Tuesday, April 16, 2013

Daily Crime Reported on 16/04/2013 at 17:00 Hrs

ಕಳವು ಪ್ರಕರಣ
  • ಉಡುಪಿ: ದಿನಾಂಕ 16/04/2013 ರಂದು 10:00 ಗಂಟೆಗೆ ಪಿರ್ಯಾದಿದಾರರಾದ ಎ.ಯೋಗೀಶ್‌ ಆಚಾರ್ಯ ತಂದೆ: ದಿ.ಶ್ರೀನಿವಾಸ ಆಚಾರ್ಯ ವಾಸ: ಶ್ರೀ ನಿವಾಸ್‌, ಜೋಡುರಸ್ತೆ, ಅಲೆವೂರು, ಉಡುಪಿ ತಾಲೂಕು ಎಂಬವರ ವಿಶ್ವೇಶ್ವರಯ್ಯ ಬಿಲ್ಡಿಂಗ್‌‌ನಲ್ಲಿರುವ ನ್ಯೂ ಮಂಗಳಾ ಜ್ಯುವೆಲ್ಲರ್ಸ್‌‌‌ ಆಭರಣದ ಅಂಗಡಿಗೆ ಬಂದ ಸುಮಾರು 40-45 ವರ್ಷ ಪ್ರಾಯದ 4 ಜನ ಗಂಡಸರು ಹಾಗೂ 45 ವರ್ಷ ಪ್ರಾಯದ ಹೆಂಗಸು ಆಭರಣ ಖರೀದಿಸುವಂತೆ ಮಾಡಿ ಪಿರ್ಯಾದಿದಾರರ ಹಾಗೂ ಅಂಗಡಿಯಲ್ಲಿದ್ದವರ ಗಮನಕ್ಕೆ ಬಾರದ ರೀತಿಯಲ್ಲಿ 7 ಚಿನ್ನದ ಕರಿಮಣಿ ಸರ (140 ಗ್ರಾಂ) ಇದ್ದ ಟ್ರೇಯನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಅಭರಣದ ಅಂದಾಜು ಮೌಲ್ಯ ಸುಮಾರು 3,00,000/-ರೂಪಾಯಿ ಆಗಿರುತ್ತದೆ ಎಂಬುದಾಗಿ ಎ.ಯೋಗೀಶ್‌ ಆಚಾರ್ಯರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 201/2013 ಕಲಂ 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ

  • ಮಣಿಪಾಲ: ಆಪಾದಿತರಾದ 1). ಎನ್‌. ನಾಗರಾಜ್‌- ಎಂ.ಡಿ, 2) ವಿಕಾಸ್‌. ಎನ್‌ - ಸಿ.ಇ.ಒ , 3) ಮಂಜುನಾಥ ನಾಯಕ್‌, ಡಿ.ಎಂ.ಡಿ. ನಿಯೋ ಸಾಫ್ಟ್‌ ಪಬ್ಲಿಕೇಶನ್‌ ಮಾರ್ಕೇಟಿಂಗ್‌ ಮತ್ತು ಇನ್‌ಫಾರ್ಮೆಶನ್‌ ಸೆಂಟರ್‌,‌ ಮಣಿಪಾಲ ಎಂಬವರು ನಿಯೋ ಸಾಫ್ಟ್‌ ಪಬ್ಲಿಕೇಶನ್‌ ಮಾರ್ಕೇಟಿಂಗ್‌ ಮತ್ತು ಇನ್‌ಫಾರ್ಮೆಶನ್‌ ಸೆಂಟರ್‌‌ ಮಣಿಪಾಲ ಎಂಬ ಸಂಸ್ಥೆಯ ಮೂಲಕ ಸಂಸ್ಥೆಯ ಸಿಬ್ಬಂದಿವರ್ಗದವರಾದ ಬಿ.ಡಿ.ಒ ಮತ್ತು ಸಿ.ಡಿ.ಒ ರವರಿಂದ ಭದ್ರತಾ ಠೇವಣಿಗಾಗಿ ಕ್ರಮವಾಗಿ ರೂಪಾಯಿ 20,000/- ಮತ್ತು ರೂಪಾಯಿ 1,975/- ಗಳನ್ನು 6 ತಿಂಗಳ ಮಟ್ಟಿಗೆ ಪಡೆದಿದ್ದು, ಅದನ್ನು ಸಿಬ್ಬಂದಿ ವರ್ಗದವರಿಗೆ ಹಿಂತಿರುಗಿಸದೆ ಹಾಗೂ ಕಳೆದ 3-4 ತಿಂಗಳುಗಳಿಂದ ವೇತನವನ್ನೂ ನೀಡದೇ ಮತ್ತು ಈ ಸಂಸ್ಥೆ ಚಂದಾದಾರರಿಗೆ ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಸಾಲ, ವಿಮೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿ, ನಂತರ ಯಾವುದೇ ಸೌಲಭ್ಯಗಳನ್ನು ನೀಡದೆ ಫೆಬ್ರವರಿ-2012 ರಿಂದ ಕರ್ನಾಟಕದಾದ್ಯಂತ ಸುಮಾರು 50,000 ಚಂದಾದಾರರು ಹಾಗೂ ಸುಮಾರು 3,000 ಸಿಬ್ಬಂದಿ ವರ್ಗವನ್ನು ವಂಚಿಸಿರುವುದಾಗಿದೆ ಎಂಬುದಾಗಿ ಅಶೋಕ ಮತ್ತು ಇತರ ಸಿಬ್ಬಂದಿ ವರ್ಗ, ನಿಯೋ ಸಾಫ್ಟ್‌ ಪಬ್ಲಿಕೇಶನ್‌ ಮಾರ್ಕೇಟಿಂಗ್‌ ಮತ್ತು ಇನ್‌ಫಾರ್ಮೆಶನ್‌ ಸೆಂಟರ್‌‌ ಮಣಿಪಾಲರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2013 ಕಲಂ 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 14/04/2013 ರಂದು ಸಂಜೆ 7:30 ಗಂಟೆಗೆ ಪಿರ್ಯಾದಿದಾರರಾದ ಮುಲ್ಲಾ ಫಜಲ್ (35) ತಂದೆ ಮುಲ್ಲಾ ಉಸ್ಮಾನ್ ವಾಸ:ಮುಸ್ಲಿಂ ಮೊಹಲ್ಲಾ ಶಿರೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ಅವರ ಮನೆಯ ಹೊರಗೆ ಜಗುಲಿಯಲ್ಲಿ ಅಣ್ಣ  ಮುಲ್ಲಾ ಮುಕ್ತಿಯಾರ್ ನೊಂದಿಗೆ ಕುಳಿತುಕೊಂಡಿರುವಾಗ ಅವರ ಪರಿಚಯದ ಆರೋಪಿಗಳಾದ ಮೋಮಿನ್ ಮೊಹಲ್ಲಾ, ಶೀರೂರು ಗ್ರಾಮದ ನಿವಾಸಿಗಳಾದ 1) ಮೋಮಿನ್ ಸಮೀರ್ 2) ಮೋಮಿನ್ ಅಶ್ರಫ್ 3) ಮೋಮಿನ್ ಅಂಜುಮ್ 4) ಮೋಮಿನ್ ಮುಕ್ತರ್ 5) ಮೋಮಿನ್ ಇಸ್ಮಾಯಿಲ್ 6) ಮೋಮಿನ್ ರಷೀದ್ 7) ಅಲೈಕಾ 8) ಅಕ್ತರ್ 9) ಅಕೀಲಾ 10) ನಬೀಲ್ ಎಂಬವರು ನೊಂದಣಿ ಸಂಖ್ಯೆ ಇಲ್ಲದ ಒಂದು ರಿಕ್ಷಾದಲ್ಲಿ ಹಾಗೂ ಕೆಎ 20 ಬಿ-5061 ನೇ ನಂಬ್ರದ ಮಾರುತಿ ಓಮಿನಿಯಲ್ಲಿ ಪಿರ್ಯಾದಿದಾರರ ಮನೆಯ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕಳ್ಳ ಚಿನ್ನ ಮಾರಿ ಹಣ ಮಾಡುತ್ತೀಯಾ ನಮ್ಮ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡುತ್ತೀಯಾ ಈ ದಿನ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ  ಎಂದು ಹೇಳಿ  ತಾವುಗಳು ಕಾರಿನಲ್ಲಿ ತಂದಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ತಲೆಗೆ, ಬಲಕಾಲಿನ ಮಣಿಗಂಟಿಗೆ ಅಲ್ಲದೆ ಬಲಕೈ ಭುಜಕ್ಕೆ ಹೊಡೆದಿದ್ದು, ಪಿರ್ಯಾದಿದಾರರ ಅಣ್ಣನಿಗೆ ತಲೆಗೆ ಹಾಗೂ ಎಡಕಾಲಿಗೆ, ಎಡಕಿವಿಗೆ ಹೊಡೆದ ಪರಿಣಾಮ ಇಬ್ಬರಿಗೂ ರಕ್ತಗಾಯವಾಗಿರುತ್ತದೆ ಅಲ್ಲದೇ ಪಿರ್ಯಾದಿದಾರರ ಕಿಸೆಯಲ್ಲಿದ್ದ 15,000/- ರೂಪಾಯಿ ಹಣವನ್ನು ಕಿತ್ತುಕೊಂಡು ತಾವು ಬಂದ ವಾಹನದಲ್ಲಿ ಹೊರಟು ಹೋಗಿರುತ್ತಾರೆ ಎಂಬುದಾಗಿ ಮುಲ್ಲಾ ಫಜಲ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 125/2013 ಕಲಂ 143, 148, 447, 307, 392, 504, 506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಕಾಪು: ದಿನಾಂಕ 15/04/2013 ರಂದು ಪಿರ್ಯಾದುದಾರರಾದ ಬಾವಾ ಮಹಮದ್ ಆಲಿ (42) ತಂದೆ; ಮಹಮದ್ ಆಲಿ ವಾಸ; ಗ್ರೀನ್ ಹೌಸ್, ಮಜೂರು ಗ್ರಾಮ ಎಂಬವರು ಬಸ್ಸು ನಂಬ್ರ ಕೆಎ.20.ಬಿ.1978 ನೇದನ್ನು ಕಾಪು ಕಡೆಯಿಂದ ಉಡುಪಿ ಕಡೆಗೆ ಎನ್ ಹೆಚ್ 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ 3:45 ಗಂಟೆಗೆ ಉದ್ಯಾವರ ಗ್ರಾಮದ ಗುಡ್ಡೆ ಅಂಗಡಿ ಬಳಿಯ ಗ್ಯಾರೇಜ್  ಬಳಿ ಅವರ ಹಿಂಬದಿಯಿಂದ ಬಸ್ಸು ನಂಬ್ರ ಕೆಎ.20.ಎ.9608 ನೇದನ್ನು ಅದರ ಚಾಲಕ ಪ್ರಾನ್ಸಿಸ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ ಬಸ್ಸಿಗೆ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಅದರ ಹಿಂಬದಿ ವಿ.ಆರ್.ಎಲ್ ಬಸ್ಸ್ ನಂಬ್ರ ಕೆಎ.25.ಸಿ.7742 ನೇದನ್ನು ಅದರ ಚಾಲಕ ಪ್ರವೀಣ್ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬಸ್ ನಂಬ್ರ ಕೆಎ.20.ಎ.9608 ನೇದರ ಹಿಂಬದಿಗೆ ಡಿಕ್ಕಿ ಹೊಡೆಪರಿಣಾಮ ಮೂರು ಬಸ್ಸುಗಳು ಜಖಂಗೊಂಡಿರುತ್ತವೆ ಎಂಬುದಾಗಿ ಬಾವಾ ಮಹಮದ್ ಆಲಿರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2013 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: