Monday, April 22, 2013

Daily Crime Reported on 22/04/2013 at 07:00 Hrsಅಪಘಾತ ಪ್ರಕರಣಗಳು  
  • ಬೈಂದೂರು: ದಿನಾಂಕ: 21/04/2013 ರಂದು ಸಾಜಿದ ಖಾನ್ (32) ತಂದೆ: ಖಾಸಿಂ ಖಾನ್ ವಾಸ: ಗೌಡಳ್ಳಿ ಗ್ರಾಮ ಶಿರಸಿ ತಾಲೂಕು ಕಾರವಾರ ಜಿಲ್ಲೆ  ಎಂಬವರು ಮಹಮ್ಮದ್ ರವರ ಬೊಲೆರೋ ಮ್ಯಾಕ್ಸಿ ಟ್ರಕ್  ನಂಬ್ರ ಕೆ ಎ 25.ಸಿ.6272 ನೇದನ್ನು ಉಪ್ಪುಂದ ಕಡೆಯಿಂದ ಬಿಜೂರು ಕಡೆಗೆ  ರಾ ಹೆ 66 ನೇದರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದು, ಮುಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಎನ್ ಹೆಚ್ 66 ನೇದರಲ್ಲಿ ಎ ಪಿ 20.ಟಿ.ಎ.8399 ನೇ ನಂಬ್ರದ ಲಾರಿಯನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು, ಸಮಯ ಸುಮಾರು ಮಧ್ಯಾಹ್ನ 1:30 ಗಂಟೆಗೆ ಬಿಜೂರು ಗ್ರಾಮದ ಬಿಜೂರು ಬಸ್ ಸ್ಟಾಪ್ ಬಳಿ ಮುಂದಿನಿಂದ ಹೋಗುತ್ತಿದ್ದ ಲಾರಿಯ ಚಾಲಕನು ಯಾವುದೇ ಸೂಚನೆ ನೀಡದೇ ಒಮ್ಮೇಲೆ ರಾ ಹೆ 66 ನೇದರಲ್ಲಿ ಬ್ರೇಕ್ ಹಾಕಿದ ಪರಿಣಾಮ ಲಾರಿಯ ಹಿಂಬದಿಯಲ್ಲಿ ಮ್ಯಾಕ್ಸಿ ಟ್ರಕ್ ನ್ನು ಚಲಾಯಿಸುತ್ತಿದ್ದ ಸಾಜಿದ ಖಾನ್ ರವರು ಚಾಲನಾ ನಿಯಂತ್ರಣ ತಪ್ಪಿ ಅಪಘಾತ ತಪ್ಪಿಸಲು ಹೋಗಿ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮ್ಯಾಕ್ಸಿ ಟ್ರಕ್ ನ ಬಲಭಾಗ ಹಾಗೂ ಮುಂಭಾಗ ಜಖಂಗೊಂಡಿದ್ದು ಬೇರೆ ಯಾರಿಗೂ ಗಾಯ ನೋವು ಉಂಟಾಗಿರುವುದಿಲ್ಲ. ಈ ಬಗ್ಗೆ  ಸಾಜಿದ ಖಾನ್ ರವರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 133/2013 ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ದಿನಾಂಕ: 21/04/2013 ರಂದು ಸಮಯ ಸುಮಾರು 11:30 ಗಂಟೆಗೆ  ಅಂಬಾಗಿಲು ಭಾರತ್ ಹಂಚು ತಯಾರಿಸುವ ಕಂಪೆನಿಯಲ್ಲಿ ಕೆಲಸ  ಮಾಡಿಕೊಂಡಿರುವ ಸಮಯ  ವಿನಯ ಕುಮಾರ್‌ ಯಾದವ್‌, ತಂದೆ:ಜಗದೀಶ ಯಾದವ್‌, ವಾಸ:ದಾವು ಧಮಮ್‌‌ ಅಂಚೆ,ಧಣ, ಚಂದಾವರ,ಜರ್ಖಾಂಡ್‌‌ ಎಂಬವರ ಪರಿಚಯದ  ರಾಜೇಶ್ ಕುಮಾರ್ ಯಾದವ್  (19)ಇವರು ಎನ್ ಹೆಚ್ 66 ಅಂಬಾಗಿಲು ಭಾರತ್ ಹಂಚು  ಕಾರ್ಖಾನೆ ಯ  ಹತ್ತಿರ ವಿರುವ ಹೋಟೆಲ್ ನಲ್ಲಿ ಕುಡಿಯುವ ನೀರು ತರುವರೇ  ಹೋಗುತ್ತಿರುವ ಸಮಯ  11:30 ಗಂಟೆಗೆ  ಸಂತೆಕಟ್ಟೆ ಕಡೆಯಿಂದ  ಉಡುಪಿ ಕಡೆಗೆ  ಎಂ ಪಿ 09 ಹೆಚ್ ಜಿ 0805 ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಎಡ ಬದಿ  ಮಣ್ಣಿನ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ  ರಾಜೇಶ್ ಕುಮಾರ್ ಯಾದವ್  ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ರಾಜೇಶ್ ಕುಮಾರ್ ಯಾದವ್  ಎಂಬವರು ನೆಲಕ್ಕೆ ಬಿದ್ದು  ಅವರ  ತಲೆಗೆ ಹಾಗೂ ಸೊಂಟಕ್ಕೆ ತೀವೃ ತರಹದ  ರಕ್ತ ಗಾಯವಾಗಿದ್ದು ನಂತರ  ಮಣಿಪಾಲ ಕೆಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದುದಾಗಿದೆ. ಈ ಬಗ್ಗೆ ವಿನಯ ಕುಮಾರ್‌ ಯಾದವ್‌ ರವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 207/2013 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಅಜೆಕಾರು: ದಿನಾಂಕ 21/04/2013 ರಂದು ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಜೆಡ್ಡು ಎಂಬಲ್ಲಿ ಮಂಜುನಾಥ ನಾಯ್ಕ ತಂದೆ: ದಿ. ಕೃಷ್ಣ ನಾಯ್ಕಸಂತೃಪ್ತಿ ಮನೆ, ಹೆರ್ಮುಂಡೆರವರು ತನ್ನ ಮೋಟಾರ್ ಸೈಕಲ್ ನಂಬ್ರ ಕೆ.ಎ 20 ಯು 8987 ನೇದರಲ್ಲಿ ತನ್ನ ಮಗ ಸುನೀಲ್ ರಾಜ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ದೊಂಡರಂಗಡಿ ಕಡೆಯಿಂದ ಅಜೆಕಾರು ಕಡೆಗೆ ಚಲಾಯಿಸಿ ಕೊಂಡು ಬರುತ್ತಿರುವಾಗ ಎದುರಿನಿಂದ ಅಂದರೆ ಅಜೆಕಾರು ಕಡೆಯಿಂದ ದೊಂಡರಂಗಡಿ ಕಡೆಗೆ ಕೆ.ಎ 20 ಪಿ 3959 ನೇ ಕಾರನ್ನು ಅದರ ಚಾಲಕ ರಾಮಕೃಷ್ಣ ಹೆಗ್ಡೆ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ರಸ್ತೆಗೆ ಬಿದ್ದು ಬಲ ಕಾಲು ಮೊಣ ಗಂಟಿನ ಬಳಿ ರಕ್ತ ಗಾಯ ವಾಗಿದ್ದು ಸಹ ಸವಾರ ಸುನೀಲ್ ರಾಜ್ ಎಂಬವರಿಗೆ ಬಲ ಕಾಲಿನ ಪಾದಕ್ಕೆ ಜಜ್ಜಿದ ಗಾಯ ಉಂಟಾಗಿರುವುದಾಗಿದೆ.ಅಪಘಾತದ ಬಗ್ಗೆ ಮಂಜುನಾಥ ನಾಯ್ಕರವರು ಅಜೆಕಾರು ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 17/2013 ಕಲಂ 279,337,338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜೀವ ಬೆದರಿಕೆ ಪ್ರಕರಣ 
  • ಕುಂದಾಪುರ: ದಿನಾಂಕ 21/04/2013 ರಂದು ಬೆಳಿಗ್ಗೆ 10:00 ಗಂಟೆಗೆ ರಾಮಚಂದ್ರ ಗಾಣಿಗ(65) ತಂದೆ;  ಅಚ್ಯುತ ಗಾಣಿಗ ಪಟೇಳರ ಮನೆ ಬೆಟ್ಟು ಹತ್ತಿರ ಕುಂಭಾಶಿ ಗ್ರಾಮ,ಕುಂದಾಪುರ ತಾಲ್ಲೂಕು ಇವರು ಹಾಗೂ ಶ್ರೀಮತಿ ಶಾರದಾ(40) ಗಂಡ; ಶಂಕರ ಮೋಗವೀರ ವಾಸ;ಕಿನಾರ ರಸ್ತೆ, ಕುಂಭಾಶಿ  ಗ್ರಾಮ ಕುಂದಾಪುರ ತಾಲ್ಲೂಕುರವರು ಮನೆಯಲ್ಲಿ ಇರುವಾಗ ಮನೆಗೆ ಬರುವ ದಾರಿಗೆ ಅಡ್ಡಲಾಗಿ ನಾಗ ಬನ ನಿರ್ಮಿಸುತ್ತಿರುವುದು ಯಾಕೆ ಎಂದು ಆಪಾದಿತರಾದ ಜಗದೀಶ ಪಟಳಿ ,ರಾಘವೇಂದ್ರ ಪಟಳಿ ಹಾಗೂ ಯುವರಾಜರವರಲ್ಲಿ ಕೇಳಿದಾಗ,ಆಪಾದಿತರು ರಾಮಚಂದ್ರಗಾಣಿಗರನ್ನು ತಡೆದು  ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಇದು ನಿನ್ನ ಜಾಗ ಅಲ್ಲ ನಾಗ ಬನಕ್ಕೆಬಿಟ್ಟ ಜಾಗ ಇಲ್ಲಿ ಕಾಮಗಾರಿ ನೇಡೆಸಲು ಬಿಡದೆ ಇದ್ದಲ್ಲಿ ನಿನ್ನನು ಹಾಗೂ ನಿಮ್ಮ ಮನೆಯವರನ್ನು ಕೊಲ್ಲದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾಗಿದೆ.ಈ ಬಗ್ಗೆ ರಾಮಚಂದ್ರ ಗಾಣಿಗರವರು ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 168/13 ಕಲಂ 341,504,506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

No comments: