ಫಝಲ್ ರವರು ಕೆಎ20ಇ7146 ನೇ ಆಕ್ಟೀವ್ ಹೋಡಾ ಮೋಟಾರ್ ಸೈಕಲ್ ನಲ್ಲಿ ಬಂದು ಮೋಟಾರು ಸೈಕಲ್ ನ್ನು ನಮ್ಮ ಆಟೋರಿಕ್ಷಾ ಮುಂದಕ್ಕೆ ಹೋಗದಂತೆ ಅಡ್ಡ ನಿಲ್ಲಿಸಿ 2ನೇ ಆರೊಪಿ ಮುಲ್ಲಾ ಫಝಲ್ ರವರು ಮೊಮಿನ ಇಸ್ಮಾಯಿಲ್  ರವರ ತಮ್ಮನಾದ ಆಟೋರಿಕ್ಷಾ ಚಾಲನೆ ಮಾಡಿಕೊಂಡಿದ್ದ ಶಮೀರ್ ನನ್ನು ಕೆಳಗೆ ಎಳೆದು ಮರದ ರೀಪಿನಿಂದ ತಲೆಗೆ ಕೈಗೆ ಹೊಡೆಯುತ್ತಿದ್ದಾಗ ತಡೆಯಲು ಹೋದ ಮೊಮಿನ ಇಸ್ಮಾಯಿಲ್  ರವರಿಗೆ 1ನೇ ಆರೋಪಿ 1ಮುಲ್ಲಾ ಮುಖ್ತಾರ್ ರವರು ಕಬ್ಬಿಣದ ರಾಡಿನಿಂದ ತಲೆಗೆ, ಕೈಗಳಿಗೆ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಇತರ ಆರೋಪಿಗಳಾದ 3] ಖಾಜಿ ಶಮೀಮಾ 4] ಮುಲ್ಲಾ ಅನೀಖಾ 5] ಮಣೆಗಾರ್ ಸುಗ್ರಾ 6] ಮುಲ್ಲಾ ಸಭಾ 7] ನೌಸೀಫಾ 8] ಮೌಲಾನಾ ದಸ್ತಗೀರ್  ವಾಸ: ಎಲ್ಲರೂ ಶಿರೂರು ಗ್ರಾಮರವರುಗಳು ಬಂದು ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು ನಂತರ ಅವರು ಹಾಗೂ ತಮ್ಮ ಜೋರಾಗಿ ಬೊಬ್ಬೆ ಹಾಕಿದಾಗ, ಇಮ್ರಾನ್ ತಾಹೀರಾ, ರಾಜಾ ಫಾರೂಕ್ ಹಾಗೂ ಇತರರು ಬಂದಾಗ ಆರೋಪಿಗಳು ಅಲ್ಲಿಂದ ಹೊರಟು ಹೋದರು. ನಂತರ ಮೊಮಿನ ಇಸ್ಮಾಯಿಲ್  ರವರ ಅಣ್ಣ ಮುಕ್ತಿಯಾರ್, ಎಂಬವರು ಬಂದು ಒಂದು ವಾಹನದಲ್ಲಿ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ಕರೆದುಕೊಂಡು ಹೋಗಿ ಸರಕಾರಿ ಅಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಈ ಕೃತ್ಯ ನಡೆಸಲು ಮೌಲಾನಾ ದಸ್ತಗೀರ್ ಎಂಬವರು ದುಷ್ಪ್ರೇರಣೆ ನೀಡಿರುವುದಾಗಿದೆ ಎಂಬುದಾಗಿ ಮೊಮಿನ ಇಸ್ಮಾಯಿಲ್  ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2013 ಕಲಂ: 341, 324, 307, 504, 506, 109 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೋಟಾ: ದಿನಾಂಕ 14/04/2013 ರಂದು ರಾತ್ರಿ 10:00 ಗಂಟೆಗೆ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಹಳ್ಳಾಡಿ ಗುಡ್ಡಿ ನೇತ್ರಾವತಿ ನಿಲಯ ಎಂಬಲ್ಲಿರುವ ನರಸಿಂಹ ಮೊಗವೀರ ತಂದೆ: ಪುಟ್ಟ ಮೊಗವೀರ ವಾಸ: ನೇತ್ರಾವತಿ ನಿಲಯ ಹಳ್ಳಾಡಿಗುಡ್ಡಿ ಹಳ್ಳಲಾಡಿ ಹರ್ಕಾಡಿ ಗ್ರಾಮ ಕುಂದಾಪುರ ತಾಲೂಕುರವರ ಮನೆಗೆ  ಆರೋಪಿಗಳಾದ 1.ಸುನೀಲ್ 2.ಸುದರ್ಶನರವರು ಅಕ್ರಮ ಪ್ರವೇಶ ಮಾಡಿ ಅವರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು, ಗಲಾಟೆ ತಪ್ಪಿಸಲು ಬಂದ ಅವರ ಹೆಂಡತಿ ಸುಶೀಲ ಎಂಬವರಿಗೆ ಕೆನ್ನೆಗೆ ಹೊಡೆದಿದ್ದು, ಅವರು ಜೋರಾಗಿ ಬೊಬ್ಬೆ ಹೊಡೆದಾಗ ಹತ್ತಿರದ ನಿವಾಸಿ ಕೃಷ್ಣ ಎಂಬವರು ಬಂದಾಗ ಅವರಿಗೂ ಕೂಡ ಆರೋಪಿಗಳು ಕೈಯಿಂದ ಹೊಡೆದು ಕಾಲಿನಿಂದ ತುಳಿದು ನಿನ್ನ ಮಗಳನ್ನು ನನಗೆ ಮದುವೆ ಮಾಡಿಸಿಕೊಡದಿದ್ದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನರಸಿಂಹ ಮೊಗವೀರರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/13 ಕಲಂ 448 504 323  506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ
  • ಕೋಟಾ: ಗುರುಪ್ರಸಾದ್ (25) ತಂದೆ:ದಿ/ಸೀತಾರಾಮ ಶೆಟ್ಟಿ ವಾಸ: ಮಂಡಾಳ್ಳಿ ಕೆಳಮನೆ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು ರವರ ಅಕ್ಕ ಶ್ರೀಮತಿ ಚೇತನ (29) ಎಂಬವರು ತನಗೆ ಮದುವೆಯಾಗಿ 3 ವರ್ಷವಾದರೂ ಮಕ್ಕಾಳಾಗಲಿಲ್ಲವೆಂಬ ಚಿಂತೆಯಿಂದ ಹಾಗೂ ಗಂಡನು ತನ್ನ ಇಚ್ಛೆಯಂತೆ ಹೊರಗಡೆ ಎಲ್ಲಿಯೂ ಕರೆದುಕೊಂಡು ಹೋಗುವುದಿಲ್ಲ ಎಂಬ ಚಿಂತೆಯಿಂದ ಜೀವದಲ್ಲಿ ಜಿಗುಪ್ಸೆಗೊಂಡು ದಿನಾಂಕ 14/04/2013ರಂದು 16:30 ಗಂಟೆಯಿಂದ 19:30 ಗಂಟೆಯ ಮಧ್ಯಾವದಿಯಲ್ಲಿ ಉಡುಪಿ ತಾಲೂಕು ಶಿರಿಯಾರ ಗ್ರಾಮದ ಗುರುಗುಂಜಿಕಟ್ಟೆ ಎಂಬಲ್ಲಿರುವ ತನ್ನ ಗಂಡನ ಮನೆಯಲ್ಲಿ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಗುರುಪ್ರಸಾದ್ ರವರು ನೀಡಿದ ದೂರಿನಂತೆ  ಕೋಟಾ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/13 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: