Friday, April 19, 2013

Daily Crime Reported on 19/04/2013 at 07:00 Hrs

ಹಲ್ಲೆ ಪ್ರಕರಣ
  • ಹೆಬ್ರಿ: ದಿನಾಂಕ 18/04/2013 ರಂದು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರಾದ ಲತಾ ಹೆಗ್ಡೆ .ಕೆ (49) ಗಂಡ: ಎಂ. ಹರಿದಾಸ ಹೆಗ್ಡೆ. ವಾಸ: ಮಂಜರ ಬೆಟ್ಟು, ಹೆಬ್ರಿ ಗ್ರಾಮ, ಕಾರ್ಕಳ ತಾಲೂಕು ಎಂಬವರ ಗಂಡನ ಸಹೋದರ ಆರೋಪಿತ ಎಂ.ಉದಯ ಕುಮಾರ ಹೆಗ್ಡೆ, ಮಂಜರಬೆಟ್ಟು, ಹೆಬ್ರಿ ಗ್ರಾಮ ಎಂಬವವರು ಪಿರ್ಯಾದಿದಾರರ ಕಂಪೌಂಡ್ ಒಳಗಡೆ ಬಂದು ಅವಾಚ್ಯ ಶಬ್ಧಗಳಿಂದ ಬೈದು ಮರದ ದೊಣ್ಣೆಯಿಂದ ಹೊಡೆದಿದ್ದು,  ಬಿಡಿಸಲು ಬಂದ ಪಿರ್ಯಾದಿದಾರರ ಗಂಡ ಹರಿದಾಸ ಹೆಗ್ಡೆಯವರಿಗೂ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ. ಅಲ್ಲದೇ ಇನ್ನು ಮುಂದಕ್ಕೆ ನಿಮ್ಮನ್ನು ಬಿಡುವುದಿಲ್ಲ, ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ. ಈ ತಕ್ಷೀರಿಗೆ ಜಾಗದ ತಕರಾರು ಕಾರಣ ಆಗಿರುತ್ತದೆ ಎಂಬುದಾಗಿ ಲತಾ ಹೆಗ್ಡೆ .ಕೆ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2013 ಕಲಂ 447, 504, 324, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ
  • ಗಂಗೊಳ್ಳಿ: ದಿನಾಂಕ 17/04/2013 ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದಿದಾರರಾದ ಪವಿತ್ರ (25) ಗಂಡ ರಾಘವೇಂದ್ರ ಗಾಣಿಗ ವಾಸ: ಉಗ್ರಾಣಿ ಮನೆ ಮೊವಾಡಿ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಎಂಬವರು ಅವರ ತಂಗಿ ಪ್ರತೀಕ್ಷ (21) ಎಂಬವಳೊಂದಿಗೆ ತ್ರಾಸಿಗೆ ಬಂದಿದ್ದು, ಫಿರ್ಯಾದಿದಾರರ ತಂಗಿ ಪ್ರತೀಕ್ಷ  ನಾನು  ತ್ರಾಸಿ ಬಸ್ಸು ನಿಲ್ದಾಣದಲ್ಲಿ ನಿಲ್ಲುತ್ತೇನೆ  ನೀನು ಧರ್ಮಸ್ಧಳ ಸಂಘದ ಹಣ ಕಟ್ಟಿ ಬಾ ಎಂದು ಫಿರ್ಯಾದಿದಾರರಿಗೆ ಹೇಳಿದ್ದು  ಹಣ ಕಟ್ಟಿ ವಾಪಸ್ಸು ತ್ರಾಸಿ ಬಸ್ಸು ನಿಲ್ದಾಣದ ಬಳಿಗೆ ಬಂದು ನೋಡಿದಾಗ ಅಲ್ಲಿ ಫಿರ್ಯಾದಿದಾರರ ತಂಗಿ ಇರಲಿಲ್ಲ, ಅಲ್ಲಿ ಹುಡುಕಾಡಿ ನಂತರ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದು  ಅವರು ಹುಡುಕಾಡಿದಾಗ ಅವಳ ಸುಳಿವು  ಸಿಗಲಿಲ್ಲ ಎಂಬುದಾಗಿ ಪವಿತ್ರ ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2013 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಅಕ್ರಮ ಮದ್ಯ ಮಾರಾಟ – ಇಬ್ಬರ ಬಂಧನ
  • ಶಂಕರನಾರಾಯಣ: ದಿನಾಂಕ 18/04/2013 ರಂದು ಸಂಜೆ 06:50 ಗಂಟೆಗೆ ಶಂಕರನಾರಾಯಣ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶ್ರೀ  ಸಾಯಿನಾಥ ಎಮ್‌ ರವರಿಗೆ ದೊರೆತ ಖಚಿತ ವರ್ತಮಾನದಂತೆ ಠಾಣಾ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಅಜ್ರಿ ಗ್ರಾಮದ ಕಮಲಶಿಲೆಯ ಮಾನಂಜೆ ಸೊಸೈಟಿಯ ಬಳಿ ದಾಳಿ ನಡೆಸಿ ಅಕ್ರಮವಾಗಿ ಮದ್ಯ ತುಂಬಿದ ಬಾಟಲಿಯನ್ನು ಸಾರ್ವಜನಿಕರಿಗೆ ಮಾರುತ್ತಿದ್ದ ಆರೋಪಿಗಳಾದ 1) ನಾಗರಾಜ ಪೂಜಾರಿ (28) ತಂದೆ: ಶೀನ ಪೂಜಾರಿ ವಾಸ: ಕಮಲಶಿಲೆ ಪೇಟೆಯ ಹತ್ತಿರ ಕಮಲಶಿಲೆ ಅಂಚೆ ಆಜ್ರಿ ಗ್ರಾಮ ಕುಂದಾಪುರ ತಾಲೂಕು 2) ನಾರಾಯಣ ಪೂಜಾರಿ (48) ತಂದೆ: ದಿವಂಗತ ಬಡಿಯ ಪೂಜಾರಿ ವಾಸ: ಮುತ್ತಬೇರು, ಕಮಲಶಿಲೆ ಅಂಚೆ, ಆಜ್ರಿ ಗ್ರಾಮ, ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ವಿವಿಧ ಕಂಪೆನಿಯ ಒಟ್ಟು 51 ಮದ್ಯ  ತುಂಬಿದ ಬಾಟಲಿಗಳನ್ನು ವಶಪಡಿಸಿದ್ದು, ಮೌಲ್ಯ 1767.00 ರೂಪಾಯಿ ಆಗಿರುತ್ತದೆ. ಅಲ್ಲದೇ ಸರಾಯಿ ಮಾರಾಟ ಮಾಡಿದ್ದೆನ್ನಲಾದ ನಗದು ಹಣ 3,670/- ನ್ನು ಸ್ವಾಧೀನಪಡಿಸಿಕೊಂಡು ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 53/2013 ಕಲಂ 32,34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ದಿನಾಂಕ 11/04/2013 ರಂದು 15:45 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಹಯಗ್ರೀವ ನಗರದ 6ನೇ ಕ್ರಾಸ್‌ನಲ್ಲಿ ಕಟ್ಟಡ ಕಾಮಗಾರಿ ವೇಳೆ ಮೇಸ್ತ್ರಿ ಕೆಲಸದ ಹೆಲ್ಪರ್‌ ಆಗಿದ್ದ ರಾಜು (32) ತಂದೆ ವಿಠಲ ವಾಸ: ಎಸ್‌.ವಿ.ಎಸ್‌ ಶಾಲೆಯ ಬಳಿ, ಕಟಪಾಡಿ, ಉಡುಪಿ ತಾಲೂಕು ಎಂಬವರು 3ನೇ ಮಹಡಿಯಿಂದ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ಬಿದ್ದವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಿನಾಂಕ 12/04/2013 ರಂದು ದಾಖಲು ಮಾಡಿದ್ದು, ನಂತರ ದಿನಾಂಕ 17/04/2013 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿರುವಾಗ ದಿನಾಂಕ 18/04/2013 ರಂದು ಸಂಜೆ ತನಗೆ ತಲೆ ನೋವಾಗುತ್ತಿದೆ, ದಮ್ಮು ಕಟ್ಟುತಿದೆ, ಕೈಕಾಲು ಎಳೆಯುತ್ತಿದೆ ಎಂದು ಹೇಳಿದವನನ್ನು ಅವರ ಪತ್ನಿ ಗಿರಿಜಾ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕೊಟ್ರೇಶ (36) ತಂದೆ: ದಿ. ಮಲ್ಲಿಕಾರ್ಜುನ ವಾಸ: ದೇವಣ್ಣನವರ ಬಾಡಿಗೆ ಮನೆ, ಎಸ್‌.ವಿ.ಎಸ್‌ ಶಾಲೆಯ ಬಳಿ, ಕಟಪಾಡಿ, ಉಡುಪಿ ತಾಲೂಕು. ಖಾಯಂ ವಿಳಾಸ: ಹೂವಿನ ಹಡಗಲಿ, ಸೋಗಿ ಗ್ರಾಮ ಮತ್ತು ಅಂಚೆ, ಉತ್ತಂಗಿ, ಬಳ್ಳಾರಿ ಜಿಲ್ಲೆ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 16/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: