Tuesday, April 23, 2013

Daily Crime Reported on 23/04/2013 at 17:00 Hrs


ಅಪಘಾತ ಪ್ರಕರಣಗಳು
  • ಶಂಕರನಾರಾಯಣ: ದಿನಾಂಕ 21/04/2013 ರಂದು ರಾತ್ರಿ ಸುಮಾರು 8:00 ಗಂಟೆಗೆ ಆರೋಪಿ ಪ್ರಭಾಕರ ನಾಯ್ಕ ತಂದೆ ಅಣ್ಣಯ್ಯ ನಾಯ್ಕ ವಾಸ ಕೊಡ್ಗಿ ಐರ್ ಬೈಲ್ ಸಿದ್ದಾಪುರರವರು ತನ್ನ KA20-W-9868 ನೇ ನಂಬ್ರದ ಹಿರೋಹೊಂಡ ಮೋಟರ್ ಸೈಕಲ್‌ನ್ನು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಕೆಳಪೇಟೆ ಎಂಬಲ್ಲಿ ಸಿದ್ದಾಪುರ-ಕಡೆಯಿಂದ ಶಂಕರನಾರಾಯಣ ಕಡೆಗೆ ಡಾಂಬರು ರಸ್ತೆಯಲ್ಲಿ ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯಲ್ಲಿದ್ದ ದನವನ್ನು ನೋಡಿ ಒಮ್ಮೇಲೆ ಬ್ರೇಕ್‌ಹಾಕಿದ ಪರಿಣಾಮ ಬೈಕ್‌ಪಲ್ಟಿಯಾಗಿ ಬೈಕಿನಲ್ಲಿದ್ದ ಸಹಸವಾರ ಶ್ರೀ ದಿನಕರ ನಾಯ್ಕ ತಂದೆ ಅಣ್ಣಯ್ಯ ನಾಯ್ಕ ವಾಸ ಕೊಡ್ಗಿ ಐರ್ ಬೈಲ್ ಸಿದ್ದಾಪುರರವರು ಮತ್ತು ಆರೋಪಿ ಪ್ರಭಾಕರ ನಾಯ್ಕ ತಂದೆ ಅಣ್ಣಯ್ಯ ನಾಯ್ಕ ವಾಸ ಕೊಡ್ಗಿ ಐರ್ ಬೈಲ್ ಸಿದ್ದಾಪುರರವರು ಬೈಕ ಸಮೇತ ರಸ್ತೆಗೆ ಬಿದ್ದು ಶ್ರೀ ದಿನಕರ ನಾಯ್ಕರವರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾಗಿದ್ದು, ಮುಖಕ್ಕೆ, ಎಡಕೈಗೆ ಚರ್ಮ ಸುಲಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿ ಪ್ರಭಾಕರ ನಾಯ್ಕರವರಿಗೆ ಕೈ ಕಾಲುಗಳಿಗೆ ತರಚಿದ ಗಾಯವಾಗಿ ಬೈಕ್‌ ಜಖಂಗೊಂಡಿರುತ್ತದೆ ಎಂಬುದಾಗಿ  ಶ್ರೀ ದಿನಕರ ನಾಯ್ಕರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2013 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 22/04/2013 ರಂದು ಸಂಜೆ 06:40 ಗಂಟೆಗೆ ಮಂಜು ಶೆಟ್ಟಿ ತಂದೆ ದಿವಂಗತ ಕಾಳಪ್ಪ ಶೆಟ್ಟಿ, ವಾಸ: ಮಂಜುಶ್ರೀ ನಿಲಯ, ಕದ್ರಿಗುಡ್ಡೆ ಶೆಟ್ರ ಕಟ್ಟೆ, ಕೆಂಚನೂರು ಗ್ರಾಮ, ಕುಂದಾಫುರ ತಾಲೂಕುರವರು ತನ್ನ ಸೈಕಲ್‌ನಲ್ಲಿ ತಲ್ಲೂರು ಕಡೆಯಿಂದ ಶೆಟ್ರಕಟ್ಟೆ ಕಡೆಗೆ ಹೋಗುತ್ತಾ ಕರ್ಕಿ ಬಸ್‌‌ ನಿಲ್ದಾಣದ ರಸ್ತೆಯ ದಕ್ಷಿಣದ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಆರೋಪಿ KA20EB9539 ನೇ ಮೋಟಾರು ಸೈಕಲ್‌ ಸವಾರ ತನ್ನ ಮೋಟಾರು ಸೈಕಲ್‌‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತಲ್ಲೂರು ಕಡೆಯಿಂದ ಶೇಟ್ಟಕಟ್ಟೆ ಕಡೆಗೆ ಚಲಾಯಿಸಿ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಜು ಶೆಟ್ಟಿರವರು ಸೈಕಲ್‌‌ಗೆ ಸಿಲುಕಿ ರಸ್ತೆಯ ಬದಿಗೆ ಬಿದ್ದ ಪರಿಣಾಮ ಎಡಕಾಲಿಗೆ ಸೊಂಟಕ್ಕೆ ತಲೆಗೆ ರಕ್ತ ಗಾಯವಾಗಿರುವುದಾಗಿದೆ.ಈ ಅಪಘಾತಕ್ಕೆ KA20EB9539ನೇ ಮೋಟಾರು ಸೈಕಲ್‌ ಸವಾರನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಮಂಜು ಶೆಟ್ಟಿ ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 171/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 23/04/2013 ರಂದು ಸಮಯ ಸುಮಾರು ಬೆಳಿಗ್ಗೆ 09:45 ಗಂಟೆಗೆ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ಶಾಸ್ತ್ರಿ ಸರ್ಕಲ್ ಬಳಿ ಪುರಸಭೆ ರಸ್ತೆಯಲ್ಲಿ, KA04-MJ-1008 ನೇ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಮಂಜುನಾಥ ಮಯ್ಯ ಎಂಬವರು ಪಾರಿಜಾತಾ ಸರ್ಕಲ್ ಕಡೆಯಿಂದ ಶಾಸ್ತ್ರಿ ಸರ್ಕಲ್ ಕಡಗೆ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಮಹೇಶ ಪಿ ಹೊರಕೇರಿರವರಿಗೆ ಹಾಗೂ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಅಪಘಾತ ಉಂಟು ಮಾಡುಮಾಡುವ ರೀತಿಯಲ್ಲಿ ವೇಗವಾಗಿ ಹಾಗೂ ದುಡುಕಿನಿಂದ  ಅಡ್ಡಾದಿಡ್ಡಿಯಾಗಿ ಕಾರನ್ನು ಚಲಾಯಿಸಿಕೊಂಡು ಬರುವುದನ್ನು  ಕಂಡು ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ  ನಿಲ್ಲಿಸದೇ ಮೈ  ಮೇಲೆ  ನುಗ್ಗಿಸುವ  ರೀತಿಯಲ್ಲಿ  ಕಾರನ್ನು  ಚಲಾಯಿಸಿ,  ನಿಲ್ಲಿಸದೇ ಹೋಗಿರುವುದಾಗಿದೆ ಎಂಬುದಾಗಿ ಮಹೇಶ   ಪಿ  ಹೊರಕೇರಿ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: