Thursday, April 25, 2013

Daily Crime Reported on 25/04/2013 at 17:00 Hrs

ಕಳವು ಪ್ರಕರಣಗಳು

  • ಮಲ್ಪೆ: ದಿನಾಂಕ 24/04/2013 ರಂದು ಬೆಳಿಗ್ಗೆ  11:00 ಗಂಟೆಯಿಂದ ದಿನಾಂಕ 25/04/2013 ರಂದು  ಬೆಳಿಗ್ಗೆ 7:30  ಗಂಟೆಯ ಮದ್ಯೆ ಪಿರ್ಯಾದಿದಾರರಾದ ಮೊಹಮ್ಮದ್ ಆಸಿಫ್ (25) ತಂದೆ ಅಬ್ದುಲ್ ರಝಾಕ್, ವಾಸ: ಮನೆ ನಂಬ್ರ.15-17/2, ತೊಂದುಬೆಟ್ಟು, ಕೊಡವೂರು ಗ್ರಾಮ, ಉಡುಪಿ ತಾಲೂಕು ಎಂಬವರ ಅಕ್ಕನ ಮೂಡುತೋನ್ಸೆ ಗ್ರಾಮದ ನೇಜಾರಿನಲ್ಲಿ ರುವ ಹೊಸ ಮನೆಯ ಎದುರಿನ ಮರದ ಬಾಗಿಲನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ಹಾನಿಗೈದು ತೆರೆದು ಒಳಗಿನ ಬೆಡ್‌ರೂಮ್ ನ ಕಪಾಟಿನಲ್ಲಿದ್ದ  6 ಪವನ್ ಮಕ್ಕಳ ಚಿನ್ನದ ಆಭರಣಗಳು ಮಕ್ಕಳಿಗೆ ಹಾಕುವ ಚಿನ್ನದ ಕೈಉಂಗುರ -6, 2) ಮಕ್ಕಳು ಹಾಗೂ ದೊಡ್ಡವರು ಉಪಯೋಗಿಸುವ ಚಿನ್ನದ ಕಿವಿ ಓಲೆ- 8 ಜೊತೆ, 3) ಚಿನ್ನದ ಪೆಂಡೆಂಟ್-1, ಮುಂತಾದವುಗಳನ್ನು ಕಳವು ಮಾಡಿದ್ದು, ಕಳವಾದ ಸ್ತತ್ತುಗಳ ಅಂದಾಜು ಮೌಲ್ಯ ರೂಪಾಯಿ  1,10,000/- ಆಗಿರುತ್ತದೆ ಎಂಬುದಾಗಿ ಮೊಹಮ್ಮದ್ ಆಸಿಫ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  71/2013 ಕಲಂ 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   
  • ಮಣಿಪಾಲ:,ದಿನಾಂಕ 25.04.2013  ರಂದು ಬೆಳಿಗ್ಗೆ 08:30  ಗಂಟೆಯಿಂದ 10:15  ಗಂಟೆ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರಾದ  ಪ್ರಸಾದ್‌ (31)  ತಂದೆ: ನಾರಾಯಣ ವಾಸ: ಶ್ರೀರಾಮ್‌ ರೆಸಿಡೆನ್ಸಿ, ಶಾಂಭವಿ ಹಿಂದುಗಡೆ, ಈಶ್ವರ ನಗರ, ಹೆರ್ಗಾ ಗ್ರಾಮ, ಉಡುಪಿ ತಾಲೂಕು ಎಂಬವರ ಮನೆಯ  ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ  ಲೋಕರ್ನಲ್ಲಿಟ್ಟಿದ್ದ ಒಂದು ಹವಳದ ಚಿನ್ನದ ಸರ ಮತ್ತು ಒಂದು ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ  ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ  24,000/- ಆಗಿರುತ್ತದೆ ಎಂಬುದಾಗಿ ಪ್ರಸಾದ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  86/2013 ಕಲಂ 454, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ 25.04.2013 ರಂದು 06:30  ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ದುರ್ಗಾ ಅಟೋ ಗ್ಯಾರೇಜ್ ಬಳಿ ಆರೋಪಿ ಮಾರುತಿ ಓಮ್ನಿ ಕಾರು ನಂಬ್ರ ಕೆ ಎ 17 ಎಂ 1424 ನೇಯದರ ಚಾಲಕ ಮಾರುತಿ ಓಮ್ನಿ ಕಾರನ್ನು ಉಡುಪಿ ಕಡೆಯಿಂದ ಕಾರ್ಕಳದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಜೋಡುರಸ್ತೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಕಿಟ್ಟ ಯಾನೆ ಕೃಷ್ಣ ಶೆಟ್ಟಿ (47) ಎಂಬವರಿಗೆ ಡಿಕ್ಕಿ ಹೊಡೆಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಮಾರುತಿ ಓಮ್ನಿ ಕಾರು ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ ಎಂಬುದಾಗಿ ರಘುನಾಥ ಶೆಟ್ಟಿ ಪ್ರಾಯ 50 ವರ್ಷ, ತಂದೆ ಶ್ಯಾಮ ಶೆಟ್ಟಿ, ವಾಸ ಲಚ್ಚ ನಿವಾಸ, ಅಯ್ಯಪ್ಪನಗರ  ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಎಂಬವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2013 ಕಲಂ 279,304 (ಎ) ಐ.ಪಿ.ಸಿ ಮತ್ತು ಕಲಂ 134(ಎ)& (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: