Thursday, April 18, 2013

Daily Crime Reported on 18/04/2013 at 19:30 Hrs

ಅಪಘಾತ ಪ್ರಕರಣ
  • ಹೆಬ್ರಿ: ದಿನಾಂಕ 18/04/2013 ರಂದು ಪಿರ್ಯಾದಿದಾರರಾದ ಜೋನಿ ತುರ್ತಿಕೆರೆ (50) ತಂದೆ: ಕುರುವಿಲ ವಾಸ ತುರ್ತಿಕೆರೆ  ಫಾರ್ಮ್, ನಂದಾರು, ಅಜೆಕಾರು ಗ್ರಾಮ ಕಾರ್ಕಳ ತಾಲೂಕು ಎಂಬವರು ಕೆಎ.20.ಪಿ.4801 ನೇ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಮುದ್ರಾಡಿಯಿಂದ ಹೆಬ್ರಿ ಕಡೆಗೆ ಹೋಗುತ್ತಿರುವಾಗ ಸಮಯ 11.00 ಗಂಟೆಗೆ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ಗಿಲ್ಲಾಳಿ ಬಸ್ ನಿಲ್ದಾಣದ ಸಮೀಪ ಎದುರಿನಿಂದ ಅಂದರೆ ಹೆಬ್ರಿ ಕಡೆಯಿಂದ ಮುದ್ರಾಡಿ ಕಡೆಗೆ ಕೆಎ.20.ಇಬಿ.3560 ನೇ ಮೋಟಾರ್ ಸೈಕಲನ್ನು ಅದರ ಸವಾರ ಉಮೇಶ್ ಭಟ್ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರ ಕಾರಿನ ಮುಂಭಾಗದ ಬಲಬದಿ ಹಾಗೂ ಆರೋಪಿತನ ಮೋಟಾರ್ ಸೈಕಲ್‌ನ ಮುಂಭಾಗ ಜಖಂಗೊಂಡಿರುತ್ತದೆ ಎಂಬುದಾಗಿ ಜೋನಿ ತುರ್ತಿಕೆರೆ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2013 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ಥೋಮಸ್ ಜಾರ್ಜ್ (43).ತಂದೆ ಮತ್ತಯ್ಯ ವರ್ಕಿ ವಾಸ ಕಾನಬೆಟ್ಟು ಜೆಡ್ಡು, ಕುಚ್ಚೂರು ಗ್ರಾಮ, ಕಾರ್ಕಳ ತಾಲೂಕು ಎಂಬವರು ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ ಕಾನ್ಬೆಟ್ಟು ಎಂಬಲ್ಲಿ ಸುಮಾರು 7 ರಿಂದ 8 ಎಕ್ರೆ ಜಮೀನು ಹೊಂದಿದ್ದು, ಸದ್ರಿ ಭೂಮಿಯಲ್ಲಿ ರಬ್ಬರ್‌, ತೆಂಗು, ಅಡಿಕೆ ವಗೈರೆ ಕೃಷಿ ಮಾಡಿಕೊಂಡಿದ್ದು ದಿನಾಂಕ 17/04/2013 ರಂದು ಮದ್ಯಾಹ್ನ 1:00 ಗಂಟೆಯ ಸಮಯಕ್ಕೆ ಆರೋಪಿತ ಬಾಬು ಶೆಟ್ಟಿ ವಾಸ ಕುಚ್ಚೂರು ಗ್ರಾಮ ಎಂಬವರು ಸದ್ರಿ ಜಾಗಕ್ಕೆ ಬೆಂಕಿ ಹಾಕಿದ್ದು, ಇದರಿಂದಾಗಿ ಸುಮಾರು 30 ರಬ್ಬರ್‌ ಗಿಡ ಸುಟ್ಟು ಹೋಗಿದ್ದು ಪಿರ್ಯಾದಿದಾರರಿಗೆ ಸುಮಾರು 7 ರಿಂದ 8 ಸಾವಿರ ರೂಪಾಯಿ ನಷ್ಟವಾಗಿರುತ್ತದೆ. ಈ ಬಗ್ಗೆ ಆರೋಪಿತ ಬಾಬು ಶೆಟ್ಟಿಯವರಲ್ಲಿ ವಿಚಾರಿಸಿದಲ್ಲಿ ನಾನೇ ಬೆಂಕಿ ಹಾಕಿದ್ದು ಏನೂ ಬೇಕಾದರೂ ಮಾಡಿ ಎಂಬುದಾಗಿ ಹೆದರಿಸಿರುತ್ತಾರೆ ಎಂಬುದಾಗಿ ಥೋಮಸ್ ಜಾರ್ಜ್ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2013 ಕಲಂ 435, 427, 506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: