Thursday, April 11, 2013

Daily Crimes Reported as On 11/04/2013 at 07:00 Hrs


ಆತ್ಮಹತ್ಯೆ ಪ್ರಕರಣ
  • ಗಂಗೊಳ್ಳಿ: ಪ್ರಭಾಕರ ಶೆಟ್ಟಿ, ಸೂರ್ಕುಂದ, ಬೈಂದೂರು ಇವರ ಪರಿಚಯದ ಸದಾಶಿವ ಶೆಟ್ಟಿ ಎಂಬವರ ಮೃತ ಶರೀರವು ದಿನಾಂಕ 10/04/2013 ರಂದು 18:30 ಗಂಟೆಗೆ ಮರವಂತೆ ಗ್ರಾಮದ ಮಾರಸ್ವಾಮಿಯ ಸೌಪರ್ಣಿಕ ಹೊಳೆಯಲ್ಲಿ ತೇಲುವ ಸ್ಥಿತಿಯಲ್ಲಿ ಕಂಡುಬಂದಿದ್ದು. ಸದಾಶಿವ ಶೆಟ್ಟಿಯವರು ದಿನಾಂಕ 08/04/2013 ರಂದು ಸಿದ್ದಾಪುರ ಹಾಗೂ ಉಡುಪಿಗೆ ಹೋಗಿ ಬರುತ್ತೇನೆಂದು ಹೋದವರು ಅದೇ ದಿನ ಮರವಂತೆ ಗ್ರಾಮದ ಮಾರಸ್ವಾಮಿಯ ಸೌಪರ್ಣಿಕ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಎರಡು ವರ್ಷಗಳ ಹಿಂದೆ ಸದಾಶಿವ ಶೆಟ್ಟಿಯವರ ಒಬ್ಬನೇ ಮಗನಾದ 9ನೇ ತರಗತಿ ಕಲಿಯುತ್ತಿದ್ದ ಅಬಿಷೇಕನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಇದೇ ಕಾರಣಕ್ಕೆ ಅಥವಾ ಬೇರೆ ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಮೃತರ ಮರಣದ ಬಗ್ಗೆ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಪ್ರಭಾಕರ ಶೆಟ್ಟಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕರಣ
  • ಮಣಿಪಾಲ: ದಿನಾಂಕ 08/04/2013 ರಂದು ರಾತ್ರಿ 02:30 ಗಂಟೆಗೆ ಕೆ ಶ್ರೀಲತಾ ಭಕ್ತ, ಗಂಡ: ಕೆ. ಶ್ರೀಧರ ಭಕ್ತ, ವಾಸ: ಪ್ರಭು ಹೌಸ್‌‌‌, ಎ.ಎಲ್‌.ಎನ್‌ ಲೇ ಔಟ್‌‌‌‌, 15ನೇ ಅಡ್ಡ ರಸ್ತೆ, ಮಣಿಪಾಲರವರ ಮನೆಗೆ ಆಪಾದಿತರುಗಳಾದ 1) ನಾಗರಾಜ 2) ರತ್ನಾಕರ ಪೂಜಾರಿ 3) ಸುನೀಲ್‌ ಡಿಸೋಜ 4) ರಾಮಕೃಷ್ಣ ನಾಯಕ್‌ 5) ಫ್ರಾನ್ಸಿಸ್‌ ಮಸ್ಕರೇನಸ್‌ 6) ಶರತ್‌ ಪೂಜಾರಿ 7) ಇತರ 4-5 ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಅವರ ಮಗನಿಗೆ ಮತ್ತು ಗಂಡನಿಗೆ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಒಡ್ಡಿರುವುದಾಗಿದೆ. ಅಲ್ಲದೆ ದಿನಾಂಕ 08/04/2013 ರಂದು ಪದ್ಮನಾಭ ಸನಿಲ್‌ ಎಂದು ಕೆ. ಶ್ರೀಲತಾ ಭಕ್ತರವರ ಮಗನಿಗೆ ಹಾಗೂ ದಿನಾಂಕ 10/04/2013 ರಂದು ರಾಮಕೃಷ್ಣ ನಾಯಕ್‌ ಎಂಬಾತನು ಅವರ ಮಗನಿಗೆ ಹಾಗೂ ಗಂಡನಿಗೆ ಪೋನ್ ಮುಖಾಂತರ ಬೆದರಿಕೆ ನೀಡಿರುತ್ತಾರೆ ಎಂಬುದಾಗಿ ಕೆ ಶ್ರೀಲತಾ ಭಕ್ತರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2013 ಕಲಂ: 143, 147, 448, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ
  • ಮಣಿಪಾಲ: ದಿನಾಂಕ 07/04/2013 ರಂದು ಆಪಾದಿತ ನವೀನ್‌ ಭಕ್ತರವರು ಬಾಡಿಗೆ ವಿಚಾರದಲ್ಲಿ ನಾಗರಾಜ ತಂದೆ: ಉಪೇಂದ್ರ ನಾಯ್ಕ ವಾಸ: ಉಪ್ಪೂರು ಗ್ರಾಮ, ತೆಂಕಬೆಟ್ಟು ಅಂಚೆ, ಉಡುಪಿ ತಾಲೂಕುರವರೊಂದಿಗೆ ತಗಾದೆ ಮಾಡಿದ್ದು, ನಂತರ ನವೀನ್ ಭಕ್ತರವರು ರಾತ್ರಿ 10:15 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ವಿಜಯ ಮೆಡಿಕಲ್‌ ಬಳಿ ಇತರ ಆಪಾದಿತರುಗಳಾದ ಸಂದೀಪ, ಗಣೇಶ ಮತ್ತು ಇತರ 5 ಜನರೊಂದಿಗೆ ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ನಾಗರಾಜರವರಿಗೆ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು, ಏಕ್ಸಿಡೆಂಟ್‌ ಮಾಡಿ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿರುವುದಲ್ಲದೆ, ಜಾತಿ ನಿಂದನೆ ಮಾಡಿರುವುದಾಗಿದೆ ಎಂಬುದಾಗಿ ನಾಗರಾಜರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2013 ಕಲಂ: 143, 147, 323, 504, 506 ಜೊತೆಗೆ 149 ಐಪಿಸಿ ಮತ್ತು ಕಲಂ:3 (1) (X) SC ST Act ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು
  • ಕುಂದಾಪುರ: ಖಾಸಗಿ ದೂರಿನ ಸಾರಾಂವೇನೆಂದರೆ, ದಿನಾಂಕ 26/11/2012 ರಂದು ಸಮಯ 13:00 ಗಂಟೆಗೆ ಕುಂದಾಪುರ ತಾಲೂಕಿನ ಕೊಟೇಶ್ವ್ರರ ಗ್ರಾಮದ ಕಾಮತ್ ಪಟ್ರೋಲ್ ಬಂಕ್ ಹತ್ತಿರ, ರಾಷ್ಟೀಯ ಹೆದ್ದಾರಿ 66 ರಲ್ಲಿ, ಆಪಾದಿತ ಗಣಪತಿ  ಬಿ ಮೊಗೇರ  ತಂದೆ ಬಲೀಂದ್ರ ಮೊಗೇರ ವಾಸ: ಪಿನಿ ಮನೆ, ಅಳವೆಕೋಡಿ, ಶಿರಾಲಿ ಗ್ರಾಮ ಭಟ್ಕಳ ತಾಲೂಕು ರವರು  KA47-3225 ನೇ ಟಾಟಾ ಏಸ್ ವಾಹನವನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಯರಾಮ ಶೆಟ್ಟಿ ತಂದೆ ಭೋಜರಾಜ ಶೆಟ್ಟಿ , ವಾಸ: ಹೆಬ್ಬಾಡಿಮನೆ, ಕಟ್ಗೇರಿ, ಕೋಣಿ ಗ್ರಾಮ ಕುಂದಾಪುರ ತಾಲೂಕುರವರು ಕಿನಾರಾ ರಸ್ತೆಯಿಂದ ಕೊಟೇಶ್ವರ ಕಡೆಗೆ ಚಲಾಯಿಸುತ್ತಿದ್ದ KA20-AB-8666 ನೇ ಅಟೋ ರಿಕ್ಷಾಕ್ಕೆ ಎದುರುಗಡೆಯಿಂದ ಢಿಕ್ಕಿಹೊಡೆದ ಪರಿಣಾಮ, ಜಯರಾಮ ಶೆಟ್ಟಿರವರು ಗಂಭೀರವಾಗಿ ಹಾಗೂ ರಿಕ್ಷಾ ಪ್ರಯಾಣಿಕರು ಗಾಯಗೊಂಡಿರುವುದಾಗಿದೆ ಎಂಬುದಾಗಿ ಜಯರಾಮ ಶೆಟ್ಟಿರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2013  ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 10/04/2013 ರಂದು ದಯಾನಂದ ತಂದೆ: ಉಮ್ಮನ್ನ ಸಫಲಿಗ, ವಾಸ: ರಾಜೀವ ನಗರ, ಪಲಿಮಾರು ಗ್ರಾಮ, ಉಡುಪಿ ತಾಲೂಕುರವರು ಅವರ ಅಟೋ ರಿಕ್ಷಾ ನಂಬ್ರ ಕೆಎ 20 ಸಿ 212 ನೇಯದರಲ್ಲಿ ಪ್ರಯಾಣಿಕರಾಗಿ ಜಯಲಕ್ಷ್ಮಿ ಹಾಗೂ ಪ್ರಶಾಂತ ಸುವರ್ಣರವರನ್ನು ಕುಳ್ಳಿರಿಸಿಕೊಂಡು ಉಡುಪಿಯಿಂದ ಪಲಿಮಾರು ಕಡೆಗೆ ಬರುತ್ತಾ 14:30 ಗಂಟೆಗೆ ನಡ್ಸಾಲು ಗ್ರಾಮದ ಕಲ್ಸಂಕ ರಾಷ್ಟೀಯ ಹೆದ್ದಾರಿ 66 ರಲ್ಲಿ ತಲುಪುವಾ ಆರೋಪಿ ಕೆಎ 25 ಡಿ 2350 ನೇ ಲಾರಿಯ ಚಾಲಕ ಮಂಜು ಎಂಬಾತನು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಲಾರಿಯನ್ನು ಅತಿವೇಗ ಹಾಗೂ ದುಡುಕುತನದಿಂದ ಚಲಾಯಿಸಿ ರಸ್ತೆಯ ತೀರಾ ಎಡಬದಿಯಲ್ಲಿ ಹೋಗುತ್ತಿದ್ದ ದಯಾನಂದರವರ ಕೆಎ 20 ಸಿ 212 ನೇ ರಿಕ್ಷಾಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಸುತ್ತಿದ್ದ ಜಯಲಕ್ಮಿ ರವ ಹೊಟ್ಟೆಗೆ ನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ದಯಾನಂದರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2013  ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: