Tuesday, April 30, 2013

Daily Crime Reported As On 30/04/2013 At 19:30 Hrsಹಲ್ಲೆ ಪ್ರಕರಣಗಳು
  • ಅಮಾಸೆಬೈಲು: ದಿನಾಂಕ 30/04/2013 ರಂದು ಬೆಳಿಗ್ಗೆ 09:45 ಗಂಟೆಗೆ ಸೂರತ್ ಶೆಟ್ಟಿ ತಂದೆ ಬಾಬು ಶೆಟ್ಟಿ ವಾಸ ಅಗಳಿಬೈಲು ಶೇಡಿಮನೆ ಗ್ರಾಮ ಕುಂದಾಪುರ ತಾಲೂಕುರವರ ತಾಯಿ ಲಕ್ಷ್ಮಿ ಎಂಬವರು ಅವರ ಶೇಡಿಮನೆ ಗ್ರಾಮದ ಅಗಳಿಬೈಲು ಎಂಬಲ್ಲಿರುವ ಜಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಪಾದಿತ ಸುಧಾಕರ ಶೆಟ್ಟಿ ಅಗಳಿಬೈಲು ಶೇಡಿಮನೆ ಗ್ರಾಮ ಕುಂದಾಪುರ ತಾಲೂಕುರವರು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಂತರ ಹೊಡೆದು ಅಲ್ಲಿಗೆ ಓಡಿ ಬಂದ ಸೂರತ್ ಶೆಟ್ಟಿರವರಿಗೂ ಸಹ ಕಲ್ಲಿನಿಂದ ಹಣೆಗೆ ಹೊಡೆದು ರಕ್ತಗಾಯ ಉಂಟು ಮಾಡಿ, ಜೀವ ಬೆದರಿಕೆ ಹಾಕಿದ್ದಾಗಿದೆ. ಈ ಬಗ್ಗೆ ಬಿದ್ಕಲ್ ಕಟ್ಟೆ ಆಸ್ಪತ್ರೆಯಲ್ಲಿ ಸೂರತ್ ಶೆಟ್ಟಿರವರು ಹಾಗೂ ಅವರ ತಾಯಿ ಚಿಕಿತ್ಸೆ ಪಡೆದುಕೊಂಡಿದ್ದಾಗಿದೆ,  ಈ ಘಟನೆಗೆ ಸೂರತ್ ಶೆಟ್ಟಿರವರ ತಂದೆಗೂ ಹಾಗೂ ಸುಧಾಕರ ಶೆಟ್ಟಿಯವರಿಗೂ ನಡುವೆ ಇರುವ ಜಾಗದ ತಕರಾರೇ ಕಾರಣವಾಗಿರುತ್ತದೆ. ಎಂಬುದಾಗಿ ಸೂರತ್ ಶೆಟ್ಟಿರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಅಪರಾಧ ಕ್ರಮಾಂಕ 15/13 ಕಲಂ 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಅಮಾಸೆಬೈಲು: ದಿನಾಂಕ 30/04/2013 ರಂದು ಬೆಳಿಗ್ಗೆ 09:45 ಗಂಟೆಗೆ ಸುಧಾಕರ ಶೆಟ್ಟಿ ತಂದೆ ದಿವಂಗತ ಮಂಜಯ್ಯ ಶೆಟ್ಟಿ ಅಗಳಿಬೈಲು ಶೇಡಿಮನೆ ಗ್ರಾಮ ಕುಂದಾಪುರ ತಾಲೂಕುರವರು ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ಶೇಡಿಮನೆ ಗ್ರಾಮದ ಅಗಳಿಬೈಲು ಎಂಬಲ್ಲಿ ಸೂರತ್ ಶೆಟ್ಟಿ ಎಂಬವರು ಅವರನ್ನು ಅಡ್ಡಗಟ್ಟಿ ಕೈಯಿಂದ ಬೆನ್ನಿಗೆ ಮತ್ತು ಕೆನ್ನೆಗೆ ಹೊಡೆದುದಲ್ಲದೇ ಅಲ್ಲಿಯೇ ಹತ್ತಿರದಲ್ಲಿದ್ದ ಬಾಬು ಶೆಟ್ಟಿ, ಜ್ಯೋತಿ ಶೆಡ್ತಿ ಹಾಗೂ ಆನಂದ ಶೆಟ್ಟಿ ರವರು ಓಡಿ ಬಂದು ಅವರಿಗೆ ಹಲ್ಲೆ ನಡೆಸಿ, ಬಾಬು ಶೆಟ್ಟಿ ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿರುತ್ತಾರೆ. ನಂತರ ತನಗಾದ ನೋವಿನ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಘಟನೆಗೆ ಬಾಬು ಶೆಟ್ಟಿ ಹಾಗೂ ಅವರ ನಡುವಿನ ಜಾಗದ ತಕರಾರೇ ಕಾರಣವಾಗಿರುತ್ತದೆ. ಎಂಬುದಾಗಿ ಸುಧಾಕರ ಶೆಟ್ಟಿರವರು ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಅಪರಾಧ ಕ್ರಮಾಂಕ 16/13 ಕಲಂ 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: