Tuesday, April 23, 2013

Daily Crime Reported on 23/04/2013 at 07:00 Hrs

ಅಪಘಾತ ಪ್ರಕರಣ
  • ಗಂಗೊಳ್ಳಿ: ಪಿರ್ಯಾದುದಾರರಾದ ಶ್ರೀಮತಿ ಸರೋಜ ಪೂಜಾರ್ತಿ (37) ಉಳ್ಳೂರು, ಮೂಡ್ಲಕಟ್ಟೆ ಗ್ರಾಮ ಎಂಬವರು ದಿನಾಂಕ 22/04/2013 ರಂದು ಗಂಡ ಶಂಕರ ಪೂಜಾರಿ (42) ಮಕ್ಕಳಾದ ಸ್ವಪ್ನ (11) ಹಾಗೂ ಸ್ವಯಂ (5) ರವರೊಂದಿಗೆ ಕೆಎ-20-ಬಿ-4172 ನೇ ಒಮಿನಿ ಬಾಡಿಗೆ ಕಾರಿನಲ್ಲಿ ಮೂಡ್ಲಕಟ್ಟೆ ಗ್ರಾಮದ ಉಳ್ಳೂರಿನಿಂದ ಅವರ ಗಂಡನ ಮನೆಯಾದ ಆಲೂರಿಗೆ ಬಂದಿದ್ದು. ಸದ್ರಿ ಕಾರನ್ನು ರವೀಂದ್ರ ಪೂಜಾರಿ ಎಂಬವರು ಚಲಾಯಿಸುತ್ತಿದ್ದು, ಆಲೂರಿನಿಂದ ವಾಪಾಸು ಕುಂದಾಪುರ ಕಡೆಗೆ ಹೋಗುವಾಗ ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ಶ್ರೀಮತಿ ಸುಗುಣ ಶೆಟ್ಟಿ ಮೂರೂರು ಸ್ಮರಣಾರ್ಥ ಬಸ್‌ ನಿಲ್ದಾಣದ ಬಳಿ 14:15 ಗಂಟೆಗೆ ಎದುರಿನಿಂದ ಕೆಎ-20-ಸಿ-3657 ನೇ ಟಿಪ್ಪರ್‌‌ ಚಾಲಕನು ಟಿಪ್ಪರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಒಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಮಿನಿ ಕಾರಿನಲ್ಲಿದ್ದ ಚಾಲಕ ರವೀಂದ್ರ ಪೂಜಾರಿ, ಶಂಕರ ಪೂಜಾರಿ, ಶ್ರಿಮತಿ ಸರೋಜ ಪೂಜಾರ್ತಿ, ಮಕ್ಕಳಾದ ಸ್ವಪ್ನ ಹಾಗೂ ಸ್ವಯಂ ರವರು ಗಂಭೀರ ಗಾಯಗೊಂಡಿದ್ದು, ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಚಾಲಕ ರವೀಂದ್ರ ಪೂಜಾರಿಯವರು ಮೃತಪಟ್ಟಿರುತ್ತಾರೆ. ಪಿರ್ಯಾದುದಾರರ ಗಂಡ ಶಂಕರ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ದಾಖಲಿಸಿದ್ದು. ಪಿರ್ಯಾದುದಾರರಾದ ಶ್ರಿಮತಿ ಸರೋಜ ಪೂಜಾರ್ತಿ, ಮಕ್ಕಳಾದ ಸ್ವಪ್ನ ಹಾಗೂ ಸ್ವಯಂ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಸರೋಜ ಪೂಜಾರ್ತಿರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2013 ಕಲಂ 279, 337, 338, 304 (ಎ) ಐ.ಪಿ.ಸಿ ಮತ್ತು 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಮಣಿಪಾಲ: ದಿನಾಂಕ 23/04/2013 ರಂದು 00:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅನಂತನಗರದ ರೋಯಲ್ ಬಿಲ್ಡಿಂಗ್ ಹತ್ತಿರ ಪಿರ್ಯಾದಿದಾರರಾದ ಸಾಗರ್ ಶೆಟ್ಟಿ (20) ತಂದೆ: ಶಂಕರ ಶೆಟ್ಟಿ ವಾಸ: ಶ್ರೀ ನಿಕೇತನ, ಗುಡ್ಡೆ ಅಂಗಡಿ, ಕಾರ್ಕಳ ತಾಲೂಕು. ಎಂಬವರು ಕೆಎ 20 ಝಡ್ 1431 ನೇ ಟಾಟಾ ಏಸ್ ನಲ್ಲಿ ಕೆಲಸದವರನ್ನು ಇಳಿಸುತ್ತಿರುವಾಗ ಆಪಾದಿತರಾದ 1). ಪ್ರವೀಣ ಪೂಜಾರಿ, ಮಣಿಪಾಲ, 2. ಅಲ್ಫೋನ್ಸ್, ಉಡುಪಿ ಎಂಬವರು ಕಾರು ನಂಬ್ರ ಕೆಎ 20 ಎಂ 5692 ನಿಂದ ಇಳಿದು ಪಿರ್ಯಾದಿದಾರರಿಗೆ ಬದಿಯಲ್ಲಿ ಹೋಗಲಿಕ್ಕೆ ಆಗುವುದಿಲ್ಲವೆ ಎಂದು ಅಂಗಿಯ ಕಾಲರನ್ನು ಹಿಡಿದು ಎಳೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ಸಾಗರ್ ಶೆಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2013 ಕಲಂ 323, 324 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: