Saturday, April 13, 2013

Daily Crime Reports As On 13/04/2013 At 07:00 Hrs

ಅಪಘಾತ ಪ್ರಕರಣ:
  • ಉಡುಪಿ ನಗರ:  ಪಿರ್ಯಾದಿ ವಾಮನ ನಾಯಕ (51)ತಂದೆ :ಹರಿಯಪ್ಪ ನಾಯಕ ,ವಾಸ :ಕೆಎಮ್ ಸಿ  ಕ್ವಾಟ್ರಸ್  ಮನೆ ನಂ 208,ಮದವ ನಗರ,ಮಣಿಪಾಲ,ಇವರು  ದಿನಾಂಕ 12.04.2013 ರಂದು ಮದ್ಯಾಹ್ನ 03:30  ಗಂಟೆ ಸಮಯಕ್ಕೆ  ತನ್ನ ದ್ವಿಚಕ್ರ ವಾಹನ ಕೆ ಎ 20 ಇ.ಸಿ 7912 ನೇದಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ನಿಟ್ಟೂರು ಬಳಿಯ ಕೆಎಸ್ ಆರ್ .ಟಿ ಸಿ ಡಿಪೋ ಮುಂಭಾಗ  ರಾ.ಹೆ 66 ರಲ್ಲಿ  ತಲುಪುತ್ತಿರುವಾಗ ಇವರ ಮುಂದುಗಡೆಯಿಂದ ಅಂದರೆ ಸಂತೆಕಟ್ಟೆ ಕಡೆಯಿಂದ  ಕರಾವಳಿ ಜಂಕ್ಷನ್ ಕಡೆಗೆ  ಕೆಎ 20 ಬಿ 7490ನೇ  ನಂಬ್ರ  ಟಾಟಾ ಎಸಿ  ಮಿನಿ ಟೆಂಪೊ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಹಿಂಬದಿಯ ಪಾರ್ಕ್ ಲೈಟ್ ಹಾಕದೆ   ಒಮ್ಮೆಲೆ ಏಕಾ ಏಕಿ  ನಿದಾನಿಸಿ  ರಸ್ತೆಯ ಎಡಬಾಗಕ್ಕೆ ತಿರುಗಿಸಿದ ಪರಿಣಾಮ ಕರಾವಳಿ  ಜಂಕ್ಷನ್ ಕಡೆಗೆ ಸವಾರಿ  ಮಾಡಿಕೊಂಡು ಬರುತ್ತಿದ್ದ  ಪಿರ್ಯಾದುದಾರರ   ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತಲೆಯ ಎಡಬದಿಯ ಹಿಂಬಾಗದಲ್ಲಿ ರಕ್ತಗಾಯವಾಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 199/13 ಕಲಂ 279,337  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹುಡುಗಿ ಕಾಣೆ:

  • ಕುಂದಾಪುರ:ಫಿರ್ಯಾದಿ ಮಹಮ್ಮದ್ ಗೌಸ್ (50), ತಂದೆ: ಸುಲ್ತಾನ್ ಸಾಹೇಬ್, ವಾಸ; ನಾಕುದಾ ಮೊಹಲ್ಲಾ,  ಗಂಗೊಳ್ಳಿ ಗ್ರಾಮ, ಕುಂದಾಫುರ ತಾಲೂಕು ಇವರ ಮಗಳು ಶಕುಫಾ ಎಂಬವಳು ಸುಮಾರು ಒಂದುವರೆ ತಿಂಗಳ ಹಿಂದೆ ಅಜ್ಜಿ ಮನೆಗೆ ಬಂದಿದ್ದವಳು ದಿನಾಂಕ:10/04/2013 ರಂದು 2 ಗಂಟೆ ಸುಮಾರಿಗೆ ಧರಿಸಿದ್ದ ನೈಟಿಯಲ್ಲಿ ಮನೆಯ ಕೋಣೆಯಲ್ಲಿ ಮಲಗಿದ್ದವಳು ಕಾಣೆಯಾಗಿರುತ್ತಾಳೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/13  ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ
  • ಕುಂದಾಪುರ: ಆಪಾದಿತೆ 2 ಕೆಎಸ್ ಬೀಬಿ ಹಾಜಿರಾ ತಂದೆ: ಕೆ.ಎಸ್. ಸಾಹೇಬ್ ರವರು ಫಿರ್ಯಾದಿ ಸಲೀಮ್ (38), ತಂದೆ:ಭಾಷಾ ಸಾಹೇಬ್, ವಾಸ: ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ ಇವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಕುಂದಾಪುರ ನ್ಯಾಯಾಲಯದಲ್ಲಿ ಒಂದು ಸುಳ್ಳು ಫಿರ್ಯಾದಿಯನ್ನು ದಾಖಲಿಸಿದ್ದು, ಸದ್ರಿ ಕೇಸ್ ನಲ್ಲಿ  ದಿನಾಂಕ12/04/2013 ರಂದು ಅವರ ಸಂಬಂದಿಕರು, ಜಾಮೀನುದಾರರು, ಮಾನ್ಯ ನ್ಯಾಯಾಲಯದಲ್ಲಿ ಹಾಜರಿರುತ್ತಾರೆ. ದಿನಾಂಕ:12/04/2013 ರಂದು ಆಪಾದಿತರುಗಳಾದ 1)ಕೆ.ಎಸ್. ಹಸನ್ ಸಾಹೇಬ್ 2) ಕೆಎಸ್ ಬೀಬಿ ಹಾಜಿರಾ ತಂದೆ: ಕೆ.ಎಸ್. ಸಾಹೇಬ್, 3) ಮೋಹಿನ್ ಸಾಹೇಬ್ ತಂದೆ: ಕೆಎಸ್ ಹಸನ್ ಸಾಹೇಬ್ ಮತ್ತು ಇತರ 20 ಜನರು. ಎಲ್ಲರೂ ಶಿರೂರು ಗ್ರಾಮ, ಕುಂದಾಪುರ ತಾಲೂಕು ಗಳು  ಅಕ್ರಮ ಕೂಟ ಸೇರಿಕೊಂಡು ಬಂದು ಕುಂದಾಪುರದ ಮಾನ್ಯ ನ್ಯಾಯಾಲಯ ಸಂಕಿರ್ಣದ ಪ್ರವೇಶ ದ್ವಾರದ ಹತ್ತಿರ ಫಿರ್ಯಾದಿದಾರರನ್ನು ಹಿಡಿದುಕೊಂಡು ಮನ ಬಂದಂತೆ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ಕೆಟ್ಟ ಭಾಷೆಯಿಂದ ಬೈದಿರುತ್ತಾರೆ. ಆಪಾದಿತರ ಪೈಕಿ ಕೆಲವರ ಕೈಗಳಲ್ಲಿ ಚೂರಿಗಳು ಇದ್ದು ಫಿರ್ಯಾದಿದಾರನ್ನು ಚೂರಿಗಳಿಂದ ಇರಿದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 152/13  ಕಲಂ 143, 147, 323, 504, 506 ಜೊತೆಗೆ 149 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: