Tuesday, April 09, 2013

Daily Crime Reports As On 09/04/2013 At 07:00 Hrs



ಹೆಂಗಸು ಮತ್ತು ಮಗು ಕಾಣೆ ಪ್ರಕರಣ
 

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಲಲಿತಾ ಶೆಟ್ಟಿ (49) ಗಂಡ ಮಹಾಬಲ ಶೆಟ್ಟಿ ವಾಸ ಶ್ರೀ ಧನಲಕ್ಷ್ಮಿ, ಹೊಸ್ಮಾರು ಮಾಳ ಗ್ರಾಮ ಕಾರ್ಕಳ ಇವರ ಮಗಳು ಶ್ರೀಮತಿ. ಆಶಾ (22) ಇವರು ತನ್ನ 1 ½  ವರ್ಷದ ಗಂಡು ಮಗು ವರ್ಷಿತ್ ನೊಂದಿಗೆ ದಿನಾಂಕ 04/04/2013 ರಂದು ಮದ್ಯಾಹ್ನ 13:00 ಗಂಟೆಗೆ ಕಾರ್ಕಳ ತಾಲೂಕು ಕಸಬ ಗ್ರಾಮದ ಕಾರ್ಕಳ ಬಸ್‌ ನಿಲ್ದಾಣದಿಂದ ತನ್ನ ಗಂಡನ ಮನೆಯಾದ ಮುನಿಯಾಲುವಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ತನ್ನ ಗಂಡನ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ  ಲಲಿತಾ ಶೆಟ್ಟಿ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 44/2013 ಕಲಂ ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

        ಕಾಣೆಯಾದವರ ಚಹರೆ
  •  ಶ್ರೀಮತಿ. ಆಶಾ (22) ಗೋಧಿ ಮೈಬಣ್ಣ, ದುಂಡುಮುಖ, ಬಟ್ಟೆ: ಕಪ್ಪುಚುಕ್ಕಿಗಳಿರುವ ಚೂಡಿದಾರ, ಕಪ್ಪು ಶಾಲು 
          ಧರಿಸಿರುತ್ತಾಳೆ, ಕನ್ನಡ, ತುಳು, ಹಿಂದಿ ಮಾತನಾಡುತ್ತಾಳೆ.
  • ವರ್ಷಿತ್ (1 ½ ) ಕಪ್ಪು ಅಂಗಿ, ಕಪ್ಪು ಚಡ್ಡಿ ಧರಿಸಿರುತ್ತಾನೆ, ಕುತ್ತಿಗೆಯಲ್ಲಿ ಕಪ್ಪು ಮಣಿ ಬೆಳ್ಳಿಯ ದೃಷ್ಟಿಸರ ಇರುತ್ತದೆ.

ಜೀವ ಬೆದರಿಕೆ ಪ್ರಕರಣ
  • ಉಡುಪಿ: ದಿನಾಂಕ 13/02/13ರಂದು ಪಿರ್ಯಾದಿದಾರರಾದ ಆಹಮ್ಮದ್‌ ತೌಸೀಪ್‌ (27) ತಂದೆ ಇಸ್ಮಾಯಿಲ್‌ ಉಚ್ಚಬ್ಬ, ವಾಸ ಗುಲಾಮ್‌ ಮೆನ್ಶನ್‌‌, ಕೆನರಾ ಹೌಸ್‌‌ನ ಹತ್ತಿರ, ಪೊಲ್ಯ, ಉಚ್ಚಿಲ, ಬಡಗ್ರಾಮ, ಉಡುಪಿ ಇವರು ಶ್ರೀದೇವಿ ಕಾಂಪ್ಲೆಸ್‌‌ನಲ್ಲಿರುವ ಗೋದಾಮ್‌‌ನಿಂದ ತಾಮ್ರದ ತಂತಿಗಳು ಕಳವಾದ ಬಗ್ಗೆ ದಿನಾಂಕ 01/03/13ರಂದು ಶಿರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಲ್ಲಿ ಶಿರ್ವಾ ಪೊಲೀಸರು ಆರೋಪಿಗಳಾದ ರಹೀಮ್‌, ಇಲಿಯಾಜ್‌ ಮತ್ತು ನಾಸಿಂರವರನ್ನು ಬಂಧಿಸಿ ಅವರಿಂದ ಪಿರ್ಯಾದಿ ಆಹಮ್ಮದ್‌ ತೌಸೀಪ್‌ ರವರ ಗೋದಾಮ್‌‌ನಿಂದ ಕಳವು ಮಾಡಿ 768ಕೆ.ಜಿ ತಾಮ್ರದ ತಂತಿಗಳನ್ನು ಸ್ವಾಧೀನ ಪಡಿಸಿಕೊಂಡು, ಸದ್ರಿ ಸೊತ್ತುಗಳನ್ನು ಸೊತ್ತು ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸದ್ರಿ ಸೊತ್ತುಗಳನ್ನು ಬಿಡಿಸಿಕೊಳ್ಳಲು ಪಿರ್ಯಾದಿ ಆಹಮ್ಮದ್‌ ತೌಸೀಪ್‌ರವರು ದಿನಾಂಕ 06/04/13ರಂದು ಉಡುಪಿ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಹಾಗೂ ಜೆಎಮ್‌ಎಫ್‌‌ಸಿ ನ್ಯಾಯಲಯದಲ್ಲಿ ತನ್ನ ವಕೀಲರ ಮುಖಾಂತರ ಅರ್ಜಿಯನ್ನು ಹಾಕಿದ್ದು, ಸದ್ರಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸದ್ರಿ ಸೊತ್ತುಗಳನ್ನು ಪಿರ್ಯಾದಿ ಆಹಮ್ಮದ್‌ ತೌಸೀಪ್‌ ರವರ ಸ್ವಾಧೀನಕ್ಕೆ ನೀಡಲು ಆದೇಶಿಸಿರುತ್ತದೆ. ನ್ಯಾಯಾಲಯದ ಆದೇಶಕ್ಕನುಸರವಾಗಿ ಪಿರ್ಯಾದಿ ಆಹಮ್ಮದ್‌ ತೌಸೀಪ್‌ ರವರಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸಲು ಸುಮಾರು 11:00ಗಂಟೆಗೆ ನ್ಯಾಯಾಲಯದ ಹೊರಗಡೆ ಅವರಣದಲ್ಲಿ ನಿಂತುಕೊಂಡು, ನ್ಯಾಯಾಲಯ ಆದೇಶ ಮಾಡಿದ ದಾಖಲೆಗಳನ್ನು ವಕೀಲರಿಗೆ ನೀಡಿ, ಅಲ್ಲಿಯೇ ಮರದ ಕೆಳಗೆ ನಿಂತಿದ್ದಾಗ, ಈ ಪ್ರಕರಣದ ಆರೋಪಿಗಳಾದ ರಹೀಮ್‌, ಇಲಿಯಾಸ್‌ ಮತ್ತು ನಾಸಿಂ ಎಂಬವರು ಪಿರ್ಯಾದಿ ಆಹಮ್ಮದ್‌ ತೌಸೀಪ್‌ ರವರ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಬಹಳ ಕಂಪ್ಲೆಂಟು ನೀಡುತ್ತಿಯಾ, ಯಾವ ರೀತಿ ನೀನು ನಿನ್ನ ಸ್ವತ್ತನ್ನು ವಾಪಸ್ಸು ಪಡೆಯುತ್ತಿ, ಅಲ್ಲದೆ ನಾವೇ ಆ ಸೊತ್ತನ್ನು ಕದ್ದಿದ್ದೇವೆ ಎಂದು ನಿರೂಪಿಸುತ್ತೀ, ನೋಡುವಾ ಎಂದು ಹೇಳಿ, ನೀನು ಈ ಕೇಸನ್ನು ಇಲ್ಲಿಗೆ ಬಿಟ್ಟು ಬಿಡು, ಏನಾದರೂ ಮುಂದುವರಿಸಲು ಪ್ರಯತ್ನಿಸಿದೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೊಂಡ ದೂರು ಅರ್ಜಿಯನ್ನು ಸ್ವೀಕರಿಸಿ ಠಾಣಾ ಎನ್‌ಸಿ ನಂ.97/ಪಿಟಿಎನ್‌‌/ಯುಟಿಪಿಎಸ್‌‌/13ರಂತೆ ಸ್ವೀಕರಿಸಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರವವರದಿ ದಾಖಲಿಸಿದ್ದಾಗಿದೆ ಎಂಬುದಾಗಿ ಆಹಮ್ಮದ್‌ ತೌಸೀಪ್‌ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ  190/13 ಕಲಂ 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರರಕಣಗಳು
  • ಕಾರ್ಕಳ: ದಿನಾಂಕ 08/04/2013 ರಂದು ಸಂಜೆ 05:00 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಮುಂಡ್ಕೂರು ಸಚ್ಚೇರಿಪೇಟೆ ಮಾರ್ಗದ ಇಂದಾರು ಬಳಿ ಕೆಎ 12 1426ನೇ ಗೂಡ್ಸ್ ಲಾರಿಯನ್ನು ಅದರ ಚಾಲಕ ವಿಠಲ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಮಗುಚಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಸೇರಿ 4 ಜನರಿಗೆ  ರಕ್ತಗಾಯವಾಗಿದ್ದು ಮತ್ತು ಅಯ್ಯಾಳಿ ಎಂಬುವರು ಸ್ಥಳದಲ್ಲೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ಲ್ಯಾನ್ಸಿ ಡಿ ಕುನ್ಹಾ (53), ತಂದೆ ಜಾನ್ ಡಿ.ಕುನ್ಹಾ, ವಾಸ ಇಂದಾರು ಮನೆ, ಬೆಳ್ಮಣ್ ಗ್ರಾಮ ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 42/2013 ಕಲಂ 279, 337,304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಖೆಯಲ್ಲಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ರವೀಂದ್ರ ಎಸ್ (33) ತಂದೆ  ಬಿ ಗುರುರಾಜ್ ಶೇರಿಗಾರ್ ವಾಸ ದೇವಕಿ ನಿಲಯ ಹಳೆ ವಿಜಯ ಬ್ಯಾಂಕ್ ಹಿಂಬಾಗ ಕುಕ್ಕಿಕಟ್ಟೆ ಇವರು ದಿನಾಂಕ 08/04/2013 ರಂದು ಮದ್ಯಾಹ್ನ ಮನೆಯಿಂದ  ಉಡುಪಿಗೆ ಹೋಗುವಾಗ ಡಯಾನ ಟಾಕೀಸ್ ಬಳಿಯ  ರಿಕ್ಷಾ ನಿಲ್ದಾಣದ ಬಳಿ ಸಂತೋಷ್ ಮತ್ತು ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ನಿಂತು ಕೊಂಡು ಮಾತನಾಡುತ್ತಿರುವಾಗ ಸಮಯ 16:30 ಗಂಟೆಗೆ ಉಡುಪಿ ಬೀಡಿನಗುಡ್ಡೆ ಕಡೆಯಿಂದ ಓರ್ವ ಬೈಕ್ ಸವಾರನು ತನ್ನ ಬಾಬ್ತು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರ ಎಡಬದಿಗೆ ಬಂದು ರಸ್ತೆ ಬದಿಯಲ್ಲಿ  ನಿಂತಿದ್ದ ಪಿರ್ಯಾದಿ  ರವೀಂದ್ರ ಎಸ್  ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ರವೀಂದ್ರ ಎಸ್ ಇವರು  ರಸ್ತೆಗ ಬಿದ್ದು ಎಡಕಾಲಿನ  ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಹಣೆಗೆ ಕನ್ನೆಗೆ ಹಾಗೂ ಬೆನ್ನಿಗೆ ಗುದ್ದಿದ ಜಖಂ ಆಗಿರುತ್ತದೆ. ಪಿರ್ಯಾದಿ ರವೀಂದ್ರ ಎಸ್ ಇವರನ್ನು ಅಲ್ಲಿ ಇದ್ದ ಸಂತೋಷ್ ಮತ್ತು ಸ್ನೇಹಿತರು ರಿಕ್ಷಾದಲ್ಲಿ ಉಡುಪಿಯ  ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸಿಟಿ ಆಸ್ಪತ್ರೆಗೆ ತಂದು ದಾಖಲಿಸಿರುವುದಾಗಿದೆ ಪಿರ್ಯಾದಿ ರವೀಂದ್ರ ಎಸ್  ಇವರಿಗೆ ಡಿಕ್ಕಿ ಹೊಡೆದ ಬೈಕ್ ನಂಬ್ರವನ್ನು ಪಿರ್ಯಾದಿಯ  ಸ್ನೇಹಿತ ಸಂತೋಷ್ ನೋಡಿದ್ದು  KA 20 EC 1182 ಆಗಿರುತ್ತದೆ ಎಂಬುದಾಗಿ ರವೀಂದ್ರ ಎಸ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 191/13 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಬ್ರಹ್ಮಾವರ: ದಿನಾಂಕ 07/04/2013 ರಂದು ರಾತ್ರಿ 8:35 ಗಂಟೆಗೆ ಪಿರ್ಯಾದಿದಾರರಾದ ಆನಂದ ಮಟಪಾಡಿ ತಂದೆ ದಿ. ಚಂದು ವಾಸ ಅರ್ಚನ  ದೇವಬೈಲು ಚಾಂತಾರು ಗ್ರಾಮ ಉಡುಪಿ ತಾಲೂಕು ಇವರ ಮೊಬೈಲ್‌ಗೆ ಬೇರೊಂದು ಮೊಬೈಲ್‌ನಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಪ್ರಮೋದ್ ಮಧ್ವರಾಜ್ ಕಡೆಯವರು ಎಂದು ಹೇಳಿಕೊಂಡು ಪಿರ್ಯಾದಿ ಆನಂದ ಮಟಪಾಡಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಆನಂದ ಮಟಪಾಡಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 151/13 ಕಲಂ 507 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: