Wednesday, April 10, 2013

Daily Crimes Reported as On 10/04/2013 at 19:30 Hrs


ಅಪಘಾತ ಪ್ರಕರಣಗಳು
  • ಗಂಗೊಳ್ಳಿ: ದಿನಾಂಕ 10/04/2013ರಂದು ಸುಮಾರು 1:00ಗಂಟೆಗೆ ಮೋಹನ ಖಾರ್ವಿ ತಂದೆ ದೇವತ ಖಾರ್ವಿ ವಾಸ: ದೊಡ್ಡಹಿತ್ಲು ಬಂದರ್‌ ರಸ್ತೆ ಗಂಗೊಳ್ಳಿ ಗ್ರಾಮರವರು ಮತ್ತು ಆಸ್ಲಾಂ ಎಂಬುವರು ಮರವಂತೆ ಕಡೆಯಿಂದ ಗಂಗೊಳ್ಳಿ ಕಡೆಗೆ ತಮ್ಮ ಮೋಟಾರ್ ಸೈಕಲ್‌ನಲ್ಲಿ ರಾಷ್ಟೀಯ ಹೆದ್ದಾರಿ  66ರಲ್ಲಿ ತ್ರಾಸಿ ಅನುರಾಧ ವೈನ್ಸ್‌ ಹತ್ತಿರ ಬರುತ್ತಿರುವಾಗ ತ್ರಾಸಿ ಕಡೆಯಿಂದ ಒಂದು ಲಾರಿ ನಂಬರ್‌ ಕೆಎ 23 9901 ನೇದರ ಚಾಲಕ ಸುಭಾನಮುಲ್ಲಾರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತ್ರಾಸಿ ಇಳಿಜಾರಿನಲ್ಲಿ ಬ್ರೇಕ್‌ ಹಾಕಿದ ಪರಿಣಾಮ ವಾಹನವು ಸ್ಕಿಡ್‌ ಆಗಿ ರಸ್ತೆ ಮೇಲೆ ಲಾರಿಯ ಎಲ್ಲಾ ಟಯರ್‌ಗಳು ಮೇಲ್ಮುಖವಾಗಿ ಬಿದ್ದಿದ್ದು ಲಾರಿ ಎದುರಿನ ಬಾಗ ಮತ್ತು ಟ್ರೈಲರ್‌ ಬಾಗ ಜಖಂ ಗೊಂಡಿರುತ್ತದೆ ಲಾರಿಯ ಚಾಲಕ ಮತ್ತು ಕ್ಲೀನರ್‌‌ ಲಾರಿಯಿಂದ ಹೊರಗೆ ಬಂದಿದ್ದು ಚಾಲಕನ ತಲೆಗೆ ಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ ಎಂಬುದಾಗಿ ಮೋಹನ ಖಾರ್ವಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2013  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 09/04/2013 ರಂದು ಬೆಳಗ್ಗೆ 8:00 ಗಂಟೆಗೆ ಜೋನ್ ಡಿ ಅಲ್ಮೇಡಾ, ತಂದೆ ದಿವಂಗತ ಲಾರೆನ್ಸ್ ಅಲ್ಮೇಡಾ, ವಾಸ: ಮನೆ ನಂ: 4/50, ಜೋನ್ ವಿಲ್ಲಾ, ಚೇರ್ಕಾಡಿ ಗ್ರಾಮರವರು ತನ್ನ ಮಗನೊಂದಿಗೆ ಕೆಲಸದ ಬಗ್ಗೆ ಕನ್ನಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎ-20-ಇಎ-7068 ನೇ ಮೊಟಾರು ಸೈಕಲ್ ಸವಾರನಾದ ನಾರಾಯಣ ಕುಲಾಲ್ ಎಂಬವರು ತನ್ನ ಮೊಟಾರ್ ಸೈಕಲ್ ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜೋನ್ ಡಿ ಅಲ್ಮೇಡಾ ರವರಿಗೆ ಢಿಕ್ಕಿ ಹೊಡೆದು ಪರಿಣಾಮವಾಗಿ ಅವರ ಬಲ ಕಾಲಿಗೆ ತೀವ್ರತರದ ಜಖಂ ಉಂಟಾಗಿರುವುದಾಗಿದೆ ಎಂಬುದಾಗಿ ಜೋನ್ ಡಿ ಅಲ್ಮೇಡಾರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 155/2013  ಕಲಂ 279.338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
  • ಬ್ರಹ್ಮಾವರ: ಖಾಸಗಿ ದೂರಿನ ಸಾರಾಂಶವೇನೆಂದರೆ ಆರೋಪಿ 1 ನೇಯವರಾದ ಸಿರಿಲ್ ಫೆರ್ನಾಂಡೀಸ್ , ತಂದೆ : ಫೆಲಿಕ್ಸ್ ಫೆರ್ನಾಂಡೀಸ್ , ಕುಮ್ರಗೋಡು ರವರು ಕುಮ್ರಗೋಡು ಗ್ರಾಮದ ಸರ್ವೆ ನಂಬ್ರ 60/4 ಪಿ 4 ರಲ್ಲಿ 0.06 ಸೆಂಟ್ಸ್ ಜಮೀನನ್ನು ಪ್ರಭಾಕರ ಗಾಣಿಗ ತಂದೆ ದಿವಂಗತ ಪುಂಡಲೀಕ ವಾಸ; ಪದ್ಮಶ್ರಿ ಹೌಸ್, ಸುಬ್ರಮಣ್ಣಯ ನಗರ, ಪುತ್ತೂರುರವರಿಗೆ ಕ್ರಯಕ್ಕೆ ಕೊಡುವುದಾಗಿ ರೂಪಾಯಿ 3 ಲಕ್ಷ ಪಡೆದು ಕರಾರು ಪತ್ರ ಮಾಡಿಕೊಟ್ಟು ಸಂಬಂಧ ಪಟ್ಟ ದಾಖಲಾತಿ ತಯಾರಿಸಿದ ಬಳಿಕ ನೊಂದಾಯಿಸಿಕೊಡುವುದಾಗಿ ಹೇಳಿ ಪ್ರಭಾಕರ ಗಾಣಿಗರವರಿಗೆ ಮೋಸ ಮಾಡುವ ಉದ್ದೇಶದಿಂದ ಸದ್ರಿ ಆಸ್ತಿಯನ್ನು ದಿನಾಂಕ 15/11/2012 ರಂದು ಆರೋಪಿ 2ನೇಯವರಾದ ಕೃಷ್ಣಮೂರ್ತಿ ಉಪಾಧ್ಯ ತಂದೆ: ಮಂಜುನಾಥ ಉಪಾಧ್ಯ ವಾಸ ಕುಮ್ರಗೋಡುರವರಿಗೆ ಸಿರಿಲ್ ಫೆರ್ನಾಂಡೀಸ್ ರವರು ಮಾರಾಟ ಮಾಡಿ ಕ್ರಯಸಾಧನ ಮಾಡಿಕೊಟ್ಟಿದ್ದು ಅವರುಗಳು ಪ್ರಭಾಕರ ಗಾಣಿಗ ಮೋಸ ಹಾಗೂ ವಂಚನೆ ಮಾಡಿರುವುದಾಗಿದೆ ಎಂಬುದಾಗಿ ಪ್ರಭಾಕರ ಗಾಣಿಗರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/2013  ಕಲಂ 406.417.420.423. ಜೊತೆಗೆ 34 ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ
  • ಮಲ್ಪೆ: ಶ್ರೀಮತಿ ಗಿರಿಜಾ ಗಾಣಿಗ ಇವರು ಕೆಮ್ಮಣ್ಣುವಿನಲ್ಲಿ ತಮ್ಮ ಮನೆಯಲ್ಲಿ ಒಬ್ಬಂಟಿಗಳಾಗಿ ಜೀವನ ಮಾಡುತ್ತಿದ್ದು, ಇವರ ಮಕ್ಕಳೆಲ್ಲಾ ಬೇರೆ ಬೇರೆ ಸ್ಥಳಗಳಲ್ಲಿ ವಾಸವಿದ್ದು, ಇವರು ಆರೋಗ್ಯ ಸರಿ ಇಲ್ಲದೆ ತುಂಬಾ ನಿಶ್ಯಕ್ತಿಯಿಂದ ಇದ್ದವರು ದಿನಾಂಕ 09/04/2013 ರಂದು ಸಂಜೆ 6.00 ಗಂಟೆಯಿಂದ ದಿನಾಂಕ 10/04/2013 ರಂದು ಬೆಳಿಗ್ಗೆ 07.15 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಮನೆಯಲ್ಲಿ ಅಡುಗೆ ಕೋಣೆಯಲ್ಲಿ ಗೋಡೆಗೆ ಅಳವಡಿಸಿದ ಮರದ ಜಂತಿಗೆ ಹುರಿ ಹಗ್ಗ ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಶ್ರೀ ಆನಂದ ತಂದೆ ದಿವಂಗತ ಟಿ.ನಾಗಪ್ಪ ಗಾಣಿಗ, ವಾಸ: ಕಂಬಳಪರಿ, ಕೆಮ್ಮಣ್ಣು, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಮಲ್ಪೆ  ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 24/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: