Saturday, April 13, 2013

Daily Crime Reports As on 13/04/2013 At 17:00 Hrs


ಅಪಘಾತ ಪ್ರಕರಣ
  • ಕೋಟ:  ಸುರೇಶ್ ಶೆಟ್ಟಿ, ತಂದೆ: ಬಾಬು ಶೆಟ್ಟಿ ವಾಸ: ಮಾತೃಶ್ರೀ ಅಚಲಾಡಿ ಗ್ರಾಮ ಉಡುಪಿ ತಾಲೂಕು  ಇವರು ಅಚಲಾಡಿ ಗ್ರಾಮದ ಬೊಬ್ಬರ್ಯ ದೇವಸ್ಥಾನದ ಗೆಂಡ ಹಬ್ಬ ಮುಗಿಸಿ ವಾಪಾಸ್ಸು ಮನೆಗೆ ಹೋಗುವರೇ ಅಲ್ಲಿಂದ ನಡೆದುಕೊಂಡು ಹೋಗುತ್ತಾ ಉಡುಪಿ ತಾಲೂಕು ಅಚಲಾಡಿ ಗ್ರಾಮದ ಕ್ರಿಕೆಟ್ ಗ್ರೌಂಡ್ ಬಳಿ ತಲುಪುವಾಗ್ಯೆ ಸಮಯ ಸುಮಾರು 11:30 ಗಂಟೆಗೆ ಆರೋಪಿ ನಾಗರಾಜ ಆಚಾರಿ ಕೆ.ಎ.20 ಕೆ-2513 ನೇ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಅವರು  ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ರಕ್ತಗಾಯವಾಗಿದ್ದಾಗಿದೆ.ಈ ಬಗ್ಗೆ ಸುರೇಶ್ ಶೆಟ್ಟಿ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 117/13 ಕಲಂ 279 338 ಐಪಿಸಿ & 134(ಎ)(ಬಿ) ಐ.ಎಂ.ವಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 12/04/2013 ರಂದು ಸಂಜೆ ಸಮಯ ಸುಮಾರು 05.10 ಗಂಟೆಗೆ ಶೇಖರ ಪೂಜಾರಿ ತಂದೆ: ವೆಂಟ್ಕ ಪೂಜಾರಿ, ವಾಸ: ಸದಿನಮನೆ, ತಾರಾಪತಿ, ಉಪ್ಪುಂದ ಗ್ರಾಮ, ಕುಂದಾಪುರ ತಾಲೂಕು ಇವರು  ತನ್ನ ಬಾಬ್ತು ಮೋಟಾರು ಸೈಕಲ್ ನಲ್ಲಿ ತಾರಾಪತಿಯಿಂದ ಉಪ್ಪುಂದ ಕಡೆಗೆ ಹೋಗುತ್ತಿರುವಾಗ್ಗೆ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ ಮಂಟಪದ ಸಮೀಪ ರಾಹೆ 66 ನೇ ಡಾಮರು ರಸ್ತೆಯಲ್ಲಿ ಲಕ್ಷ್ಮಣ ಪೂಜಾರಿಯವರು ಅವರ ಬಾಬ್ತು ಸೈಕಲ್‌ನಲ್ಲಿ ಉಪ್ಪುಂದ ಕಡೆಯಿಂದ  ಬೈಂದೂರು ಕಡೆಗೆ ರಾಹೆ 66 ನೇ ಡಾಮರು ರಸ್ತೆಯ  ತೀರಾ ಪಶ್ವಿಮಕ್ಕೆ ಮಣ್ಣಿನ ಕಚ್ಚಾರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ್ಗೆ, ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ  ಕೆಎ20-2215 ನೇ ಮೋಟಾರು ಸೈಕಲ್‌ ಸವಾರನು ಮೋಟಾರು ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಾಹೆ 66 ನೇ ಡಾಮರುರಸ್ತೆಯ ಪಶ್ವಿಮ ಬದಿಯ ಮಣ್ಣಿನ ಕಚ್ಚಾರಸ್ತೆಯಲ್ಲಿ ಚಲಾಯಿಸಿ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನಾದ  ಲಕ್ಷ್ಮಣ ಪೂಜಾರಿಯವರಿಗೆ ತಲೆಗೆ ತೀವ್ರ ಸ್ವರೂಪದ ಹಾಗೂ ಕಾಲಿಗೆ ರಕ್ತಗಾಯವಾಗಿದ್ದು ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್‌ನ್ನು ನಿಲ್ಲಿಸದೇ ಸದ್ರಿ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಚಿಕಿತ್ಸೆಯ ಬಗ್ಗೆ ಕುಂದಾಫುರದ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು   ಲಕ್ಷ್ಮಣ ಪೂಜಾರಿಯವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶೇಖರ ಪೂಜಾರಿ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 120/13 ಕಲಂ: 279, 304(ಎ)  ಐಪಿಸಿ ಮತ್ತು 134(ಎ)&(ಬಿ) ಐ.ಎಮ್.ವಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
  • ಅಜೆಕಾರು: ದಿನಾಂಕ 13/04/2013 ರಂದು ಬೆಳಿಗ್ಗೆ 07.30 ಗಂಟೆಗೆ ಶಿರ್ಲಾಲು ಗ್ರಾಮದ ಮಾಣಿಬೆಟ್ಟು ಎಂಬಲ್ಲಿ ಆರೋಪಿ ಉಮೇಶ್ ನಾಯ್ಕ್ ತಂದೆ: ದಿ. ಆಣ್ಣು ನಾಯ್ಕ್,5 ಸೆಂಟ್ಸ್ ಕಾಲೋನಿ, ಶಿರ್ಲಾಲು ಗ್ರಾಮ ಈತನು ಶೇಖರ ನಾಯ್ಕ್ ತಂದೆ: ದಿ. ಆಣ್ಣು ನಾಯ್ಕ್, 5 ಸೆಂಟ್ಸ್ ಕಾಲೋನಿ, ಶಿರ್ಲಾಲು ಗ್ರಾಮ ಇವರಿಗೆ ವೈಯಕ್ತಿಕ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಹಣೆ, ಬಲ ಕೈ, ಎಡ ಕೈಗೆ ಹೊಡೆದು ರಕ್ತ ಗಾಯಗೊಳಿಸಿದ್ದಾಗಿದೆ.ಈ ಬಗ್ಗೆ ಶೇಖರ ನಾಯ್ಕ್ ಇವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 12/13 ಕಲಂ: 504,324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಕೊಲ್ಲೂರು: ದಿನಾಂಕ 09.04.2013 ರಂದು ಸಂಜೆ 06.15 ಗಂಟೆಯ ಸಮಯ ಮುದೂರು ಗ್ರಾಮದ ಉದಯನಗರ ಎಂಬಲ್ಲಿ ಫ್ರಾನ್ಸಿಸ್ (45) ತಂದೆ: ದಿ| ಸ್ಕರಿಯ ವಾಸ: ಮಿರಾಂಡ ಎಸ್ಟೇಟ್ ಅಮಾಸೆಬೈಲು ಕುಂದಾಪುರ ಇವರ ಮಗ ಜೆರೊಮ್ಸ್ (16) ಮತ್ತು  ಅನೀಷ್ (16) ಎಂಬುವರು ಉದಯನಗರ ಚರ್ಚಿ ನ ಮಹಡಿಯ ಮೇಲುಗಡೆ ಹೋಗಿ ಸೀಲಿಂಗ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕ ವಾಗಿ ಸೀಲಿಂಗ್ ಮುರಿದು  ಹುಡುಗರಿಬ್ಬರು ಮೇಲಿನಿಂದ ಕೆಳಗೆ ಬಿದ್ದು ಜೆರೊಮ್ಸ್ ಎಂಬುವನಿಗೆ ತಲೆಗೆ ಗಂಭೀರ ಸ್ವರೂಪದ ಗಾಯ, ಅನೀಷ್ ಎಂಬುವನ ಎರಡು ಕಾಲುಗಳಿಗೆ, ಎಡ ಕೈಗೆ ಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದಲ್ಲಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜೆರೊಮ್ಸ್ ಎಂಬುವನನ್ನು ಮಣಿಪಾಲ ಕೆ.ಎಂ.ಸಿ ದಾಖಲಿಸಿದ್ದು ಸದ್ರಿಯವನು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 13.04.2013 ರಂದು ರಾತ್ರಿ 01.00 ಗಂಟೆಗೆ ಆಸ್ಪತ್ರೆ ಯಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಫ್ರಾನ್ಸಿಸ್ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 02/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ಲಿಂಗಪ್ಪ ಗೌಡ (56) ತಂದೆ: ಐತಪ್ಪ ಗೌಡ ವಾಸ: ನಂದಿಕೂರು ರೈಲ್ವೆ ಸ್ಟೇಷನ್, ಪಲಿಮಾರು  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು  ಕೊಂಕಣ ರೈಲ್ವೆಯಲ್ಲಿ ಟ್ರ್ಯಾಕ್ ಸೇಪ್ಟಿ ಮೇನ್ ಆಗಿ ಕೆಲಸ ಮಾಡುತ್ತಿದ್ದು, ಕಾರ್ನಡು, ಪಂಚಿನಡ್ಕ, ಕೊಲಕ್ಕಾಡಿಯಿಂದ ನಂದಿಕೂರುವರೆಗೆ ರೈಲ್ವೆ ಟ್ರಾಕ್ ನ್ನು ಪರಿಶೀಲಿಸುವ ಕೆಲಸವಾಗಿದ್ದು,  ದಿನಾಂಕ 13.04.2013 ರಂದು ಸಮಯ ಸುಮಾರು 07:00 ಗಂಟೆಗೆ ರೈಲ್ವೆ ಟ್ರಾಕ್ ಪರಿಶೀಲಿಸುತ್ತಿದ್ದಾಗ ಕಿ.ಮಿ. 715/4- 715-5 ರ ಮಧ್ಯೆ ಯುಪಿಸಿಎಲ್  ಮತ್ತು ಬೊಂಬಾಯಿ ರೈಲ್ವೆ ಟ್ರಾಕ್ ಮಧ್ಯೆ ಒಬ್ಬ ಸುಮಾರು 25 ರಿಂಧ 28 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಬಿದ್ದು ಕೊಂಡಿದ್ದು,  ಮೃತದೇಹದ ತಲೆಹಿಂಬದಿ ಹಾಗೂ ಕೈ (ಎಡ) ಸೊಂಟದಲ್ಲಿ ಗಾಯಗಳಾಗಿ ರಕ್ತ ಸೋರುತ್ತಿದ್ದು,  ಈ ವ್ಯಕ್ತಿ ಬೆಳಿಗ್ಗೆ 3:00 ಗಂಟೆಗೆ ಕೇರಳಕ್ಕೆ ಹೋಗುವ ಅಥವಾ ಕೇರಳದಿಂದ ಮುಂಬಯಿಗೆ ಹೋಗುವ ರೈಲಿನ ಬೋಗಿಯಿಂದ ಹೊರಗಡೆ ಎಸೆಯಲ್ಪಟ್ಟು ಜಲ್ಲಿ ಕಲ್ಲಿನ ಮೇಲೆ ಬಿದ್ದು ತೀವ್ರಗಾಯಗೊಂಡು ಮೃತಪಟ್ಟಿರಬಹುದು ಎಂಬಿತ್ಯಾದಿ. ಈ ಬಗ್ಗೆ ಲಿಂಗಪ್ಪ ಗೌಡ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 07/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ 
  • ಮಣಿಪಾಲ:ದಿನಾಂಕ 12.04.2013 ರ 21:00 ರಿಂದ ದಿನಾಂಕ 13.04.2013 ರ ಬೆಳಿಗ್ಗೆ 06:00ರ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋದಾಮು ರಸ್ತೆಯಲ್ಲಿರುವ ಸಂಜೀವ ಭಾಗವತ್‌  ತಂದೆ: ದಿ. ಅನಂತ ಭಾಗವತ್‌ ವಾಸ: ಸೌರಭ, ಇಂದ್ರಾಳಿ ರೈಲ್ವೆ ಗೋಡನ್‌ ರಸ್ತೆ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಬಾಬ್ತು ಸೌರಭ ಮನೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ, ಕಪಾಟಿನಲ್ಲಿಟ್ಟಿದ್ದ ರೂ. 15,000/-  ನಗದು ಹಾಗೂ ಚಿನ್ನಾಭರಣಗಳಾದ ಮೂರುವರೆ ಪವನ್‌ನ ಮುತ್ತಿನ ಸರ, 3 ಪವನ್‌ ಕರಿಮಣಿ ಬಳೆ, ಒಂದು ಪವನ್‌ನ ಡಿಸ್ಕೋ ಸರ, ಒಂದುಕಾಲು ಪವನ್‌ನ ರೋಪ್‌ ಸರ, 8 ಗ್ರಾಂ ತೂಕದ 3 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 2,30,000/- ಆಗಬಹುದು. ಈ ಬಗ್ಗೆ  ಸಂಜೀವ ಭಾಗವತ್‌  ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 72/2013 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: