Friday, April 12, 2013

Daily Crime Reports As On 12/04/2013 At 17:00 Hrs


ಮೋಸ ಪ್ರಕರಣ:
  • ಉಡುಪಿ ನಗರ : ಪಿರ್ಯಾದಿ ಶ್ರೀಮತಿ ನೂರುನ್ನೀಸ ಗಂಡ ಅಬ್ದುಲ್  ಅಝೀಝ ಮೆ ಇಂಡಿಯನ್ ಟ್ರೇಡರ್ಸ್ ಪ್ಲೋಟ್ ನಂಬ್ರ 256 & 257 ಇಂಡಸ್ಟ್ರಿಯಲ್ ಏರಿಯ ಬೈಕಂಪಾಡಿ ಮಂಗಳೂರು. ಇವರು ಇಂಡಿಯನ್ ಟ್ರೇಡರ್ಸ್ ನ ಮಾಲಕಿ ಹಾಗೂ ಕರಾವಳಿ ಟ್ರೇಡರ್ಸ್ ನ ಪಾಲುದಾರರಾಗಿದ್ದು. ಉಡುಪಿ ಸರ್ವೊದಯ ಡಿಸ್ಟಲರಿಗೆ ಬಾಟಲಿ ಸರಬರಾಜು ಮಾಡುತ್ತಿದ್ದು ಶ್ರೀಮತಿ ನೂರುನ್ನೀಸರವರು ಬೇರೆ ಬೇರೆ ಬಾಟಲಿ ವಿತರಕರಿಂದ ಬಾಟಲಿಗಳನ್ನು ಪಡೆದು ಕೊಂಡು ಉಡುಪಿ ಸರ್ವೋದಯ ಡಿಸ್ಟಿಲರಿಗೆ ಬಾಟಲಿಗಳನ್ನು ಸರಾಜರಾಜು ಮಾಡಿ ಕಮಿಷನ್ ಪಡೆದುಕೊಳ್ಳುತ್ತಿದ್ದು, ಸರ್ವೋದಯ ಡಿಸ್ಟಿಲರಿಗೆ ಉಡುಪಿಯಲ್ಲಿ ಮತ್ತು ಉದ್ಯಾವರದಲ್ಲಿ ಬಾಟಲಿಗಳನ್ನು ದಾಸ್ತಾನು ಮಾಡುವ ಗೋದಾಮುಗಳಿರುತ್ತದೆ. ಆರೋಪಿ ಶಿವಕಿರಣ್ ಹೆಗ್ಡೆ (33) ತಾಯಿ: ಶ್ರೀಮತಿ ಮಲ್ಲಿಕ ಹೆಗ್ಡೆ ಬಾರ್ಕೂರು ಉಡುಪಿರವರು  ಸುಮಾರು ವರ್ಷಗಳಿಂದ  ಶ್ರೀಮತಿ ನೂರುನ್ನೀಸರವರ ಸಂಸ್ಥೆಯಲ್ಲಿ ನೌಕರನಾಗಿರುತ್ತಾನೆ. ಆತನು ಸರ್ವೋದಯ ಡಿಸ್ಟಿಲರಿಗೆ ಬಾಟಲಿ ಸರಬರಾಜು ಮಾಡುವ ಕೆಲಸ ಮಾಡಿಕೊಂಡಿದ್ದನು. ಆರೋಪಿ ಶಿವಕಿರಣ್ ಹೆಗ್ಡೆ 2012 ನವೆಂಬರ್ ತಿಂಗಳಿನ ನಂತರ ಕೆಲಸ ಬಿಟ್ಟಿರುತ್ತಾನೆ. 2012 ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಸರ್ವೋದಯ ಡಿಸ್ಟಿಲರಿಯವರು  ಫಿರ್ಯಾದಿದಾರರನ್ನು ಡಿಸ್ಟಿಲರಿಗೆ ಬರುವಂತೆ ಹೇಳಿ ಆರೋಪಿಯು ತಮಗೆ 01/04/12 ರಿಂದ 08/11/12 ರವರೆಗೆ ಸುಮಾರು 15 ಬಾಟಲಿ ಸರಬರಾಜುದಾರರಿಗೆ ಸಂಬಂಧಪಟ್ಟಂತೆ ರೂಪಾಯಿ 3,42,77,383.80 ರೂಪಾಯಿ ಬಿಲ್ಲನ್ನುನೀಡಿದ್ದಾನೆ.ಆದರೆ ಉದ್ಯಾವರ ಗೋದಾಮಿನಲ್ಲಿ ನೋಡಿದಾಗ ಬಾಟಲಿಗಳು ಇರಲಿಲ್ಲ. ಅಲ್ಲದೇ ಕೆಲವು ಸರಬರಾಜುದಾರರು ತಮ್ಮಲ್ಲಿರುವ ನಕಲು ಬಿಲ್ಲನ್ನು ತಂದು ತೋರಿಸಿ ನಾವು ಬಾಟಲಿ ಸರಬರಾಜು ಮಾಡಿದ್ದೇವೆ ಎಂದು ತಿಳಿಸುತ್ತಿದ್ದಾರೆ. ಆದರೆ ಆಪಾದಿತನು ಅಸಲಿ ಬಿಲ್ಲನ್ನು ಡಿಸ್ಟಿಲರಿಗೆ ನೀಡಲಿಲ್ಲ. ಆರೋಪಿಯು ಐಶಾರಾಮದ ಜೀವನ ನಡೆಸುತ್ತಿದ್ದಾನೆ. ಆರೋಪಿಗೆ ಲೋಡುಗಟ್ಟಲೆ ಬಾಟಲಿಗಳ ಅಧಿಕಾರವನ್ನು ನೀಡಿದ್ದು, ಆತನು ಕಾನೂನು ಸಮ್ಮತ ನಿರ್ದೇಶನಗಳನ್ನು ಉಲ್ಲಂಘಿಸಿ ಲೋಡುಗಟ್ಟಲೆ ಬಾಟಲಿಗಳನ್ನು ಸರ್ವೋದಯ ಡಿಸ್ಟಿಲರಿಗೆ ನೀಡದೇ ಅಪ್ರಮಾಣೀಕವಾಗಿ ದುರುಪಯೋಗಪಡಿಸಿ ತನ್ನ ಸ್ವಂತ ಲಾಭಕ್ಕಾಗಿ ವಿಲೇವಾರಿ ಮಾಡಿ ನಂಬಿಕೆ ದ್ರೋಹ ಮಾಡಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 198/13 ಕಲಂ 406,418 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.
  • ಹಿರಿಯಡ್ಕ : ಪಿರ್ಯಾದಿ ಸುನೀಲ್ ಕುಮಾರ್ ಪ್ರಾಯ 39 ವರ್ಷ, ತಂದೆ: ಸುಬ್ಬ, ವಾಸ: 10 ನೇ ಕ್ರಾಸ್, ಲಕ್ಷ್ಮೀನಗರ,  ಕೊಡವೂರು ಅಂಚೆ, ಉಡುಪಿ ತಾಲೂಕು ಇವರ ಬ್ಯಾಂಕಿನಿಂದ 1ನೇ ಅಪಾದಿತ ಸುರೇಶ ಬಾಬು, (43) ತಂದೆ: ಹನುಮಂತಪ್ಪ, ವಾಸ: ವಾರ್ಡರ್, ಸೆಂಟ್ರಲ್ ಜೈಲ್ ಬಳ್ಳಾರಿ  ಇವರು ದಿನಾಂಕ 13.04.2012 ರಂದು ರೂ. 1, 00,000/- ಸಾಲ ಪಡೆದಿದ್ದು ಈ ಸಾಲ ಪಡೆಯುವರೇ 2 ನೇ ಆಪಾದಿತ ಸಿ.ಇ. ಮಹದೇವಪ್ಪ, (35), ತಂದೆ: ಈರಣ್ಣ, ವಾಸ: ವಾರ್ಡರ್, ಜಿಲ್ಲಾ ಕಾರಾಗೃಹ ಹುಬ್ಬಳ್ಳಿ ಇವರು ಜಾಮೀನುದಾರರಾಗಿದ್ದು, ಸಾಲ ಪಡೆದ ಬಳಿಕ ಪಿರ್ಯಾದುದಾರರ ಬ್ಯಾಂಕಿಗೆ ಆಪಾದಿತ 1ನೇರವರು ಸಾಲ ಮರುಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ಪರಿಶೀಲಿಸಿದಾಗ ಆಪಾದಿತರು ಪಿರ್ಯಾದುದಾರರ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ವೇತನ ಧೃಡಪತ್ರದಲ್ಲಿ ಅಧಿಕಾರಿಯವರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿ, ಸದ್ರಿ ನಕಲಿ ದಾಖಲಾತಿಯನ್ನು ನೈಜ ದಾಖಲಾತಿಯೆಂದು ಬ್ಯಾಂಕ್ ಅಧಿಕಾರಿಯವರ ಮುಂದೆ ಹಾಜರುಪಡಿಸಿ, ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2013 ಕಲಂ 417, 419, 420, 422, 423, 463, 464, 465, 468, 471 ಜೊತೆಗೆ 34 ಐ.ಪಿ.ಸಿ. ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.
  • ಹಿರಿಯಡ್ಕ: 1 ನೇ ಆಪಾದಿತ ಗಾಣಗಿ ಮಲ್ಲಿಕಾರ್ಜುನ, (46), ತಂದೆ: ಧೇರಪ್ಪ, ವಾಸ: ವಾರ್ಡರ್ ಜಿಲ್ಲಾ ಕಾರಾಗೃಹ ರಾಯಚೂರು. ಪಿರ್ಯಾದಿ ಸುನೀಲ್ ಕುಮಾರ್ ಪ್ರಾಯ 39 ವರ್ಷ, ತಂದೆ: ಸುಬ್ಬ, ವಾಸ: 10 ನೇ ಕ್ರಾಸ್, ಲಕ್ಷ್ಮೀನಗರ,  ಕೊಡವೂರು ಅಂಚೆ, ಉಡುಪಿ ತಾಲೂಕು ಇವರ  ಬ್ಯಾಂಕಿನಿಂದ ದಿನಾಂಕ 13.04.2012 ರಂದು ರೂ. 1, 00,000/- ಸಾಲ ಪಡೆದಿದ್ದು ಈ ಸಾಲ ಪಡೆಯುವರೇ 2 ನೇ ಆಪಾದಿತ ಉಮೇಶ್ ಆರ್. ದೊಡ್ಡಮನಿ, (42), ತಂದೆ: ರಾಮಣ್ಣ, ವಾಸ: ಜಿಲ್ಲಾ ಕಾರಾಗೃಹ ಶಿವಮೊಗ್ಗ ಇವರು ಜಾಮೀನುದಾರರಾಗಿದ್ದು, ಸಾಲ ಪಡೆದ ಬಳಿಕ ಪಿರ್ಯಾದುದಾರರ ಬ್ಯಾಂಕಿಗೆ ಆಪಾದಿತ 1ನೇರವರು ಸಾಲ ಮರುಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ಪರಿಶೀಲಿಸಿದಾಗ ಆಪಾದಿತರು ಪಿರ್ಯಾದುದಾರರ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ವೇತನ ಧೃಡಪತ್ರದಲ್ಲಿ ಅಧಿಕಾರಿಯವರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿ, ಸದ್ರಿ ನಕಲಿ ದಾಖಲಾತಿಯನ್ನು ನೈಜ ದಾಖಲಾತಿಯೆಂದು ಬ್ಯಾಂಕ್ ಅಧಿಕಾರಿಯವರ ಮುಂದೆ ಹಾಜರುಪಡಿಸಿ, ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ.ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ  ಕ್ರಮಾಂಕ 67/2013 ಕಲಂ 417, 419, 420, 422, 423, 463, 464, 465, 468, 471 ಜೊತೆಗೆ 34 ಐ.ಪಿ.ಸಿ. ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.  
  • ಹಿರಿಯಡ್ಕ: 1 ನೇ ಆಪಾದಿತ 1.ಸಿ.ಇ. ಮಹದೇವಪ್ಪ, (35), ತಂದೆ: ಈರಣ್ಣ, ವಾಸ: ವಾರ್ಡರ್, ಜಿಲ್ಲಾ ಕಾರಾಗೃಹ ಹುಬ್ಬಳ್ಳಿ ಇವರು ಪಿರ್ಯಾದಿ ಸುನೀಲ್ ಕುಮಾರ್ ಪ್ರಾಯ 39 ವರ್ಷ, ತಂದೆ: ಸುಬ್ಬ, ವಾಸ: 10 ನೇ ಕ್ರಾಸ್, ಲಕ್ಷ್ಮೀನಗರ,  ಕೊಡವೂರು ಅಂಚೆ, ಉಡುಪಿ ತಾಲೂಕು ಇವರ ಬ್ಯಾಂಕಿನಿಂದ ದಿನಾಂಕ 22.02.2012 ರಂದು ರೂ. 1, 30,000/- ಸಾಲ ಪಡೆದಿದ್ದು ಈ ಸಾಲ ಪಡೆಯುವರೇ 2 ನೇ ಆಪಾದಿತ ಸುರೇಶ ಬಾಬು, (43) ತಂದೆ: ಹನುಮಂತಪ್ಪ, ವಾಸ: ವಾರ್ಡರ್, ಸೆಂಟ್ರಲ್ ಜೈಲ್ ಬಳ್ಳಾರಿ ಮತ್ತು 3 ನೇ ಆಪಾದಿತ ಕರುಣಾಕರ, (33), ತಂದೆ: ಗೋಪಾಲ ನಾಯ್ಕ, ವಾಸ:ಜಿಲ್ಲಾ ಕಾರಾಗೃಹ ಕಾಜರಗುತ್ತು, ಉಡುಪಿ ಜಿಲ್ಲೆ ಇವರು ಜಾಮೀನುದಾರರಾಗಿದ್ದು, ಸಾಲ ಪಡೆದ ಬಳಿಕ ಪಿರ್ಯಾದುದಾರರ ಬ್ಯಾಂಕಿಗೆ ಆಪಾದಿತ 1ನೇರವರು ಸಾಲ ಮರುಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ಪರಿಶೀಲಿಸಿದಾಗ ಆಪಾದಿತರು ಪಿರ್ಯಾದುದಾರರ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ವೃತನ ಧೃಡಪತ್ರದಲ್ಲಿ ಅಧಿಕಾರಿಯವರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿ, ಸದ್ರಿ ನಕಲಿ ದಾಖಲಾತಿಯನ್ನು ನೈಜ ದಾಖಲಾತಿಯೆಂದು ಬ್ಯಾಂಕ್ ಅಧಿಕಾರಿಯವರ ಮುಂದೆ ಹಾಜರುಪಡಿಸಿ, ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ . ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2013 ಕಲಂ 417, 419, 420, 422, 423, 463, 464, 465, 468, 471 ಜೊತೆಗೆ 34 ಐ.ಪಿ.ಸಿ. ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.  
  • ಹಿರಿಯಡ್ಕ: 1 ನೇ ಆಪಾದಿತ ಉಮೇಶ್ ಆರ್. ದೊಡ್ಡಮನಿ, (42), ತಂದೆ: ರಾಮಣ್ಣ, ವಾಸ: ಜಿಲ್ಲಾ ಕಾರಾಗೃಹ ಶಿವಮೊಗ್ಗ  ಇವರು ಪಿರ್ಯಾದಿ ಸುನೀಲ್ ಕುಮಾರ್ ಪ್ರಾಯ 39 ವರ್ಷ, ತಂದೆ: ಸುಬ್ಬ, ವಾಸ: 10 ನೇ ಕ್ರಾಸ್, ಲಕ್ಷ್ಮೀನಗರ,  ಕೊಡವೂರು ಅಂಚೆ, ಉಡುಪಿ ತಾಲೂಕು ಇವರ ಬ್ಯಾಂಕಿನಿಂದ ದಿನಾಂಕ 13.04.2012 ರಂದು ರೂ. 1,00,000/- ಸಾಲ ಪಡೆದಿದ್ದು ಈ ಸಾಲ ಪಡೆಯುವರೇ 2 ನೇ ಆಪಾದಿತ ಗಾಣಗಿ ಮಲ್ಲಿಕಾರ್ಜುನ, (46), ತಂದೆ: ಧೇರಪ್ಪ, ವಾಸ: ವಾರ್ಡರ್ ಜಿಲ್ಲಾ ಕಾರಾಗೃಹ ರಾಯಚೂರು. ಜಾಮೀನುದಾರರಾಗಿದ್ದು, ಸಾಲ ಪಡೆದ ಬಳಿಕ ಪಿರ್ಯಾದುದಾರರ ಬ್ಯಾಂಕಿಗೆ ಆಪಾದಿತ 1ನೇರವರು ಸಾಲ ಮರುಪಾವತಿಸದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ಪರಿಶೀಲಿಸಿದಾಗ ಆಪಾದಿತರು ಪಿರ್ಯಾದುದಾರರ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ತಮ್ಮ ವೃತನ ಧೃಡಪತ್ರದಲ್ಲಿ ಅಧಿಕಾರಿಯವರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿ, ಸದ್ರಿ ನಕಲಿ ದಾಖಲಾತಿಯನ್ನು ನೈಜ ದಾಖಲಾತಿಯೆಂದು ಬ್ಯಾಂಕ್ ಅಧಿಕಾರಿಯವರ ಮುಂದೆ ಹಾಜರುಪಡಿಸಿ, ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ  ಕ್ರಮಾಂಕ 69/2013 ಕಲಂ 417, 419, 420, 422, 423, 463, 464, 465, 468, 471 ಜೊತೆಗೆ 34 ಐ.ಪಿ.ಸಿ. ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.  

No comments: