Friday, April 26, 2013

Daily Crimes Reported on 26/04/2013 at 17:00 Hrs

ಹಲ್ಲೆ ಪ್ರಕರಣ
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿದಾರರಾದ ಶ್ರೀಮತಿ ಮೇಘನಾ, ಗಂಡ:ಭಾಸ್ಕರ, ವಾಸ: ಶ್ರೀ ಲಕ್ಷ್ಮಿ ಅಂಬಾ ಭವಾನಿ ದೇವಸ್ಥಾನದ ಹತ್ತಿರ ತೆಳ್ಳಾರು, ದುರ್ಗಾ ಗ್ರಾಮರವರು ತನ್ನ ಅತ್ತೆ ಗುಬ್ಬಿ, ಗಂಡನ ತಂಗಿ ಉಷಾ, ಉಷಾಳ ಗಂಡ ಕೃಷ್ಣ ಮತ್ತು ತನ್ನ ಮಗಳೊಂದಿಗೆ ವಾಸವಾಗಿದ್ದು, ಮನೆಯಲ್ಲಿ ಮೇಘನಾ ಹಾಗೂ ಮಗಳು ಪ್ರತ್ಯೇಕ ಅಡುಗೆ ಮಾಡುತ್ತಿದ್ದು, ಮೇಘನಾರವರಿಗೂ ಹಾಗೂ ಉಷಾ, ಕೃಷ್ಣ ಮತ್ತು ಗುಬ್ಬಿಯವರಿಗೆ ವಿನಾಕಾರಣ ಯಾವಾಗಲೂ ಗಲಾಟೆ ಆಗುತ್ತಿದ್ದು, ದಿನಾಂಕ 22/04/2013 ರಂದು ಮೇಘನಾರವರು ಮನೆಯೊಳಗೆ ಅಡುಗೆ ಮಾಡಲು ಒಲೆಗೆ ಊದುವ ಕೊಳವೆಯ ಬಗ್ಗೆ ಉಷಾಳಲ್ಲಿ ಕೇಳಿದ್ದು, ಅವಳು ಕೊಡದೆ ಇದ್ದುದಕ್ಕೆ ಮೇಘನಾರವರು ಹುಡುಕಿ ತೆಗೆದುಕೊಂಡಿದ್ದು, ನಂತರ ಉಷಾಳು ಕೊಳವೆಯನ್ನು ಕೇಳಿದಾಗ ಮೇಘನಾರವರು ಕೊಡದೆ ಇದ್ದು, ಅದೇ ಕೋಪದಿಂದ ಉಷಾಳ ಗಂಡ ಕೃಷ್ಣನು ಮೇಘನಾರವರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಗುದ್ದಿದ ಗಾಯಗೊಳಿಸಿದ್ದು, ಈ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದು,ಹಲ್ಲೆ ನಡೆಸಿದ ಕೃಷ್ಣ ವಾಸ:ಶ್ರೀ ಲಕ್ಷ್ಮಿಅಂಬಾ ಭವಾನಿ ದೇವಸ್ಥಾನದ ಹತ್ತಿರ ತೆಳ್ಳಾರು,ದುರ್ಗಾ ಗ್ರಾಮರವರನ್ನು ಠಾಣೆಗೆ ಕರೆಯಿಸಿ, ಮುಂದಕ್ಕೆ ತನ್ನ ತಂಟೆಗೆ ಬಾರದಂತೆ ಮುಚ್ಚಳಿಕೆ ಬರೆಸಿಕೊಂಡು, ತನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಕೋರಿಕೆ ಎಂಬುದಾಗಿರುತ್ತದೆ. ಸದ್ರಿ ದೂರು ಅಸಂಜ್ಞೆಯ ಅಪರಾಧವಾಗಿರುವುದರಿಂದ ಈ ದಿನ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಮೇಘನಾರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 49/2013 ಕಲಂ 323 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೋಸ ಪ್ರಕರಣ
  • ಉಡುಪಿ ನಗರ:ಪಿರ್ಯಾದಿದಾರರಾದ ಮಮತಾ ಸಾವ್, ಬಿ ಓ ಬಾಕ್ಸ್ 26660, ದೋಹಾ ಕತಾರ್‌ರವರು ಕತಾರ್ ನಲ್ಲಿದ್ದು ಬಿಲಾಯಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ  ಖಾತೆಯನ್ನು ಹೊಂದಿರುತ್ತಾರೆ. ಮಮತಾ ಸಾವ್‌ರವರು ವಿದೇಶಕ್ಕೆ ಹೋಗುವ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಚೆಕ್ ಪುಸ್ತಕ ನೀಡುವಂತೆ ಕೇಳಿದ್ದು. ಮಮತಾ ಸಾವ್‌ರವರು ಖತಾರ್‌ನಲ್ಲಿ ಪೋಸ್ಟ್ ಆಫೀಸ್ ಬಾಕ್ಸ್ ಹೊಂದದೇ ಇದ್ದು, ಭಾರತದಿಂದ ಚೆಕ್ ಪುಸ್ತಕವನ್ನು ಕಳುಹಿಸಿಕೊಡುವಂತೆ ತನ್ನ ಗಂಡನಿಗೆ ಹೇಳಿದ್ದು,ಆರೋಪಿತ ಮಹಮ್ಮದ್ ತಸ್ನೀಮ್‌, ಮಮತಾ ಸಾವ್‌ರವರ ಗಂಡನ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಮತಾ ಸಾವ್‌ರವರ ಸಹೋದರ ಚೆಕ್ ಪುಸ್ತಕವನ್ನು ಆರೋಪಿತ ಮಹಮ್ಮದ್ ತಸ್ನೀಮ್‌ರವರಲ್ಲಿ ವಿದೇಶದಲ್ಲಿರುವ ಮಮತಾ ಸಾವ್‌ರವರಿಗೆ ತಲುಪಿಸುವಂತೆ ನೀಡಿದ್ದು, ಮಮತಾ ಸಾವ್‌ರವರು ದಿನಾಂಕ:07/04/2013 ರಂದು ತನ್ನ ಖಾತೆಯನ್ನು ಪರಿಶೀಲಿಸಿದಾಗ ಆರೋಪಿತ ಸರ್ಪರಾಜ್ ಉಸ್ಮಾನ್ ಸಾಹೇಬ್‌ ಎಂಬವನು ಮಮತಾ ಸಾವ್‌ರವರ ಖಾತೆಯಿಂದ 1,50,000/- ರೂಪಾಯಿ ಹಣ ನಗದೀಕರಿಸಿದ್ದು. ಆರೋಪಿತರು ಮಮತಾ ಸಾವ್‌ರವರ ಸಹಿಯನ್ನು ಪೋರ್ಜರಿ ಮಾಡಿ 1,50,000 /- ರೂಪಾಯಿ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆಯಲ್ಲಿ ನಗದೀಕರಿಸಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಮಮತಾ ಸಾವ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 214/13 ಕಲಂ:406, 468, 471, 420 ಜೊತೆಗೆ 34  ಐ‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: