Thursday, April 25, 2013

Daily Crime Reported on 25/04/2013 at 19:30 Hrs

ಅಪಘಾತ ಪ್ರಕರಣಗಳು

  • ಕಾರ್ಕಳ: ದಿನಾಂಕ 24/04/2013 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ದಿವಾಕರ ಶೆಟ್ಟಿ ತಂದೆ: ವಿಠಲ ಶೆಟ್ಟಿ ವಾಸ: ದಿವಾಕರ ಕಂಪೌಂಡ್, ಎಂಡ್ ಪಾಯಿಂಟ್ ರಸ್ತೆ, ವಿದ್ಯಾರತ್ನ ನಗರ, ಮಣಿಪಾಲ ಎಂಬವರು ತನ್ನ ಮಗಳು ವೈಶಾಲಿ (18) ಯೊಂದಿಗೆ ಮಣಿಪಾಲದಿಂದ ಮಾಸ್ಟರ್ ಹೆಸರಿನ ಬಸ್ ನಂಬ್ರ KA-14-A-2099 ನೇಯದರಲ್ಲಿ ಕಾರ್ಕಳಕ್ಕೆ ಪ್ರಯಾಣಿಸಿಕೊಂಡು ಬಂದಿದ್ದು, ಬಸ್ಸು ಬೆಳಿಗ್ಗೆ 08:40 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಕಸಬ ಗ್ರಾಮದ ಹಳೆ ಬಸ್‌ನಿಲ್ದಾಣಕ್ಕೆ ತಲುಪಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದು ಆ ಸಮಯದಲ್ಲಿ ಫಿರ್ಯಾದಿದಾರರು ತನ್ನ ಮಗಳು ವೈಶಾಲಿಯೊಂದಿಗೆ ಬಸ್‌ನಿಂದ ಇಳಿಯುತ್ತಿದ್ದಾಗ, ಬಸ್ಸಿನ ಚಾಲಕ ಸದಾಶಿವ ಎಂಬಾತನು ಬಸ್ಸನ್ನು ಏಕಾಏಕಿಯಾಗಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್‌ನಿಂದ ಇಳಿಯುತ್ತಿದ್ದ ವೈಶಾಲಿ ಬಸ್ಸಿನ ಮೆಟ್ಟಿಲುಗಳಿಂದ ಕೆಳಗೆ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಆಕೆಯ ಬಲಕಾಲಿಗೆ ಮೂಳೆ ಮುರಿತದ ಜಖಂ ಉಂಟಾಗಿರುತ್ತದೆ. ನಂತರ ಆಕೆಯನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ದಿವಾಕರ ಶೆಟ್ಟಿರವರು ನೀಡಿದ ದೂರಿನಂತೆ  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2013 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 25/04/2013 ರಂದು ಬೆಳಗ್ಗೆ 9:30 ಗಂಟೆಗೆ ಫಿರ್ಯಾದಿದಾರರಾದ ದೇವಕಿ ಮೊಗವೀರ (38), ಗಂಡ: ಭಾಸ್ಕರ ಮೊಗವೀರ, ವಾಸ: ಹಾಳಾಂಡಿ ಮನೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ಬಳ್ಕೂರಿನಿಂದ ಗಂಡ ಭಾಸ್ಕರ ರವರೊಂದಿಗೆ ಮೋಟಾರು ಸೈಕಲ್ ನಂಬ್ರ ಕೆಎ 14 ವೈ 1524ನೇದರಲ್ಲಿ ನೇರಳಕಟ್ಟೆ ವಂಡ್ಸೆ ಮಾರ್ಗವಾಗಿ ಹೋಗುತ್ತಿರುವಾಗ ನೆಂಪು ಹೈಸ್ಕೂಲ್ ಹತ್ತಿರ ಅವರ ಎದುರಿನಿಂದ ಅಂದರೆ ವಂಡ್ಸೆ ಕಡೆಯಿಂದ ನೇರಳಕಟ್ಟೆ ಕಡೆಗೆ ಜೀಪು ನಂಬ್ರ ಕೆಎ 20 ಎಮ್ 7989ನೇದನ್ನು ಅದರ ಚಾಲಕ ರಾಜು ಮೊಗವೀರ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಅವರ ಗಂಡ ಭಾಸ್ಕರರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಬಲಕೈ, ಬಲಭುಜ ಮೂಳೆ ಮುರಿತದ ರಕ್ತ ಗಾಯ, ಗಂಡ ಭಾಸ್ಕರರವರಿಗೆ ತಲೆಗೆ ಕಿವಿಗೆ ತೀವ್ರ ತರಹದ ರಕ್ತ ಗಾಯ  ಮತ್ತು ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಗೊಂಡ ಫಿರ್ಯಾದಿ ಹಾಗೂ ಅವರ ಗಂಡ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದಾಗಿದೆ ಎಂಬುದಾಗಿ ದೇವಕಿ ಮೊಗವೀರ ರವರು ನೀಡಿದ ದೂರಿನಂತೆ  ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 174/2013 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣಗಳು  
  • ಉಡುಪಿ: ದಿನಾಂಕ 24/04/2013 ರಂದು ಪಿರ್ಯಾದಿದಾರರಾದ ಜನಾರ್ಧನ ಪೂಜಾರಿ ತಂದೆ: ದಿ.ವೆಂಕಪ್ಪ ಪೂಜಾರಿ, ವಾಸ:ಪ್ಲಾಟ್‌ ನಂ.ಎ2 ವಿಂಗ್‌‌, ಸ್ಪಂದನ ಆಪಾರ್ಟ್‌ಮೆಂಟ್‌‌, ಸಂತೆಕಟ್ಟೆ, ಉಡುಪಿ ತಾಲೂಕು ಎಂಬವರ ತಾಯಿ ಮನೆಯಲ್ಲಿರುವಾಗ ಸಮಯ ಸಂಜೆ 6:30 ಗಂಟೆಗೆ ಆಪಾದಿತರಾದ ಸದ್ರಿ ಪ್ಲಾಟ್‌ ನ ಅಧ್ಯಕ್ಷನಾದ ಸುಂದರಶೆಟ್ಟಿ, ವಿನ್ಸೆಂಟ್‌ ಹಾಗೂ ಶೆಲ್‌‌ಡನ್‌ ಎಂಬವರು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ತಾಯಿಯ ಬಳಿ ಜನಾರ್ಧನ ಎಲ್ಲಿ, ಪಾರ್ಕಿಂಗ್‌ ಸ್ಥಳದಲ್ಲಿ ವಾಹನವನ್ನು ಸರಿಯಾಗಿ ಪಾರ್ಕ್‌ ಮಾಡಲಿಲ್ಲ. ಅವರ ಹೆಸರಿನಲ್ಲಿ ಫ್ಲಾಟ್‌ ಇಲ್ಲ, ಇನ್ನು ಮುಂದಕ್ಕೆ ಗೇಟ್‌ ದಾಟಿ ಬಂದರೆ ಅವನ ಕಾಲು ಕಡಿಯುತ್ತೇನೆ ಎಂದು ಹೇಳಿ, ಪಿರ್ಯಾದಿದಾರರ ತಾಯಿಯನ್ನು ಕೈಯಿಂದ ದೂಡಿರುತ್ತಾರೆ. ಈ ವಿಚಾರವನ್ನು ಪಿರ್ಯಾದಿದಾರರ ತಾಯಿ ಪೋನ್‌ ಮುಖಾಂತರ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಅದೇ ದಿನ ರಾತ್ರಿ ಪಿರ್ಯಾದಿದಾರರು ಫ್ಲಾಟ್‌‌ಗೆ ಬಂದು ಕಾರನ್ನು ಪಾರ್ಕ್‌ ಮಾಡಿ ಮನೆಗೆ ಹೋಗಿ ವಾಪಸ್ಸು ಕಾರಿನಲ್ಲಿ ಬಿಟ್ಟು ಹೋಗಿದ್ದ ಜೌಷಧಿಯನ್ನು ತೆಗೆದುಕೊಂಡು ಹೋಗಲು ವಾಪಸ್ಸು ರಾತ್ರಿ 11:00 ಗಂಟೆಗೆ ಬಂದಾಗ ಆಪಾದಿತರಾದ ಸುಂದರಶೆಟ್ಟಿ ಮತ್ತು ವಿನ್ಸೆಂಟ್‌ ಎಂಬವರು ಪಿರ್ಯಾದಿದಾರರನ್ನು ಕರೆದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಇಲ್ಲಿ ಬರಬಾರದೆಂದು ಹೇಳಿದರೂ ಇಲ್ಲಿಗೆ ಏಕೆ ಬಂದಿದ್ದಿ ಎಂದು ಹೇಳಿ ಮರದ ರೀಪಿನಿಂದ ಇಬ್ಬರೂ ಸೇರಿ ಹೊಡೆದಿದ್ದು, ಪಿರ್ಯಾದಿದಾರರ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಪಿರ್ಯಾದಿದಾರರ ತಾಯಿ ಹಾಗೂ ಅಣ್ಣನಾದ ಜಯಂತ ಹಾಗೂ ತಮ್ಮ ಪ್ರಶಾಂತನಿಗೂ ಕೈಯಿಂದ ಹೊಡೆದಿರುತ್ತಾರೆ. ನಂತರ ಪಿಕ್ಕಾಸು ಹಿಡಿದುಕೊಂಡು ಬಂದು ನಿಮ್ಮನ್ನೆಲ್ಲರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಗೆ ಆದ ನೋವಿನ ಬಗ್ಗೆ ಜಯಂತ ಹಾಗೂ ಪ್ರಶಾಂತರವರು ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಪಿರ್ಯಾದಿದಾರರು ವಾಸವಾಗಿರುವ ಸ್ಪಂದನ ಅಪಾರ್ಟ್‌ಮೆಂಟ್‌ನ ವಾಹನ ಪಾರ್ಕಿಂಗ್‌‌ ಮಾಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬುದಾಗಿ ಜನಾರ್ಧನ ಪೂಜಾರಿ ರವರು ನೀಡಿದ  ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 210/2013 ಕಲಂ 504, 506, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ಪಿರ್ಯಾದಿದಾರರಾದ ಸುಂದರ ಶೆಟ್ಟಿ ತಂದೆ ನೇಮಣ್ಣ ಶೆಟ್ಟಿ, ವಾಸ:ಎ1 ವಿಂಗ್‌‌, ಫ್ಲಾಟ್‌ ನಂ.401, ಸ್ಪಂದನ ಆಪಾರ್ಟ್‌ಮೆಂಟ್‌‌, ಸಂತೆಕಟ್ಟೆ, ಉಡುಪಿ ತಾಲೂಕು ಎಂಬವರು ಸಂತೆಕಟ್ಟೆ ಸ್ಪಂದನ ಆಪಾರ್ಟ್‌ಮೆಂಟ್‌‌ನ ಒನರ್ಸ್‌‌ ಅಸೋಸಿಯೇಷನ್‌‌ನ ಚುನಾಯಿತ ಅಧ್ಯಕ್ಷರಾಗಿರುತ್ತಾರೆ. ದಿನಾಂಕ 24/04/2013 ರಂದು ಪಿರ್ಯಾದಿದಾರರು ಫ್ಲಾಟ್‌ ನಲ್ಲಿರುವ ಸಮಯ ಆಪಾದಿತರಾದ ಜನಾರ್ಧನ, ಕಮಲ ಹಾಗೂ ಜನಾರ್ಧನನ ತಂಗಿ ಹಾಗೂ ಇತರರು ಪಿರ್ಯಾದಿದಾರರನ್ನು, ವಿನ್ಸೆಂಟ್‌ ಕ್ವಾಡ್ರಸ್‌ ಮತ್ತು ಜೋಸೆಫ್‌ ಸಲ್ದಾನರವರನ್ನು ಬೊಬ್ಬೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಹೊರಗೆ ಬನ್ನಿ ಎಂದು ಕೂಗಾಡುತ್ತಿದ್ದ ವಿಚಾರವನ್ನು ಪಿರ್ಯಾದಿದಾರರು ಪೊಲೀಸ್ ಠಾಣೆಗೆ ದೂರು ನೀಡಿ ವಾಪಸ್ಸು ಆಪಾರ್ಟ್‌ಮೆಂಟ್‌ ನ ಪಾರ್ಕಿಂಗ್‌‌ ಸ್ಥಳದಲ್ಲಿ ರಾತ್ರಿ 11:15 ಗಂಟೆಗೆ ಬಂದಾಗ ಅಪಾದಿತ ಜನಾರ್ಧನ ಸಣ್ಣ ಹಾರೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ವಿನ್ಸೆಂಟ್‌ ಕ್ವಾಡ್ರಸ್‌‌ಗೆ ಹಲ್ಲೆಗೆ ನಡೆಸಲು ಬಂದಾಗ ಅವರು ತಪ್ಪಿಸಿಕೊಂಡಿದ್ದು, ಅಷ್ಟರಲ್ಲೆ ಮಾಯಾ ಕ್ವಾಡ್ರಸ್‌ರವರು ಪ್ಲಾಟ್‌‌ನಿಂದ ಕೆಳಗೆ ಇಳಿಯುತ್ತಿದ್ದಾಗ ಅವರ ಮೇಲೆ ಕೂಡ ಹಲ್ಲೆ ಮಾಡಲು ಮುಂದಾಗಿದ್ದು, ಪಿರ್ಯಾದಿದಾರರು ಹಾಗೂ ವಿನ್ಸೆಂಟ್‌ ಕ್ವಾಡ್ರಸ್‌‌ ಈ ಹಲ್ಲೆಯನ್ನು ತಡೆದಾಗ ಆಪಾದಿತ ಜನಾರ್ಧನ ಯಾರಿಗೋ ಪೋನ್‌ ಮಾಡಿದಾಗ ಆತನ ಅಣ್ಣ ಮತ್ತು ತಮ್ಮ ಅಲ್ಲಿಗೆ ಬಂದು ಅವರೆಲ್ಲರೂ ವಿನ್ಸೆಂಟ್‌ ಕ್ವಾಡ್ರಸ್‌ ಮತ್ತು ಮಾಯ ಕ್ವಾಡ್ರಸ್‌‌ರವರಿಗೆ ಹಲ್ಲೆಯನ್ನು ಮಾಡಿರುತ್ತಾರೆ. ಪಿರ್ಯಾದಿದಾರರು ಗಲಾಟೆಯನ್ನು ಬಿಡಿಸಲು ಹೋದಾಗ ಆಪಾದಿತರೊಂದಿಗೆ ಬಂದಿದ್ದ ಸುರೇಶ ಬಂಗೇರಾ ಹಿಂದಿನಿಂದ ಬಂದು ರಾಡ್‌‌ನಿಂದ ಹೊಡೆದಿರುತ್ತಾರೆ. ಈ ಘಟನೆಯಿಂದ ಮಾಯ ಕ್ವಾಡ್ರಸ್‌‌ರವರ ಕಾಲಿನ ಪಾದದ ಬಳಿ ಊದಿದ ಗಾಯವಾಗಿರುತ್ತದೆ. ಅಪಾದಿತರು ಕೆಎ 20 ಎನ್‌‌ 3572ನೇ ಕಾರಿನಿಂದ ಬಂದು ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಹಲ್ಲೆ ಮಾಡಿರುವುದಾಗಿದೆ. ಪಿರ್ಯಾದಿದಾರರು ಮತ್ತು ಇತರರು ತಮಗಾದ ಗಾಯದ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಪಾರ್ಟ್‌ಮೆಂಟ್‌ನ ವಾಹನ ಪಾರ್ಕಿಂಗ್‌‌ ಮಾಡುವ ವಿಚಾರದಲ್ಲಿನ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬುದಾಗಿ ಸುಂದರ ಶೆಟ್ಟಿ ರವರು ನೀಡಿದ  ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 211/2013 ಕಲಂ 143, 147, 148, 504, 506, 323, 324 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರೈಲ್ವೆ ಟ್ರ್ಯಾಕ್ ಬಳಿ ಗಂಡಸಿನ ಮೃತ ಶರೀರ ಪತ್ತೆ
  • ಕುಂದಾಪುರ:  ಕುಂದಾಪುರ ಕೊಂಕಣ ರೈಲ್ವೆ ಟ್ರ್ಯಾಕ್ ಬಳಿ ದಿನಾಂಕ 25/04/2013 ರಂದು ಬೆಳಿಗ್ಗೆ 01:00 ರಿಂದ 06:00 ಗಂಟೆಯ ಮದ್ಯಾವಧಿಯಲ್ಲಿ ಮೃತ ಪಟ್ಟ ಒಂದು ಅಪರಿಚಿತ ಗಂಡಸಿನ ಮೃತ ಶರೀರವಿರುವುದಾಗಿ ಕುಂದಾಪುರ ಕೊಂಕಣ ರೈಲ್ವೆ ಇಲಾಖೆಯ ರಾತ್ರಿ ಪಾಳಿ ಕರ್ತವ್ಯದ ರಾಘವೇಂದ್ರ ರವರು ವರದಿ ಮಾಡಿರುತ್ತಾರೆ ಎಂಬುದಾಗಿ ಕುಂದಾಪುರ ಕೊಂಕಣ ರೈಲ್ವೆ ಸ್ಟೇಷನ್ ಮಾಸ್ಟರ್ ರವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 25/2013 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಫಿರ್ಯಾದಿದಾರರಾದ ರಮೇಶ್ (34), ತಂದೆ: ಕೃಷ್ಣ ಮೊಗವೀರ, ವಾಸ: ಕಳಿನ ಮನೆ, ಕೊರವಾಡಿ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಎಂಬವರ ಅಣ್ಣ ಗಣೇಶ್ (37) ರವರು ಸುಮಾರು 3 ವರ್ಷಗಳಿಂದ ಮನೆಗೆ ಬಾರದೇ ಎಲ್ಲೆಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಿಪರೀತ ಕುಡಿಯುವ ಚಟ ಹೊಂದಿದ್ದು, ಸಿಕ್ಕಿದಲ್ಲೆಲ್ಲಾ ಮಲಗುತ್ತಿದ್ದರು. ದಿನಾಂಕ 24/04/2013 ರಂದು ಸಂಜೆ 4 ಗಂಟೆಗೆ ಗಣೇಶ ರವರು ಕುಂಭಾಶಿ ಮುಖ ಮಂಟಪದ ಹತ್ತಿರ ಮರದ ಅಡಿಯಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಯಾರೋ ತಿಳಿಸಿದಾಗ ಫಿರ್ಯಾದಿದಾರರು ಅಲ್ಲಗೆ ಹೋಗಿ ನೋಡಿದಾಗ ಆತನ ಮುಖದ ಬಲಬದಿಗೆ ಗಾಯ ಕಂಡು ಬಂದಿದ್ದು, ಅಲ್ಲದೇ ಬಲ ಕೈ ಮುರಿದಿರುತ್ತದೆ. ಅಲ್ಲೆ ಪಕ್ಕದಲ್ಲಿ ಚಪ್ಪಲಿ ಹಾಗೂ ಆತನ ಕಿಸೆಯಿಂದ ನಾಣ್ಯ ಬಿದ್ದಿರುತ್ತದೆ. ಆತನು ವಿಪರೀತ ಸರಾಯಿ ಕುಡಿದು ಅಮಲಿನಲ್ಲಿ ಎಲ್ಲೋ ಬಿದ್ದು ಬಲ ಕೆನ್ನೆಗೆ ಪೆಟ್ಟಾಗಿ ಕೈ ಮುರಿದು ಮೃತಪಟ್ಟಿರುವುದು ಕಂಡು ಬರುತ್ತದೆ. ಆದರೂ ಈತನ ಸಾವಿನ ಬಗ್ಗೆ ಅನುಮಾನ ಇರುವುದರಿಂದ ಶವ ಮಹಜರು ನಡೆಸಿ ಶವವನ್ನು ಬಿಟ್ಟುಕೊಡಬೇಕು ಎಂಬುದಾಗಿ ರಮೇಶ್ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 24/2013 ಕಲಂ 174 (ಸಿ) ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: