Thursday, April 18, 2013

Daily Crime Reported on 18/04/2013 at 17:00 Hrs

ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 18/04/2013 ರಂದು ಪಿರ್ಯಾದುದಾರರಾದ ಗೀತಾ ಶೆಟ್ಟಿ ಗಂಡ ಪ್ರೇಮಾನಂದ ಶೆಟ್ಟಿ ಬನ್ನಂಜೆ, ಮೂಡನಿಡಂಬೂರು, ಉಡುಪಿ ತಾಲೂಕು ಎಂಬವರು ತನ್ನ ಚಿಕ್ಕಮ್ಮನೊಂದಿಗೆ  ಆಟೋರಿಕ್ಷಾ ನಂಬ್ರ ಕೆ ಎ 20 9059  ರಲ್ಲಿ ಹೊರಟು ಕರಾವಳಿ ಕಡೆಯಿಂದ ಅಂಬಲಪಾಡಿಯ ಕಟೆಗೆ ಹೋಗುತ್ತಿರುವಾಗ ಹೈಟೆಕ್ ಆಸ್ಪತ್ರೆಯ ಬಳಿ 10:10 ಗಂಡೆಗೆ ಅಂಬಲಪಾಡಿ ದೇವಸ್ಥಾನದ ಕಡೆಗೆ ರಿಕ್ಷಾ ಚಾಲಕನು ಬಲಗಡೆ ತಿರುಗಿಸಲು ಸೂಚನೆ ನೀಡಿ ಬಲಗಡೆ ತಿರುಗಿಸುತ್ತಿರುವಾಗ ಹಿಂದಿನಿಂದ  ಕೆಎ 20 ಬಿ 6567 ನೇ ಟೆಂಪೊ ಚಾಲಕ ಜಯ ಪೂಜಾರಿ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪಿರ್ಯಾದಿದಾರರಿಗೆ ಅವರ ಚಿಕ್ಕಮ್ಮನಿಗೆ ಮತ್ತು ರಿಕ್ಷಾ ಚಾಲಕನಿಗೆ ಗಾಯವಾಗಿದ್ದು ರಿಕ್ಷಾ ಜಖಂಗೊಂಡಿರುತ್ತದೆ  ಎಂಬುದಾಗಿ ಗೀತಾ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 204/2013 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ
  • ಬ್ರಹ್ಮಾವರ: ಪಿರ್ಯಾದಿದಾರರಾದ ನಿತ್ಯಾನಂದ (38) ತಂದೆ ದಿವಂಗತ ಚೀಂಕ್ರ ವಾಸ ಹಾವಂಜೆ ಗ್ರಾಮ, ಉಡುಪಿ ತಾಲೂಕು ಎಂಬವರ ಮಗಳು ಸುಕನ್ಯಾ (20) ಎಂಬವಳು ದಿನಾಂಕ 10/04/2013 ರಂದು ಬೆಳಗ್ಗೆ 12:00 ಗಂಟೆಗೆ ಮನೆಯಿಂದ ಹೋದವಳು ವಾಪಾಸ್ಸು ಬಾರದೆ ಕಾರಣೆಯಾಗಿರುತ್ತಾಳೆ ಎಂಬುದಾಗಿ ನಿತ್ಯಾನಂದರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 165/2013 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು
  • ಕಾಪು: ಪಿರ್ಯಾದಿದಾರರಾದ ಐ.ಎಲ್. ರಘುಪತಿ ಭಟ್ ಪ್ರಾಯ 65 ವರ್ಷ ತಂದೆ: ಐ ಲಕ್ಷ್ಮೀನಾರಾಯಣ ಭಟ್ ವಾಸ: ಶ್ರೀ ವಿಷ್ಣು ಸಧನ ಇನ್ನಂಜೆ ಗ್ರಾಮ ಎಂಬವರ ಮಗ ಸುಮಾರು 30 ವರ್ಷ ಪ್ರಾಯದ ಐ.ಅನಿರುದ್ ಭಟ್ ಎಂಬವರು ದಿನಾಂಕ 17/04/2013  ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 18/04/2013 ರ ಬೆಳಿಗ್ಗೆ 06:00 ಗಂಟೆಯ ಮಧ್ಯಾವದಿಯಲ್ಲಿ ಮನೆಗೆ ತಾಗಿಕೊಂಡಿರುವ ಬಚ್ಚಲು ಮನೆಗೆ ಸ್ನಾನ ಮಾಡಲು ಹೋದವರು ಬಚ್ಚಲು ಮನೆಗೆ ಹೊಂದಿಕೊಂಡಿರುವ ಬಾವಿಯ ದಂಡೆಯಲ್ಲಿ ಕುಳಿತು ಆಕಸ್ಮಿಕವಾಗಿ ಬಾವಿಗೆ ಬಿದ್ದು, ಮೃತಪಟ್ಟಿರುವುದಾಗಿದೆ ಎಂಬುದಾಗಿ ಐ.ಎಲ್. ರಘುಪತಿ ಭಟ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣಗಳು
  • ಪಡುಬಿದ್ರಿ: ಪಿರ್ಯಾದಿದಾರರಾದ ಜಯರಾಮ್ ಕುಂದರ್ (54) ತಂದೆ: ದಿ. ಚಂದಪ್ಪ, ವಾಸ: ಕುಂದರ್ ನಿವಾಸ, ಬಟಲೋಟ, ನಂದಿಕೂರು  ಗ್ರಾಮ, ಉಡುಪಿ ತಾಲೂಕು ಎಂಬವರ ತಾಯಿಯ ತಮ್ಮನವರಾದ ಗುಂಡ ಪೂಜಾರಿ (70) ಎಂಬವರು ಪಾರ್ಶ್ವ ವಾಯು ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 17/04/2013 ರಂದು ರಾತ್ರಿ ಊಟ ಮಾಡಿ ಪಿರ್ಯಾದಿದಾರರ ಅಂಗಳದ ಎದುರು ಜಗಲಿಯಲ್ಲಿ ಚಾಪೆ ಹಾಕಿ ಮಲಗಿದ್ದವರು ಮನೆಯ ಎದುರು 50 ಅಡಿ ದೂರದಲ್ಲಿರುವ ಸೇತುವೆಯ ಸಿಮೆಂಟ್  ಕಂಬಕ್ಕೆ  ಮನೆಯ ಬಾವಿ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಕೊಂಡಿರುವುದಾಗಿದೆ ಎಂಬುದಾಗಿ ಜಯರಾಮ್ ಕುಂದರ್ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಗಂಗೊಳ್ಳಿ: ಪಿರ್ಯಾದುದಾರರಾದ ಐರಿನ್‌ ಡಿ ಸಿಲ್ವ (43) ಗಂಡ ಫ್ರಾನ್ಸಿಸ್‌ ಡಿಸಿಲ್ವ, ಕಲ್ಲಾನಿ ಶಾಲೆಯ ಹತ್ತಿರ ನದಿಯ ಬಳಿ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಎಂಬವರ ತಂಗಿ ರೀಟಾ ಡಿ ಅಲ್ಮೆಡಾ (38) ರವರು ಸುಮಾರು 11 ವರ್ಷಗಳ ಹಿಂದೆ ಸಾಲಾಡಿ, ಸೇನಾಪುರ ಗ್ರಾಮದ ಡೋಲ್ಫಿ ಡಿ ಅಲ್ಮೆಡಾರವರನ್ನು ಮದುವೆಯಾಗಿದ್ದು ಎರಡು ಮಕ್ಕಳಿರುತ್ತಾರೆ. ರೀಟಾ ಡಿ ಅಲ್ಮೆಡಾರವರಿಗೆ ಚಿಕ್ಕಂದಿನಿಂದಲೂ ಮೂರ್ಚೆ ರೋಗವಿದ್ದು ಈ ಬಗ್ಗೆ ಈಗಲೂ ಔಷದಿ ತೆಗೆದಕೊಳ್ಳುತ್ತಿದ್ದು. ಈ ಮೂರ್ಚೆ ರೋಗದ ಕಾರಣದಿಂದ ದಿನಾಂಕ 17/04/2013 ರಂದು 21:30 ಘಂಟೆಗೆ ಮನೆಯ ಹೊರಗಡೆ ತೆಂಗಿನ ಮರದ ಬುಡದಲ್ಲಿ ನಿಂತು ಸೀಮೆಯೆಣ್ಣೆಯನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಐರಿನ್‌ ಡಿ ಸಿಲ್ವ ರವರು ನೀಡಿದ ದೂರಿನಂತೆ ಗಂಗೊಳ್ಳಿ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 09/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: