Monday, April 22, 2013

Daily Crime Reported on 22/04/2013 at 17:00 Hrsಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 20/04/2013 ರಂದು 20:00 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ,  ಹುಣ್ಸೆ ಕಟ್ಟೆ ಬೊಬ್ಬರ್ಯ ದೇವಸ್ಥಾನ ದ ಬಳಿ ಬೆಟ್ಟೆಗಾರ ನಿವಾಸಿ ಉಮೇಶ ಎಂಬವರು ಸೈಕಲ್ ನಲ್ಲಿ ಬರುತ್ತಿದ್ದಾಗ ಅವರ ಹಿಂದಿನಿಂದ KA 20 X 3555 ನೇ ಮೋಟಾರ್ ಸೈಕಲ್ ಸವಾರನು ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಹಾಗೂ ಮೋಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದು, ಸೈಕಲ್ ಸವಾರ ಉಮೇಶರವರ ಎರಡು ಕಾಲುಗಳಿಗೆ ರಕ್ತ ಗಾಯವಾಗಿದ್ದು, ಮೋಟಾರಸೈಕಲ್ ಸವಾರನಿಗೂ ತರುಚಿದ ಗಾಯವಾಗಿರುತ್ತದೆ ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಚಿನ್ಮಯಿ ಆಸ್ಪ್ರತ್ರಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಅನಿಲ್ ಮೆಂಡನ್ (26) ತಂದೆ ಅಣ್ಣಪ್ಪ ಮೆಂಡನ್ ವಾಸ: ಬಿ ಸಿ ರೋಡ್ ವಡೇರಹೋಬಳಿ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/2013 ಕಲಂ 279, 337 ಐ.ಪಿ.ಸಿ ಮತ್ತು 134 (A)&(B) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 22/04/2013 ರಂದು ಬೆಳಿಗ್ಗೆ 11:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೇಮಿನಾ ಕ್ರಾಸ್ ಬಳಿ  ಕಾರ್ಕಳ - ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕೆ.ಎ-09 3361ನೇ ಅಂಬಾಸಿಡರ್ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಬಾಬು (55) ತಂದೆ: ದಿ ದೂಜ ವಾಸ: ಕಂಗಿಹಿತ್ಲು ದರ್ಖಾಸು ಮೆನ ನಿಟ್ಟೆ  ಗ್ರಾಮ ಕಾರ್ಕಳ ತಾಲೂಕು ಎಂಬವರ ಮಗ ಚಲಾಯಿಸುತಿದ್ದ ಕೆಎ 20 ಇಎ 423 ನೇ  ಮೋಟಾರ್ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್  ರಸ್ತೆಗೆ ಬಿದ್ದು ಅದರಲ್ಲಿ ಸಹ ಸವಾರರಾಗಿ ಕುಳಿತಿದ್ದ  ಸುಕೇಶ ಪರಪ್ಪಾಡಿ ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಎಂಬವರ ತಲೆಗೆ ರಕ್ತಗಾಯವಾಗಿದ್ದು ಸವಾರರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಸಹ ಸವಾರರನ್ನು  ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ವತ್ರೆಗೆ  ದಾಖಲಿಸಿರುವುದಾಗಿದೆ ಎಂಬುದಾಗಿ  ಬಾಬುರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/2013 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜೀವ ಬೆದರಿಕೆ ನೀಡಿದ ಪ್ರಕರಣ
  • ದಿನಾಂಕ  21/04/2013 ರಂದು ಮದ್ಯಾಹ್ನ 11:30 ಗಂಟೆಗೆ ಕುಂದಾಪುರ ತಾಲೂಕು, ಕುಂಭಾಶಿ  ಗ್ರಾಮದ ಪಟೇರ ಮನೆ ಬೆಟ್ಟು ಬಳಿ ಆರೋಪಿಗಳಾದ 1) ಲಕ್ಮ್ಷಿ ಗಾಣಿಗ ಪಟೇರ ಮನೆ ಬೆಟ್ಟು ಬಳಿ ಕುಂಭಾಶಿ  ಗ್ರಾಮ,  ಕುಂದಾಪುರ ತಾಲೂಕು, 2) ರಾಮ ಚಂದ್ರ ಗಾಣಿಗ ಪಟೇರ ಮನೆ ಬೆಟ್ಟು ಬಳಿ ಕುಂಭಾಶಿ  ಗ್ರಾಮ,  ಕುಂದಾಪುರ ತಾಲೂಕು, 3) ಅನುಪಮಾ ಪಟೇರ ಮನೆ ಬೆಟ್ಟು ಬಳಿ ಕುಂಭಾಶಿ  ಗ್ರಾಮ,  ಕುಂದಾಪುರ ತಾಲೂಕು ಎಂಬವರು ಪಿರ್ಯಾದಿದಾರರಾದ ಶ್ರೀಮತಿ ಶಾರದಾ ಮೋಗೇರ್ತಿ ಗಂಡ: ಶಂಕರ ಮೊಗವೀರ ವಾಸ: ಕಿನಾರ ರೋಡ್ ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನು ಹಾಗೂ ಜಲಜಾ ಮೋಗೇರ್ತಿ, ಶಾರಾಧಾ ದೇವಾಡಿಗರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ನೀಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಶಾರದಾ ಮೋಗೇರ್ತಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 168/2013 ಕಲಂ 341, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: