Tuesday, April 09, 2013

Daily Crime Reports As On 09/04/2013 At 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ: ಜಯಶ್ರೀ ಗಂಡ ದತ್ತಾರಾಂ ವಾಸ:7 ನೇ ಬ್ಲಾಕ್, ಸೈಟ್ ನಂ. 16, ಕೃಷ್ಣಾಪುರ, ವಿಶ್ವನಾಥ ದೇವಸ್ಥಾನದ ಬಳಿ, ಸುರತ್ಕಲ್, ಮಂಗಳೂರು ತಾಲೂಕು ಎಂಬವರ ಗಂಡನಾದ ದತ್ತಾರಾಂ (51ವರ್ಷ) ರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದವರು ದಿನಾಂಕ 09.04.2013 ರಂದು ಬೆಳಿಗ್ಗೆ 9:30 ಗಂಟೆಗೆ ಪಡುಬಿದ್ರಿ  ಧನ್ಯ ಬಾರ್ ಎದುರು ಗ್ಯಾರೇಜಿನ ಪಕ್ಕದಲ್ಲಿ ಬಿದ್ದು ಕೊಂಡಿದ್ದು, ಬಂದು ನೋಡುವಾಗ ಮೃತ ಪಟ್ಟಿರುವುದಾಗಿದೆ ಈ ಬಗ್ಗೆ ಜಯಶ್ರೀ ರವರು ಮೃತರ ಬಗ್ಗೆ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 06/2013 ಕಲಂ 174 ಸಿ.ಆರ್ ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜುಗಾರಿ ಪ್ರಕರಣ
  • ಕಾಪು: ಶ್ರೀಮತಿ ಅರ್ಚನಾ ಹೆಚ್.ಕೆ. ಪಿ.ಎಸ್.ಐ. ಕಾಪು ಪೊಲೀಸ್ ಠಾಣೆರವರಿಗೆ ಉದ್ಯಾವರ ಗ್ರಾಮದ ಮಠದಂಗಡಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಾರೆ ಎಂಬುವುದಾಗಿ ದೊರೆತ ಖಚಿತ ಮಾಹಿತಿ ಆಧಾರದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜುಗಾರಿ ಆಟವಾಡುತ್ತಿದ್ದ ಆರೋಪಿಯನ್ನು  ವಶಕ್ಕೆ ಪಡೆದು ಆತನು ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ 690/- ರೂ, ಮಟ್ಕಾ ಚೀಟಿ, ಹಾಗೂ ಆಟಕ್ಕೆ  ಬಳಸಿದ ಇತರೆ ಪರಿಕರಗಳನ್ನು ಮುಂದಿನ ಕ್ರಮದ  ಬಗ್ಗೆ ಸ್ವಾದೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 115/13 ಕಲಂ 78(3) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: