Sunday, April 14, 2013

Daily Crime Reports As on 14/04/2013 At 07:00 Hrs

ಮಟ್ಕಾ ಜುಗಾರಿ ಪ್ರಕರಣ

  • ಶಿರ್ವಾ: ದಿನಾಂಕ: 13/04/2013 ರಂದು  18:45 ಗಂಟೆಗೆ ಕುರ್ಕಾಲು ಗ್ರಾಮದ ಶಂಕರಪುರ ಬಸ್ ಸ್ಟಾಪ್  ಹತ್ತಿರ  ಆಪಾದಿತ ವಿಠಲ ದೇವಾಡಿಗ ಪ್ರಾಯ 46 ವರ್ಷ ತಂದೆ ಕರಿಯ ದೇವಾಡಿದಗ ವಾಸ: ಅರಸೀಕಟ್ಟೆ, ಶಂಕರಪುರ ಅಂಚೆ, ಕುರ್ಕಾಲು ಗ್ರಾಮ, ಉಡುಪಿ ತಾಲೂಕು ಈತನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಸ್ವಂತ ಲಾಭಕ್ಕೋಸ್ಕರ ಮಟ್ಕಾ ಎಂಬ ಜುಗಾರಿ ಆಟ ಆಡುತ್ತಿದ್ದು  ಆತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿ ಮಟ್ಕಾ ಅಂಕೆಗಳನ್ನು ಬರೆದ ಚೀಟಿ-1, ಒಂದು ಬಾಲ್ ಪೆನ್ನು -1  ಮತ್ತು ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ ನಗದು ರೂಪಾಯಿ 440/=ನ್ನು ಸ್ವಾಧೀನಪಡಿಸಿಕೊಂಡು ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ43/2013 ಕಲಂ: 78 (iii) ಕೆ ಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 13/04/2013 ರಂದು ಪಿ.ಎಸ್.ಐ ಕುಂದಾಪುರ ರವರು ಇಲಾಖಾ ಜೀಪಿನಲ್ಲಿ ಸಿಬ್ಬಂದಿಯವರೊಂದಿಗೆ ಶಾಸ್ತ್ರಿ ಸರ್ಕಲ್ ಬಳಿ ಗಸ್ತು ಸಂಚರಿಸುತ್ತಿರುವಾಗ ಬಂದ ಮಾಹಿತಿಯಂತೆ 19:30 ಗಂಟೆಗೆ ಕುಂದಾಪುರ ಸಂಗಮ್ ಜಂಕ್ಷನ್ ಬಳಿ ಸಂಗಮ್ ಟಾನ್ಸ್ ಪೋರ್ಟ್ಸ್ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೇಶವ ಖಾರ್ವಿ ತಂದೆ:ನಾಮ ಖಾರ್ವಿ ವಾಸ ಖಾರ್ವಿ ಕೇರಿ ಕಸಬಾ ಗ್ರಾಮ ಕುಂದಾಪುರ ಎಂಬವನ್ನು ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಪಣವಾಗಿ ಸಂಗ್ರಹಿಸುತ್ತಿದ್ದವನನ್ನು ದಸ್ತಗಿರಿ ಮಾಡಿದ್ದು ಅತನ ವಶದಿಂದ ನಗದು ರೂಪಾಯಿ 1025/- ಮಟ್ಕಾ ಚೀಟಿ -01 , ಬಾಲ್ ಪೆನ್ -01 ಸ್ವಾಧೀನಪಡಿಸಿಕೊಂಡಿದ್ದು ಬರೆದ ಮಟ್ಕಾ ಚಿಟಿಯನ್ನು ಕೋಟೇಶ್ವರ ನಿವಾಸಿ ಶಾಂತರಾಮ ಎಂಬವರಿಗೆ ನೀಡುವುದಾಗಿರುತ್ತದೆ. ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 156/2013 ಕಲಂ: 78 (1) (iii) ಕೆ ಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
ಅಪಘಾತ ಪ್ರಕರಣ 
  • ಬೈಂದೂರು: ದಿನಾಂಕ: 13/04/13 ರಂದು ಅಬ್ದುಲ್ ಖಾದಿರ್ ದಾಬಾಪು (59) ತಂದೆ: ದಾಬಾಪು ಕಾದಿರ್ ಮೀರಾನ್ ವಾಸ: ಜಾಮೀಯಾ ಮಸೀದಿ ರೋಡ್ ಯಡ್ತರೆ ಗ್ರಾಮ ಕುಂದಾಪುರ ತಾಲೂಕು ಇವರು  ವಾಕಿಂಗ್ ಬಗ್ಗೆ ಸಂಜೆ ಸಮಯ ಸುಮಾರು 4:00 ಗಂಟೆಗೆ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಹೋಗುತ್ತಿರುವಾಗ್ಗೆ, ಭಟ್ಕಳ ಕಡೆಯಿಂದ ಕೆ.ಎ.20ಇಬಿ1393 ನೇ ನಂಬ್ರದ ಮೋಟಾರು ಸೈಕಲ್ ಸವಾರನು ರಾ ಹೆ 66 ನೇದರ ಎಡಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು, ಆತನ ಹಿಂದಿನಿಂದ ಕೆ.ಎ.42.ಎಫ್.1435 ನೇ ನಂಬ್ರದ  ಕೆಎಸ್.ಆರ್ ಟಿಸಿ ಬಸ್ ಚಾಲಕನು ತನ್ನ ಬಾಬ್ತು ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದು, ಕೆ.ಎ.20ಇಬಿ1393 ನೇ ನಂಬ್ರದ ಮೋಟಾರು ಸೈಕಲ್  ಸವಾರ ಮೌಲಾನಾ ಮಹಮ್ಮದ್ ಜಾಫರ್ ರವರು ಬಲಕ್ಕೆ ತಿರುಗಿ PWD ಕ್ವಾರ್ಟರ್ಸ್  ಕಡೆಗೆ ಹೋಗುವರೇ ಬೈಕ್ ನ ಬಲಬದಿ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸಿದ್ದು ಹಿಂದಿನಿಂದ ಬರುತ್ತಿದ್ದ ಕೆ.ಎ.42.ಎಫ್.1435 ನೇಂಬ್ರದ ಕೆ ಎಸ್ ಆರ್ ಟಿ ಸಿ ಬಸ್ ನ ಚಾಲಕ ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಾ ಹೆ 66 ನೇದರ ಬಲಬದಿಗೆ ಚಲಾಯಿಸಿ, ಮೋಟಾರು ಸೈಕಲ್ ಹಿಂಬದಿಗೆ ಡಿಕ್ಕಿ  ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ್ಗೆ ಮೃತಪಟ್ಟಿದ್ದಾಗಿದೆ. ಬಗ್ಗೆ ಅಬ್ದುಲ್ ಖಾದಿರ್ ದಾಬಾಪು ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 121/2013 ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
  • ಶಂಕರನಾರಾಯಣ: ಆರೋಪಿತ ರತ್ನಾಕರ ಶೆಟ್ಟಿ, ವಾಸ: ಮೈರ್‌ಕೋಡ್‌ ಯಡಮೊಗ್ಗೆ  ಗ್ರಾಮ ಕುಂದಾಪುರ ತಾಲೂಕು ಈತನು ಪಿರ್ಯಾದಿ ಮಂಜಯ್ಯ ಶೆಟ್ಟಿ ತಂದೆ: ದಿ. ಸೂರಪ್ಪ ಶೆಟ್ಟಿ, ವಾಸ: ಮೈರ್‌ಕೋಡ್‌ ಯಡಮೊಗ್ಗೆ  ಗ್ರಾಮ, ಕುಂದಾಪುರ ತಾಲೂಕು ಇವರ ಹೆಂಡತಿ ತಮ್ಮನಾಗಿದ್ದು ಪಿರ್ಯಾದಿದಾರರ ಹೆಂಡತಿ ಮನೆಯ ಜಾಗದ ವಿಚಾರದಲ್ಲಿ ಪಿರ್ಯಾದಿದಾರರಿಗೆ ಮತ್ತು ಆರೋಪಿಗೆ  ತಕರಾರಿರುತ್ತದೆ. ದಿನಾಂಕ 12-04-2013 ರಂದು 16:30 ಗಂಟೆಗೆ  ಆರೋಪಿಯು ಕುಂದಾಪುರ ತಾಲೂಕು ಯಡಮೊಗ್ಗೆ ಗ್ರಾಮದ ಮೈಯಿರ್‌ಕೋಡ್‌ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು ಜಾಗದ ವಿಚಾರದಲ್ಲಿ ತಕರಾರು ತೆಗೆದು ಪಿರ್ಯಾದಿದಾರರನ್ನು ಮತ್ತು ಪಿರ್ಯಾದಿದಾರರ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದು ನಂತರ ದೂಡಿ ನೆಲಕ್ಕೆ ಬಿದ್ದ ಪಿರ್ಯಾದಿದಾರರಿಗೆ ಮರದ ಕೋಲಿನಿಂದ ಹೊಡೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾಗಿದೆ.  ಬಗ್ಗೆ ಮಂಜಯ್ಯ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ 50/13 ಕಲಂ  504 323, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಶಂಕರನಾರಾಯಣ: ಪ್ರಕರಣದ 1 ನೇ ಆರೋಪಿ ಮಂಜಯ್ಯ ಶೆಟ್ಟಿ ವಾಸ:ಮೈರ್‌ಕೋಡ್‌ ಯಡಮೊಗ್ಗೆ  ಗ್ರಾಮ, ಕುಂದಾಪುರ ತಾಲೂಕು,ಉಡುಪಿ ಜಿಲ್ಲೆ ಇವರು ಪಿರ್ಯಾದಿ ರತ್ನಾಕರ ಶೆಟ್ಟಿ, ತಂದೆ: ದಿ. ಸಂಜೀವ ಶೆಟ್ಟಿ, ವಾಸ: ಮೈರ್‌ಕೋಡ್‌  ಯಡಮೊಗ್ಗೆ  ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕನ ಗಂಡನಾಗಿದ್ದು ಪಿರ್ಯಾದಿದಾರರ ಅಕ್ಕ, ಮತ್ತು 1 ನೇ ಆರೋಪಿಗೆ ಹಾಗೂ ಪಿರ್ಯಾದಿದಾರರಿಗೆ  ಮನೆಯ ಜಾಗದ ವಿಚಾರದಲ್ಲಿ  ತಕರಾರಿರುತ್ತದೆ. 1 ನೇ ಆರೋಪಿಯು ಪಿರ್ಯಾದಿದಾರರ ಬಾಬ್ತು ಕುಂದಾಪುರ ತಾಲೂಕು ಯಡಮೊಗ್ಗೆ ಗ್ರಾಮದ ಮೈಯಿರ್‌ಕೋಡ್‌ ಎಂಬಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸದ್ರಿ ಜಾಗದಲ್ಲಿರುವ 3 ತೆಂಗಿನ ಮರಗಳನ್ನು ಕಡಿದು ಪಿರ್ಯಾದಿದಾರರಿಗೆ 10,000 ರೂಪಾಯಿ ನಷ್ಟ ಉಂಟು ಮಾಡಿದ್ದಾಗಿ ಹಾಗೂ ದಿನಾಂಕ 12-04-2013 ರಂದು 16:00 ಗಂಟೆಗೆ  ಇದನ್ನು ಕೇಳಲು ಬಂದ ಪಿರ್ಯಾದಿದಾರರಿಗೆ 1 ಮತ್ತು 2 ನೇ ಆರೋಪಿತರಾದ ಬಾಲಚಂದ್ರ ದರ್ಖಾಸು ಮನೆ, ಯಡಮೊಗ್ಗೆ  ಗ್ರಾಮ, ಕುಂದಾಪುರ ತಾಲೂಕು ಇವರು ಮನೆಯ ಅಂಗಳದಲ್ಲಿ ಸಮಾನ ಉದ್ದೇಶದಿಂದ ತಡೆದು ನಿಲ್ಲಿಸಿದ್ದು 1 ನೇ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ ಮನೆಯ ಒಳಗೆ ಹೋಗಬೇಡ ಎಂದು ಹೇಳಿ ಅವಾಚ್ಯ ಶಬ್ದದಿಂದ ಬೈದು ಇಬ್ಬರೂ ಆರೋಪಿತರು ಪಿರ್ಯಾದಿದಾರರನ್ನು ದೂಡಿದ ಪರಿಣಾಮ ಪಿರ್ಯಾದಿದಾರರ ತಲೆ ಕಲ್ಲುಕಂಬಕ್ಕೆ ಹೊಡೆದು ಪಿರ್ಯಾದಿದಾರರಿಗೆ ತಲೆಗೆ ಒಳ ನೋವು ಉಂಟಾಗಿದ್ದು ಹಾಗೂ  ನಂತರ 1 ನೇ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ  ನೀನು ಇಲ್ಲಿಂದ ಹೋಗದಿದ್ದರೆ ನಿನ್ನನ್ನು ಇಲ್ಲೆ ಮುಗಿಸಿ ಹೂತು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ರತ್ನಾಕರ ಶೆಟ್ಟಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ 51/13 ಕಲಂ  447, 427, 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: