Friday, April 26, 2013

Daily Crime Reported on 26/04/2013 at 07:00 Hrs

ಹೆಂಗಸು ಕಾಣೆ ಪ್ರಕರಣ
  • ಬೈಂದೂರು: ಕುಂದಾಪುರ ತಾಲೂಕು ಗೋಳಿಹೊಳೆ ಗ್ರಾಮದ ಮೈತೇರಿ ಎಂಬಲ್ಲಿ ವಾಸವಾಗಿರುವ ಫಿರ್ಯಾದಿದಾರರಾದ ವಿಠಲ ಪೂಜಾರಿ (45) ತಂದೆ ಹಾವಳಿ ಪೂಜಾರಿ ಎಂಬವರ ಹೆಂಡತಿ ಶ್ರೀಮತಿ ಪ್ರೇಮಾ @ ತುಂಗಾ ಎಂಬವರು ದಿನಾಂಕ 24/04/2013 ರಂದು ಮಧ್ಯಾಹ್ನ 03:00 ಗಂಟೆಗೆ, ಫಿರ್ಯಾದಿದಾರರ ಮನೆಯ ಹತ್ತಿರದ ಮಾವಿನಮನೆ ಆನಂದರವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದವಳು ಈ ತನಕ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಅವಳ ಪತ್ತೆಯ ಬಗ್ಗೆ ನೆರೆಕೆರೆಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ವಿಠಲ ಪೂಜಾರಿರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2013 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣಗಳು
  • ಕುಂದಾಪುರ: ಫಿರ್ಯಾದಿದಾರರಾದ ರೇವತಿ ಖಾರ್ವಿ(29), ತಂದೆ: ಭಾಸ್ಕರ ಖಾರ್ವಿ, ವಾಸ: ಪ್ರೀತಿ ಲಯಿಮ್ ಶಾಲೆ ಬಳಿ, ಕಸಬ, ಕುಂದಾಪುರ ತಾಲೂಕು ಎಂಬವರ ಅಣ್ಣ ನಾಗರಾಜ ಮತ್ತು ಆತನ ಹೆಂಡತಿರವರು ಫಿರ್ಯಾದಿದಾರರ ತಂದೆಯೊಂದಿಗೆ ಪಾಲಿನ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದು, ಅಂತೆಯೇ ದಿನಾಂಕ 25/04/2013 ರಂದು ಮದ್ಯಾಹ್ನ 15:30 ಗಂಟೆಗೆ ಫಿರ್ಯಾದಿದಾರರು ಅವರ ತಂದೆಯೊಂದಿಗೆ ಸಂಗಂನಲ್ಲಿರುವ ಫಿಶ್ ಲ್ಯಾಂಡ್ ಹೊಟೇಲಿನಲ್ಲಿ ಇರುವಾಗ ಫಿರ್ಯಾದಿದಾರರ  ಅಣ್ಣ ನಾಗರಾಜ  ಮತ್ತು ಅತ್ತಿಗೆ ಅನಿತಾರವರು ಬಂದು ಫಿರ್ಯಾದಿದಾರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮರದ ರೀಪಿನಿಂದ ಫಿರ್ಯಾದಿದಾರರ ಎಡಕೈ, ಬಲಕೈ ಹಾಗೂ ಬೆನ್ನಿಗೆ ಹೊಡೆದು ಕೈಯಿಂದ ದೂಡಿ ಹಾಕಿ ಕಾಲಿನಿಂದ ತುಳಿದಿರುತ್ತಾರೆ. ತಪ್ಪಿಸಲು ಬಂದ ಫಿರ್ಯಾದಿದಾರ ತಂದೆಗೆ ಕೂಡ ಹೊಡೆದು, ಆಸ್ತಿ ನಮ್ಮದು, ನೀವು ಸಂಜೆ ಒಳಗೆ ಸ್ಥಳವನ್ನು ಖಾಲಿ ಮಾಡದೇ ಇದ್ದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ರೇವತಿ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175 /2013 ಕಲಂ 323, 324, 504, 506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ಫಿರ್ಯಾದಿದಾರರಾದ ಕೆ. ನಾಗರಾಜ ಖಾರ್ವಿ (42), ತಂದೆ: ಭಾಸ್ಕರ ಖಾರ್ವಿ, ವಾಸ ಕೋಡ್ ಜೆಡ್ಡು ಹಿತ್ಲು, ಖಾರ್ವಿಕೇರಿ, ಕುಂದಾಪುರ ತಾಲೂಕು ಎಂಬವರಿಗೆ ಮತ್ತು ಅವರ ತಂದೆ ಭಾಸ್ಕರ ಖಾರ್ವಿಯವರಿಗೆ ಅವರ ಜಾಗದ ಪಾಲಿನ ವಿಷಯದಲ್ಲಿ ತಕರಾರು ಇರುತ್ತದೆ. ಫಿರ್ಯಾದಿದಾರರು ಅವರ ತಂದೆಯ ಅನುಮತಿ ಪಡೆದು ಸಂಗಂನಲ್ಲಿ ಸಾಮಿಲ್ಲನ್ನು ನಡೆಸುತ್ತಿರುವುದಾಗಿದೆ. ದಿನಾಂಕ 25/04/2013 ರಂದು 15:15 ಗಂಟೆಗೆ ಫಿರ್ಯಾದಿದಾರರ ತಂದೆ ಭಾಸ್ಕರ ಖಾರ್ವಿ ಹಾಗೂ ಫಿರ್ಯಾದಿದಾರರ ತಂಗಿ ರೇವತಿರವರು ಸಾಮಿಲ್ಲಿಗೆ ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ತಂಗಿ ಪಕ್ಕದಲ್ಲಿದ್ದ ಹೊಟೇಲಿನಿಂದ ಒಂದು ಚೂರಿಯನ್ನು ತಂದು ಫಿರ್ಯಾದಿದಾರರ ಕೈಗೆ ಇರಿದಳು. ನಂತರ ಫಿರ್ಯಾದಿದಾರರ ತಂದೆ ಕೈಯಿಂದ ಹಾಗೂ ಒಂದು ಮರದ ರೀಪಿನಿಂದ ಫಿರ್ಯಾದಿದಾರರ ಬೆನ್ನಿಗೆ ಮತ್ತು ತಲೆಗೆ ಹೊಡೆದಿದ್ದು, ಆಗ ಫಿರ್ಯಾದಿದಾರರು ಬೊಬ್ಬೆ ಹಾಕಿದಾಗ ಫಿರ್ಯಾದಿದಾರ ಹೆಂಡತಿ ಅನಿತಾ ಬಂದು ತಪ್ಪಿಸಿರುತ್ತಾರೆ. ಜಾಗ ಖಾಲಿ ಮಾಡದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬುದಾಗಿ ಕೆ. ನಾಗರಾಜ ಖಾರ್ವಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2013 ಕಲಂ 323, 324, 504, 506 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: