Thursday, April 18, 2013

Daily Crime Reported As On 18/04/2013 At 07:00 Hrs



ಕಳವು ಪ್ರಕರಣ
  • ಮಣಿಪಾಲ: ದಿನಾಂಕ 20/03/2013 ರಂದು 21:30 ಗಂಟೆಯಿಂದ 21/03/2013 ರಂದು 14:00 ಗಂಟೆಯ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪಂಚಜನ್ಯ ಅಪಾರ್ಟ್‌ಮೆಂಟ್‌ನ ಬಳಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ಧೀರಜ್ ರಂಜನ್‌ (20) ತಂದೆ ರಾಜಧಾರಿ ರಂಜನ್, ವಾಸ ಫ್ಲಾಟ್‌ ನಂ 301, 3ನೇ ಮಹಡಿ, ಪಂಚಜನ್ಯ ಅಪಾರ್ಟ್‌ಮೆಂಟ್‌, ಮಣಿಪಾಲ. ಇವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 20ಡಬ್ಲ್ಯೂ 5974 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲಿನ ಮೌಲ್ಯ ರೂಪಾಯಿ 25,000 ಆಗಿರುತ್ತದೆ ಎಂಬುದಾಗಿ ಧೀರಜ್ ರಂಜನ್‌ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 78/2013 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಆತ್ಮಹತ್ಯೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 16/04/2013 ರಾತ್ರಿಯಿಂದ ದಿನಾಂಕ 17/04/2013 ರಂದು 4:00 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾದಿದಾರರಾದ ಆನಂದ ಕುಂದರ್ (53) ತಂದೆ ದಿ. ಐತು ಕೋಟ್ಯಾನ್, ವಾಸ ಬೊಳ್ಜೆ, ಉದ್ಯಾವರ ಇವರ ಭಾವನಂಟ ಆನಂದ (32) ಎಂಬವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹಾರಾಡಿ ಗ್ರಾಮದಲ್ಲಿರುವ ಉಸ್ಮಾನ್ ಸಾಹೇಬ್ ಎಂಬವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಆನಂದ ಕುಂದರ್ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/13 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.     

ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 17/04/2013 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕಿನ ಕುಂದಾಪುರ ಕಸಬಾ ಗ್ರಾಮದ ಆದರ್ಶ ಆಸ್ಪತ್ರೆಯ ಎದುರುಗಡೆ ರಾ.ಹೆ 66 ರಲ್ಲಿ ಆಪಾದಿತ ಗುರುಪ್ರಸಾದ್ ಎಂಬವರು KL 14L 3123ನೇ ಮೋಟಾರ್ ಸೈಕಲ್ ನ್ನು ಸಂಗಮ್ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ನಡೆದುಕೊಂಡು ಮನೆಗೆ ಹೋಗುತ್ತಿದ್ದ ಪಿರ್ಯಾದಿದಾರರಾದ ರಮನಾಥ ಪಿ ಗಟ್ಟಿ (58) ತಂದೆ ಶಂಕರ ಗಟ್ಟಿ ವಾಸ ಪಿಲಾರಲಕ್ಷ್ಮಿ ಗುಡ್ಡೆ  ಹೌಸ್‌, ಕೊಟೇಕಾರ್ ಸೋಮೇಶ್ವರ, ಮಂಗಳೂರು ಹಾಲಿ ವಾಸ ನಟ್ರಾಜ್  ಬಿಲ್ಡಿಂಗ್ ಕೆ.ಎಸ್.ಆರ್.ಟಿ.ಸಿ ಬಿಲ್ಡಿಂಗ್  ಹತ್ತಿರ, ಕುಂದಾಪುರ ಇವರ ಹಿಂಬದಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ರಮನಾಥ ಪಿ ಗಟ್ಟಿ ಇವರ ತಲೆಗೆ, ಹಾಗೂ ದೇಹದ ಇತರೆ ಭಾಗಕ್ಕೆ ಗಾಯವಾಗಿದ್ದು, ಅಲ್ಲದೇ ಎದುರಿನ ಹಲ್ಲು ಉದುರು ಹೋಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ರಮನಾಥ ಪಿ ಗಟ್ಟಿ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 31/2013 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕಾರ್ಕಳ: ದಿನಾಂಕ 17/04/2013 ರಂದು 20:20 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೊಡುರಸ್ತೆ ಬಸ್ಸು ನಿಲ್ದಾಣದ ಬಳಿ ಉಡುಪಿ-ಕಾರ್ಕಳ ಮುಖ್ಯ ರಸ್ತೆಯಲ್ಲಿ ಆಪಾದಿತ ಕೆಎ 20ಸಿ 6007ನೇ ಶ್ರೀ ದುರ್ಗಾಪರಮೇಶ್ವರಿ ಮೋಟಾರ್ಸ್‌ ಎಂಬ ಬಸ್ಸನ್ನು ಅದರ ಚಾಲಕ ಪದ್ಮಪ್ರಸಾದ್ ಜೈನ್ ಇವರು ನಿರ್ಲಕ್ಷ್ಯತನದಿಂದ ಉಡುಪಿ ಕಡೆಯಿಂದ ಕಾರ್ಕಳದ ಕಡೆಗೆ ಚಲಾಯಿಸಿ, ತನ್ನ ಬಸ್ಸುನ್ನು ಏಕಾಏಕಿಯಾಗಿ ಬಲಗಡೆಗೆ ತಿರುಗಿಸಿ ಬ್ರೇಕ್ ಹಾಕಿದ ಪರಿಣಾಮ ಜೋಡುರಸ್ತೆ ಬಸ್ಸು ನಿಲ್ದಾಣದಲ್ಲಿ ಇಳಿಯಲು ಬಸ್ಸಿನ ಮುಂದಿನ ಬಾಗಿಲಿನ ಬಳಿಯಲ್ಲಿ ನಿಂತಿದ್ದ ಬಸ್ಸಿನ ಪ್ರಯಾಣಿಕ ಶ್ರೀ ನಾರಾಯಣ ಮೊಯಿಲಿ (60) ಎಂಬವರು ಬಸ್ಸಿನ ಮಂದಿನ ಬಾಗಿಲಿನಿಂದ ಹೊರೆಗೆ ರಸ್ತೆಗೆ ಎಸೆಯಲ್ಪಟ್ಟು ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಶ್ರೀ ಖಲೀಲ್‌ ಖಾನ್‌, (25) ತಂದೆ ಚಾಂದ್‌ ಖಾನ್‌, ವಾಸ ಕೆ.ಎಸ್‌. ಮಂಜಿಲ್‌ ಹಿಮ್ಮಂಜೆ ರಸ್ತೆ, ಕುಕ್ಕುಮದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 52/13 ಕಲಂ 279, 304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕುಂದಾಪುರ: ದಿನಾಂಕ 17/04/2013 ರಂದು ಮದ್ಯಾಹ್ನ 12:10 ಗಂಟೆಗೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಪ್ರವಾಸಿ ಹೋಟೆಲ್‌ ಬಳಿ ರಾ.ಹೆ 66 ರಲ್ಲಿ ಆಪಾದಿತ ದಿವಾಕರ ಎಂಬವರು KA 20B 3849ನೇ ಆಟೋರಿಕ್ಷವನ್ನು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ತಲ್ಲೂರು ಸುಪ್ರೀಮ್‌ ಟೈಲ್ಸ್‌ ಕಡೆಯಿಂದ ರಾ.ಹೆ 66 ರಲ್ಲಿ ಬರುತ್ತಿದ್ದ ಸೈಕಲ್‌ನ್ನು ನೋಡಿ ಒಮ್ಮಲೆ ನಿರ್ಲಕ್ಷತನದಿಂದ ಬ್ರೇಕ್‌ ಹಾಕಿ, ಸೈಕಲ್‌ಗೆ ಡಿಕ್ಕಿ ಹೊಡೆದು ಬಳಿಕ ವಾಹನ ಹತೋಟಿ ತಪ್ಪಿ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ರಿಕ್ಷಾದಲ್ಲಿದ್ದ ಪಿರ್ಯಾದಿ ರಾಘವೇಂದ್ರ ದೇವಾಡಿಗ, ರೇಷ್ಮಾ, ಲೀಲಾವತಿ,  ಹಾಗೂ ರಿಕ್ಷಾ ಚಾಲಕ ದಿವಾಕರ ಹಾಗೂ ಸೈಕಲ್  ಸವಾರ ಶಂಕರ ಗಾಯಗೊಂಡಿರುತ್ತಾರೆ ಎಂಬುದಾಗಿ ಪಿರ್ಯಾದಿದಾರಾದ ರಾಘವೇಂದ್ರ ದೇವಾಡಿಗ (31) ತಂದೆ ಶೀನ ದೇವಾಡಿಗ ವಾಸ ಚಿಪ್ಪನ್ಬೆಟ್ಟು, ಬೀಜಾಡಿ ಗ್ರಾಮ, ಕುಂದಾಪುರ ಉಡುಪಿ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 30/2013  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

No comments: